ಬಳ್ಳಾರಿ:– ಜಿಲ್ಲೆ ಕಂಪ್ಲಿ ತಾಲೂಕಿನ . ಸರ್ಕಾರಿ ಶಾಮಿಯ ಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲೆ ನೂರಾರು ವಿದ್ಯಾರ್ಥಿಗಳು ಪ್ರತನಿತ್ಯ ಜೀವ ಭಯದಲ್ಲಿಯೇ ಶಾಲೆಗೆ ಬರ್ತಾರೆ. ಜೀವ ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ. ಒಂದು ಸಲ ಕಟ್ಟಟದ ಮಲ್ಛಾವಣಿ, ಮತ್ತೊಂದಡೆ ಶಿಕ್ಷಕರನ್ನು ನೋಡಿ ಪಾಠ ಕೇಳುತ್ತಿದ್ದಾರೆ.
ಇತ್ತೀಚೆಗೆ ಸರ್ಕಾರಿ ಶಾಲೆಗಳು ಬಂದಾಗುತ್ತಿದ್ದರೆ, ನಾಯಿ ಕೊಡೆಗಳಂತೆ, ಖಾಸಗಿ ಶಾಲೆಗಳು ಆರಂಭವಾಗುತ್ತಿವೆ. ಅನೇಕ ಕಡೆ ಸರ್ಕಾರಿ ಶಾಲೆಗೆ ಹೋಗಲು ಹೆಚ್ಚಿನ ಮಕ್ಕಳು ಸಿದ್ದರಿದ್ದರು ಕೂಡಾ, ಶಾಲೆಯಲ್ಲಿ ಕೂತು ಪಾಠ ಕೇಳಲು ಭಯ ಪಡುತ್ತಿದ್ದಾರೆ. ಅನೇಕ ಕಡೆ ಸರ್ಕಾರಿ ಶಾಲೆಯಲ್ಲಿ (Government Schools) ಓದುವ ಮಕ್ಕಳ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಹೌದು ಬಳ್ಳಾರಿ ಜಿಲ್ಲೆಯ ಹಲವೆಡೆ ಸರ್ಕಾರಿ ಶಾಲೆಯ ಕಟ್ಟಡಗಳು ಬೀಳುವ ಹಂತದಲ್ಲಿವೆ. ಆದರೂ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು, ಜೀವ ಭಯದಲ್ಲಿಯೇ ಪಾಠ ಕೇಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಜೀವ ಭಯದಲ್ಲಿಯೇ ಪಾಠ ಕೇಳ್ತಿರೋ ಮಕ್ಕಳು
ಬಳ್ಳಾರಿ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ . ಸರ್ಕಾರಿ ಶಾಮಿಯ ಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲೆ ವಿಭಾಗ 8 ರಿಂದ 10ನೇ ತರಗತಿವರಗೆ ಸರ್ಕಾರಿ ಶಾಲೆಯಿದೆ. ಎಂಟು ಜನ ಶಿಕ್ಷಕರು ಇದ್ದಾರೆ. ಇನ್ನು ಶಾಲೆಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ 321 ಇದೆ.
ಇನ್ನು ಶಾಲೆಯಲ್ಲಿ ಎಂಟು ಕೊಠಡಿಗಳು ಇವೆ. ಆದರೆ ಬಳಕೆಗೆ ಯೋಗ್ಯವಾಗಿರೋದು ಕೇವಲ ಮೂರೇ ಕೊಠಡಿಗಳು ಮಾತ್ರ. ಇನ್ನುಳಿದ ಕೊಠಡಿಗಳು ಯಾವಾಗ ಬೀಳುತ್ತವೆ ಅನ್ನೋದು ಯಾರಿಗೊ ಗೊತ್ತಿಲ್ಲಾ. ಆದರೆ ಬೀಳುವ ಹಂತದಲ್ಲಿ ಇರೋ ಕೊಠಡಿಯಲ್ಲಿಯೇ ಮಕ್ಕಳು ಪಾಠ ಕೇಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಹೌದು ಶಾಮಿಯ ಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತನಿತ್ಯ ಜೀವ ಭಯದಲ್ಲಿಯೇ ಶಾಲೆಗೆ ಬರ್ತಾರೆ. ಜೀವ ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ.
ಒಂದು ಸಲ ಕಟ್ಟಟದ ಮಲ್ಛಾವಣಿ, ಮತ್ತೊಂದಡೆ ಶಿಕ್ಷಕರನ್ನು ನೋಡಿ ಪಾಠ ಕೇಳುತ್ತಿದ್ದಾರೆ
ಈ ಹಿಂದೆ ಅನೇಕ ಬಾರಿ ಮೇಲ್ಛಾವಣಿಯ ಸಿಮೆಂಟ್ ಅಂಚುಗಳು ವಿದ್ಯಾರ್ಥಿಗಳ ಮೇಲೆ ಉದುರಿಬಿದ್ದು,
ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಗಾಯಗೊಂಡಿರುವ ಘಟನೆಗಳು ಕೂಡಾ ನಡೆದಿವೆಯಂತೆ. ಹೀಗಾಗಿ ಕೊಠಡಿಗಳು ಯಾವಾಗ ಬೀಳುತ್ತವೆ ಅನ್ನೋ ಭಯದಲ್ಲಿಯೇ ಮಕ್ಕಳು ಶಾಲೆಯಲ್ಲಿ ಪಾಠ ಕೇಳುತ್ತಿದ್ದಾರೆ.
ಸರ್ಕಾರಿ ಶಾಲೆಗೆ ಹೆಚ್ಚಿನ ಮಕ್ಕಳನ್ನು ಪಾಲಕರು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮೂರಲ್ಲಿ ಶಾಲೆಗೆ ಹೋಗಲು ಅನೇಕ ಮಕ್ಕಳು ಸಿದ್ದರಿದ್ದರು ಕೂಡಾ ಶಾಲೆಗೆ ಹೋಗಲು ಭಯ ಪಡುತ್ತಿದ್ದಾರೆ
ಈಗಾಗಲೇ ಅನೇಕ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ನಮ್ಮೂರು ಸರ್ಕಾರಿ ಶಾಲೆಯ ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುತ್ತಿದ್ದಾರೆ.
ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಅನೇಕ ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಆದರೆ ಅನೇಕ ಕಡೆ ಸರ್ಕಾರಿ ಶಾಲೆಗೆ ಹೋಗಲು ಹೆಚ್ಚಿನ ಮಕ್ಕಳು ಸಿದ್ದರಿದ್ದರು ಕೂಡಾ ಮೂಲಭೂತ ಸೌಲಭ್ಯಗಳು, ಪಾಠ ಕೇಳಲು ಬೇಕಾದ ವಾತಾವರಣ ಇಲ್ಲದೇ ಇರೋದರಿಂದ ಶಾಲೆಗೆ ಹೋಗಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರು ಅಧಿಕಾರಿಗಳು, ಜನಪ್ರತನಿಧಿಗಳು, ಶಿಕ್ಷಣ ಇಲಾಖೆ ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.