ಬೆಂಗಳೂರು: ರಾಜ್ಯ ಸರ್ಕಾರದ ಈ ನಿರ್ಣಯ ಸಂಪೂರ್ಣ ಕಾನೂನು ಬಾಹಿರ. ಐಟಿ ದಾಳಿ ವೇಳೆ ರಾಜ್ಯ ಮತ್ತು ಬೇರೆ ಕಡೆ ಸಾಕಷ್ಟು ಹಣ ಸೀಜ್ ಆಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ದುರದೃಷ್ಟಕರ. ಕಾಂಗ್ರೆಸ್ ಸರ್ಕಾರ ಕಾನೂನಿನ ವಿರುದ್ಧವಾಗಿ ಈ ನಿರ್ಣಯ ಕೈಗೊಂಡಿದೆ. ಡಿ.ಕೆ.ಶಿವಕುಮಾರ್ರನ್ನು ಉಳಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಕಾನೂನಿನ ಭಯ ಇದೆಯಾ? ಡಿಕೆ ಶಿವಕುಮಾರ್ ಅವರೇ ಸರ್ಕಾರದ ನಿರ್ಧಾರ ವಿರೋಧಿಸಬೇಕಿತ್ತು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. https://ainlivenews.com/traffic-route-change-around-palace-grounds/ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಚಿನ್ನದಂತಹ ಅವಕಾಶವಿದೆ. ತಾವು ಸತ್ಯಹರಿಶ್ಚಂದ್ರ ಅಂತ ಸಾಬೀತು ಮಾಡುವ ಅವಕಾಶ ಇದೆ. ನೀವು ತಪ್ಪು ಮಾಡಿಲ್ಲ ಅನ್ನೋದನ್ನು ತನಿಖೆ ಎದುರಿಸಿ ತೋರಿಸಿ. ಸಚಿವ ಸಂಪುಟ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ. ಯಾವ ರೀತಿ ಹೋರಾಟ ಮಾಡಬೇಕೆಂದು ಚರ್ಚೆ ನಡೆಸಿ ನಿರ್ಧಾರ. ನಮ್ಮ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ರಾಜಕೀಯ ಪ್ರೇರಿತವಲ್ಲ. ಪ್ರಾಥಮಿಕ ತನಿಖೆ ಮಾಹಿತಿ ಆಧರಿಸಿ ಸಿಬಿಐ ತನಿಖೆಗೆ…
Author: AIN Author
ಬೆಂಗಳೂರು: ಅರಮನೆ ಮೈದಾನದಲ್ಲಿ ಇಂದಿನಿಂದ 3 ದಿನ ಕಂಬಳ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಾಹನ ಮಾರ್ಗಸೂಚಿ ನೀಡಿದ್ದಾರೆ. ಕಂಬಳ ವೀಕ್ಷಣೆಗೆ ಬರುವವರ ಪ್ರವೇಶ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿದೆ. ಸಿಬಿಡಿ ಏರಿಯಾ, ಮೇಖ್ರಿ ಸರ್ಕಲ್ ಬಳಿಯಿಂದ ಬರುವ ವಾಹನಗಳಿಗೆ ಗೇಟ್ ನಂ.1 ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೆಬ್ಬಾಳ, ಮೇಖ್ರಿ ಸರ್ಕಲ್ ಅಂಡರ್ ಪಾಸ್, ಯಶವಂತಪುರ ಕಡೆಯಿಂದ ಬರುವ ವಾಹನಗಳಿಗೆ ಗೇಟ್ ನಂ.1 ರ ಮೂಲಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕ್ಯಾಬ್ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶಿಸಬೇಕು. ಗೇಟ್ ನಂಬರ್ 3ರ ಮೂಲಕ ಕ್ಯಾಬ್ಗಳು ನಿರ್ಗಮಿಸಬೇಕು ಎಂದು ತಿಳಿಸಿದ್ದಾರೆ. ಕಾರ್ಯಕ್ರಮ ಹೊರತುಪಡಿಸಿ ಸಂಚರಿಸುವ ಸವಾರರಿಗೆ ಮಾರ್ಗಸೂಚಿ ಅರಮನೆ ರಸ್ತೆ, ಬಿಡಿಎ ಜಂಕ್ಷನ್ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್ನಿಂದ ಹಳೇ ಉದಯ ಟಿವಿ ಜಂಕ್ಷನ್ವರೆಗೆ ಎಂ.ವಿ ಜಯರಾಂ ರಸ್ತೆ ಬಳಸುವಂತೆ ಸೂಚಿಸಿದ್ದಾರೆ. ಮೇಖ್ರಿ ವೃತ್ತದಿಂದ LRDE ಜಂಕ್ಷನ್ವರೆಗೆ ಬಳ್ಳಾರಿ ರಸ್ತೆ ಬಳಸಬೇಕು.…
ಹಾಸನ: ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ನಗರದ ಹಲವೆಡೆ ವಾಹನ ಸವಾರರು ಪರಿತಪಿಸುಂವತಾಗಿದೆ. ನಗರದ ಕೆ.ಆರ್. ಪುರಂ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತ ಸಂಭವಿಸುತ್ತಿದ್ದು ಈ ಬಗ್ಗೆ ಅನೇಕ ತಿಂಗಳುಗಳಿಂದ ನಗರಸಭೆ ಆಯುಕ್ತರ ಗಮನಕ್ಕೆ ಹಲವಾರು ಬಾರಿ ತರಲಾಗಿದೆ. https://ainlivenews.com/shooting-in-metro-also-from-now-on-bmrcl-green-signal/ ಪ್ರತಿ ಬಾರಿಯೂ ಇಂದು ನಾಳೆ ಎಂಬ ಭರವಸೆಯಲ್ಲೇ ಆಯುಕ್ತರು ಕಾಲ ಕಳೆಯುತ್ತಿದ್ದು ಇಂದೂ ಕೂಡ ಅಪಘಾತವಾಗಿ ಮೂವರ ಸ್ಥಿತಿ ಚಿಂತಾಜನಕವಾಗುವಂತಾಗಿದೆ. ಇದಕ್ಕೆಲ್ಲಾ ನಗರಸಭೆ ಅಧಿಕಾರಿಗಳೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು: ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಹಣಕಾಸು ಸಚಿವೆಯನ್ನ ಭೇಟಿ ಮಾಡಿ, ಮನವಿ ಮಾಡಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಳಿ ರೈತರ ವಿಚಾರದಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ನಮ್ಮ ಬಳಿಯಿರುವ ಮಾಹಿತಿ ಅನ್ವಯ ರಾಜ್ಯದಲ್ಲಿ ಅತೀ ಸಣ್ಣ ರೈತರು ಶೇಕಡಾ 70ರಷ್ಟಿದ್ದಾರೆ. ಹೀಗಾಗಿ 2015ರ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದರು. ಒಂದು ವೇಳೆ 2015ರ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ 1500 ಕೋಟಿ ರಾಜ್ಯಕ್ಕೆ ನಷ್ಟ ಆಗುತ್ತೆ ಎಂದು ತಿಳಿಸಿದ್ರು. ಇನ್ನು, ರಾಜ್ಯದ ರೈತರು ಕಂಗಾಲಾಗಿ, ಸಂಕಷ್ಟ ಎದುರಿಸ್ತಿದ್ದಾರೆ. ಹೀಗಾಗಿ ಪರಿಹಾರ ಹಣ ನೇರವಾಗಿ ರೈತರ ಅಕೌಂಟಿಗೆ ಹಾಕಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸರ್ಕಾರ ವಾಪಸ್ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ದರೋಡೆಕೋರರನ್ನು ರಕ್ಷಣೆ ಮಾಡಲು ಈ ಸರ್ಕಾರ ಇರುವುದು ಎಂದು ಹೇಳಿದ್ದಾರೆ https://ainlivenews.com/eskom-online-services-closed-for-3-days-from-today/ ನಗರದಲ್ಲಿ ಮಾತನಾಡಿದ ಅವರು,ಡಿಕೆ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ವಿಚಾರವಾಗಿ ಕೋರ್ಟ್ನಲ್ಲಿ ಏನು ನಿರ್ಧಾರ ಆಗುತ್ತೆಂದು ನೋಡಿ ಮಾತಾಡುತ್ತೇನೆ. ಮರ್ಯಾದೆ ಇಲ್ಲದರಿಗೆ ಕೋರ್ಟ್ನಲ್ಲಿ ಇದ್ದರೇನು, ಎಲ್ಲಿದ್ದರೇನು? ಎಲ್ಲವನ್ನೂ ದುಡ್ಡಿನಿಂದ ಕೊಂಡುಕೊಳ್ಳುತ್ತೇವೆ ಅನ್ನೋ ದುರಹಂಕಾರ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪರೋಕ್ಷವಾಗಿ ಕಡಿಕಾರಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ನೀಡಿತ್ತು. ಹಿಂದಿನ ಅಡ್ವೋಕೇಟ್ ಜನರಲ್ ಹಾಗೂ ನಮ್ಮ ಸರ್ಕಾರದ ಎಜಿ ಇಬ್ಬರ ಅಭಿಪ್ರಾಯ ಗಂಭೀರವಾಗಿ ಪರಿಗಣಿಸಲಾಗಿದೆ. ಸ್ಪೀಕರ್ ರಿಂದ ಪರವಾನಗಿ ಪಡೆದುಕೊಳ್ಳದೇ ನಿಯಮ ಬಾಹಿರವಾಗಿ ಅನುಮತಿಯಿಲ್ಲದೇ ತೆಗೆದುಕೊಂಡ ಕ್ರಮ ಆಗಿತ್ತು. ಕಾನೂನು ಪ್ರಕಾರ ಆಗ ಕ್ರಮ ಆಗಿರಲಿಲ್ಲ. ಹಳೆಯ ಎಜಿ ಈಗಿನ ಎಜಿ ಇಬ್ಬರ ಅಭಿಪ್ರಾಯ ಪರಗಣಿಸಿದ್ದೇವೆ. ಆದೇಶ ನಾಳೆಯೋ ನಾಡಿದ್ದೋ ನಿಮಗೆ ಸೇರುತ್ತದೆ. Its…
ಬೆಂಗಳೂರು: ಬೆಂಗಳೂರು ಅರಮೆನೆ ಮೈದಾನದಲ್ಲಿ ಇಂದಿನಿಂದ (ನ.24) ಮೂರು ದಿನಗಳ ಕಾಲ ಕಂಬಳ ಪಂದ್ಯ ನಡೆಯಲಿದೆ. ಕಂಬಳದಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗಿಯಾಗಲಿವೆ. ಕಂಬಳಕ್ಕೆಂದೇ ರಾಜಮಹಾರಾಜ ಹೆಸರಿನ ಟ್ರ್ಯಾಕ್ ತಯಾರಾಗಿದೆ. 157 ಮೀಟರ್ ಉದ್ದ, 8 ಮೀಟರ್ ಅಗಲ ಟ್ರ್ಯಾಕ್ ಒಳಗೊಂಡಿದೆ. ಕಂಬಳ ವೀಕ್ಷಣೆಗೆ ಸುಮಾರು 6ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದೆ. https://ainlivenews.com/begging-in-metro-train-rs-500-per-person-officials-fined/ ಕಂಬಳದಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗಿಯಾಗಲಿವೆ. ಕಂಬಳಕ್ಕೆಂದೇ ರಾಜಮಹಾರಾಜ ಹೆಸರಿನ ಟ್ರ್ಯಾಕ್ ತಯಾರಾಗಿದೆ. 157 ಮೀಟರ್ ಉದ್ದ, 8 ಮೀಟರ್ ಅಗಲ ಟ್ರ್ಯಾಕ್ ಒಳಗೊಂಡಿದೆ. ಕಂಬಳ ವೀಕ್ಷಣೆಗೆ ಸುಮಾರು 6ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದೆ. 200ಕ್ಕೂ ಹೆಚ್ಚು ಕೋಣಗಳು ಕಂಬಳದಲ್ಲಿ ಭಾಗವಹಿಸಲಿವೆ. ವೀಕೆಂಡ್ನಲ್ಲಿ ಕಂಬಳವಿರುವುದರಿಂದ ವೀಕ್ಷಣೆಗೆ 6 ರಿಂದ 7 ಲಕ್ಷ ಜನ ಬರುವ ಸಾಧ್ಯತೆ ಇದೆ. ಇದಕ್ಕಾಗಿ ಸಕಲ ತಯಾರಿ ಮಾಡಲಾಗಿದ್ದು, ಜನರು ಕೂತು ಕಂಬಳ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶಕ್ಕೆ ಅವಕಾಶ…
ಕಲಬುರಗಿ: ಬರೋಬ್ಬರಿ 8 ವರ್ಷಗಳ ಬಳಿಕ ಇದೇ ಮೊದಲ ಬಾರಿ ಗೆ ವಿಶ್ವ ಟೆನ್ನಿಸ್ ಪಂದ್ಯಾವಳಿ ಕಲಬುರಗಿಯಲ್ಲಿ ನಡೆಯಲಿದೆ. ನವೆಂಬರ್ 26 ರಿಂದ ಡಿಸೆಂಬರ್ 3 ರವರೆಗೆ ಪಂದ್ಯ ನಡೆಯಲಿದ್ದು9 ದೇಶದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಟೆನ್ನಿಸ್ ಹಬ್ಬ ನಡೆಯಲಿದೆ.65 ನೇ ವಿಶ್ವ ಶ್ರೇಯಾಂಕಿತ ಆಟಗಾರ ಎವಜೆನಿ ಡಾನ್ ಸ್ಕಾಯ್ ಸೇರಿದಂತೆ ಹಲವರು ಪಂದ್ಯಾವಳಿಯಲ್ಲಿ ಭಾಗಿಯಾಗುತ್ತಿದ್ದಾರೆ..ಸಚಿವ ಪ್ರಿಯಾಂಕ್ ಖರ್ಗೆ ಪಂದ್ಯ ಉದ್ಘಾಟಿಸಲಿದ್ದಾರೆ ಅಂತ ಜಿಲ್ಲಾಡಳಿತ ತಿಳಿಸಿದೆ..
ಬೆಂಗಳೂರು: ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ಮಾಡಿದ ವ್ಯಕ್ತಿಯ ಮೇಲೆ ಮೆಟ್ರೋ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. https://ainlivenews.com/martyred-soldier-captain-pranjals-mortal-remains-to-bangalore-today/ ವ್ಯಕ್ತಿಯೊಬ್ಬ ನಾನೂ ಮೂಗ, ಕಿವುಡ ಎಂದು ಚೀಟಿ ತೋರಿಸಿ ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ಮಾಡಿದ್ದಾನೆ. ಈ ಹಿನ್ನೆಲೆ ಮೆಟ್ರೋ ಅಧಿಕಾರಿಗಳು ಈತನ ವಿರುದ್ಧ ಮೆಟ್ರೋ ಕಾಯ್ದೆ ಸೆಕ್ಷನ್ 39ರ ಅಡಿ ಕೇಸ್ ದಾಖಲಿಸಿದ್ದಾರೆ. 59 ಮಂದಿ ಪ್ರಯಾಣಿಕರಿಗೆ ತೊಂದರೆ ಪ್ರಕರಣದಲ್ಲಿ ಕೊಪ್ಪಳ ಮೂಲದ ಮಲ್ಲಿಕಾರ್ಜುನ್ನನ್ನ ವಶಕ್ಕೆ ಪಡೆದು ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.
ಬೆಂಗಳೂರು: ಸಾಫ್ಟ್‌ವೇರ್, ಹಾರ್ಡ್‌ವೇರ್ ಅಪ್‌ಡೇಟ್ ಹಿನ್ನೆಲೆ ಶುಕ್ರವಾರದಿಂದ 3 ದಿನಗಳ ಕಾಲ ಎಸ್ಕಾಂ (ESCOM) ಆನ್‌ಲೈನ್ ಸೇವೆಗಳು ಬಂದ್ ಇರಲಿದೆ. ಈ ಹಿನ್ನೆಲೆ ಬೆಂಗಳೂರು (Bengaluru) ಸೇರಿದಂತೆ ಹಲವೆಡೆ ಆನ್‌ಲೈನ್ ಸೇವೆಗಳು ಸ್ಥಗಿತವಾಗಿರಲಿದೆ. ಶುಕ್ರವಾರ ನವೆಂಬರ್ 24 ರಿಂದ 26 ರವರೆಗೆ 98 ನಗರ ಹಾಗೂ ಪಟ್ಟಣಗಳಲ್ಲಿ ಸೇವೆಗಳು ಅಲಭ್ಯವಾಗಿರಲಿದೆ. ಸಾಫ್ಟ್‌ವೇರ್, ಹಾರ್ಡ್‌ವೇರ್ ಅಪ್‌ಡೇಟ್ ಹಿನ್ನೆಲೆ ಸೇವೆಗಳು ಬಂದ್ ಇರಲಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು ಸೇರಿದಂತೆ ಹಲವೆಡೆ ಆನ್‌ಲೈನ್ ಸೇವೆಗಳು ಸ್ಥಗಿತವಾಗಲಿದೆ. ಈ ಬಗ್ಗೆ ಬೆಸ್ಕಾಂ ಅಧಿಕೃತ ಪ್ರಕಟಣೆ ನೀಡಿದೆ. ಯಾವೆಲ್ಲಾ ಸೇವೆ ಇರಲ್ಲ? * ಹೊಸ ವಿದ್ಯುತ್ ಸಂಪರ್ಕ ನೋಂದಣಿ * ಆನ್‌ಲೈನ್ ಹಣ ಪಾವತಿ * ಕೌಂಟರ್‌ಗಳಲ್ಲಿ ನಗದು ಪಾವತಿ ಇರಲ್ಲ
ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದಲ್ಲಿ (Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ (Rescue operation) ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ತಡರಾತ್ರಿ ತಾಂತ್ರಿಕ ಅಡಚಣೆಯಿಂದಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗಿದೆ. ಸಿಲ್ಕ್ಯಾರಾ ಸುರಂಗದ ಕಡೆಯಿಂದ ಅಮೆರಿಕನ್ ಆಗುರ್ ಯಂತ್ರವನ್ನು ಬಳಸಿ ಕೊರೆಯುವ ಕೆಲಸ ನಡೆಯುತ್ತಿತ್ತು. ರಕ್ಷಣಾ ತಂಡ ಇಲ್ಲಿಯವರೆಗೆ ಸುಮಾರು 46.8 ಮೀ. ವರೆಗೆ ಕೊರೆದಿದ್ದಾರೆ. ಆದರೆ ಗುರುವಾರ ತಡರಾತ್ರಿ ಮತ್ತೊಂದು ತಾಂತ್ರಿಕ ಅಡಚಣೆ ಉಂಟಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. https://ainlivenews.com/shooting-in-metro-also-from-now-on-bmrcl-green-signal/ ಕೊರೆಯುವ ಯಂತ್ರವನ್ನು ದುರಸ್ತಿಗೊಳಿಸಲು ಕೆಲವು ಗಂಟೆ ತೆಗೆದುಕೊಳ್ಳುತ್ತದೆ. ಬೇರೆ ಯಾವುದೇ ಸಮಸ್ಯೆ ಉಂಟಾಗದಿದ್ದರೆ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 13 ದಿನಗಳಿಂದ ಸುರಂಗದೊಳಗೆ ಸಿಲುಕಿ ಪರದಾಡುತ್ತಿರುವ 41 ಕಾರ್ಮಿಕರನ್ನು ಇಂದು ಹೊರತರುವ ನಿರೀಕ್ಷೆಯಿದೆ. ಅಂಬುಲೆನ್ಸ್‌ಗಳು, ವೈದ್ಯರ ತಂಡ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದಾರೆ. ಕಾರ್ಮಿಕರಿಗೆ ನೀರು, ಆಹಾರ ವಿತರಿಸಲು ಪೈಪ್ ಅನ್ನು ಅಳವಡಿಸಲಾಗಿದೆ.