ವೀಕೆಂಡ್ ಗಾಗಿ ಬಿಗ್ ಬಾಸ್ ಅಭಿಮಾನಿಗಳು ಕಾಯುತ್ತಿರುತ್ತಾರೆ. ಕಿಚ್ಚನ ಜೊತೆ ನಡೆಯೋ ಬಿಗ್ ಬಾಸ್ ಕಥೆ ಕೇಳಲು ಕಣ್ತುಂಬಿ ಕಾತುರರಾಗಿರುತ್ತಾರೆ. ಕಿಚ್ಚನ ಹೊಸ ಲುಕ್ ನೋಡುವುದಕ್ಕೆ ಹಾಗೂ ಕಿಚ್ಚನ ಆ ಮಾತು ಕೇಳೋಕೆ ಅಭಿಮಾನಿಗಳಿಗೆ ಹಬ್ಬ. ಇಷ್ಟೇ ಅಲ್ಲ ಸುದೀಪ್ ಬಂದು ಹೋದ ಮೇಲೆ ಕಿಚ್ಚನ ಅಭಿಮಾನಿಗಳು, ಸುದೀಪ್ ಹಾಕೋ ಕಾಸ್ಟೂಮ್ಸ್ ಬಗ್ಗೆ ಮಾತಾಡ್ತಾರೆ. ಇದೀಗ ಸಂಡೇ ಎಪಿಸೋಡ್ ನಲ್ಲಿ ಹಾಕಿರೋ Costume ಮತ್ತು ಶ್ಯೂ ಬೆಲೆ ಕೇಳಿ ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಸುದೀಪ್ ಧರಿಸಿದ ಜಾಕೆಟ್ ಮತ್ತು ಶೂ ಬೆಲೆ ಕೇಳಿದ್ರೆ ನೀವು ಕೂಡ ಶಾಕ್ ಹಾಗ್ತೀರಾ ! ಜಾಕೆಟ್ ಬೆಲೆ ಬರೋಬ್ಬರಿ 97,259, ಆದರೆ ಸುದೀಪ್ ಧರಿಸಿದ ಶೂ ಬೆ ಯಲೆ 94,700 ರೂ. ಇಷ್ಟು ದುಬಾರಿಯ ಬಟ್ಟೆ ಕಿಚ್ಚ ಧರಿಸುತ್ತಾರೆ ಎಂದು ಕೇಳಿದ ಫ್ಯಾನ್ಸ್ ಒಂದು ಕ್ಷಣ ಧಂಗಾಗಿದ್ದಾರೆ.
Author: AIN Author
ಬೆಂಗಳೂರು:- ಬ್ಯಾಟರಾಯನಪುರದಲ್ಲಿ ಪೌರ ಕಾರ್ಮಿಕ ಕೊಲೆ ಮಾಡಿದ ಆಟೊ ಚಾಲಕ ಬಂಧಿಸಲಾಗಿದೆ. ಪ್ರಭು ಬಂಧಿತ ಆರೋಪಿ. ಪಂತರಪಾಳ್ಯದ ನಿವಾಸಿ ಭರತ್, ಬಿಬಿಎಂಪಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಪ್ರಭು, ಆಟೊ ಚಾಲಕ. ಇವರಿಬ್ಬರು ಪರಿಚಿತರಾಗಿದ್ದರು’ ಎಂದು ಪೊಲೀಸರು ಹೇಳಿದರು. ‘ಪಂತರಪಾಳ್ಯದಲ್ಲಿ ವ್ಯಕ್ತಿಯೊಬ್ಬರು ನಿಧನ ಹೊಂದಿದ್ದರು. ಮನೆ ಎದುರು ಪಾರ್ಥಿವ ಶರೀರವನ್ನು ದರ್ಶನಕ್ಕೆ ಇರಿಸಲಾಗಿತ್ತು. ಅದೇ ಸ್ಥಳದಲ್ಲಿ ಭರತ್ ಹಾಗೂ ಪ್ರಭು ಒಟ್ಟಿಗೆ ಸೇರಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಅವರಿಬ್ಬರ ನಡುವೆ ಗಲಾಟೆ ಶುರುವಾಗಿತ್ತು.’ ‘ಮಾತಿನ ಚಕಮಕಿ ನಡೆದು, ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಆರೋಪಿ ಪ್ರಭು, ಚಾಕುವಿನಿಂದ ಭರತ್ ಅವರ ಕತ್ತು ಹಾಗೂ ದೇಹದ ಇತರೆ ಭಾಗಗಳಿಗೆ ಇರಿದಿದ್ದ. ತೀವ್ರ ಗಾಯಗೊಂಡಿದ್ದ ಭರತ್ ಅವರನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಅವರು ಮೃತಪಟ್ಟರು’ ಎಂದು ಪೊಲೀಸರು ಹೇಳಿದರು.
ಬೆಂಗಳೂರು:- ಭ್ರಷ್ಟಾಚಾರ ಆರೋಪದ ಹಿನ್ನೆಲೆ, ಬೆಂಗಳೂರಿನ 11 ಕಡೆ ಲೋಕಾಯುಕ್ತ ದಾಳಿ ನಡೆಸಿದ್ದು, ಭೂ ಮಾಪನ ಇಲಾಖೆ ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಸರ್ವೆಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಯಲ್ಲಿನ ಅಕ್ರಮ, ಹಣಕ್ಕೆ ಬೇಡಿಕೆ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಭೂದಾಖಲೆ ನಿರ್ದೇಶಕರ ಕಚೇರಿ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಕೈಗೊಂಡಿದೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಖುದ್ದು ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲಿಸಿದೆ. ಲೋಕಾಯುಕ್ತ ದಾಳಿ ನಡೆದ ಸ್ಥಳಗಳು ಎಡಿಎಲ್‌ಆರ್, ದೊಡ್ಡಬಳ್ಳಾಪುರ ಡಿಡಿಎಲ್‌ಆರ್, ಬೆಂಗಳೂರು ಗ್ರಾಮಾಂತರ, ಡಿಡಿ ಕಚೇರಿ, ದೊಡ್ಡಬಳ್ಳಾಪುರ ರಸ್ತೆ, ಚಪ್ರಕಲ್ಲು ಎಡಿಎಲ್‌ಆರ್, ದೇವನಹಳ್ಳಿ ಎಡಿಎಲ್‌ಆರ್, ಆನೇಕಲ್ ಎಡಿಎಲ್‌ಆರ್, ಕೆ.ಆರ್.ಪುರಂ ಉತ್ತರ ವಿಭಾಗದ ಎಡಿಎಲ್‌ಆರ್, ಕಂದಾಯ ಭವನ ಡಿಡಿಎಲ್‌ಆರ್, ಡಿಸಿ ಬೆಂಗಳೂರು ನಗರ, ಕಂದಾಯ ಭವನ ಎಡಿಎಲ್‌ಆರ್, ನೆಲಮಂಗಲ ಎಡಿಎಲ್‌ಆರ್ , ಹೊಸಕೋಟೆ ಎಡಿಎಲ್‌ಆರ್ ದಕ್ಷಿಣ, ಕಂದಾಯ ಭವನ ಎಡಿಎಲ್‌ಆರ್ ಯಲಹಂಕ ಲೋಕಾಯುಕ್ತ ಬಿ.ಎಸ್. ಪಾಟೀಲ್ ಪ್ರತಿಕ್ರಿಯಿಸಿ, ನಗರದ…
ನಿನ್ನೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಸೋತು ವಿಶ್ವಕಪ್ ಕೈತಪ್ಪಿ ಹೋಗಿದೆ. ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗಿದ್ದ ಪ್ರಧಾನಿ ಮೋದಿ ಅವರ ನಡೆಯೊಂದು ಈಗ ಮೆಚ್ಚುಗೆಗೆ ಪಾತ್ರವಾಗಿದೆ. ನಿನ್ನೆ ಡ್ರೆಸ್ಸಿಂಗ್ ರೂಮ್‌ಗೆ ಬಂದು ಪ್ರಧಾನಿ ಮೋದಿ ತೋರಿದ ಕಾಳಜಿ ಬಗ್ಗೆ ಮೊಹಮದ್ ಶಫಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದುರದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ಪಂದ್ಯಾವಳಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಶಮಿ ಹೇಳಿದ್ದಾರೆ ಅದರಲ್ಲೂ ವಿಶೇಷವಾಗಿ ಡ್ರೆಸ್ಸಿಂಗ್ ರೂಮ್‌ಗೆ ಬಂದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಾವು ಮತ್ತೆ ಪುಟಿದೇಳುತ್ತೇವೆ ಎಂಬುದಾಗಿ ಶಮಿ ಹೇಳಿಕೊಂಡಿದ್ದಾರೆ. ಜತೆಗೆ ಮೋದಿ ತಮ್ಮನ್ನು ತಬ್ಬಿ ಸಂತೈಸುತ್ತಿರುವ ಫೋಟೋವೊಂದನ್ನೂ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈಗ ವೈರಲ್ ಆಗಲಾರಂಭಿಸಿದೆ.
ಬೆಂಗಳೂರು:- ಸಚಿವ, ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಆಡಳಿತ ಪಕ್ಷ-ವಿರೋಧ ಪಕ್ಷದ ನಾಯಕರು ಒಂದೆಡೆ ಸೇರಿರುವ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಲೋಕಸಭಾ ಚುನಾವಣೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಬಿ.ಶ್ರೀರಾಮುಲು ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ. ಕೆಲವು ವಿಷಯಗಳು ಕುರಿತು ಮಾತನಾಡಿದ್ದು, ಇದು ಕುತೂಹಲ ಉಂಟಾಗಲು ಕಾರಣವಾಯಿತು. ಭೇಟಿಗೂ ಮೊದಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೂ ತೆರಳಿದ್ದರು. ಸಿಎಂ ಭೇಟಿಗೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಶ್ರಿರಾಮುಲು ಅವರು, ಈ ಭೇಟಿ ಯಾವುದೇ ರಾಜಕೀಯ ಕಾರಣಕ್ಕಲ್ಲ. ಮಗಳ ಮದುವೆ ಸಮಾರಂಭ ನಿಮಿತ್ತ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಬಂದಿದ್ದೇನೆ. ಇದು ಖಾಸಗಿ ಭೇಟಿ ಎಂದು ಸ್ಪಷ್ಟಪಡಿಸಿದರು. ಇನ್ನೂ ಮುಂದಿನ ತಿಂಗಳು ಡಿಸೆಂಬರ್ 7ರಂದು ಮಗಳ ಮದುವೆ ಇದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಸಂಬಂಧ ಲಗ್ನ ಪತ್ರಿಕೆಯನ್ನು…
ತುಮಕೂರು:-ಹೆಜ್ಜೇನು ದಾಳಿ ನಡೆದ ಹಿನ್ನೆಲೆ, ಓರ್ವ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ಜರುಗಿದೆ. ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ನಾಮಕರಣ ಕಾರ್ಯಕ್ರಮದಲ್ಲಿ ಹಾಜರಾದ ಜನರ ಮೇಲೆ ದಿಢೀರನೆ ಹೆಜ್ಜೇನು ದಾಳಿ ನಡೆದಿದೆ. 47 ವರ್ಷದ ವೀರಭದ್ರಯ್ಯ ಹೆಜ್ಜೇನು ದಾಳಿಯಿಂದ ಸಾವನ್ನಪ್ಪಿದ್ದಾನೆ. ಇನ್ನೂ ಗಾಯಾಳುಗಳನ್ನು ಗುಬ್ಬಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಬೆಂಗಳೂರು:- ಟೆಂಟ್ ನಲ್ಲಿ ಬ್ಲೂ ಫಿಲ್ಮಿ ತೋರಿಸಿ ಜೀವನ ಮಾಡಿದವರು ಎಂಬ ಹೆಚ್ ಡಿಕೆ ಹೇಳಿಕೆಗೆ ಡಿಕೆ ಶಿವಕುಮಾರ್ ಅವರು ಖಡಕ್ಕಾಗಿ ಉತ್ತರ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಟೆಂಟ್‌ಗಳನ್ನು ನಡೆಸಿದ್ದು ನಿಜ. ಆದರೆ ಒಂದೇ ಒಂದು ಟೆಂಟ್ ಅಲ್ಲ, ಒಟ್ಟು 3-4 ಟೆಂಟ್‌ಗಳನ್ನ ನಾನು ನಡೆಸುತ್ತಿದೆ. ಈ ಪೈಕಿ ದೊಡ್ಡಾಲಹಳ್ಳಿ, ಹಾರೋಬೆಲೆ, ಕೋಡಿ ಹಳ್ಳಿ & ಹುಣಸೆ ಹಳ್ಳಿ ಬಳಿ ಟೆಂಟ್‌ಗಳನ್ನು ನಡೆಸುತ್ತಿದ್ದೆ. ಇವುಗಳ ಪೈಕಿ ಹುಣಸೆ ಹಳ್ಳಿಯಲ್ಲಿ ಟೆಂಟ್ ಇಂದಿಗೂ ನಡೆಯುತ್ತಿದೆ. ಆದ್ರೆ ನಾವು, ಆ ಟೆಂಟ್‌ಗಳಲ್ಲಿ ಎಂದಿಗೂ ಕುಮಾರಸ್ವಾಮಿ ಅವರು ಆರೋಪ ಮಾಡಿರುವ ರೀತಿ ಸಿನಿಮಾ ಹಾಕಿಲ್ಲ. ಬೇಕಿದ್ರೆ ಈಗಲೂ ಹೋಗಿ ಮಾಧ್ಯಮಗಳು ಪರಿಶೀಲಿಸಲಿ ಎಂದಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾತನಾಡುತ್ತಾ ಏಕವಚನ ಇರುವ ಶಬ್ಧಗಳನ್ನು ಬಳಸಿದ್ದರು ಎಚ್.ಡಿ. ಕುಮಾರಸ್ವಾಮಿ ಅವರು. ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು…
ಬೀದರ್:- ಸಿದ್ದರಾಮಯ್ಯ ಸುಳ್ಳಿನ ಮುಖ್ಯಮಂತ್ರಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಸುಳ್ಳಿನ ಮುಖ್ಯಮಂತ್ರಿ. ರೈತರಿಗೆ ಕೊಟ್ಟ ಮಾತು ಮುರಿಯುತ್ತಿದ್ದಾರೆ. ಹಣದ ಹಿಂದೆ ಬಿದ್ದಿದ್ದಾರೆ’ ಎಂದರು. ಅಧಿಕಾರ ಹಿಡಿಯಲು ಏನೇನು ನಾಜೂಕುತನ, ಸುಳ್ಳು ಹೇಳಬೇಕಿತ್ತೋ ಹೇಳಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ನಂತರ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಅವುಗಳನ್ನು ಹಿಂತೆಗೆದುಕೊಂಡಿತು. ಆದರೆ, ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದರು. ಇದರ ವಿರುದ್ಧ ರಾಜ್ಯದಲ್ಲಿ ಹೋರಾಟ ನಡೆಸಿದಾಗ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ನಮ್ಮ ಹೋರಾಟಗಳಲ್ಲಿ ಭಾಗವಹಿಸಿ, ನಮ್ಮ ಸರ್ಕಾರ ಬಂದ ನಂತರ ಮೂರೂ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈಗ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಬಹಳ ನಾಜೂಕಿನಿಂದ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ…
ಕಲಬುರಗಿ:- ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಾಳೆ ಕಲಬುರಗಿಗೆ ಭೇಟಿ ನೀಡಲಿದ್ದಾರೆ.. ವಿಪಕ್ಷ ನಾಯಕ ಸ್ಥಾನ ಸ್ವೀಕರಿಸಿದ ನಂತ್ರ ಇದೇ ಮೊದಲ ಬಾರಿ ಭೇಟಿ ನೀಡಲಿದ್ದು ಮಧ್ಯಾನ 3 30 ಕ್ಕೆ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.. ಇದಕ್ಕೂ ಮುನ್ನ ಬೆಳಿಗ್ಗೆ 10 ಗಂಟೆಗೆ ಗ್ರಾಮೀಣ ಹಾಗು ಅಳಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರ ಅಧ್ಯಯನ ನಡೆಸಿ ರೈತರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ…
ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್ಗೆ ಮೊದಲು ತುತ್ತಾಗಿದ್ದು ಇಶಾನಿ, ಬಿಗ್ ಮನೆಯಿಂದ ಹೊರಬಿದ್ದ ಕೂಡಲೇ ಸುದೀಪ್ ಎದುರು ಬಿಕ್ಕಿ ಬಿಕ್ಕಿ ಅತ್ತರು. ಬಿಗ್ ಬಾಸ್ ಮನೆಯೊಳಗೆ ಕಳೆದ ನೆನಪುಗಳು, ಸದಸ್ಯರ ಜತೆಗಿದ್ದ ಅನುಭವವನ್ನು ಜಿಯೋ ಸಿನಿಮಾ ನಡೆಸಿದ ಕಿರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ನನಗೆ ಏನು ಹೇಳಬೇಕು ಗೊತ್ತಾಗ್ತಿಲ್ಲ. ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದೀನಿ. 99 ಪರ್ಸೆಂಟ್ ನಾನು ಇರ್ತೀನಿ ಅಂತ ಆತ್ಮವಿಶ್ವಾಸವಿತ್ತು. ಉಳಿದ ಒಂದು ಪರ್ಸೆಂಟ್ ನನಗೆ ಆಗಲ್ಲ ಅನಿಸಿತ್ತು. ನನಗೆ ಹಟ ಜಾಸ್ತಿ ಇದೆ. ಗೇಮ್ ಆಡುವ ಅವಕಾಶ ಜಾಸ್ತಿ ಸಿಗಲಿಲ್ಲ. ಅದರಿಂದ ನನಗೆ ಬೇಜಾರಾಗಿತ್ತು. ನನ್ನನ್ನು ಯಾರೂ ಸೀರಿಯಸ್ ಆಗಿ ತಗೊಂಡಿರಲಿಲ್ಲ. ಹಾಗಾಗಿ ನನ್ನ ಸ್ಟ್ರೆಂಥ್ ತೋರಿಸಲಾಗಲಿಲ್ಲ’ ಎಂದರು. ಮತ್ತೆ ಬಿಗ್‌ಬಾಸ್‌ಗೆ ಹೋಗುವುದು ಸಾಧ್ಯವಾದರೆ ನಾನು ನನ್ನದೇ ಲೆಕ್ಕಾಚಾರ ಇಟ್ಟುಕೊಂಡು ಆಟ ಆಡುತ್ತಿದ್ದೆ. ಯಾರು ಫೇಕ್, ಯಾರು ರಿಯಲ್ ಎಂದು ವಿಶ್ಲೇಷಿಸಿ ಮುಂದಡಿ ಇಡುತ್ತಿದ್ದೆ. ಟಾಸ್ಕ್ ವಿಷಯಲ್ಲಿಯೂ ನಾನು…