Author: AIN Author

ಬೆಂಗಳೂರು: ದಲಿತ ಸಿಎಂ ವಿಚಾರ ಅದು 2013 ರಿಂದಲೂ‌ ಓಡುತ್ತಲೆ ಇದೆ. 5 ವರ್ಷ ಅದೆ ಓಡಿತು ಆದರೆ ಪಿಚ್ಚರ್ ರಿಲೀಸ್ ಆಗಲಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಖರ್ಗೆಯವರು ಇದ್ದರು ಆಗಲೂ ಅವಕಾಶ ಆಗಲಿಲ್ಲ. ಪರಮೇಶ್ವರ್ ಅವರು 8 ವರ್ಷ ಅಧ್ಯಕ್ಷರಾಗಿದ್ದರು ಅವರಿಗೆ ಡಿಸಿಎಂ ಆಗೋಕು ಆಗಲಿಲ್ಲ.ಎರಡುವರೆ ವರ್ಷದ ನಂತರ ಏನಾಗುತ್ತೆ ಅಂತ ಸಿಎಂ ಇದಾರೆ, ಡಿಸಿಎಂ ಇದಾರೆ ಪಕ್ಷದ ಅಧ್ಯಕ್ಷರ ಇದ್ದಾರೆ ಹೈ ಕಮಾಂಡ್ ನಾಯಕರಿದ್ದರೆ ಅದೆಲ್ಲಾ ಅವರು ತೀರ್ಮಾನ ಮಾಡ್ತಾರೆ ಎಂದರು. ಹಾಗೆ ಸಿಎಂ‌ ಕರೆದ ಸಭೆಗೆ ನಾನು ಬಂದಿರಲಿಲ್ಲ.ಅನಾರೋಗ್ಯದ ಕಾರಣ ನಾನು ಬಂದಿರಲಿಲ್ಲ.ಅದನ್ನ ಸಿಎಂ ಗಮನಕ್ಕೆ ತಂದಿದ್ದೆ.ಬರಲಿಲ್ಲ ಅಂದ ಕೂಡಲೆ ಬೇರೆ ಅರ್ಥ ಕಲ್ಪಿಸುವುದು ಬೇಡ.ನಾನು ಇಲ್ಲದಿದ್ದರು ಅಲ್ಲಿನ ತೀರ್ಮಾನ ಎಲ್ಲರಿಗೂ ಅನ್ವಯವಾಗುತ್ತೆ. ಯಾರು ಮಾತನಾಡಬಾರದು ಅನ್ನೋದು ಸರಿ ಇದೆ.ಮಾತನಾಡಿದರೆ ಸುಮ್ಮನೆ ಗೊಂದಲ ಉಂಟಾಗುತ್ತೆ ಎಂದು ಹೇಳಿ ಸುಮ್ಮನಾದರು. ಮತ್ತೆ ಮಧ್ಯ ಪ್ರದೇಶದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ…

Read More

ಚಾಮರಾಜನಗರ: ಕಾಡಿನಿಂದ ಹೊರಬಂದು ಗ್ರಾಮಗಳಲ್ಲಿ ಅಡ್ಡಾಡುತ್ತಿರುವ ಹುಲಿರಾಯ ಹೌದು ಭಾರೀ ಗಾತ್ರದ ಹುಲಿಯೊಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಸುತ್ತಾಮುತ್ತಾ ಬೀಡುಬಿಟ್ಟಿದೆ. ಬಂಡೀಪುರ ಹುಲಿ ಸುರಕ್ಷಿತ ಅರಣ್ಯ ಪ್ರದೇಶದಿಂದ ಹೊರಬಂದಿರುವ ವ್ಯಾಘ್ರ ಆಗಿದ್ದು, ಪಡಗೂರು ಮೂಡುಗೂರು ಕೊಡಸೋಗೆ ಬೊಮ್ಮಲಾಪುರ ಅಡ್ಡಾಡಿಕೊಂಡಿದೆ. ರೈತರ ಜಾನುವಾರುಗಳನ್ನು ಕೊಂದು ಹೊಟ್ಟೆತುಂಬಿಸಿಕೊಳ್ಳುತ್ತಿದ್ದು, ಪಡಗೂರು,ಮೂಡಗೂರು, ಮಲ್ಲಮ್ಮನಹುಂಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ. ಇನ್ನೂ ರೈತರ ಜಮೀನುಗಳಲ್ಲಿ ಅರಾಮವಾಗಿ ಅಡ್ಡಾಡುತ್ತಾ ಜಾನುವಾರುಗಳನ್ನು ಕೊಲ್ಲುತ್ತಿದ್ರೂ ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಪಡಗೂರು ಸುತ್ತಾಮುತ್ತಾ ಮುಂಜಾನೆ ಯುವ ರೈತರ ಕಣ್ಣಿಗೆ ಕಾಣಿಸುತ್ತಿದೆ. ಆದ್ರೆ ಅರಣ್ಯ ಇಲಾಖೆ ಕಣ್ಣಿಗೆ ಕಾಣದೆ ಆಟ ಆಡಿಸುತ್ತಿದೆ. ಕಾಡು ಬಿಟ್ಟು ನಾಡಿಗೆ ಬಂದು ವೆಲ್ ಸೆಟಲ್ ಆಗಿರುವ ಹುಲಿ ದಾಳಿಗೆ  ಪ್ರತಿನಿತ್ಯ ಆತಂಕ ಪಡುತ್ತಿರುವ ರೈತರು. ಮನುಷ್ಯರ ಮೇಲ ಎರಗಿ ಅನಾಹುತ ಸೃಷ್ಟಿಸುವ ಮೊದಲು ಹುಲಿ ಸೆರೆಗೆ ಮುಂದಾಗುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

Read More

ಹೆಸರಾಂತ ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಯಾವ ಮೋಹನ ಮುರಳಿ ಕರೆಯಿತು’ (Yaava Mohana Murali Kareyitu) ಎಂಬ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಬರೆದಿರುವ ‘ಯಾವ ಮೋಹನ ಮುರಳಿ ಕರೆಯಿತು’ ಟೈಟಲ್  (Title) ಸಾಂಗ್ ಬಿಡುಗಡೆಯಾಯಿತು. ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹಾಡನ್ನು ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಅಂಗವಿಕಲ ಹುಡುಗಿ  ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರವಿದು. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆ. ಆದರೆ ಈ ಕಥೆ ವಿಭಿನ್ನ. ಅನಿಲ್ ಸಿ.ಜೆ ಸಂಗೀತ ನೀಡಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ವಿಶ್ವಾಸ್ ಕೃಷ್ಣ ತಿಳಿಸಿದರು . ನಾನು ಮೂಲತಃ ಉದ್ಯಮಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಹಾಡು ಬಿಡುಗಡೆ ಮಾಡಿಕೊಟ್ಟ ಉಮಾಪತಿ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ಶರಣಪ್ಪ ಗೌರಮ್ಮ. ಚಿತ್ರದ ಪ್ರಮುಖ ಪಾತ್ರಧಾರಿ ಬೇಬಿ ಪ್ರಕೃತಿ,…

Read More

ಬಾಗಲಕೋಟೆ: ಕೆರೆದಂಡೆಯಲ್ಲಿ ಪಂಪ್‌ಸೆಟ್‌ ಆನ್ ಮಾಡಲು ಹೋಗಿದ್ದ ರೈತ ನಾಪತ್ತೆಯಾದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿಯಲ್ಲಿ ನಡೆದಿದೆ. ಇನ್ನು ರೈತ ನಾಗಪ್ಪ ರಾಣಗಟ್ಟಿಯನ್ನು ಮೊಸಳೆ ಎಳೆದೊಯ್ದಿರುವ ಶಂಕೆ ವ್ಯಕ್ತವಾಗಿದೆ. https://ainlivenews.com/suprem-ray-healing-center-reiki/ ಕೆರೆ ಬಳಿ ರೈತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜಮಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಸಾವಳಗಿ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ರೈತನನ್ನು ಪತ್ತೆ ಹಚ್ಚಲು ಆಗ್ರಹಿಸಿದ್ದಾರೆ.

Read More

ದಕ್ಷಿಣದ ಖ್ಯಾತ ನಟಿ ಸಮಂತಾ ಮಯೋಸೈಟಿಸ್ (Myositis) ಕಾಯಿಲೆಯಿಂದ ಬಳಲುತ್ತಿರುವ ವಿಷಯ ಗೊತ್ತೇ ಇದೆ. ಪದೇ ಪದೇ ಈ ಕಾಯಿಲೆಗಾಗಿ ನಾನಾ ಥೆರಪಿ ಪಡೆಯುತ್ತಿದ್ದಾರೆ ನಟಿ. ಖುಷಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ನಾನಾ ದೇಶಗಳನ್ನು ಸುತ್ತುವುದರಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ಕ್ರಯೋಥೆರಪಿ (Cryotherally) ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ತಿಳಿಸಿದ್ದರು, ಆ ಕುರಿತಾದ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಈ ಹಿಂದೆ ಸಮಂತಾ(Samantha) ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದರು. ತಮಗಿರುವ ಖಾಯಿಲೆಗಾಗಿ ಸ್ಟಿರಾಯ್ಡ್ (Steroid) ತೆಗೆದುಕೊಂಡಿದ್ದರಿಂದ ತಮ್ಮ ದೇಹದ ಚರ್ಮ ಹಾಳಾಗಿದೆ ಎಂದು ಅವರು ಹೇಳಿಕೊಂಡಿದ್ದರು. ತಾವು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಯಾವುದೇ ಫೋಟೋ ಹಾಕಲಿ, ಅದಕ್ಕೆ ಫಿಲ್ಟರ್ ಹಾಕುವುದಾಗಿ ತಿಳಿಸಿದ್ದರು. ವೈದ್ಯರ ಸಲಹೆ ಮೇರೆಗೆ ದೇಹದಲ್ಲಿ ಕಾಣಿಸಿಕೊಳ್ಳುತ್ತಿದ್ದ ನೋವಿಗಾಗಿ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿದ್ದೆ. ಅದು ಅತೀಯಾಗಿ ದೇಹ ಸೇರಿಕೊಂಡಿದ್ದರಿಂದ ಚರ್ಮಕ್ಕೆ ತೊಂದರೆ ಮಾಡಿದೆ. ವೈದ್ಯರಾದ ಚಿನ್ಮಯಿ ಶ್ರೀಪಾದ ಅವರು ಚರ್ಮವನ್ನು ಸರಿ ಮಾಡುವುದಾಗಿ ಹೇಳಿದ್ದಾರೆ. ಎಲ್ಲವೂ ಅವರ ಕೈಯಲ್ಲಿದೆ…

Read More

ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಬಿಜೆಪಿ ಬರ ಅಧ್ಯಯನ ತಂಡ ಭೇಟಿ ನೀಡಿ ಹರಿಹರ ತಾಲೂಕಿನ ಬೆಳ್ಳೂಡಿ ಮತ್ತು ಭಾನುವಳ್ಳಿ ಹಾಗೂ ಹೊನ್ನಾಳಿ ತಾಲೂಕಿನ ಮಾದನಬಾವಿ ಬಳಿ ಮಕ್ಕೆಜೋಳ ಬೆಳೆ ಪರಿಶೀಲನೆ ನಡೆಸಿದ್ದಾರೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡದಿಂದ ಬರ ಪರಿಶೀಲನೆ ನಡೆದಿದ್ದು, ಸಂಸದ ಜಿ ಎಂ ಸಿದ್ದೇಶ್ವರ್‌ ಜಿಲ್ಲೆಯ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಇನ್ನೂ ಬೆಳೆ ನಷ್ಟದ ಬಗ್ಗೆ ರೈತರಿಂದ ಮಾಹಿತಿ ಪಡೆದ ನಾಯಕರು ಒಂದೇ ದಿನದಲ್ಲಿ ಹರಿಹರ, ಹೊನ್ನಾಳಿ, ಚನ್ನಗಿರಿ, ಮಾಯಕೊಂಡ ತಾಲೂಕಿನಲ್ಲಿ ಬರ ಪರಿಶೀಲನೆ ನಡೆಸಲಿದ್ದಾರೆ.

Read More

ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮಲಾ ಪೌಲ್ ಸದ್ದಿಲ್ಲದೇ 2ನೇ ಮದುವೆಯಾಗಿದ್ದಾರೆ (Marriage). ಹತ್ತು ದಿನಗಳ ಹಿಂದೆಯಷ್ಟೇ ಅವರಿಗೆ ಪ್ರೀತಿಸುತ್ತಿದ್ದ ಹುಡುಗ ಲವ್ ಪ್ರಪೋಸ್ ಮಾಡಿದ್ದ. ಇದಾದ ಒಂದೂವರೆ ವಾರಗಳ ಅಂತರದಲ್ಲಿ ನೆಚ್ಚಿನ ಹುಡುಗನ ಜೊತೆ ಮದುವೆ ಆಗಿದ್ದಾರೆ. ಅಮಲಾ. ನಿನ್ನೆ ಕೊಚ್ಚಿಯಲ್ಲಿ (Kochi) ಅಮಲಾ ಪೌಲ್ ಅವರ ಜಗತ್ ದೇಸಾಯಿ ಅವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮಲಾ ಪೌಲ್ (Amala Paul) ವಿಭಿನ್ನವಾಗಿ ಮದುವೆಯ ಪ್ರಪೋಸಲ್ ಅನ್ನು ಸ್ವೀಕರಿಸಿದ್ದರು. ಅಮಲಾ ಅವರ ಹುಟ್ಟು ಹಬ್ಬದ ದಿನದಂದೇ ಬಾಯ್ ಫ್ರೆಂಡ್ ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿ ಅಮಲಾ ಕೈಗೆ ಉಂಗುರು ತೊಡಿಸಿದ್ದರು. ದಕ್ಷಿಣ ಭಾರತದ ಖ್ಯಾತಿ ನಟಿ ಆಗಿರುವ ಅಮಲಾ ಪೌಲ್, ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಆದವರು. ಆದರೂ, ಅವರ ಡಿಮಾಂಡ್ ಕಡಿಮೆ ಆಗಿರಲಿಲ್ಲ. ಒಂದಲ್ಲ ಒಂದು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ, ಆ…

Read More

ಮಂಡ್ಯ :- ಮದ್ದೂರು ಪಟ್ಟಣದಲ್ಲಿ ಹಾಡುಹಗಲೇ ವೃದ್ದೆಯೊಬ್ಬರ ಸರಗಳ್ಳತನ ಮಾಡಿರುವ ಪ್ರಕರಣ ಸೋಮವಾರ ಬೆಳಿಗ್ಗೆ ನಡೆದಿದೆ. ಮದ್ದೂರು ಪಟ್ಟಣದ ಕೆನರಾ ಬ್ಯಾಂಕ್ ರಸ್ತೆಯ ಬೆಸ್ತರ ಬೀದಿಯ ಕೆಂಪಮ್ಮ (70) ಎಂಬುವ ವೃದ್ದೆಯೇ ಚಿನ್ನದ ಸರ ಕಳೆದುಕೊಂಡ ವೃದ್ದೆಯಾಗಿದ್ದಾರೆ. ಬೆಳಿಗ್ಗೆ ಮನೆ ಮುಂಭಾಗ ಕೆಂಪಮ್ಮ ಕುಳಿತಿರುವುದನ್ನು ಗಮನಿಸಿದ ಬಂದ ಇಬ್ಬರು ದುಷ್ಕರ್ಮಿಗಳು ವೃದ್ದೆ ಬಳಿ ಬಂದು ಹೊಸದಾಗಿ ಸಾಯಿಬಾಬಾ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ ನೀವು ಸ್ವಲ್ಪ ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಹೇಳಿದ್ದಾರೆ. ಅಜ್ಜಿ ಜೊತೆ ಮಾತನಾಡುತ್ತ ಒಬ್ಬ ಪ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಚಾಲನೆ ಇಟ್ಟುಕೊಂಡಿದ್ದಾನೆ. ಮತ್ತೊಬ್ಬ ಮಾತನಾಡುತ್ತಿದ್ದಂತೆ ವೃದ್ದೆ ಕೆಂಪಮ್ಮರ ಕುತ್ತಿಗೆಗೆ ಕೈ ಹಾಕಿ ಅಂದಾಜು 70 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಳ್ಳುತ್ತಿದಂತೆ ವೃದ್ದೆ ಜೋರಾಗಿ ಕಿರುಚಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಹಾಗೂ ಸಾರ್ವಜನಿಕರು ಸರಗಳ್ಳರನ್ನು ಹಿಡಿಯುವಷ್ಟರಲ್ಲಿ ಇಬ್ಬರು ದುಷ್ಕರ್ಮಿಗಳು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ. ತಕ್ಷಣವೇ ಸ್ಥಳೀಯರು ಮತ್ತು ವಾಹನ ಸವಾರರು ಸರಗಳ್ಳರನ್ನು ಬೆನ್ನಟ್ಟಿದ್ದರು ಸಹ ಮಿಂಚಿನ ವೇಗದಲ್ಲಿ…

Read More

ತುಮಕೂರು: ಮನೆಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿ ಮೇಲೆ ಹೈ ಟೆನ್ಷನ್ ವೈಯರ್ ಬಿದ್ದ ಪರಿಣಾಮ ಶಾರ್ಟ್ ಸರ್ಕ್ಯೂಟ್ ನಿಂದ 60ಕ್ಕೂ ಹೆಚ್ಚು ಮನೆಗಳ‌ ವಿದ್ಯುತ್ ಉಪಕರಣಗಳು ಭಸ್ಮವಾಗಿರುವ ಘಟನೆ ತುಮಕೂರು‌ ಜಿಲ್ಲೆ ಪಾವಗಡ ತಾಲ್ಲೂಕಿನ ಗ್ರಾಮದ ಮರಿದಾಸನಹಳ್ಳಿಯಲ್ಲಿ ನಡೆದಿದೆ. ಟಿವಿ, ಫ್ರಿಡ್ಜ್, ಫ್ಯಾನ್ ವಾಷಿಂಗ್ ಮಿಷನ್, ಸೇರಿದಂತೆ ಅನೇಕ ವಸ್ತುಗಳು ಭಸ್ಮವಾಗಿದ್ದು, ಇಂದು ಮುಂಜಾನೆ 5 ಗಂಟೆ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮನೆಯಿಂದ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡ ಗ್ರಾಮಸ್ಥರು. ಮಾಹಿತಿ ತಿಳಿದ ತಕ್ಷಣವೇ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.

Read More

ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕನನ್ನು ಬಂಧಿಸಲಾಗಿದೆ. ಪ್ರತಿಮಾ ಮೇಲಿನ ಸೇಡಿನಿಂದ ಪ್ರಾಣ ತೆಗೆದು ಕಿರಣ್ ಎಸ್ಕೇಪ್ ಆಗಿ ಇವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೆ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಚಾಲಕ ಕಿರಣ್​ ಸರ್ಕಾರಿ ಕೆಲಸದಲ್ಲಿ ಇದ್ದೀನಿ ಅಂತಾ ಮನೆಯವರು ಮತ್ತು ಸಂಬಂಧಿಗಳಿಗೆ ಹೇಳಿಕೊಂಡಿದ್ದನು. ಪತ್ನಿಗೂ ಸರ್ಕಾರಿ ಕೆಲಸದಲ್ಲಿ ಇದ್ದೀನಿ ಅಂತ ಹೇಳಿಕೊಂಡು ಮದ್ವೆಯಾಗಿದ್ದನು. ಹದಿನೈದು ದಿನಗಳ ಹಿಂದೆ ಪ್ರತಿಮಾ ಆತನನ್ನು ಕೆಲಸದಿಂದ ತೆಗೆದಿದ್ದರು. ಕೆಲಸದಿಂದ ತೆಗೆಯುತ್ತಿದ್ದಂತೆ, ಗಂಡನನ್ನ ತೊರೆದು ಹೋಗಿದ್ದ ಕಿರಣ್ ಹೆಂಡತಿ ಹೋಗಿದ್ದಳು. 4 ವರ್ಷದಿಂದ ಕಾರು ಚಾಲಕನಾಗಿದ್ದ ಕಿರಣ್, ಬೇಜವಾಬ್ದಾರಿಯಿಂದ ಕಾರು ಓಡಿಸುತ್ತಿದ್ದನು. ಗುತ್ತಿಗೆ ಆಧಾರದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಕಿರಣ್ ಕಳೆದ ತಿಂಗಳು ಹೊಸ ಸರ್ಕಾರಿ ಕಾರು ಅಪಘಾತ ಮಾಡಿದ್ದನು. ಅಪಘಾತದ ನಂತರ ಕಚೇರಿಯಲ್ಲೇ ಕಾರು ಬಿಟ್ಟು ತೆರಳಿದ್ದನು. ಕಿರಣ್ ನಡವಳಿಕೆಯಿಂದ ಕೋಪಗೊಂಡಿದ್ದ ಪ್ರತಿಮಾ, 10 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಈ ವೇಳೆ ಪ್ರತಿಮಾ ಕಾಲಿಗೆ ಬಿದ್ದು…

Read More