ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್-2023 ಫೈನಲ್ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು. 81 ರನ್ಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಆಪದ್ಬಾಂಧವರಾಗಿದ್ದಾರೆ. 52 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನೊಂದಿಗೆ ವಿರಾಟ್ ಅರ್ಧಶತಕ ಸಿಡಿಸಿದ್ದಾರೆ. ಕೊಹ್ಲಿ ವಿಶ್ವಕಪ್ನಲ್ಲಿ 9ನೇ 50+ ಸ್ಕೋರ್ ಸಿಡಿಡಿದ್ದಾರೆ. ಇದು ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರ 72ನೇ ಅರ್ಧಶತಕವಾಗಿದೆ. ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರೊಂದಿಗೆ 66 ರನ್ಗಳ ಜೊತೆಯಾಟ ಪ್ರದರ್ಶಿಸಿದ್ದಾರೆ. ಇನ್ನೂ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡುತ್ತಿರುವ ಕೆ.ಎಲ್ ರಾಹುಲ್ 67 ಎಸೆತಗಳಲ್ಲಿ 37 ರನ್ ಸಿಡಿಸಿದ್ದಾರೆ.
Author: AIN Author
ಹುಬ್ಬಳ್ಳಿ: ಮಹಿಳೆಯೊಬ್ಬಳು ರಸ್ತೆ ದಾಟುತ್ತಿರುವಾಗ, ಏಕಾಏಕಿ ಬಂದ ಲಾರಿ, ಮಹಿಳೆ ಕಾಲು ಮೇಲೆ ಹಾಯ್ದು ಹೋದ ಪರಿಣಾಮ, ಮಹಿಳೆಗೆ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿಯ, ಮಹಿಳಾ ವಿದ್ಯಾಪೀಠದಿಂದ ಪ್ರಾದೇಶಿಕ ಬಿಆರ್‌ಟಿಎಸ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಹೌದು,,, ಮಹಿಳೆ ರಸ್ತೆ ದಾಟಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು, ಆ ವೇಳೆ ವೇಗವಾಗಿ ಬಂದ ಲಾರಿ ಚಾಲಕ ಮಹಿಳೆಗೆ ಗುದ್ದಿದ್ದಾನೆ. ಗುದ್ದಿದ ರಬಸಕ್ಕೆ ಮಹಿಳೆ ಕೈ ಕಾಲು ರಕ್ತಗತವಾಗಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಅಲ್ಲೆ ಇದ್ದ ಸ್ಥಳೀಯರು ಆ ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ಬಂದ ಕಾಟನ್ ಮಾರ್ಕೆಟ್ ಟ್ರಾಫಿಕ್ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆ ಮಹಿಳೆ ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲಾ.
ಅಹಮದಾಬಾದ್: ಸಿಕ್ಸರ್, ಬೌಂಡರಿ ಸಿಡಿಸಿ ವಿಶ್ವಕಪ್ ಕ್ರಿಕೆಟ್ (World Cup Cricket) ಟೂರ್ನಿಯಲ್ಲಿ ಅಭಿಮಾನಿಗಳನ್ನು ರಂಜಿಸಿದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ವಿಶ್ವ ದಾಖಲೆ (World Record) ಬರೆದಿದ್ದಾರೆ. ಹೌದು. ಈ ಟೂರ್ನಿಯ 11 ಪಂದ್ಯಗಳಿಂದ 597 ರನ್ ಸಿಡಿಸಿ ಇತಿಹಾಸ ಸೃಷ್ಟಿದ್ದಾರೆ. ಈ ಮೂಲಕ ತಂಡ ಒಂದರ ನಾಯಕನಾಗಿ ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟರ್ ಆಗಿ ರೋಹಿತ್ ಹೊರಹೊಮ್ಮಿದ್ದಾರೆ. ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 578 ರನ್, 2007ರಲ್ಲಿ ಶ್ರೀಲಂಕಾದ ಜಯವರ್ಧನೆ 548 ರನ್, 2007 ರಲ್ಲಿ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್ 539 ರನ್, 2019 ರಲ್ಲಿ ಆಸ್ಟ್ರೇಲಿಯಾದ ಆರನ್ ಫಿಂಚ್ 507 ರನ್ ಹೊಡೆದಿದ್ದರು. ನಾನು ದಾಖಲೆಗಾಗಿ ಆಡುವುದಿಲ್ಲ. ನಾನು ಬ್ಯಾಟ್ ಮಾಡಲು ಬರುವಾಗ ತಂಡದ ಸ್ಕೋರ್ ಸೊನ್ನೆ ಆಗಿರುತ್ತದೆ. ಆರಂಭಿಕ ಆಟಗಾರನಾಗಿರುವ ಕಾರಣ ನನಗೆ ತಂಡದ ಖಾತೆಯನ್ನು ತೆರೆಯಲು ಅವಕಾಶ ಸಿಗುತ್ತದೆ. ನಾನು ವೇಗವಾಗಿ ರನ್ ಗಳಿಸಿದಷ್ಟು…
ಬೆಂಗಳೂರು : ರಾಜಕೀಯ ಸಮಾರಂಭದಲ್ಲಿ ಶಿಳ್ಳೆ(ಸಿಳ್ಳೆ) ಹೊಡೆಯುವುದು ದಯಮಾಡಿ ಮಾಡಬೇಡಿ ಎಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ್ದಾರೆ. ರಾಷ್ಟ್ರಾದ್ಯಂತ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಮಾಡ್ತಾ ಇದ್ದೇವೆ. ಅವರು ಹುಟ್ಟಿದ ಸ್ಥಳ ರಾಜಕೀಯ ಕೇಂದ್ರವಾಗಿತ್ತು. ಅವರ ತಂದೆ, ತಾಯಿ, ತಾತ ಸಕ್ರಿಯ ರಾಜಕೀಯ ಮಾಡಿದವರು. ಅವರು ಸಣ್ಣವರು ಇದ್ದಾಗ ಗಾಂಧೀಜಿ ಸೇರಿದಂತೆ ಎಲ್ಲರು ಬರುತ್ತಿದ್ದರು. ಹಾಗಾಗಿ, ಇಂದಿರಾಗಾಂಧಿ ಬಾಲ್ಯದಿಂದಲೇ ಜನಪರ ಧೋರಣೆ ಹೊಂದಿದ್ದರು ಎಂದು ಸ್ಮರಿಸಿದ್ದಾರೆ.
ಬಿಗ್‌ಬಾಸ್ ಮನೆಯಿಂದ ನಿನ್ನೆ ಎಲಿಮಿನೇಷನ್ ಆಗಿ ರ‍್ಯಾಪರ್ ಇಶಾನಿಹೊರಬಂದಿದ್ದಾರೆ.ರ‍್ಯಾಪ್ ಸಾಂಗ್‌ಗಳ ಮೂಲಕವೇ ಮನಗೆದ್ದಿದ್ದ ಇಶಾನಿ ಅವರು ಆರನೇ ವಾರಕ್ಕೇ ಬಿಗ್ ಬಾಸ್ ಮನೆಯಲ್ಲಿ ಆಟ ನಿಲ್ಲಿಸಿದ್ದಾರೆ. ಕಳೆದ ವಾರ ವರ್ತೂರ್ ಸಂತೋಷ್ ಅವರ ಕಾರಣದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್ ಇತ್ತು. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು. ಶನಿವಾರದ ಎಪಿಸೋಡ್ ಕೊನೆಯಲ್ಲಿ, ಕಿಚ್ಚ, ‘ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಕಿಚ್ಚ, ನಿಜ. ನಿಮ್ಮ ಪಯಣ ಬಿಗ್‌ಬಾಸ್ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್ ಎಂದು ಹೇಳಿದರು. ಕೊನೆಯದಾಗಿ ಇಶಾನಿ, ‘ನಾನು ಇನ್ನಷ್ಟು ಎಫರ್ಟ್ ಹಾಕಬೇಕಾಗಿತ್ತು. ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧಿಗಳಿಗೆ ಆಲ್ ದಿ ಬೆಸ್ಟ್’ ಎಂದು ಹೇಳಿದರು. ಅಲ್ಲಿಗೆ ಶನಿವಾರದ ‘ಕಿಚ್ಚನ ಪಂಚಾಯಿತಿ’ ಮುಗಿದಿದೆ.
72ನೇ ವಿಶ್ವ ಸುಂದರಿ 2023 ಸ್ಪರ್ಧೆಯು ಸ್ಯಾನ್ ಸಾಲ್ವಡಾರ್‌ನಲ್ಲಿ ನಡೆದಿದ್ದು, ಈ ವರ್ಷದ ‘ಮಿಸ್ ಯೂನಿವರ್ಸ್’ ಕಿರೀಟವನ್ನು ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ ತಮ್ಮದಾಗಿಸಿಕೊಂಡರು. ಈ ವರ್ಷವೂ ಸುಮಾರು 84 ದೇಶಗಳ ಸೌಂದರ್ಯ ರಾಣಿಯರು ಪ್ರಪಂಚದಾದ್ಯಂತ ಸ್ಪರ್ಧಿಸಿದ್ದರು. ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ ತಮ್ಮ ಸೌಂದರ್ಯ ಮತ್ತು ಬುದ್ಧಿವಂತಿಕೆಯಿಂದ ಇತರ ಸುಂದರಿಯರೊಂದಿಗೆ ಸ್ಪರ್ಧಿಸುವ ಮೂಲಕ ವಿಶ್ವ ಸುಂದರಿ 2023ರ ಕಿರೀಟವನ್ನು ಗೆದ್ದರು. ಇಂದು ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಿಕರಾಗುವಾದ ಶೆಯ್ನಿಸ್ ಪಲಾಸಿಯೊಸ್ 2023 ರ ವಿಶ್ವ ಸುಂದರಿ ಪ್ರಶಸ್ತಿಯನ್ನು ವಿಜೇತ ಎಂದು ಘೋಷಿಸಲಾಯಿತು. ಇನ್ನು ಚಂಡೀಗಢದ 23 ವರ್ಷದ ಶ್ವೇತಾ ಶಾರದಾ ನಮ್ಮ ದೇಶದ ಪರವಾಗಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಭಾರತವನ್ನು ಪ್ರತಿನಿಧಿಸಿದ ಶ್ವೇತಾ ಶಾರದಾ ಅಗ್ರ 20 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದರು.
ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ(India vs Australia, Final) ನಡುವಣ ವಿಶ್ವಕಪ್ ಫೈನಲ್ ಪಂದ್ಯ ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ. ಪಂದ್ಯ ಆರಂಭಕ್ಕೂ ಮುನ್ನ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ. “ಆಲ್ ದಿ ಬೆಸ್ಟ್ ಟೀಂ ಇಂಡಿಯಾ! 140 ಕೋಟಿ ಭಾರತೀಯರು ನಿಮಗಾಗಿ ಹುರಿದುಂಬಿಸುತ್ತಿದ್ದಾರೆ. ನೀಮ್ಮ ಪ್ರದರ್ಶನ ಪ್ರಕಾಶಮಾನವಾಗಿ ಹೊಳೆಯಲಿ, ಚೆನ್ನಾಗಿ ಆಡಿ ಮತ್ತು ಕ್ರೀಡಾ ಮನೋಭಾವವನ್ನು ಎತ್ತಿ ಹಿಡಿಯಿರಿ” ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಶುಭ ಹಾರೈಸಿದ್ದಾರೆ.
ಬೆಂಗಳೂರು : ವಿಶ್ವಕಪ್-2023 ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮತ್ತೊಂದು ವಿಕೆಟ್ ಪತನವಾಗಿದೆ. 31 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 47 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ಔಟಾದರು. ಗ್ಲೆನ್ ಮ್ಯಾಕ್ಸ್ವೆಲ್ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ರೋಹಿತ್ ಶರ್ಮಾ ಅವರು ಟ್ರಾವಿಸ್ ಹೆಡ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ಒಂದು ಬೌಂಡರಿ ಬಾರಿಸಿ ಬಂದ ಹಾದಿಯಲ್ಲೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಅಯ್ಯರ್ ಕೀಪರ್ ಇಂಗ್ಲಿಸ್ಗೆ ಕ್ಯಾಚ್ ನೀಡಿದರು. ಪ್ರಸ್ತುತ ಭಾರತ 11.4 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ವಿರಾಟ್ ಕೊಹ್ಲಿ 25 ರನ್ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ 3 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಅಹಮದಾಬಾದ್: ವಿಶ್ವಕಪ್ನಲ್ಲಿ ಗೆದ್ದ ತಂಡಕ್ಕೆ ಬಹುಮಾನ ರೂಪದಲ್ಲಿ ಎಷ್ಟು ಮೊತ್ತ ಪಡೆಯಲಿದೆ ಎಂಬ ಕುತೂಹಲವಿರವುದು ಎಲ್ಲಾ ಸಹಜ ಹಾಗಿದ್ರೆ ಗೆದ್ದ ಟೀಮ್ಗೆ ಹಾಗೂ ರನ್ನರ್ ಅಪ್ ಮತ್ತು ಸೆಮಿಫೈನಲ್ ಹಂತದವರೆಗೆ ಬರುವವರಿಗೂ ಸಿಗಬಹುದಾದ ತಂಡಕ್ಕೆ ಸಿಗುವ ಮೊತ್ತವೆಷ್ಟು..? ಎಂಬುವುದರ ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 383 ಕೋಟಿ ಮೊತ್ತವನ್ನು ಬಹುಮಾನ ಮತ್ತು ಪ್ರೋತ್ಸಾಹಧನ ರೂಪದಲ್ಲಿ ತಂಡಗಳಿಗೆ ನೀಡಲು ಐಸಿಸಿಯು ನಿರ್ಧರಿಸಿದೆ. ಇಂದಿನ ಪಂದ್ಯದಲ್ಲಿ ಅಡಿ ಚಾಂಪಿಯನ್ ಆಗಿ ಹೊರಹೊಮ್ಮಲಿರುವ ತಂಡ 733.3 ಕೋಟಿ ನಗದು ಬಹುಮಾನ ತಮ್ಮದಾಗಿಸಿಕೊಳ್ಳಲಿದೆ. ರನ್ನರ್ ಅಪ್ ತಂಡಕ್ಕೆ 716 ಕೋಟಿ ಸಿಗಲಿದೆ. ಸೆಮಿಫೈನಲ್ ಹಂತದವರೆಗೆ ಬಂದು ಸೋತು ನಿರ್ಗಮಿಸಿದ ದಕ್ಷಿಣಾ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳಿಗೆ ತಲಾ 6 ಕೋಟಿ ಸಿಗಲಿದೆ.
ಮಂಡ್ಯ:ನೀರಿನಲ್ಲಿ ಆಟವಾಡುವ ವೇಳೆ KRS ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂ ನಲ್ಲಿ ನಡೆದಿದೆ. ಹರೀಶ್, ನಂಜುಂಡ ಹಾಗೂ ಜ್ಯೋತಿ ಮೃತ ದುರ್ದೈವಿಗಳಾಗಿದ್ದು ಮೂವರು ಮೃತರು ಮೈಸೂರಿನ ಕಾರುಣ್ಯ ಟ್ರಸ್ಟ್ ಸಿಬ್ಬಂದಿಗಳಾಗಿರುತ್ತಾರೆ.ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಬಂದಿದ್ದ 25 ಮಂದಿ ಸಿಬ್ಬಂದಿ ಹಿನ್ನೀರಿನಲ್ಲಿ ಆಟವಾಡುವಾಗ ಮುಳುಗಿದ್ದ ಮೂವರು. ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಿಂದ ಮೃತದೇಹ ಮೇಲೆತ್ತುವ ಕಾರ್ಯ. ಮೂವರ ಪೈಕಿ ಇಬ್ಬರು ಮೃತದೇಹ ಪತ್ತೆ, ಮತ್ತೊಬ್ಬನ ಮೃತದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯ