ಜನಪ್ರಿಯ ಸೀರಿಯಲ್ ‘ರಂಗನಾಯಕಿ’ ಮೂಲಕ ಪರಿಚಿತರಾದ ನಟಿ ಪ್ರೇರಣಾ ಕಂಬಂ (Prerana Kambam) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರೀಪಾದ್ ದೇಶಪಾಂಡೆ ಜೊತೆ ನಟಿ ಹಸೆಮಣೆ ಏರಿದ್ದಾರೆ. ಇತ್ತೀಚೆಗೆ ಪ್ರೇರಣಾ ಅವರು ಶ್ರೀಪಾದ್ ಜೊತೆ ಅದ್ದೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಬೆಂಗಳೂರಿನಲ್ಲಿ ಖಾಸಗಿ ರೆಸಾರ್ಟ್‌ವೊಂದರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಟಿ ಮದುವೆಯಾಗಿದ್ದಾರೆ. ಈ ಮದುವೆಗೆ ನಮ್ಮನೆ ಯುವರಾಣಿ ಸೀರಿಯಲ್ ನಟಿ ಅಂಕಿತಾ ಅಮರ್ ಆಗಮಿಸಿದ್ದರು. ಸ್ಪೆಷಲ್ ಫೋಟೋಶೂಟ್ ಮೂಲಕ ನಟಿ ಕೆಲ ದಿನಗಳ ಹಿಂದೆ ಭಾವಿ ಪತಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಪರಿಚಯಿಸಿದ್ದರು. ಅಷಕ್ಕೂ ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎಂಬುದರ ಬಗ್ಗೆ ಮಾಹಿತಿ ಇಲ್ಲ ‘ರಂಗನಾಯಕಿ’ (Ranganayaki) ಸೀರಿಯಲ್‌ನಲ್ಲಿ ಹೀರೋಯಿನ್ ಆಗಿ ನಟನಾ ಕ್ಷೇತ್ರಕ್ಕೆ ಪರಿಚಿತರಾದ ಪ್ರೇರಣಾ ಬಳಿಕ ಕನ್ನಡದ ಮಿನಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದರು. ‘ಫಿಸಿಕ್ಸ್ ಟೀಚರ್’ ಎಂಬ ಚಿತ್ರದಲ್ಲಿ ನಟಿಸಿದ್ದರು. ತೆಲುಗಿನಲ್ಲಿ ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್‌ನಲ್ಲಿ ಪ್ರೇರಣಾ ಲೀಡ್ ರೋಲ್‌ನಲ್ಲಿ ನಟಿಸಿದ್ದರು.
Author: AIN Author
ದೊಡ್ಮನೆಯ ಮನೆಯ (Bigg Boss Kannada 10) ಆಟ ರಂಗೇರಿದೆ. ಗೆಲ್ಲೋದ್ದಕ್ಕೆ ಏನು ಮಾಡೋಕು ಸೈ ಅಂತ ಸ್ಪರ್ಧಿಗಳು ರೆಡಿಯಾಗಿದ್ದಾರೆ. ಇದೀಗ ತನಿಷಾ ಬಳಿಕ ಮೈಕಲ್, ಕೂಡ ಸಂಗೀತಾ ಸಮಯ ಸಾಧಕಿ, ಅವಕಾಶವಾದಿ ಎಂದು ಕಿಡಿಕಾರಿದ್ದಾರೆ. ಸಂಗೀತಾ ಆಟಕ್ಕೆ ಮೈಕಲ್ ಫುಲ್ ರಾಂಗ್ ಆಗಿದ್ದಾರೆ. ಈಗಾಗಲೇ ಎರಡು ತಂಡಗಳಾಗಿ ವಿಂಗಡಿಸಿರೋ ಬಿಗ್ ಬಾಸ್. ಈ ಬಾರಿ ಗಜಕೇಸರಿ ಮತ್ತು ಸಂಪತ್ತಿಗೆ ಸವಾಲ್ ಎರಡು ತಂಡದ ಜಟಾಪಟಿ ಜೋರಾಗಿದ್ದು, ಗಜಕೇಸರಿ ತಂಡದ ಲೀಡರ್ ಸಂಗೀತಾ ಟೀಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೂವುವನ್ನ ಎದುರಾಳಿ ತಂಡದಿಂದ ರಕ್ಷಿಸುವ ಟಾಸ್ಕ್‌ನಲ್ಲಿ ಸಂಗೀತಾ ಟೀಮ್ ಯಡವಟ್ಟು ಮಾಡಿದೆ. ಈ ವೇಳೆ, ತುಕಾಲಿ ಕಾಲಿಗೆ ಪೆಟ್ಟಾಗಿದೆ. ಸಂಗೀತಾ ಸಮಯ ಸಾಧಕಿ (Opportunist) ಅಂತ ಹಿಂದೊಮ್ಮೆ ತನಿಷಾ ಕುಟುಕಿದ್ದರು. ವರ್ತೂರು ಸಂತೋಷ್‌ಗೆ 34 ಲಕ್ಷಕ್ಕೂ ಅಧಿಕ ವೋಟ್ಸ್ ಬಿದ್ದಿದೆ ಅಂತ ಬಹಿರಂಗವಾದ್ಮೇಲೆ,ಅವರ ಜೊತೆಗೆ ಸಂಗೀತಾ ಕ್ಲೋಸ್ ಆಗಿದ್ದನ್ನ ಕಂಡು ಸಂಗೀತಾ ಅವಕಾಶವಾದಿ ಎಂದು ಮೈಕಲ್ ಅಭಿಪ್ರಾಯ ಪಟ್ಟಿದ್ದರು. ಇದೀಗ ಚಟುವಟಿಕೆಯೊಂದರಲ್ಲಿ…
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮದಲಮಟ್ಟಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸಂಶಯಸ್ಪದವಾಗಿ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿತ್ತು. ಮದಲಮಟ್ಟಿ ಗ್ರಾಮದ ಕಬ್ಬಿನ ಜಮೀನಿನಲ್ಲಿ ನಾಗವ್ವ ಸಿದ್ದಪ್ಪ ಯಲ್ಲಟ್ಟಿ (46) ಶವ ಕೊಳೆತು ದುರ್ವಾಸನೆ ಬರುತ್ತಿತ್ತು. ಘಟನೆ ಬಗ್ಗೆ ಮಾಹಿತಿ ತಿಳಿದ ತೇರದಾಳ ಪೊಲೀಸ್ ಠಾಣೆ ಪಿಎಸ್ಐ ಅಪು ಐಗಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ನಾಗವ್ವ ಅವರ ತಾಯಿ ನೀಲವ್ವ ಇತ್ನಾಳ ಮಗಳ ಸಾವಿನ ಕುರಿತು ಸಂಶಯವಿರುವುದಾಗಿ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್ಐ ಅಪು ಮತ್ತು ಬನಹಟ್ಟಿ ಸಿಪಿಐ ಸಂಜೀವ ಬಳಗಾರ ತನಿಖೆ ಆರಂಭಿಸಿ ನಾಗವ್ವ ಕೊಲೆ ಆಗಿರುವುದನ್ನು ದುಡಪಡಿಸಿದ್ದು ಕೊಲೆ ಆರೋಪಿ ಹಳಿಂಗಳಿ ಗ್ರಾಮದ ಕಲ್ಲಪ್ಪ ಪರಪ್ಪ ಚಿನಗಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹಳ ವರ್ಷಗಳಿಂದ ನಾಗವ್ವ ಜೊತೆ ಅಕ್ರಮ ಸಂಬಂಧ ಹೊಂದಿದ ಕಲ್ಲಪ್ಪ ಆಕೆಯನ್ನು ನವಂಬರ 17 ರಂದು ರಾತ್ರಿ ಕಬ್ಬಿನ ಜಮೀನಿಗೆ ಹೋಗಿ ಆ ವೇಳೆ ಇಬ್ಬರ ನಡುವೆ ಜಗಳ ನಡೆಯಿತು. ಕಲ್ಲಪ್ಪ ಸೀರೆಯಿಂದ…
ಮಂಡ್ಯದ ಗಂಡು ಅಂಬರೀಶ್ ಅವರು ಅಗಲಿ ಇಂದಿಗೆ ಐದು ವರ್ಷಗಳಾಗಿವೆ. ಅವರ ಪುಣ್ಯ ಸ್ಮರಣೆಯ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಅಂಬರೀಶ್ ಅವರ ಕುಟುಂಬ ಮತ್ತು ಅಭಿಮಾನಿಗಳು ಆಯೋಜಿಸಿದ್ದಾರೆ. ಬೆಳಗ್ಗೆ ಸುಮಲತಾ ಅಂಬರೀಶ್ (Sumalatha), ಅಭಿಷೇಕ್ ಅಂಬರೀಶ್ (Abhishek), ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ಚಿತ್ರೋದ್ಯಮದ ಗಣ್ಯರು ಮತ್ತು ಅಂಬಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಅಂಬಿ ಸ್ಮರಣೆ (Punyasmarane) ಕುರಿತಂತೆ ಸುಮಲತಾ ಅಂಬರೀಶ್ (Ambarish) ಅವರು ಭಾವುಕ ಪೋಸ್ಟ್ ಮಾಡಿದ್ದಾರೆ. ‘ಇರುವುದೊಂದೇ ಜೀವನ ಅದೆಷ್ಟು ವ್ಯತ್ಯಾಸವಿದೆ. ಎಂದೆಂದಿಗೂ ನಮ್ಮ ನೆನಪುಗಳಲ್ಲಿ, ಸುಖ, ದುಃಖ, ನಗು, ಕಣ್ಣೀರು. ಪ್ರತಿಯೊಂದು ಕ್ಷಣವೂ ನೀವು ಬಿಟ್ಟ ನಿರ್ವಾತವನ್ನು ಅಳೆಯಲಾಗದು.ನಾನು ಆ ಪ್ರೀತಿಯನ್ನು ಕಾಪಿಟ್ಟುಕೊಳ್ಳುತ್ತೇನೆ, ನಷ್ಟವನ್ನಲ್ಲ. ಅನೇಕರನ್ನು ಒಳಗೊಂಡ ಜೀವನವನ್ನು ಎಂದಿಗೂ ಕಳೆದುಕೊಳ್ಳಲು ಆಗುವುದಿಲ್ಲ. ನೀವು ಶಾಶ್ವತವಾಗಿರುತ್ತೀರಿ.ನೀವೊಂದು ಜೀವ ಮೀರಿದ, ಒಂದು ಪ್ರಪಂಚ. ಇಂದು ನನಗೆ ಖಾತ್ರಿಯಿದೆ, ನೀವು ಅತ್ಯಂತ ಹೆಮ್ಮೆಯಿಂದ ಸಂಭ್ರಮದಲ್ಲಿರುವಿರಿ ಮತ್ತು ನಿಮ್ಮ ಆ ಪ್ರಪಂಚದಿಂದ…
ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಶುಕ್ರವಾರ ಬಂದಿದೆ. ವಾರ ವಾರ ಕನ್ನಡದ ಐದಾರು ಸಿನಿಮಾಗಳು ರಿಲೀಸ್ (Release) ಆಗುವ ಮೂಲಕ ಒಂದು ರೀತಿಯಲ್ಲಿ ಸಂಭ್ರಮ ಮತ್ತೊಂದು ರೀತಿಯಲ್ಲಿ ಆತಂಕ ಸೃಷ್ಟಿ ಮಾಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಾರಕ್ಕೆ 20ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗುವುದರಿಂದ ಯಾವ ಸಿನಿಮಾವನ್ನು ನೋಡಬೇಕು ಎನ್ನುವ ಗೊಂದಲಕ್ಕೆ ಬಿದ್ದಿದ್ದಾನೆ ಪ್ರೇಕ್ಷಕ. ಈ ವಾರವೂ ಕನ್ನಡದ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ. ಸೂರಿ ಮತ್ತು ಅಭಿಷೇಕ್ ಅಂಬರೀಶ್ (Abhishek Ambarish) ಕಾಂಬಿನೇಷನ್ ನ ‘ಬ್ಯಾಡ್ ಮ್ಯಾನರ್ಸ್’, ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ, ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶಿಸಿ, ನಟಿಸಿರುವ ಹಾಗೂ ರಮ್ಯಾ (Ramya) ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸೇರಿದಂತೆ ಈ ವಾರ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ಬ್ಯಾಡ್ ಮ್ಯಾನರ್ಸ್ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕುತೂಹಲ ಮೂಡಿಸಿವೆ. ಬ್ಯಾಡ್ ಮ್ಯಾನರ್ಸ್…
ಬೆಂಗಳೂರು: ನಗರದಲ್ಲಿ ಕಂಬಳ ನಡೆಸಬೇಕು ಎಂಬುವುದು ನಮ್ಮ ಸಂಕಲ್ಪ. ಕರಾವಳಿ ಭಾಗದ ಎಲ್ಲಾ ಸಂಘ ಸಂಸ್ಥೆ ಒಟ್ಟಿಗೆ ಸೇರಿಸಿ ಎಲ್ಲಾ ಜಾತಿಯವರು ಸಮಾಲೋಚನೆ ನಡೆಸಿ ತೀರ್ಮಾನ ಮಾಡಿದ್ದೇವೆ. ಅದರಂತೆ ಅರಮನೆ ಮೈದಾನದಲ್ಲಿ ಕಂಬಳ ನಡೆಸುತ್ತಿದ್ದೇವೆ. ಕಾಂತಾರ ಸಿನಿಮಾ ನೋಡಿದಮೇಲೆ ಕಂಬಳ ಕ್ರೇಜ್ ಜಾಸ್ತಿ ಆಗಿದೆ. ಶನಿವಾರ ಕಂಬಳ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದರು. ಹಾಗೆ ಅರಮನೆ ರಸ್ತೆ, ಬಿಡಿಎ ಜಂಕ್ಷನ್ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್ನಿಂದ ಹಳೇ ಉದಯ ಟಿವಿ ಜಂಕ್ಷನ್ವರೆಗೆ ಎಂ.ವಿ ಜಯರಾಂ ರಸ್ತೆ ಬಳಸುವಂತೆ ಸೂಚಿಸಿದ್ದಾರೆ. ಮೇಖ್ರಿ ವೃತ್ತದಿಂದ LRDE ಜಂಕ್ಷನ್ವರೆಗೆ ಬಳ್ಳಾರಿ ರಸ್ತೆ ಬಳಸಬೇಕು. ಅರಮನೆ ರಸ್ತೆಯಲ್ಲಿ ಸಂಚರಿಸುವವರು ಜಯಮಹಲ್ ರಸ್ತೆ ಬಳಸಬೇಕು. ಪ್ಯಾಲೆಸ್ ರಸ್ತೆ, ಎಂ.ವಿ.ಜಯರಾಂ ರಸ್ತೆ, ಸಿ.ವಿ.ರಾಮನ್ ರಸ್ತೆ, ವಸಂತ ನಗರ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ಮೌಂಟ್ ಕಾರ್ಮಲ್ ರಸ್ತೆ ಬಳಿ ವಾಹನ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಕೀಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸರಿಯಲ್ಲ. ಸುಪ್ರೀಂಕೋರ್ಟ್ ನೀಡಿದ್ದ ಹಲವು ತೀರ್ಪುಗಳು ನನ್ನ ಕಣ್ಮುಂದೆ ಇದೆ. ಇದೇ ವಿಷಯವಾಗಿ ಎರಡು ಬಾರಿ ಹೈಕೋರ್ಟ್ನಲ್ಲಿ ಚರ್ಚೆ ಆಗಿದೆ. ಈ ಕೇಸ್ ಕೋರ್ಟ್ನಲ್ಲಿ ಇದ್ದಾಗ ರಾಜ್ಯ ಸರ್ಕಾರದ ನಿರ್ಧಾರ ತಪ್ಪು. ಕಾನೂನಿಗಿಂತ ದೊಡ್ಡವರು ಎಂಬುದನ್ನು ಪ್ರದರ್ಶನ ಮಾಡಿಕೊಂಡಿದ್ದಾರೆ. ಲೂಟಿ ಮಾಡುವವರಿಗೆ ನಮ್ಮ ಸರ್ಕಾರ ಎಂಬುದನ್ನು ನಿರೂಪಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು. https://ainlivenews.com/cbi-case-against-dkshi-withdrawn-bjp-strongly-opposes-by-vijayendra/ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸರ್ಕಾರ ವಾಪಸ್ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ದರೋಡೆಕೋರರನ್ನು ರಕ್ಷಣೆ ಮಾಡಲು ಈ ಸರ್ಕಾರ ಇರುವುದು. ಕೋರ್ಟ್ನಲ್ಲಿ ಏನು ನಿರ್ಧಾರ ಆಗುತ್ತೆಂದು ನೋಡಿ ಮಾತಾಡುತ್ತೇನೆ. ಮರ್ಯಾದೆ ಇಲ್ಲದವರಿಗೆ ಕೋರ್ಟ್ನಲ್ಲಿ ಇದ್ದರೇನು, ಎಲ್ಲಿದ್ದರೇನು? ಎಲ್ಲವನ್ನೂ ದುಡ್ಡಿನಿಂದ ಕೊಂಡುಕೊಳ್ಳುತ್ತೇವೆ ಅನ್ನೋ ದುರಹಂಕಾರ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಚಿನ್ನದಂತಹ ಅವಕಾಶವಿದೆ. ತಾವು ಸತ್ಯಹರಿಶ್ಚಂದ್ರ ಅಂತ ಸಾಬೀತು ಮಾಡುವ ಅವಕಾಶ ಇದೆ. ನೀವು ತಪ್ಪು ಮಾಡಿಲ್ಲ ಅನ್ನೋದನ್ನು ತನಿಖೆ ಎದುರಿಸಿ ತೋರಿಸಿ. ಸಚಿವ ಸಂಪುಟ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ. ಯಾವ ರೀತಿ ಹೋರಾಟ ಮಾಡಬೇಕೆಂದು ಚರ್ಚೆ ನಡೆಸಿ ನಿರ್ಧಾರ. ನಮ್ಮ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ರಾಜಕೀಯ ಪ್ರೇರಿತವಲ್ಲ. ಪ್ರಾಥಮಿಕ ತನಿಖೆ ಮಾಹಿತಿ ಆಧರಿಸಿ ಸಿಬಿಐ ತನಿಖೆಗೆ ಕೊಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. https://ainlivenews.com/bjp-is-plotting-to-finish-the-opposition-at-the-centre-priyank-kharge/ ರಾಜ್ಯ ಸರ್ಕಾರದ ಈ ನಿರ್ಣಯ ಸಂಪೂರ್ಣ ಕಾನೂನು ಬಾಹಿರ. ಐಟಿ ದಾಳಿ ವೇಳೆ ರಾಜ್ಯ ಮತ್ತು ಬೇರೆ ಕಡೆ ಸಾಕಷ್ಟು ಹಣ ಸೀಜ್ ಆಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ದುರದೃಷ್ಟಕರ. ಕಾಂಗ್ರೆಸ್ ಸರ್ಕಾರ ಕಾನೂನಿನ ವಿರುದ್ಧವಾಗಿ ಈ ನಿರ್ಣಯ ಕೈಗೊಂಡಿದೆ. ಡಿ.ಕೆ.ಶಿವಕುಮಾರ್ರನ್ನು ಉಳಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಕಾನೂನಿನ ಭಯ ಇದೆಯಾ? ಡಿಕೆ ಶಿವಕುಮಾರ್ ಅವರೇ ಸರ್ಕಾರದ ನಿರ್ಧಾರ ವಿರೋಧಿಸಬೇಕಿತ್ತು ಎಂದು…
ಬೆಂಗಳೂರು: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷವನ್ನು ಮುಗಿಸಬೇಕು ಅಂತ ಸಂಚು ಮಾಡುತ್ತಿದೆ. ವಿಪಕ್ಷದವರ ಧ್ವನಿ ಕಟ್ಟಿಹಾಕಲು ಕೆಲವರನ್ನು ಐಟಿ ಮತ್ತು ಇಡಿ ಮೂಲಕ ಹೆದರಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. https://ainlivenews.com/state-congress-governments-decision-is-unfortunate-by-vijayendra/ ನಗರದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರ ತನಕವೂ ನಾಯಕರ ವಿರುದ್ದ ಸಂಚು ರೂಪಿಸುತ್ತಿದೆ. ಅನವಶ್ಯಕವಾಗಿ ಡಿಕೆ ಶಿವಕುಮಾರ್ ಅವರ ವಿರುದ್ದ ಹಿಂದಿನ ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿ ಸಂಚು ರೂಪಿಸುವ ಕೆಲಸ ಮಾಡಿತ್ತು. ಕೊಲೆ ಮಾಡಿದರೂ ಪರವಾಗಿಲ್ಲ ಅಂತವರಿಗೆ ಏನೂ ಆಗಿಲ್ಲ. ಆದರೆ ನಮ್ಮನ್ನು ಮಾತ್ರ ಹೆದರಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶಿವಮೊಗ್ಗ: ಸರ್ಕಾರದ ಈ ತೀರ್ಮಾನ ಕಾನೂನು ಬಾಹಿರ. ಹೈಕೋರ್ಟ್ನಲ್ಲಿ ಇನ್ನೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನ ಬದ್ಧ ಸಂಸ್ಥೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. https://ainlivenews.com/shooting-in-metro-also-from-now-on-bmrcl-green-signal/ ರಾಜ್ಯಕ್ಕೆ ಇದೊಂದು ಕೆಟ್ಟ ಸಂದೇಶ ರವಾನೆಯಾಗಿದೆ. ಇದನ್ನು ಸಮಾಜ ಮತ್ತು ನ್ಯಾಯಾಂಗ ಗಮನಿಸುತ್ತದೆ. ಪ್ರತಿರೋಧ ಬರುವ ತೀರ್ಪು ಬಂದರೇ ಅಚ್ಚರಿ ಪಡಬೇಕಿಲ್ಲ. ಅವರ ತಪ್ಪುನ್ನು ಮುಚ್ಚಿಕೊಳ್ಳುವುದಕ್ಕೆ ಹೋರಟಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.