ಬೆಂಗಳೂರು : ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ಅಮಾನತು ವಿಚಾರ ಸಂಬಂಧ ಮಾಜಿ ಸಚಿವ ಸಿ.ಟಿ. ರವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ. ಶಿವಕುಮಾರ್ ಅವರು ಆಲೂಗಡ್ಡೆ ಹಾಕಿ ಚಿನ್ನ ತೆಗೆದಿದ್ರೆ ಜನಸಾಮಾನ್ಯರಿಗೆ ತಿಳಿಸಲಿ ಎಂದು ವ್ಯಂಗ್ಯವಾಡಿದ್ದಾರೆ. https://ainlivenews.com/if-peoples-money-goes-into-peoples-pockets-why-is-bjp-upset-cms-question/ 2020ರಲ್ಲಿ ಸಿಬಿಐ ಎಫ್ಐಆರ್ ಹಾಕಿದೆ. ಇದನ್ನ ಚಾಲೆಂಜ್ ಮಾಡಿ ಡಿಕೆಶಿ ಹೈಕೋರ್ಟ್ ಮೊರೆ ಹೋಗಿದ್ದರು. ಮೂರು ತಿಂಗಳ ಒಳಗೆ ಸಿಬಿಐ ಫೈನಲ್ ರಿಪೋರ್ಟ್ ಸಬ್ಮಿಟ್ ಮಾಡಲು ಹೇಳಿತ್ತು. ಈ ಹಂತದಲ್ಲಿ ವಾಪಸ್ ಪಡೆದಿದ್ದಾರೆ. ವಿತ್ ಡ್ರಾ ಮಾಡಲು ಬರುವುದಿಲ್ಲ. ಒಬ್ಬ ಭ್ರಷ್ಟ ಆರೋಪಿಯ ರಕ್ಷಣೆಗೆ ನಿಲ್ಲೋದು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಟ್ಟವರು ಮಾಡುವ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ. ನಮ್ಮವರ ಮೇಲೂ ಆರೋಪ ಇದ್ದವು ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೋಂ ಸೆಕ್ರೆಟರಿಗೆ ಪ್ರಶ್ನೆ ಮಾಡುತ್ತೇನೆ. ಯಾವ ಆಧಾರದ ಮೇಲೆ ಕ್ಯಾಬಿನೆಟ್‌ಗೆ ತಂದ್ರಿ ಈ ವಿಚಾರವನ್ನು? ನೀವು ಮಾಡಿರೋದು ಸಂವಿಧಾನದ ವಿರೋಧಿ. ನಮ್ಮವರ ಮೇಲೂ ಆರೋಪ…
Author: AIN Author
ಬೆಂಗಳೂರು: ಬಹುದಿನಗಳಿಂದ ಖಾಲಿ ಇದ್ದ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಿಜೆಪಿ ನಾಯಕ ಆರ್.ಅಶೋಕ್ ಆಯ್ಕೆಯಾಗಿದ್ದು ಈಗ ರಾಜ್ಯದ ಎಲ್ಲಾ ಹಿರಿಯ ನಾಯಕರ ಆಶೀರ್ವಾದ ಪಡೆದಿದ್ದರು ಅದೇ ರೀತಿ ಇಂದು ಬಿಜೆಪಿ ಹಿರಿಯ ಮುಖಂಡ ಸಿ.ಟಿ ರವಿ ಅವರನ್ನು ಭೇಟಿಯಾದರು ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಅಧಿಕೃತವಾಗಿ ಕಾಯಾರಂಭ ಮಾಡಿರುವ ಅವರನ್ನು ಅಭಿನಂದಿಸಿದರು. ಮಾನ್ಯ ಅಶೋಕ್ ಅವರನ್ನು ಬಿಜೆಪಿಯ ಹಿರಿಯ ಮುಖಂಡ ಮಾನ್ಯ ಸಿ.ಟಿ. ರವಿ ಅವರು ಶುಕ್ರವಾರ ಭೇಟಿ ಮಾಡಿ ಅಭಿನಂದಿಸಿದರು.
ಬೆಂಗಳೂರು: ಬೆಂಗಳೂರಿನ (Bengaluru) ಜಯನಗರದ ಡಿಸಿಪಿ ಕಚೇರಿ ಎದುರೇ ಯುವತಿ ಬಟ್ಟೆ ಎಳೆದಾಡಿ ಲೈಂಗಿಕ ಕಿರುಕುಳ(sexual harassment) ನೀಡಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಬರೋಬ್ಬರಿ 500 ಸಿಸಿಟಿವಿಗಳ ಪರಿಶೀಲನೆ ಮಾಡಿ ಆರೋಪಿ ಬಿನ್ನಿಪೇಟೆಯ ಹರೀಶ್ (22) ಎನ್ನುವಾತನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. https://ainlivenews.com/rape-of-three-year-old-girl-in-bangalore-accused-arrested/ ಇದೇ ತಿಂಗಳ 6 ರಂದು ರಾತ್ರಿ 10 ಗಂಟೆ ಸುಮಾರಿಗೆ ಬೈಕ್ನಲ್ಲಿ ತೆರಳುತ್ತಿದ್ದ ಯುವತಿಯನ್ನು ಚುಡಾಯಿಸಿದ್ದನು. ಆಕೆಯ ಬಟ್ಟೆ ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆರೋಪಿ ಎಸ್ಕೇಪ್ ಆಗಿದ್ದನು. ಈ ಘಟನೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದ ಜಯನಗರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಬರೋಬ್ಬರಿ 500 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಯುವತಿಯನ್ನು ಚುಡಾಯಿಸಿದ್ದು ಹರೀಶ್ ಎನ್ನುವ ಯುವಕ ಎಂಬುದು ಪೊಲೀಸರು ಕೊನೆಗೆ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕೃತ್ಯ ಎಸಗಿದ್ದ ಯುವಕ ತನ್ನ ಮೇಲೆ ಕೇಸ್ ದಾಖಲಾಗಿರುವ ಬಗ್ಗೆ ಅರಿವಿಲ್ಲದೇ, ಏನು ಆಗಿಲ್ಲವೆಂಬಂತೆ ತನ್ನ ಪಾಡಿಗೆ ತಾನಿದ್ದನು. ಸಿಸಿಟಿವಿಗಳ ಬೆನ್ನತ್ತಿ ಜಯನಗರ ಪೊಲೀಸರು ಆರೋಪಿಯನ್ನು…
ಬೆಂಗಳೂರು: ಇಡೀ ಬೆಂಗಳೂರು ಮಂದಿಗೆ ಸುಖಃಕರ ಪ್ರಯಾಣ ಮಾತ್ರವಲ್ಲದೆ ಚಿತ್ರ ಮಂದಿರುಕ್ಕೂ ನಮ್ಮ ಮೆಟ್ರೋ ಸೇವೆ ನೀಡ್ತಿದೆ.ಆದ್ರೆ ರೆವಿನ್ಯೂ ಬರುತ್ತೆ ಅಂತ ರಿಯಾಯಿತಿ ದರದಲ್ಲಿ ಸ್ಟೇಷನ್ , ಮೆಟ್ರೋ ಒಳಗೆ ಶೂಟಿಂಗ್ ಮಾಡಿಕೊಳ್ಳಿ ಅಂತ ಮೆಟ್ರೋ ಬೇಡಿಕೊಂಡರು ಸ್ಯಾಂಡಲ್ ವುಡ್ ನಿರ್ದೆಶಕರು ಕೇಳುತ್ತಿಲ್ಲ. ಮಲೇಷಿಯಾ ಸೇರಿದಂತೆ ವಿದೇಶದಲ್ಲಿ ಶೂಟಿಂಗ್ ಮಾಡೋದರಿಂದ ನಮ್ಮ ಮೆಟ್ರೋಗೆ ಡಿಮ್ಯಾಂಡ್ ಇಲ್ಲದಂತಾಗಿದೆ. ಆದ್ರೂ ಇಷ್ಟು ದಿನ ಸ್ಥಗಿತಗಿಗೊಂಡಿದ್ದ ಶೂಟಿಂಗ್ ಕಾರ್ಯಕ್ಕೆ ಮತ್ತೆ ಮೆಟ್ರೋ ಚಾಲನೆ ನೀಡಿದೆ. ನಮ್ಮ ಮೆಟ್ರೋ ನಿಗಮ ಪ್ರಯಾಣಿಕರಿಂದ ಹಣ ಬರೋದಿಲ್ಲ ಅಂತ ಶೂಟಿಂಗ್ ಮೂಲದ ರೆವಿನ್ಯೂ ಗಳಿಸೋಕೆ ಮುಂದಾಗಿದೆ. ಮೆಟ್ರೋ ಸ್ಟೇಶನ್ನಲ್ಲಿ ಹಾಡುಗಳು ಹಾಗೂ ದೃಶ್ಯಗಳ ಸಿನಿಮಾಗಳ ಚಿತ್ರೀಕರಣ ಮಾಡಬೇಕು ಅಂತ ಈ ಮೊದಲು ಸ್ಯಾಂಡಲ್ ವುಡ್ ನಿರ್ದೇಶಕರು ಮಲೇಷಿಗೆ ಹೋಗುತ್ತಿದ್ರು. ಆದರೆ ಇದೀಗ ನಮ್ಮ ಮೆಟ್ರೋ ರೈಲಿನಲ್ಲಿ ಚಿತ್ರೀಕರಣ ಮಾಡೋಕೆ ಕಲ್ಪಿಸಲಾಗಿದೆ. ಚಿತ್ರತಂಡ ಮೆಟ್ರೋ ನಿಗಮದಿಂದ ಅನುಮತಿ ಪಡೆದು ಚಿತ್ರೀಕರಣ ಮಾಡಕೊಳ್ಳಬಹುದು. ಆದರೆ ಕನ್ನಡ ಚಿತ್ರರಂಗ ಮೆಟ್ರೋದಲ್ಲಿ ಶೂಟಿಂಗ್ ಮಾಡೋಕೆ ಹಿಂಜರಿಯುತ್ತಿದೆ.…
ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ 1.5 ಕೋಟಿ ವೆಚ್ಚದಲ್ಲಿ ತಾಲೂಕಿನ ಹೊನ್ನಾದೇವಿಪುರ-ಗೂಳ್ಯ ರಸ್ತೆಗೆ 1.5 ಕಿ.ಮೀ ಡಾಂಬರ್ ಹಾಕಲಾಗಿದ್ದು ಬಿಜೆಪಿ ಕೆಲ ಮುಖಂಡರು ಕಳಪೆ ಎಂದು ಸುಳ್ಳು ಆರೋಪ ಮಾಡುತ್ತಿದ್ದರೆ ಎಂದು ಜಿ.ಪಂ ಮಾಜಿ ಸದಸ್ಯ ಚುಂಚೇಗೌಡ ಹೇಳಿದರು. ಇನ್ನೂ ಒಂದು ಪದರ ಡಾಂಬರ್ ಹಾಕುವುದು ಬಾಕಿ ಇದೆ, ಅಷ್ಟರಲ್ಲಿ ಈ ಆರೋಪವನ್ನು ಮಾಡಲಾಗಿದೆ. ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಬಿಜೆಪಿ ಮುಖಂಡರ ಆರೋಪವನ್ನು ತಳ್ಳಿ ಹಾಕಿದರು. ತಾಲೂಕಿನ ಹೊನ್ನಾದೇವಿಪುರ-ಗೂಳ್ಯ ರಸ್ತೆಗೆ ಡಾಂಬರು ಹಾಕಿದ 15 ದಿನಗಳಲ್ಲೇ ಗುಂಡಿಗಳು ಬಿದ್ದಿವೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಗುರುವಾರ ಸ್ಥಳಕ್ಕೆ ಆಗಮಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, 20 ವರ್ಷಗಳಿಂದ ಈ ಗ್ರಾಮಕ್ಕೆ ರಸ್ತೆ ಇರಲಿಲ್ಲ. ರಾತ್ರಿ ಹೊತ್ತು ಓಡಾಡಲೂ ಗ್ರಾಮಸ್ಥರು ಪರದಾಡಬೇಕಾಗಿತ್ತು. ಕೊನೆಗೂ ಹೊನ್ನಾದೇವಿಪುರ ರಸ್ತೆಗೆ ಡಾಂಬರು ಭಾಗ್ಯ ಸಿಕ್ಕಿದೆ,…
ಧಾರವಾಡ: ರಾಜ್ಯ ಸರ್ಕಾರಗಳು ಒಂದು ಪ್ರಕರಣವನ್ನು ತನಿಖೆ ನಡೆಸಲು ಸಿಬಿಐಗೆ ಶಿಫಾರಸು ಮಾಡುವ ಹಾಗೂ ಹಿಂಪಡೆಯುವ ಅಧಿಕಾರ ಇರುತ್ತದೆ. ಈಗ ಡಿಕೆಶಿಯವರ ಪ್ರಕರಣದಲ್ಲಿ ಕ್ಯಾಬಿನೆಟ್ ನಿರ್ಣಯ ತೆಗೆದುಕೊಂಡಿದೆ. ಇಂತಹ ಸಂದರ್ಭಗಳಲ್ಲಿ ವಾದ ವಿವಾದ ಇದ್ದೇ ಇರುತ್ತದೆ. ಆದರೆ ನಾನು ಈ ವಿಚಾರದಲ್ಲಿ ಸರ್ಕಾರದ ಪರವಾಗಿ ನಿಲುತ್ತೇನೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ನಗರದ ಕೃಷಿ ವಿವಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಂಮತ್ರಿ ಅವರ ಮೇಲಿನ ಆಕ್ರಮ ಆಸ್ತಗಳಿಕ್ಕೆ ಪ್ರಕರಣದ ತನಿಖೆಉನ್ನು ಸಿಬಿಐ ನಡೆಸುತಿದ್ದು, ಇದನ್ನು ಹಿಂಪಡೆಯಲು ಈಗ ಕ್ಯಾಬಿನೆಟ್‌ನಲ್ಲಿ ತೀರ್ಮಾಣ ಮಾಡಲಾಗಿದೆ. ಕ್ಯಾಬಿನೆಟ್ ಅಂದರೆ ಸರ್ಕರವೇ ಆಗಿರುತ್ತದೆ. ಹಾಗಾಗಿ ನಾನು ಸರ್ಕಾರದ ಪರವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಸಿಬಿಐಗೆ ವಹಿಸಿದ್ದು ಹಿಂದಿನ ಸರ್ಕಾರದ ನಿರ್ಧಾರ ಎನ್ನುವ ಚರ್ಚೆ ಇರಬಹುದು. ಈಗ ಸರ್ಕಾರ ತೆಗೆದುಕೊಂಡ ನಿರ್ಧಾರವೇ ಅಂತಿಮ. ಕಾನೂನಿನ ಅಡಿಯಲ್ಲಿ ಯಾರು ಬೇಕಾದರೂ ಮೇಲ್ಮನವಿ ಹೋದರೆ ಹೋಗಲಿ. ತಮ್ಮ ಮೇಲಿನ ತನಿಖೆ ವಾಪಸ್ ಪಡೆಯುವಂತೆ ಕ್ಯಾಬಿನೆಟ್…
ದಾವಣಗೆರೆ: ಅಪ್ರಾಪ್ತ ಬಾಲಕಿ ಅಪಹರಣ ಮಾಡಿ ಅತ್ಯಾಚಾರ ಮಾಡಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 20 ವರ್ಷ ಶಿಕ್ಷೆ ಹಾಗೂ 17 ಸಾವಿರ ರೂಪಾಯಿ ದಂಡ ವಿಧಿಸಿ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-1 ಕೋರ್ಟ್ ತೀರ್ಪು ನೀಡಿದೆ. ಗುತ್ತೂರು ಗ್ರಾಮದ ನಿವಾಸಿ ಸಾಧಿಕ್ ಅಲಿ ಶಿಕ್ಷೆಗೊಳಪಟ್ಟ ಅಪರಾಧಿ. ಹರಿಹರ ಸಮೀಪದ ಗ್ರಾಮದ ಮಹಿಳೆಯೊಬ್ಬರು ಹರಿಹರ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದರು. ನನ್ನ ಪತಿ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಹುಬ್ಬಳ್ಳಿಯ ಉರ್ದು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಅಪ್ರಾಪ್ತೆ ಲಾಕ್ ಡೌನ್ ಇದ್ದ ಕಾರಣ ಊರಿಗೆ ಬಂದಿದ್ದಳು. ಹೋಟೆಲ್‌ಗೆ ತಿಂಡಿ ತಿನ್ನಲು ಸಾಧಿಕ್ ಅಲಿ ಬರುತ್ತಿದ್ದ. ಈ ವೇಳೆ ಮಗಳನ್ನು ಪರಿಚಯ ಮಾಡಿಕೊಂಡು ಮಾತನಾಡಿಸುತ್ತಿದ್ದ. ಈಗಿರುವಾಗ 2020ರ ಜೂನ್ 26ರಂದು ಮಗಳು ಮನೆಯಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ಕಡೆ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಅದೇ ತಿಂಗಳು 28ರಂದು ಮಗಳು ರಾತ್ರಿ 8.30ರ ಸುಮಾರಿಗೆ ಮನೆಗೆ…
ಹಾವೇರಿ: ಅನುದಾನ ಕೊರತೆ ಹಿನ್ನಲೆ ಜಿಲ್ಲಾಸ್ಪತ್ರೆಯಲ್ಲಿ 30 ಡಿ ಗ್ರೂಪ್ ನೌಕರರು ಕೆಲಸದಿಂದ ತೆಗೆದು ಹಾಕಿದ್ದನ್ನೂ ಖಂಡಿಸಿ ಹಾವೇರಿ ಜಿಲ್ಲಾಸ್ಪತ್ರೆಯ ಮುಂದೆ ಡಿ ಗ್ರೂಪ್ ನೌಕರರು ಪ್ರತಿಭಟನೆಗೆ ಕುಳಿತಿದ್ದಾರೆ. ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿರೋ ಡಿ ಗ್ರೂಪ್ ನೌಕರರನ್ನೂ ಸರ್ಕಾರದಲ್ಲಿ ವೇತನ ಕೊಡಲು ಹಣ ಇಲ್ಲ ಎಂದು ಕೆಲಸದಿಂದ ವಜಾ ಮಾಡಿದ್ದಾರೆ ಎಂಡು ಸಿಬ್ಬಂದಿಗಳು ಆರೋಪಿಸಿದ್ದಾರೆ. ಸುಮಾರು 10 ರಿಂದ 15 ವರ್ಷಗಳಿಂದ ಕೆಲಸ ಮಾಡುತ್ತಿರೋ ಡಿ ಗ್ರೂಪ್ ಸಿಬ್ಬಂದಿಗಳಿಗೆ ಈಗ ಕೆಲಸ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಅವಧಿ ಸೇರಿದಂತೆ ಕಷ್ಟ ಕಾಲದಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಗೇಟ್ ಪಾಸ್ ನೀಡಲಾಗಿದ್ದು, ಇದ್ದರಿಂದ ಸರಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಜಯನಗರ ಠಾಣಾ ವ್ಯಾಪ್ತಿಯಲ್ಲಿ 22 ವರ್ಷದ ಯುವಕನೋರ್ವ ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೂರಿನ ಆಧಾರದ ಮೇಲೆ ಪೊಲೀಸರು (Police) ಜಯನಗರ ನಿವಾಸಿ ಆರೋಪಿ ಶರವಣ (22) ಅನ್ನು ಬಂಧಿಸಿ ಪೋಕ್ಸೊ(POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. https://ainlivenews.com/this-is-what-bjp-state-president-b-y-vijayendra-said-about/ ಬುಧವಾರ ಬಾಲಕಿಯ ಪೋಷಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಾಲಕಿಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ನಾವು ಬೆಳಿಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಬರುತ್ತೇವೆ. ನಮ್ಮ ಮಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದೇವು. ಮಗಳು ಸಮೀಪದ ಅಂಗಡಿಗೆ ಹೋಗಿದ್ದಳು. ಈ ವೇಳೆ ಆರೋಪಿ ಆಕೆಯ ಬಾಯಿ ಗಟ್ಟಿಯಾಗಿ ಮುಚ್ಚಿ ಕರೆದುಕೊಂಡು ಹೋದನು. ಕಿರಿದಾದ ರಸ್ತೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
‘ಶಿಷ್ಯ’ (Shishya Film) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ದೀಪಕ್, ಫ್ಯಾಷನ್ ಡಿಸೈನರ್ ಬೃಂದಾ (Brunda Gowda) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವಜೋಡಿಗೆ ಆಪ್ತರು, ಗಣ್ಯರು, ಅಭಿಮಾನಿಗಳು ಶುಭಕೋರಿದ್ದಾರೆ. ಇತ್ತೀಚೆಗೆ ಬೃಂದಾ ಜೊತೆ ದೀಪಕ್ (Actor Deepak) ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಬೆಂಗಳೂರಿನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ದೀಪಕ್-ಬೃಂದಾ ಮದುವೆಯಾಗಿದ್ದಾರೆ. ಇದು ಗುರುಹಿರಿಯರು ಸಮ್ಮತಿಸಿದ ಅರೇಂಜ್ ಮ್ಯಾರೇಜ್ ಆಗಿದೆ. ದೀಪಕ್-ಬೃಂದಾ ಮದುವೆಗೆ ಹೆಚ್.ಡಿ ಕುಮಾರಸ್ವಾಮಿ, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕರು ಆರತಕ್ಷತೆಗೆ ಭಾಗವಹಿಸಿ ಶುಭಕೋರಿದ್ದರು.