ಬೆಂಗಳೂರು: ಇಡೀ ಬೆಂಗಳೂರು ಮಂದಿಗೆ ಸುಖಃಕರ ಪ್ರಯಾಣ ಮಾತ್ರವಲ್ಲದೆ ಚಿತ್ರ ಮಂದಿರುಕ್ಕೂ ನಮ್ಮ ಮೆಟ್ರೋ ಸೇವೆ ನೀಡ್ತಿದೆ.ಆದ್ರೆ ರೆವಿನ್ಯೂ ಬರುತ್ತೆ ಅಂತ ರಿಯಾಯಿತಿ ದರದಲ್ಲಿ ಸ್ಟೇಷನ್ , ಮೆಟ್ರೋ ಒಳಗೆ ಶೂಟಿಂಗ್ ಮಾಡಿಕೊಳ್ಳಿ ಅಂತ ಮೆಟ್ರೋ ಬೇಡಿಕೊಂಡರು ಸ್ಯಾಂಡಲ್ ವುಡ್ ನಿರ್ದೆಶಕರು ಕೇಳುತ್ತಿಲ್ಲ. ಮಲೇಷಿಯಾ ಸೇರಿದಂತೆ ವಿದೇಶದಲ್ಲಿ ಶೂಟಿಂಗ್ ಮಾಡೋದರಿಂದ ನಮ್ಮ ಮೆಟ್ರೋಗೆ ಡಿಮ್ಯಾಂಡ್ ಇಲ್ಲದಂತಾಗಿದೆ. ಆದ್ರೂ ಇಷ್ಟು ದಿನ ಸ್ಥಗಿತಗಿಗೊಂಡಿದ್ದ ಶೂಟಿಂಗ್ ಕಾರ್ಯಕ್ಕೆ ಮತ್ತೆ ಮೆಟ್ರೋ ಚಾಲನೆ ನೀಡಿದೆ.
ನಮ್ಮ ಮೆಟ್ರೋ ನಿಗಮ ಪ್ರಯಾಣಿಕರಿಂದ ಹಣ ಬರೋದಿಲ್ಲ ಅಂತ ಶೂಟಿಂಗ್ ಮೂಲದ ರೆವಿನ್ಯೂ ಗಳಿಸೋಕೆ ಮುಂದಾಗಿದೆ. ಮೆಟ್ರೋ ಸ್ಟೇಶನ್ನಲ್ಲಿ ಹಾಡುಗಳು ಹಾಗೂ ದೃಶ್ಯಗಳ ಸಿನಿಮಾಗಳ ಚಿತ್ರೀಕರಣ ಮಾಡಬೇಕು ಅಂತ ಈ ಮೊದಲು ಸ್ಯಾಂಡಲ್ ವುಡ್ ನಿರ್ದೇಶಕರು ಮಲೇಷಿಗೆ ಹೋಗುತ್ತಿದ್ರು. ಆದರೆ ಇದೀಗ ನಮ್ಮ ಮೆಟ್ರೋ ರೈಲಿನಲ್ಲಿ ಚಿತ್ರೀಕರಣ ಮಾಡೋಕೆ ಕಲ್ಪಿಸಲಾಗಿದೆ. ಚಿತ್ರತಂಡ ಮೆಟ್ರೋ ನಿಗಮದಿಂದ ಅನುಮತಿ ಪಡೆದು ಚಿತ್ರೀಕರಣ ಮಾಡಕೊಳ್ಳಬಹುದು. ಆದರೆ ಕನ್ನಡ ಚಿತ್ರರಂಗ ಮೆಟ್ರೋದಲ್ಲಿ ಶೂಟಿಂಗ್ ಮಾಡೋಕೆ ಹಿಂಜರಿಯುತ್ತಿದೆ. ಈ ಬಗ್ಗೆ ಕನ್ನಡ ಚಿತ್ರರಂಗದ ನಿರ್ದೇಶಕರು ಮಟ್ರೋವನ್ನ ನಿರ್ಲಕ್ಷವಹಿಸಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ..ಕಳೆದ ಹಲವು ವರ್ಷದಿಂದ ಮೆಟ್ರೋದಲ್ಲಿ ಶೂಟಿಂಗ್ ಗೆ ಬೇಡಿಕೆ ಕಡಿಮೆಯಾಗ್ತಿದ್ದು, ಚೇತರಿಕೆಯಾಗೋ ಲಕ್ಷಣ ಕಾಣ್ತಿಲ್ಲ.
ಹೌದು.ಪುನಿತ್ ರಾಜಕುಮಾರ್ ಅಭಿನಯದ ಪವನ್ ಒಡೆಯರ್ ನಿರ್ದೇಶನದ ರಣವಿಕ್ರಮ ಸಿನಿಮಾ ಸೇರಿದಂತೆ ಬೆರಣಿಕೆಯ ಸಿನಿಮಾಗಳನ್ನ ಮಾತ್ರ ಮೆಟ್ರೋ ರೈಲಿನಲ್ಲಿ ಚಿತ್ರೀಕರಣ ನಡೆದಿದೆ. ಈ ಸಿನಿಮಾದಲ್ಲಿ ಮೆಟ್ರೋ ರೈಲಿನಲ್ಲಿ ಬರುವ ನಾಯಕಿಯನ್ನ ನಾಯಕ ಬರಮಾಡಿಕೊಳ್ಳುತ್ತಾನೆ. ಈ ಮೊದಲು ಚಿತ್ರೀಕರಣಕ್ಕೆ ಅನುಮತಿ ಇರಲಿಲ್ಲ. ಇದೀಗ ಗಂಟೆಗೆ 50 ಸಾವಿರ ಕೊಟ್ಟು ಶೂಟಿಂಗ್ ಮಾಡಿಕೊಳ್ಳಬಹುದು. ಕನ್ನಡ ಚಿತ್ರಕ್ಕೆ ಅಂತ ಶೇ 25 ಪರ್ಸೆಂಟ್ ರಿಯಾಯಿತಿ ಕೂಡ ನೀಡಲಾಗಿದೆ. ಬೇರೆ ಮೆಟ್ರೋ ನಿಲ್ದಾಣದ ಜಾಗಕ್ಕೆ ಗಂಟೆಗೆ 75 ಸಾವಿರ ಹಣ ಕಟ್ಟಬೇಕು. ಆದರೆ ಸ್ಯಾಂಡಲ್ ವುಡ್ ತಂಡ ಮೆಟ್ರೋ ಕಡೆ ಮುಖ ಮಾಡುತ್ತಿಲ್ಲ.ಇದು ಮೆಟ್ರೋ ನಿಗಮಕ್ಕೆ ಆದಾಯ ಬರದೇ ಇನ್ನಷ್ಟು ತಲೆನೋವಾಗಿದೆ. ಕಳೆದ ಕೆಲ ತಿಂಗಳಿಂದ ನಾನಾ ಕಾರಣದಿಂದ ಶೂಟಿಂಗ್ ಗೆ ಅವಕಾಶ ನೀಡಿರಲಿಲ್ಲ. ಇದೀಗ ಮತ್ತೆ ಹೊಸ ಮಾರ್ಗಸೂಚಿ ಹೊರಡಿಸಿ ಶೂಟಿಂಗ್ ಗೆ ಅನುಮತಿ ನೀಡಲಾಗಿದೆ.
ಯಾವದೇ ಸಿನಿಮಾ ಚಿತ್ರೀಕರಣ ಮಾಡಬೇಕಿದೆರ ಮೆಟ್ರೋ ನಿಗಮ ಹಾಕಿರುವ ಷರತ್ತುಗಳನ್ನ ಪಾಲನೆ ಮಾಡಲೇಬೇಕು. 2.5 ಕೋಟಿ ಇನ್ಷರೆನ್ಸ್ ಮತ್ತು 5 ಲಕ್ಷ ಡಿಪಾಸಿಟ್ ಕಟ್ಟಬೇಕು. ಆದರು ಮೆಟ್ರೋ ರೈಲಿನಲ್ಲಿ ಶೂಟಿಂಗ್ ಮಾಡುವುದದರಿಂದ ಚಿತ್ರರಂಗರಕ್ಕೆ ಹೆಚ್ಚು ಅನುಕೂಲ ಇದೆ. ಆದರೆ ಕನ್ನಡ ಬಹುತೇಕ ನಿರ್ದೇಶಕರು ನಮ್ಮ ಮೆಟ್ರೋ ತೊರೆದು ಹೆಚ್ಚು ಹಣ ಕಟ್ಟಿ ಶೂಟಿಂಗ್ ಮಾಡಿಕೊಂಡು ಬರುತ್ತಾರೆ.ಇದು ಮೆಟ್ರೋ ಅಧಿಕಾರಿಗಳ ಅಸಮಾಧನಕ್ಕೆ ಕಾರಣವಾಗಿದೆ. ಇದೀಗ ಮತ್ತೆ ಹೊಸ ನಿಯಮಗಳ ಅಡಿಯಲ್ಲಿ ಶೂಟಿಂಗ್ ಗೆ ಅನುಮತಿ ನೀಡಿದ್ದು, ಇನ್ನಾದ್ರೂ ಕನ್ನಡ ಚಿತ್ರರಂಗ ಮೆಟ್ರೋನತ್ತ ಮುಖ ಮಾಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.