ಹುಣಸೂರು: ನಮ್ಮಗಳ ಮಾನಸಿಕ ನೆಮ್ಮದಿ ಮೂಡಿಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್ ತಿಳಿಸಿದರು. ಹುಣಸೂರು ತಾಲ್ಲೂಕಿನ ಸಿ.ಬಿ.ಟಿ.ಕಾಲೋನಿಯಲ್ಲಿ ನಿರ್ಮಿಸಿರುವ ಶ್ರೀ ಕನ್ನಿ ಮಾರಮ್ಮ ದೇವಿಯ ದೇವಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ ನಮಗೆ ಮಾನಸಿಕ ನೆಮ್ಮದಿ ಮೂಡಿಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದ್ದು, ನಮ್ಮ ಆದ್ಯಾತ್ಮಿಕ ನೆಲೆಗಟ್ಟಿನಲ್ಲಿ ನಿರ್ಮಿತವಾದ ಬದುಕು ಸುಖ ಸಂತೋಷ ಕಾಣುತ್ತದೆ. ನಾವುಗಳು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಧ್ಯಾನ ಹಾಗೂ ಧಾರ್ಮಿಕ ಚಿಂತನೆಗಳನ್ನು ಕಲಿಸಬೇಕಿದ್ದು,
ಈ ನಿಟ್ಟಿನಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕಿದೆ. ಇಂದು ವಿಜ್ಞಾನದಿಂದ ನಮ್ಮ ಬದುಕು ಅರಳುವ ಬದಲು ನರಳುತ್ತಿದೆ, ನಮ್ಮಲ್ಲಿ ಎಷ್ಟೇ ಸೌಲಭ್ಯಗಳಿದ್ದರೂ ಸಹ ಮನಶಾಂತಿ ಇಲ್ಲದಂತಾಗಿದೆ. ಈ ದಿಸೆಯಲ್ಲಿ ನಾವುಗಳು ಧ್ಯಾನ ಹಾಗೂ ದೇವತಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಮ್ಮನ್ನು ನಾವು ಅರ್ಥ ಮಾಡಿಕೊಂಡು ನೆಮ್ಮದಿ ಕಾಣಲು ಸಹಕಾರಿಯಾಗುತ್ತವೆ.
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ಇಂದು ನಿರ್ಮಿಸಿರುವ ಈ ದೇವಾಲಯದ ಮೂಲಕ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಧ್ಯಾನ ಹಾಗೂ ಧಾರ್ಮಿಕ ಚಿಂತನೆಗಳನ್ನು ಕಲಿಸಬೇಕಿದ್ದು, ಶ್ರೀ ಕನ್ನಿ ಮಾರಮ್ಮ ದೇವಿಯು ಈ ಭಾಗದ ಜನರ ಶಕ್ತಿ ದೇವತೆಯಾಗಿ ಎಲ್ಲಾರನ್ನು ರಕ್ಷಿಸಲಿ ಎಂದು ಪ್ರಾರ್ಥನೆ ಸಲ್ಲಿಸಿ ದೇವಾಲಯದ ಜೀರ್ಣೋದ್ದಾರ ಸಮಿತಿಗೆ 2 ಲಕ್ಷ ರೂ ಧನ ಸಹಾಯ ನೀಡಿದರು. ನೂತನ ದೇವಾಲಯಕ್ಕೆ ಕಳಸ ಸ್ಥಾಪನೆಯೊಂದಿಗೆ ಗಣಪತಿ ಪೂಜೆ, ಗಂಗಾಪೂಜೆ, ವಾಸ್ತುಪೂಜೆ,
ಗಣಹೋಮ, ರುದ್ರಹೋಮ, ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೂತನ ದೇವಾಲಯ ಉದ್ಘಾಟನೆ ಮತ್ತು ಕಳಸ ಸ್ಥಾಪನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕುಪ್ಪುಸ್ವಾಮಿ, ಶಿವಲಿಂಗಪ್ಪ, ವೆಳ್ಳಂಗಿರಿ, ಅರಣ್ ಕುಮಾರ್, ಚಿನ್ನಸ್ವಾಮಿ, ಶಶಿಕುಮಾರ್, ಪಳನಿಸ್ವಾಮಿ, ರವಿಪ್ರಸನ್ನ, ರಾಜುಶಿವರಾಜೇಗೌಡ, ಗಣೇಶ್, ಕಲ್ಕುಣಿಕೆ ರಾಘು, ಕುಮಾರ್, ದಿನೇಶ್ ಸೇರಿದಂತೆ ಇತರರು ಇದ್ದರು.