ಬೆಂಗಳೂರು: ಬೆಂಗಳೂರು ಅರಮೆನೆ ಮೈದಾನದಲ್ಲಿ ಇಂದಿನಿಂದ (ನ.24) ಮೂರು ದಿನಗಳ ಕಾಲ ಕಂಬಳ ಪಂದ್ಯ ನಡೆಯಲಿದೆ. ಕಂಬಳದಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗಿಯಾಗಲಿವೆ. ಕಂಬಳಕ್ಕೆಂದೇ ರಾಜಮಹಾರಾಜ ಹೆಸರಿನ ಟ್ರ್ಯಾಕ್ ತಯಾರಾಗಿದೆ. 157 ಮೀಟರ್ ಉದ್ದ, 8 ಮೀಟರ್ ಅಗಲ ಟ್ರ್ಯಾಕ್ ಒಳಗೊಂಡಿದೆ. ಕಂಬಳ ವೀಕ್ಷಣೆಗೆ ಸುಮಾರು 6ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದೆ.
ಕಂಬಳದಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗಿಯಾಗಲಿವೆ. ಕಂಬಳಕ್ಕೆಂದೇ ರಾಜಮಹಾರಾಜ ಹೆಸರಿನ ಟ್ರ್ಯಾಕ್ ತಯಾರಾಗಿದೆ. 157 ಮೀಟರ್ ಉದ್ದ, 8 ಮೀಟರ್ ಅಗಲ ಟ್ರ್ಯಾಕ್ ಒಳಗೊಂಡಿದೆ. ಕಂಬಳ ವೀಕ್ಷಣೆಗೆ ಸುಮಾರು 6ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದೆ.
200ಕ್ಕೂ ಹೆಚ್ಚು ಕೋಣಗಳು ಕಂಬಳದಲ್ಲಿ ಭಾಗವಹಿಸಲಿವೆ. ವೀಕೆಂಡ್ನಲ್ಲಿ ಕಂಬಳವಿರುವುದರಿಂದ ವೀಕ್ಷಣೆಗೆ 6 ರಿಂದ 7 ಲಕ್ಷ ಜನ ಬರುವ ಸಾಧ್ಯತೆ ಇದೆ.
ಇದಕ್ಕಾಗಿ ಸಕಲ ತಯಾರಿ ಮಾಡಲಾಗಿದ್ದು, ಜನರು ಕೂತು ಕಂಬಳ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೋಣಗಳಿಗೂ ಸೂಕ್ತ ಜಾಗ, ಮೇವು, ನೀರಿನ ವ್ಯವಸ್ಥೆ ಮಾಡಲಾಗಿದೆ
ಕಂಬಳಕ್ಕೆ 77.50- 78 ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆಯಿದ್ದು, ಸರ್ಕಾರ ಒಂದು ಕೋಟಿ ರೂ. ಅನುದಾನ ಪ್ರಕಟಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳು ಹಣ ಸಹಾಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.