Author: AIN Author

ಚಳಿಗಾಲದಲ್ಲಿ ತ್ವಚೆಯಲ್ಲಿ ಶುಷ್ಕತೆ, ಚರ್ಮ ಕಪ್ಪಾಗುವುದು ಮತ್ತು ತ್ವಚೆ ಬಿರುಕು ಬಿಡುವುದು, ತುಟಿ ಒಡೆಯುವುದು, ಪಾದ ಬಿರುಕು ಬಿಡುವಂತಹದ್ದು ತುಂಬಾ ಸಾಮಾನ್ಯ. ಆದರೆ, ಇವುಗಳಿಂದಾಗುವ ಕಿರಿಕಿರಿ ಸಹಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಚಳಿಗಾಲದಲ್ಲಿ ತಮ್ಮ ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ತುಂಬಾ ಒಳ್ಳೆಯದು. ಕೊಬ್ಬರಿ ಎಣ್ಣೆಯು ಚರ್ಮವನ್ನು ಹಾನಿಕಾರಕ ಸೂಕ್ಷ್ಮಾಣುಜೀವಿಗಳಿಂದ ರಕ್ಷಿಸುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಮತ್ತು ಕ್ಯಾಪ್ರಿಕ್ ಆಮ್ಲಗಳಂತಹ ಕೊಬ್ಬಿನಾಮ್ಲಗಳು ತಮ್ಮ ಆಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ ಚರ್ಮವನ್ನು ಆರೋಗ್ಯಕರವಾಗಿ ಇರಿಸುತ್ತದೆ ಮತ್ತು ನಮ್ಮ ಚರ್ಮದ ಮೇಲೆ ಬೆಳೆಯುವ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತವೆ. ಮೊಡವೆ, ಫೋಲಿಕ್ಯುಲೈಟಿಸ್, ಸೆಲ್ಯುಲೈಟಿಸ್ ಮುಂತಾದ ಚರ್ಮದ ಸೋಂಕುಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತವೆ ಮತ್ತು ಇವುಗಳಿಗೆ ತೆಂಗಿನ ಎಣ್ಣೆ ಮುಕ್ತಿ ನೀಡುತ್ತದೆ. ತೆಂಗಿನ ಎಣ್ಣೆಯು ಒಣ, ಒಡೆದ ಚರ್ಮಕ್ಕೆ ಅತ್ಯಂತ ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ತೆಂಗಿನ ಎಣ್ಣೆ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ತೇವಾಂಶವನ್ನು ಚೆನ್ನಾಗಿ ಉಳಿಸಿಕೊಳ್ಳಲು ಉಪಯುಕ್ತವಾಗಿದೆ. ತೆಂಗಿನ ಎಣ್ಣೆ…

Read More

ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದೇ ನವೆಂಬರ್ 29ಕ್ಕೆ ಪ್ರಜ್ವಲ್ ನಟನೆಯ ಮಾಫಿಯಾ ಸಿನಿಮಾದ ಟೀಸರ್ (Teaser) ರಿಲೀಸ್ ಆಗಲಿದೆ. ಇದೊಂದು ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾವಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿದೆ. ಅದರ ಭಾಗವಾಗಿ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್. ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕರಾಗಿ, ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ  ಮಾಫಿಯಾ (Mafia) ಚಿತ್ರಕ್ಕೆ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ (Dubbing) ಕಾರ್ಯ ಮುಕ್ತಾಯವಾಗಿದೆ. ಆಕ್ಷನ್ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ. ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿವೆ.  ಈ ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ.

Read More

ಬಾಗಲಕೋಟೆ ನ 23: ಭೋವಿ ಅಧ್ಯಯನ ಪೀಠ ಮಾಡುವುದಕ್ಕೆ ಮತ್ತು ಸಮುದಾಯದ ಒಬ್ಬರನ್ನು KPSC ಸದಸ್ಯರನ್ನಾಗಿಸುವುದಕ್ಕೆ ನಾನು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಬಾಗಲಕೋಟೆಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭೋವಿ ಜನಾಂಗದ ಕಸುಬಾದ ಕಲ್ಲು ಹೊಡೆಯುವ ಮೂಲಕ ಭೋವಿ ಸಮುದಾಯದ ಕುಲಗುರು ಶರಣಬಸವ ಅಪ್ಪಂಗಳ್ ಅವರ ಕುಟೀರವನ್ನು ಉದ್ಘಾಟಿಸಿ, ಶಿಲಾಮಂಟಪದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಭೋವಿ ಅಭಿವೃದ್ಧಿ ನಿಗಮ ಮಾಡುವ ಭರವಸೆ ನಾನು ನೀಡಿದ್ದೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೇ ಅಭಿವೃದ್ಧಿ ನಿಗಮ ಮಾಡಿದೆ. ಈಗಲೂ ನಿಮ್ಮ ಬೇಡಿಕೆ ಈಡೇರಿಸಲು ನಾನು ಸಿದ್ದ ಎಂದು ಭರವಸೆ ನೀಡಿದರು. ಭೋವಿ ಸಮಾಜದ ಹಿತ ಕಾಯುವ ಪಕ್ಷ ನಮ್ಮದು. ನಾನು ಸಮುದಾಯಕ್ಜೆ ಆರ್ಥಿಕ ಶಕ್ತಿ ನೀಡುತ್ತೇನೆ. ನಿಮ್ಮ ಆಶೀರ್ವಾದ ನಮಗಿರಲಿ. ನಾನು ಸಿದ್ದರಾಮೇಶ್ವರರ ವಚನಗಳಲ್ಲಿ, ಆಶಯಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದರು. ಬಸವಣ್ಣನವರಿಗಿಂತ ಮೊದಲು ಧರ್ಮ ಬೋಧನೆ ಜನರ ಭಾಷೆಯಲ್ಲಿ ಆಗುತ್ತಿರಲಿಲ್ಲ. ಶರಣರು ಬಂದ ಬಳಿಕ ಜನರ ಭಾಷೆಯಲ್ಲಿ ಧಾರ್ಮಿಕ ಬೋಧನೆ ಶುರುವಾಯಿತು.…

Read More

2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ  (World Cup) ಭಾರತ ಸೋತು ವಾರ ಕಳೆಯುವ ಮೊದಲೇ ರೋಹಿತ್ ಶರ್ಮಾ (Rohit Sharma) ಅವರ ನಿವೃತ್ತಿ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ರೋಹಿತ್ ನಿವೃತ್ತಿ ಬಗ್ಗೆ ಬಿಸಿಸಿಐ (BCCI) ಬಳಿ ಈಗಾಗಲೇ ಮಾತಾಡಿದ್ದಾರೆ ಎಂದು ವರದಿಯಾಗಿದೆ. ಟೀಂ ಇಂಡಿಯಾದ ಉತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ರೋಹಿತ್, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಮುಂದುವರಿಯುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಟೀಂ ಇಂಡಿಯಾದ ಟಿ20 ತಂಡಕ್ಕೆ ಪರಿಗಣಿಸದೇ ಇದ್ದರೂ ಸಮಸ್ಯೆ ಇಲ್ಲ ಎಂದು ರೋಹಿತ್ ಹೇಳಿಕೊಂಡಿದ್ದಾಗಿ ವರದಿಯಾಗಿದೆ. 2021ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ 2023ರ ಏಷ್ಯಾ ಕಪ್‍ನಲ್ಲಿ ಮಾತ್ರ ಗೆಲುವು ಸಾಧಿಸಿದ್ದರು ಸದ್ಯಕ್ಕೆ ರೋಹಿತ್ ಟೆಸ್ಟ್ ಕ್ರಿಕೆಟ್ ಕಡೆಗೆ ತಮ್ಮ ಗಮನ ನೀಡುವ ಸಾಧ್ಯತೆ ಹೆಚ್ಚಿದೆ. 3ನೇ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಷಿಪ್ ಟೂರ್ನಿಯ ಫೈನಲ್ ಕೂಡ 2025ರಲ್ಲೇ ನಡೆಯಲಿದೆ. ಹೀಗಾಗಿ ತಂಡದಲ್ಲಿ…

Read More

ಆಸ್ಟ್ರೇಲಿಯಾದ ಬ್ಯಾಟರ್​ ಮಿಚೆಲ್​ ಮಾರ್ಷ್​ ಕಾಲಿಟ್ಟು ವಿಶ್ರಾಂತಿ ಪಡೆಯುವ ಮೂಲಕ ಟ್ರೋಫಿಗೆ ಅಗೌರವ ತೋರಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ತುಂಬಾ ನೋವಾಯಿತು ಎಂದಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಪಡೆದ ಸಾಧನೆ ಮಾಡಿರುವ ಶಮಿ, ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮಿಚೆಲ್​ ಮಾರ್ಷ್​ ನಡೆಯನ್ನು ಕುಟುವಾಗಿ ಟೀಕಿಸಿದ್ದಾರೆ. ನನಗೆ ತುಂಬಾ ಬೇಸರವಾಯಿತು. ವಿಶ್ವದ ಎಲ್ಲ ತಂಡಗಳು ಹೋರಾಡುವ ಮತ್ತು ತಲೆಯ ಮೇಲೆ ಹೊತ್ತು ಸಂಭ್ರಮಿಸಲು ಬಯಸುವ ಟ್ರೋಫಿಯ ಮೇಲೆ ಕಾಲು ಇಟ್ಟಿದ್ದು, ನನಗೆ ಸಂತೋಷ ನೀಡಲಿಲ್ಲ ಎಂದು ಶಮಿ ಹೇಳಿದರು. ಇದೇ ಸಂದರ್ಭದಲ್ಲಿ ಪಿಚ್​ ಬಗ್ಗೆ ಮಾತನಾಡಿದ ಶಮಿ, ಸಾಮಾನ್ಯವಾಗಿ ಬೌಲರ್‌ಗಳು ಮೈದಾನಕ್ಕೆ ಬಂದ ಬಳಿಕ ಪಿಚ್​ ಅನ್ನು ಪರಿಶೀಲಿಸುತ್ತಾರೆ. ನಾನು ಎಂದಿಗೂ ವಿಕೆಟ್ ಬಳಿ ಹೋಗುವುದಿಲ್ಲ ಏಕೆಂದರೆ, ನೀವು ವಿಕೆಟ್​ ಮೇಲೆ ಬೌಲ್ ಮಾಡಿದಾಗ ಮಾತ್ರ ಅದು ಬಗ್ಗೆ ನಿಮಗೆ ತಿಳಿಯುತ್ತದೆ. ಹೀಗಿರುವಾಗ ಏಕೆ ಒತ್ತಡವನ್ನು…

Read More

ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ಗೆ (Lucknow Super Giants) ಗುಡ್‌ಬೈ ಹೇಳಿದ್ದಾರೆ. ಅಧಿಕೃತವಾಗಿ ಎಲ್‌ಎಸ್‌ಜಿ (LSG) ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಮತ್ತೆ ಮರಳಿದ್ದಾರೆ. ಕೆಕೆಆರ್‌ ತಂಡದಲ್ಲಿದ್ದಾಗ ನಾಯಕರಾಗಿ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಕೆಕೆಆರ್‌ನ ಸಿಇಒ ವೆಂಕಿ ಮೈಸೂರು (Venky Mysuru) ಅವರು ಬುಧವಾರ ಈ ಸಂಬಂಧ ಮಾಹಿತಿ ಹಂಚಿಕೊಂಡಿದ್ದಾರೆ. ಗಂಭೀರ್‌ ಮೆಂಟರ್‌ ಆಗಿ ಬರುತ್ತಿರುವುದನ್ನು ಕೆಕೆಆರ್‌ ಸಹ-ಮಾಲೀಕ ಶಾರುಖ್‌ ಖಾನ್‌ ಸ್ವಾಗತಿಸಿದ್ದಾರೆ. ಫ್ರಾಂಚೈಸಿಗೆ ಗಂಭೀರ್ ಆಗಮನವನ್ನು ‘ನಾಯಕನ ಹಿಂತಿರುಗುವಿಕೆ’ ಎಂದು ಬಣ್ಣಿಸಿದ್ದಾರೆ. ಗಂಭೀರ್ ಎರಡು ವರ್ಷಗಳ ಕಾಲ LSG ಯ ಸಲಹೆಗಾರರಾಗಿ ಪಾತ್ರ ನಿರ್ವಹಿಸಿದ್ದರು. IPL 2022 ಆವೃತ್ತಿಯಲ್ಲಿ ತಂಡ ಫೈನಲ್ ತಲುಪಲು ಅಪಾರ ಶ್ರಮಿಸಿದ್ದರು. 2023 ರ ಆವೃತ್ತಿಯಲ್ಲಿ LSG ಲೀಗ್ ಸ್ಟ್ಯಾಂಡಿಂಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತು. ಆದರೆ ಸತತವಾಗಿ ಎರಡನೇ ಬಾರಿಗೆ ಫೈನಲ್‌ಗೆ ಅರ್ಹತೆ…

Read More

ಲಕ್ನೋ: ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿಯನ್ನೇ ಹತ್ಯೆಗೈದಿದ್ದ ಪತ್ನಿ ಹಾಗೂ ಆಕೆಯ ಸಹೋದರನನ್ನು ಉತ್ತರ ಪ್ರದೇಶದ (Uttar Pradesh) ಪೊಲಿಸರು (Police) ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭಾವನ ಸಿಂಗ್ ಮತ್ತು ಆಕೆಯ ಸಹೋದರ ದೇವೇಂದ್ರ ಕುಮಾರ್ ವರ್ಮಾ ಎಂದು ಗುರುತಿಸಲಾಗಿದೆ. ಆರೋಪಿಗಳು ಇನ್ಸ್‌ಪೆಕ್ಟರ್ ಆಗಿದ್ದ ಸತೀಶ್ ಸಿಂಗ್ ಅವರನ್ನು ಹತ್ಯೆಗೈದಿದ್ದರು. ಅಲ್ಲದೇ ಪ್ರಕರಣದ ದಿಕ್ಕು ತಪ್ಪಿಸಲು ಸೈಕಲ್ ಮೇಲೆ ಬಂದ ವ್ಯಕ್ತಿ ಕೊಲೆಗೈದು ಹೋಗಿದ್ದಾಗಿ ಕತೆಕಟ್ಟಿದ್ದರು. ಕೊಲೆ ನಡೆದ ಸ್ವಲ್ಪ ದೂರದಲ್ಲಿ ಸೈಕಲ್ ಹಾಗೂ ಬಟ್ಟೆಯನ್ನು ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ ಇನ್ಸ್‌ಪೆಕ್ಟರ್ ಸತೀಶ್ ಸಿಂಗ್ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. https://ainlivenews.com/housewifes-body-found-hanging-in-bangalore/ ಇದರಿಂದಾಗಿ ಭಾವನಾ ಸಿಂಗ್ ಮತ್ತು ಸತೀಶ್ ಸಿಂಗ್ ನಡುವೆ ನಿರಂತರವಾಗಿ ವಾಗ್ವಾದ ನಡೆಯುತ್ತಿತ್ತು. ಇದರಿಂದ ಆತನನ್ನು ಹತ್ಯೆಗೈಯಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆಗೆ 10 ಕಿಲೋಮೀಟರ್ ವ್ಯಾಪ್ತಿಯ 400 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಗಳು…

Read More

ಮಂಗಳೂರು: ” ಅಧಿವೇಶನದ ಸ್ಪೀಕರ್‌ ಬಗ್ಗೆ ಹೇಳಿಕೆ ಕೊಟ್ಟಿರುವ ಸಚಿವ ಜಮೀರ್‌ ಅವರನ್ನು ರಸ್ತೆಯಲ್ಲಿ ಓಡಾಡಲು ಬಿಟ್ಟಿರುವುದೇ ಅಪರಾಧ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಜಮೀರ್‌ ಅವರ ರಾಜೀನಾಮೆ ಪಡೆಯಬೇಕು. ಇಲ್ಲವಾದರೆ ನಾವು ಹೋರಾಟ ನಡೆಸುತ್ತೇವೆ ” ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ವಕ್ಫ್‌ ಸಚಿವ ಜಮೀರ್ ಅಹಮದ್‌ ಖಾನ್‌ರನ್ನು ರಸ್ತೆಯಲ್ಲಿ ಓಡಾಡಲು ನಾವು ಬಿಟ್ಟಿರೋದೇ ಹೆಚ್ಚು, ಸ್ಪೀಕ‌ರ್ ಸ್ಥಾನಕ್ಕೆ ಜಾತಿ ಧರ್ಮದ ಬಣ್ಣ ಹಚ್ಚಿ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಇಷ್ಟು ಹೊತ್ತಿಗೆ ಅವರಿಂದ ಸಿಎಂ ರಾಜಿನಾಮೆ ತೆಗೆದುಕೊಳ್ಳಬೇಕಿತ್ತು. ಮುಂದಿನ ಅಧಿವೇಶನದಲ್ಲಿ ಹೇಗೆ ಭಾಗವಹಿಸುತ್ತಾರೆ ನೋಡುತ್ತೇವೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. https://ainlivenews.com/housewifes-body-found-hanging-in-bangalore/  ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಅದನ್ನು ನಿಭಾಯಿಸಲು ಸರಕಾರ ವಿಫಲವಾಗಿದೆ. ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಮಾಡಿಲ್ಲ, ಅಧಿಕಾರಿಗಳ ಸಭೆ ಕೂಡ ಕರೆದಿಲ್ಲ. ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಬರದ ವಿಚಾರ ಮಾತನಾಡದೆ ಲೋಕಸಭಾ…

Read More

ಬೆಂಗಳೂರು:- ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ತಮಗೆ ಗೊತ್ತಿಲ್ಲ. ಜಾತಿ ಗಣತಿ ವರದಿ ಇನ್ನು ಬಂದಿಲ್ಲ. ಸುಮ್ಮನೆ ನೀರಿನೊಳಗೆ ಎಮ್ಮೆ ನಿಲ್ಲಿಸಿ ಹಾಲು ಕರೆದಂತೆ ಎಂದ ಅವರು ಅದು ಕೋಣಾನೋ, ಎಮ್ಮೆನೋ ಯಾರಿಗೆ ಗೊತ್ತು ಎಂದರು. ವರದಿ ಬಂದ ಬಳಿಕ ಈ ಬಗ್ಗೆ ಚರ್ಚೆಯಾಗುತ್ತದೆ ಎಂದ ಅವರು ಬಿಹಾರದಲ್ಲಿ ವರದಿ ಬಿಡುಗಡೆಯಾಗಿದೆ. ಆಕಾಶ ಬಿದ್ದು ಹೋಯ್ತಾ ಎಂದು ಪ್ರಶ್ನಿಸಿದರು. ಇನ್ನು ವರದಿ ಬಂದಿಲ್ಲ, ಹೀಗಾಗಿ ಸುಮ್ಮನೆ ಊಹಾಪೋಹಗಳ ಮೇಲೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದರು. ಆಯೋಗದ ಅಧ್ಯಕ್ಷರಿಗೆ ಒಂದು ತಿಂಗಳು ಹೆಚ್ಚಿಗೆ ಕಾಲಾವಕಾಶ ನೀಡಲಾಗಿದೆ. ವರದಿನೇ ಆಚೆ ಬಂದಿಲ್ಲ, ವರದಿ ಆಚೆ ಬಂದ ನಂತರ ಪರ ವಿರೋಧ ಅಭಿಪ್ರಾಯಗಳು ಕೇಳಿಬರಬಹದು. ಏನೂ ಇಲ್ಲದೇನೆ ಹೀಗೆ ಚರ್ಚೆ ನಡೆಸೋದು ಎಷ್ಟರ ಮಟ್ಟಿಗೆ ಸರಿ ಎಂದರು. ವಿ. ಸೋಮಣ್ಣ ಕರೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ…

Read More

ಬೆಂಗಳೂರು: ಮಂಡ್ಯದಿಂದ ಸ್ಪರ್ಧಿಸುವಂತೆ ಜೆಡಿಎಸ್ (JDS) ಯುವಮುಖಂಡ ನಿಖಿಲ್ ಕುಮಾರಸ್ವಾಮಿಗೆ  ಆಹ್ವಾನ ಬಂದಿದೆ ಎಂದು ಜೆಡಿಎಸ್​ ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಜೆಡಿಎಸ್​ ನಾಯಕರು ಸೇರಿದಂತೆ ನಿಲ್ ಕುಮಾರಸ್ವಾಮಿಗೆ ಆಹ್ವಾನ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮಂಡ್ಯದಲ್ಲಿ ನಿಖಿಲ್​ ಕಣಕ್ಕಿಳಿಸಲು ನಮ್ಮ ವರಿಷ್ಠರಿಗೆ ಕೇಳಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​​ಗೆ ಸೋಲಾಗಿತ್ತು. ಈ ಬಾರಿ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದೇವೆ. ಬಿಜೆಪಿ-ಜೆಡಿಎಸ್ ಜೊತೆಯಾಗಿ ಹೋಗಲು ತೀರ್ಮಾನ ಮಾಡಿದ್ದೇವೆ. ನಿಖಿಲ್ ಸ್ಪರ್ಧಿಸಬೇಕು ಎಂಬುದೇ ನಮ್ಮೆಲ್ಲರ ಒತ್ತಾಯ. ಮಂಡ್ಯ ಟಿಕೆಟ್‌ಗೆ ಮೊದಲ ಆದ್ಯತೆ ನಿಖಿಲ್ ಕುಮಾರಸ್ವಾಮಿಗೆ ಎಂದು ಹೇಳಿದ್ದಾರೆ.

Read More