ಬೆಂಗಳೂರು:- ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ಬೋಡಬಂಡೆನಹಳ್ಳಿ ಹಾಗೂ ದಿನ್ನೆಪಾಳ್ಯ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ದೇವರುಗಳ ವಿಸರ್ಜನಾ ಕಾರ್ಯಕ್ರಮವನ್ನು ಎರಡು ಗ್ರಾಮದ ಯುವಕರು ಜಾತಿ ಭೇದವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರುತ್ತಾ ಸ್ನೇಹಪೂರ್ವಕವಾಗಿ ಜೊತೆಗೂಡಿ ಅದ್ದೂರಿಯಾಗಿ ನೆರವೇರಿಸಿದರು..

ಗ್ರಾಮಗಳ ಪ್ರಮುಖ ಬೀದಿಯಲ್ಲಿ ಅದ್ದೂರಿ ಮೆರವಣಿಗೆ ಜೊತೆಗೆ ವಿವಿಧ ವಾದ್ಯಗೋಷ್ಠಿಗಳೊಂದಿಗೆ.. ಜನಸ್ನೇಹಿ ಪೊಲೀಸ್ ಅಧಿಕಾರಿ ಸಬ್ ಇನ್ಸ್ಪೆಕ್ಟರ್ ಚೇತನ್ ಗೌಡ ರವರ ಮಾರ್ಗದರ್ಶನದಲ್ಲಿ. ಗ್ರಾಮದ ರಾಜನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.ನಂತರ ಗ್ರಾಮಸ್ಥರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು

ಇದೇ ಸಂದರ್ಭದಲ್ಲಿ ಎರಡು ಗ್ರಾಮದ ಯುವಕರು ಹಿರಿಯರು ಮಹಿಳೆಯರು ಮಕ್ಕಳು ಉಪಸಿತರಿದ್ದರು..

Share.