ಕಿರುತೆರೆಯಲ್ಲಿ ಹಾವಳಿ ಮಾಡಿದ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಮೋಡಿ ಮಾಡುತ್ತಿರುವ ಶರಣ್ಯ ಶೆಟ್ಟಿ ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಸಂಚಲನ ಸೃಷ್ಟಿಸುತ್ತಲೇ ಇರುತ್ತಾರೆ. ನಯಾ ಲುಕ್‌ನಲ್ಲಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ. ಹಳದಿ ಬಣ್ಣದ ಮಾಡ್ರರ್ನ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಶರಣ್ಯ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಶರಣ್ಯ ಹೊಸ ಅವತಾರಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ‘ಗಟ್ಟಿಮೇಳ’ (Gattimela) ಸೀರಿಯಲ್‌ನ ಸಾಹಿತ್ಯ ಪಾತ್ರದ ಮೂಲಕ ಟಿವಿ ಪ್ರಿಯರ ಮನೆಗೆದ್ದ ಚೆಲುವೆ ಈಗ ಬೆಳ್ಳಿಪರದೆಯಲ್ಲಿ ಹೀರೋಯಿನ್ ಮಿಂಚ್ತಿದ್ದಾರೆ. ಈಗಾಗಲೇ 1980, ಹುಟ್ಟುಹಬ್ಬದ ಶುಭಾಶಯಗಳು, ಸ್ಫೂಕಿ ಕಾಲೇಜ್ ಸಿನಿಮಾಗಳಲ್ಲಿ ಶರಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Author: AIN Author
ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವನ್ನಪ್ಪಿರುವ ಘಟನೆ ನಗರದ ತಲಘಟ್ಟಪುರದಲ್ಲಿ ನಡೆದ ಘಟನೆಯಾಗಿದೆ. ರಾಧಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗೃಹಿಣಿ ಎರೆಡು ವರ್ಷಗಳ ಹಿಂದೆ ರವಿ ಎಂಬಾತನನ್ನ ಮದುವೆಯಾಗಿದ್ದ ರಾಧಾ. ಗೃಹಿಣಿ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಎಂದು ಆರೋಪ ಮಾಡಲಾಗಿದೆ. https://ainlivenews.com/in-bangalore-lavishly-our-kambal-to-be-held-on-25th-and-26th/ ಕುಟುಂಬಸ್ಥರ ನಿಶ್ಚಯದಂತೆ ಮದುವೆಯಾಗಿದ್ದ ರಾಧಾ ಆದ್ರೆ ರವಿ ಹಾಗೂ ಕುಟುಂಬಸ್ಥರಿಂದ ರಾಧಾಗೆ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟು ಕೊಲೆ ಮಾಡಿರುವ ಆರೋಪ ಹೊರಿಸಲಾಗಿದೆ.ರಾಮನಗರ ಮೂಲದವರಾಗುರೋ ರಾಧಾ ಕಳೆದ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿಯಲ್ಲಿ ಪತ್ತೆಯಾಗಿದ್ದಾಳೆ.. ಘಟನೆ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಗಲಕೋಟೆ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. https://ainlivenews.com/government-circus-to-put-a-stop-to-mlas-discontent-25-mlas-are-destined-for-corporation-board/ ಅಂಜುಮನ್ ಶಾಲೆಯ ಆವರಣದಲ್ಲಿ ಕಾರ್ಯಕ್ರಮ, ನವನಗರದ ಬೋವಿ ಪೀಠಕ್ಕೆ ಭೇಟಿ, ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ಗೆ ಸೇರಿದ ಉಚಿತ ಕೋಚಿಂಗ್ ಸೆಂಟರ್ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ನಮ್ಮ ಕಂಬಳ ಕ್ರೀಡೆಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ.ಪಕ್ಷಾತೀತವಾಗಿ ನಡೆಯಲಿರುವ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು. ಈ ಕುರಿತು ಮತ್ತಷ್ಟು ಡೀಟೈಲ್ಸ್ ಇಲ್ಲಿದೆ. ನಮ್ಮ ಕಂಬಳ,ಇದು ನಮ್ಮ ಬೆಂಗಳೂರಿನಲ್ಲಿ ನಡೆಯತ್ತಿರುವ ಮೊದಲ ಕಂಬಳ. ಈ ಕಂಬಳ ಕ್ರೀಡೆಗಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು,155 ಮೀಟರ್ ಉದ್ದದ ಕೆರೆಯನ್ನು ನಿರ್ಮಾಣ ಮಾಡಲಾಗಿದೆ.ಸುಮಾರು ಎಂಟು ಕೋಟಿ ವೆಚ್ಚದಲ್ಲಿ ನೆರವೇರಲಿರುವ ಈ ಕಾರ್ಯಕ್ರಮಕ್ಕೆ ಸರ್ಕಾರದಿಂದ ಒಂದು ಕೋಟಿ ಅನುದಾನವು ನೀಡುತ್ತಿದ್ದಾರೆ ಅಂತ ಕಂಬಳ ಆಯೋಜಕರು ತಿಳಿಸಿದರು. ಈಗಾಗಲೇ ಎಂಟು ಸಾವಿರ ಜನರಿಗೆ ಆಸನದ ವ್ಯವಸ್ಥೆ ಆಗಿದೆ, 200ಕ್ಕು ಹೆಚ್ಚು ಕೋಣಗಳ ಜೋಡಿಗಳ ನೋಂದಣಿ ಆಗಿದೆ. ಈಗಾಗಲೇ ಎರಡು ಜೋಡಿ ಕೋಣಗಳನ್ನು ಕರೆತರಲಾಗಿದ್ದು, ನಾಳೆ ಉಳಿದ 198 ಜೋಡಿ ಕೋಣಗಳನ್ನು ಉಪ್ಪಿನಂಗಡಿಯಿಂದ ನೇರವಾಗಿ ಹಾಸನಕ್ಕೆ ಕರೆತಂದು ಅಲ್ಲಿಂದ ಮೆರವಣಿಗೆ ಮೂಲಕ ಬೆಂಗಳೂರಿನ ಅರಮನೆ ಮೈದಾನಕ್ಕೆ ಕರೆತರಲಾಗುವುದು, ಜೊತೆಗೆ ನಾಳೆ ಕೋಣಗಳ ಪೂರ್ವ ತಯಾರಿಯು ಕೂಡ ನಡೆಯಲಿದೆ. ಇನ್ನೂ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಹೆಣ್ಮಕ್ಕಳಿಗೆ ಎಷ್ಟು ಸೇಫ್ ಅನ್ನೋ ಪ್ರಶ್ನೆ ಪದೇ ಪದೇ ಹುಟ್ಟಿಕೊಳ್ತಿದೆ. ಯಾಕೆಂದ್ರೆ ನಗರದಲ್ಲಿ ದಿನದಿಂದ ದಿನಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿದ್ದು ಹಣ್ಣು ಮಕ್ಕಳಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ಕೆಲ ದಿನಗಳ ಹಿಂದೆ ಲುಲೂ ಮಾಲ್ ನಲ್ಲಿ ಮಹಿಳೆಯರ ಜೊತೆ ಅಸಭ್ಯ ವರ್ತನೆ ಮಾಡಿದ ವಿಚಾರ ಇನ್ನೂ ಮರೆಯಾಗಿಲ್ಲ. ಅಷ್ಟರಲ್ಲಾಗಲೇ ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಅಂತಹದ್ದೇ ಘಟನೆ ನಡೆದುಹೋಗಿದೆ. ಮಹಿಳೆಯೊಬ್ಬರು ಮಧ್ಯರಾತ್ರಿ ನಿರ್ಭೀತಗಳಾಗಿ ಓಡಾಡಿದಾಗ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತಾಗುತ್ತದೆ ಎಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹೇಳಿದ್ರು. ಆದ್ರೆ ಹೆಣ್ಣು ಒಬ್ಬಂಟಿಯಾಗಿ ರಾತ್ರಿ ಓಡಾಡೋದಿರಲಿ. ಹಗಲು ಓಡಾಡೋದೆ ಕಷ್ಟ ಎಂಬಂತಾಗಿದೆ. ಸಾರ್ವಜನಿಕ ನ ಸ್ಥಳಗಳಲ್ಲಿ ಹೆಣ್ಣು ಒಂಟಿಯಾಗಿದ್ರೂ ಗುಂಪಲ್ಲಿದ್ರೂ ಅಶ್ಲೀಲ ಮಾತು ಲೈಂಗಿಕ ದೌರ್ಜನ್ಯ ಎದುರಿಸಬೇಕಾಗ್ತಿದೆ. ರಾತ್ರಿ ಮಾತ್ರವಲ್ಲ. ಹಗಲು ಹೊತ್ತಿನಲ್ಲೇ ಮಹಿಳೆಯರ ಮೇಲೆ ಅಸಭ್ಯ ವರ್ತನೆ ತೋರಲಾಗ್ತಿದೆ ಹೌದು… ಕಳೆದ ಕೆಲ ದಿನಗಳ ಹಿಂದೆ ನಗರದ ಲುಲುಮಾಲ್ ನಲ್ಲಿ ನಡೆದಿದ್ದ ಲೈಂಗಿಕ ಪ್ರಕರಣ ಮಾಸುವ ಮುನ್ನವೇ…
ಸನಾ: ಹಡಗಿನ ಮೇಲೆ ಇಳಿದ ಹೆಲಿಕಾಪ್ಟರ್. ರೈಫಲ್ ಹಿಡಿದು ಘೋಷಣೆ ಕೂಗುತ್ತಾ ಇಳಿದ ಬಂಡುಕೋರರು. ಹಡಗಿನ ಕ್ಯಾಬಿನ್ ನುಗ್ಗಿ ಬೆದರಿಕೆ. ಶರಣಾದ ಹಡಗಿನ ಸಿಬ್ಬಂದಿ. ಇದು ಯಾವುದೋ ಸಿನಿಮಾದ ಕಥೆಯಲ್ಲ. ಯೆಮೆನ್ (Yemen) ಬಂಡುಕೋರರು ಹಡಗನ್ನುಅಪಹರಿಸಿ ಪರಿ ಇದು. https://twitter.com/disclosetv/status/1726643372335755592?ref_src=twsrc%5Etfw%7Ctwcamp%5Etweetembed%7Ctwterm%5E1726643372335755592%7Ctwgr%5E61827bde61a1ed8ab2d6b9d55a2a5ffc45b137ca%7Ctwcon%5Es1_&ref_url=https%3A%2F%2Fpublictv.in%2Fchilling-video-moment-yemens-houthis-used-chopper-to-hijack-india-bound-ship-in-red-sea%2F ಭಾರತಕ್ಕೆ (India) ಬರುತ್ತಿದ್ದ ಸರಕು ಹಡಗು ಗ್ಯಾಲಕ್ಸಿ ಲೀಡರ್ (Galaxy Leader) ಅಪಹರಣ ಕೊನೆಯ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು (Houthi Rebels) ಬಿಡುಗಡೆ ಮಾಡಿದ್ದಾರೆ. ಟರ್ಕಿಯಿಂದ (Turkey) ಭಾರತಕ್ಕೆ ಬರುತ್ತಿದ್ದ ಹಡಗನ್ನು ಭಾನುವಾರ ಅಪಹರಣ ಮಾಡಲಾಗಿತ್ತು. ಈಗ ಹೌತಿ ಬಂಡುಕೋರರು ಎರಡು ನಿಮಿಷಗಳ ಹಡಗನ್ನು ಹೈಜಾಕ್ (Hijack) ಮಾಡುವ ಭಯಾನಕ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಹೆಲಿಕಾಪ್ಟರ್‌ನಲ್ಲಿ ಬಂದ ಬಂಡುಕೋರರು ಹಡಗಿನ ಮೇಲೆ ದಾಳಿ ಮಾಡಿ ಹೈಜಾಕ್ ಮಾಡಿದ್ದಾರೆ. ಹಡಗಿನ ಡೆಕ್‌ನಲ್ಲಿ ಲ್ಯಾಂಡ್ ಆದ ಹೆಲಿಕಾಪ್ಟರ್‌ನಿಂದ 10ಕ್ಕೂ ಹೆಚ್ಚು ಬಂಡುಕೋರರು ಘೋಷಣೆಗಳನ್ನು ಕೂಗುತ್ತಾ ಗುಂಡು ಹಾರಿಸುತ್ತಾ ನಿಯಂತ್ರಣ ಕೇಂದ್ರಕ್ಕೆ ಬಂದಿದ್ದಾರೆ. ಬಂಡುಕೋರರನ್ನು ನೋಡಿದ ಸಿಬ್ಬಂದಿ ಶಾಕ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಸಭೆಯ ಮುಖ್ಯಾಂಶಗಳು ಶಕ್ತಿ ಯೋಜನೆ ಶಕ್ತಿ ಯೋಜನೆ ಜಾರಿಯಾದಾಗಿನಿಂದ ನವೆಂಬರ್ 21ರ ವರೆಗೆ ಒಟ್ಟಾರೆ 99.75 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಂಡಿರುತ್ತಾರೆ. ಇನ್ನೆರಡು ದಿನಗಳಲ್ಲಿ ನೂರು ಕೋಟಿ ದಾಟಲಿದೆ. ಪ್ರತಿ ತಿಂಗಳ ಪ್ರಯಾಣಿಕರ ಸಂಖ್ಯೆ ಏಪ್ರಿಲ್ 2023 ರಲ್ಲಿ 84.17 ಲಕ್ಷ ದಿಂದ ಶಕ್ತಿ ಯೋಜನೆ ಜಾರಿಯ ನಂತರ 1.08 ಕೋಟಿಯಿಂದ 1.15 ಕೋಟಿ ವರೆಗೆ ಹೆಚ್ಚಳ ವಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಒಟ್ಟು 828 ಸಾಮಾನ್ಯ ಹಾಗೂ 145 ವಿದ್ಯುತ್ ಚಾಲಿತ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಬಸ್‌ಗಳ ಖರೀದಿ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಅನ್ನಭಾಗ್ಯ ಅನ್ನಭಾಗ್ಯ ಯೋಜನೆಯಡಿ ಅಕ್ಟೋಬರ್ ತಿಂಗಳಲ್ಲಿ 1,10,96,413 ಕಾರ್ಡುದಾರರಿಗೆ ಡಿಬಿಟಿ ಮಾಡಲಾಗಿದೆ. ಈ ವರೆಗೆ ಒಟ್ಟು 2,444.11 ಕೋಟಿ ರೂ. ಮೊತ್ತವನ್ನು ಡಿಬಿಟಿ…
ಹುಬ್ಬಳ್ಳಿ ನ.24: ಭಾರತ ದೇಶ ಕೃಷಿ ಪ್ರಧಾನವಾದ ದೇಶ. ರೈತರ ಶ್ರಮದ ಬದುಕು ಎಲ್ಲರಿಗೂ ಗೊತ್ತಿದೆ. ರೈತ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದು ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಅನ್ನ ಕೊಡುವ ರೈತನನ್ನು ಎಂದಿಗೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಬುಧವಾರ ಮಧ್ಯಾಹ್ನ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್ ಉದ್ಘಾಟಿಸಿ, ಆಶೀರ್ವಚನ ನೀಡುತ್ತಿದ್ದರು. ಎಲ್ಲರಂತೆ ರೈತರ ಬಾಳು ಉಜ್ವಲಗೊಳ್ಳಬೇಕೆಂದು ಬಯಸುವುದು ನಿಜ. ಆದರೆ ವಾಸ್ತವಿಕ ಸ್ಥಿತಿಯೇ ಬೇರೆಯಿದೆ. ಶ್ರಮ ವಹಿಸಿ ಬೆಳೆದ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಗಲಾರದೇ ತೊಂದರೆಗೆ ಒಳಗಾಗುತ್ತಿದ್ದಾನೆ. ಅತೀವೃಷ್ಟಿ, ಕೆಲವೊಮ್ಮೆ ಅನಾವೃಷ್ಟಿಯಿಂದ ಬೆಳೆ ನಾಶಗೊಳ್ಳುತ್ತಿರುವುದನ್ನು ಕಾಣುತ್ತೇವೆ. ಮಾಡಿದ ಸಾಲಕ್ಕೆ ಎದೆಗುಂದಿ ಪ್ರಾಣವನ್ನೇ ಕಳೆದುಕೊಂಡವರೆಷ್ಟೋ ಜನ ರೈತರಿದ್ದಾರೆ. ಅಮೂಲ್ಯ ಜೀವ ಇದ್ದರೆ ಭವಿಷ್ಯತ್ತಿನಲ್ಲಿ ಒಳ್ಳೆಯದನ್ನು ಕಾಣಲಿಕ್ಕೆ ಸಾಧ್ಯವಿದೆ ಎಂಬ ಆಶಾಭಾವ ಇರಬೇಕೆ ಹೊರತು ರೈತರು ಆತ್ಮಹತ್ಯೆಗೆ ಮುಂದಾಗಬಾರದು ಎಂದು ನೆರೆದಿದ್ದ ರೈತರಲ್ಲಿ ಜಗದ್ಗುರುಗಳು ಆತ್ಮಸ್ಥೈರ್ಯ ತುಂಬಿದರು. ಆಧುನಿಕ ಬೇಸಾಯವನ್ನು ರೈತರು…
ಬೆಂಗಳೂರು: ಸರ್ಕಾರದಲ್ಲಿ ಭುಗಿಲೆದ್ದಿರುವ ಅಸಮಧಾನ ಶಮನ ಮಾಡಿಸಲು,ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲು ಸರ್ಕಾರ ಮುಂದಾಗಿದೆ.ನಿನ್ನೆ ತಡರಾತ್ರಿಯವರೆಗೂ ಸಿಎಂ,ಡಿಸಿಎಂ ಜೊತೆ ಸುರ್ಜೆವಾಲಾ ಕ್ಲೋಸ್ ಡೋರ್ ಸಭೆ ನಡೆಸಿದ್ರು.ಸಭೆಯಲ್ಲಿ ಮೊದಲ ಹಂತದಲ್ಲಿ 25 ಶಾಸಕರಿಗೆ ಅಧಿಕಾರ ನೀಡುವ ಬಗ್ಗೆ ತೀರ್ಮಾನ ಆಗಿದ್ದು,ಶಾಸಕರ ಅಸಮಧಾನಕ್ಕೆ ಟಾನಿಕ್ ನೀಡಲು ನಾಯಕರು ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನವನ್ನ ಗೆಲ್ಲಬೇಕೆಂದು ಹೊರಟಿರುವ ಕಾಂಗ್ರೆಸ್ ನಾಯಕರಿಗೆ,ಕಾಂಗ್ರೆಸ್ ಶಾಸಕರ ಅಸಮಧಾನವೇ ದೊಡ್ಡ ತಲೆನೋವಾಗಿದೆ.ಈ ಹಿನ್ನಲೆಯಲ್ಲಿ ಶಾಸಕರ ಅಸಮಧಾನಕ್ಕೆ ಬ್ರೇಕ್ ಹಾಕಲು,ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲು ಸರ್ಕಾರ ಮುಂದಾಗಿದೆ.ನಿನ್ನೆ ತಡರಾತ್ರಿಯವರೆಗೂ ಸಿಎಂ,ಡಿಸಿಎಂ ಜೊತೆ ಸುರ್ಜೆವಾಲಾ ಸಭೆ ನೆಡಸಿದ್ರು.ಸಭೆಯಲ್ಲಿ ಮೊದಲ ಹಂತದಲ್ಲಿ 25 ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲು ತೀರ್ಮಾನಿಸಲಾಗಿದೆ.ಆದ್ರೆ,ಈ ತೀರ್ಮಾನಕ್ಕೆ ಕೆಲ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮತ್ತೊಂದು ಸುತ್ತಿನ ಸಭೆ ಇದೇ ತಿಂಗಳು 28ರಂದು ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿತ ಶಾಸಕರಿಗೆ ಮಾತ್ರ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗುತ್ತಿದೆ ಎಂಬ…
ಬಳ್ಳಾರಿ:- ಜಿಲ್ಲೆ ಕಂಪ್ಲಿ ತಾಲೂಕಿನ . ಸರ್ಕಾರಿ ಶಾಮಿಯ ಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲೆ ನೂರಾರು ವಿದ್ಯಾರ್ಥಿಗಳು ಪ್ರತನಿತ್ಯ ಜೀವ ಭಯದಲ್ಲಿಯೇ ಶಾಲೆಗೆ ಬರ್ತಾರೆ. ಜೀವ ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ. ಒಂದು ಸಲ ಕಟ್ಟಟದ ಮಲ್ಛಾವಣಿ, ಮತ್ತೊಂದಡೆ ಶಿಕ್ಷಕರನ್ನು ನೋಡಿ ಪಾಠ ಕೇಳುತ್ತಿದ್ದಾರೆ. ಇತ್ತೀಚೆಗೆ ಸರ್ಕಾರಿ ಶಾಲೆಗಳು ಬಂದಾಗುತ್ತಿದ್ದರೆ, ನಾಯಿ ಕೊಡೆಗಳಂತೆ, ಖಾಸಗಿ ಶಾಲೆಗಳು ಆರಂಭವಾಗುತ್ತಿವೆ. ಅನೇಕ ಕಡೆ ಸರ್ಕಾರಿ ಶಾಲೆಗೆ ಹೋಗಲು ಹೆಚ್ಚಿನ ಮಕ್ಕಳು ಸಿದ್ದರಿದ್ದರು ಕೂಡಾ, ಶಾಲೆಯಲ್ಲಿ ಕೂತು ಪಾಠ ಕೇಳಲು ಭಯ ಪಡುತ್ತಿದ್ದಾರೆ. ಅನೇಕ ಕಡೆ ಸರ್ಕಾರಿ ಶಾಲೆಯಲ್ಲಿ (Government Schools) ಓದುವ ಮಕ್ಕಳ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು ಬಳ್ಳಾರಿ ಜಿಲ್ಲೆಯ ಹಲವೆಡೆ ಸರ್ಕಾರಿ ಶಾಲೆಯ ಕಟ್ಟಡಗಳು ಬೀಳುವ ಹಂತದಲ್ಲಿವೆ. ಆದರೂ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು, ಜೀವ ಭಯದಲ್ಲಿಯೇ ಪಾಠ ಕೇಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಜೀವ ಭಯದಲ್ಲಿಯೇ ಪಾಠ ಕೇಳ್ತಿರೋ ಮಕ್ಕಳು ಬಳ್ಳಾರಿ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ…