ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ ಬರ ಅದ್ಯಾಯನ ಮಾಡುತ್ತಾ ನಾಟಕ ಮಾಡುತ್ತಿದೆ ಈ ನಾಟಕ ಬಿಟ್ಟು ಕೇಂದ್ರದಿಂದ ಹಣವನ್ನುತರಲಿ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಸಚಿವ ಆರ್ ಬಿ ತಿಮ್ಮಾಪುರ ಮಾತನಾಡಿ, ಬಿಜೆಪಿಯವರಿಗೆ ಸುಳ್ಳು ಹೇಳೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ ಇವರು ಸುಳ್ಳು ಹೇಳೋದನ್ನ ನೋಡಿ ನೋಡಿ ಜನ ಇವತ್ತು ತಕ್ಕ ಪಾಠ ಕಲಿಸಿದ್ದಾರೆ. ಪ್ರಕಾಶ ಕುಂಬಾರ ಬಾಗಲಕೋಟೆ
Author: AIN Author
ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸುಮಾರು 30,300 ರಷ್ಟು ಕಬ್ಬು ಬೆಳೆದಿದೆ ಮಳೆ ಇಲ್ಲದ ಕಾರಣ 18,699 ರಷ್ಟು ಕಬ್ಬು ನಾಶವಾಗಿದೆ. ಜಮಖಂಡಿ ಮತ್ತು ರಬಕವಿ ಬನಹಟ್ಟಿಯಲ್ಲಿ ಈ ಎರಡು ತಾಲೂಕಿನಲ್ಲಿ ಬರ ಅಧ್ಯಾಯನ ನಡೆಸಿದ್ದೇವೆ ಕಳೆದ ಬಾರಿ ಎರಡು ಸಾವಿರ ಹೆಕ್ಟೇರ ಎಷ್ಟು ಅರಿಶಿಣ ಬೆಳೆದಿತ್ತು. ಮಳೆ ಇಲ್ಲದ ಕಾರಣ ಈ ಬಾರಿ 1000 ಹೆಕ್ಟೇರ ಎಷ್ಟು ಅರಿಶಿನ ಬೆಳೆದು ಬಾರಿ ಇಳುವರಿ ಕಂಡಿದೆ. ರಬಕವಿ ಬನಹಟ್ಟಿಯಲ್ಲಿ 612 ಬೋರ್ವೆಲ್ಗಳಿವೆ ಅದರಲ್ಲಿ 480 ಬೋವೆಲ್ಗಳಲ್ಲಿ ನೀರು ಇದೆ 112 ರಲ್ಲಿ ನೀರು ಬತ್ತಿ ಹೋಗಿದೆ ಸದ್ಯದ ಪರಿಸ್ಥಿತಿಯಲ್ಲಿ ರಬಕವಿ ಬನಹಟ್ಟಿ ರಾಮಪುರ ಹೊಸೂರಗಳಲ್ಲಿ ಸಾರ್ವಜನಿಕರ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಗರಸಭೆ ಸಭಾಭವನದಲ್ಲಿ ಅಧಿಕಾರಿಗಳ ಪರಿಶೀಲನ ಸಭೆ ನಡೆಯಿತು. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಮತ್ತು ಮೇವು ಯಾವುದೇ ತೊಂದರೆ ಇಲ್ಲ ಅದರಲ್ಲಿ ಈ ತಾಲೂಕಿನಲ್ಲಿ 40 ಗ್ರಾಮ ಗ್ರಾಮಗಳು ಬರ…
ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರದ ಪೂರ್ವ ಭಾಗವಾದ ‘ಕಾಂತಾರ – ಅಧ್ಯಾಯ 1’, ಸೋಮವಾರವಷ್ಟೇ ಅದ್ಧೂರಿಯಾಗಿ ಪ್ರಾರಂಭವಾಗಿತ್ತು. ಇಂದು ಚಿತ್ರವು ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಮಂಗಳವಾರ, ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ. ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ “ಕಾಂತಾರ” ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ರಿಷಭ್ ಶೆಟ್ಟಿ, ‘ಕಳೆದ ವರ್ಷ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಿತ್ರದ ಪ್ರಚಾರಕ್ಕಾಗಿ…
ಲೀಲಾವತಿಯವರಿಗೆ ಕೆಲವು ದಿನಗಳಿಂದ ಅನಾರೋಗ್ಯ ಉಂಟಾಗಿದೆ, ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ಎಂಬ ವಿಷಯ ಚಿತ್ರರಂಗಕ್ಕೆ ಆತಂಕ ಉಂಟುಮಾಡ್ತು. ಆದರೆ ಈಗ ಸಮಾಧಾನಕರ ಅಪ್‌ಡೇಟ್ ಒಂದು ಬರ್ತಿಎದೆ. ಲೀಲಾವತಿಯವರ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆಯಾಗಿದೆ. ಹಿರಿಯನಟಿ ಲೀಲಾವತಿ ವಹೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮುಂಚಿನಂತೆ ಲೀಲಾವತಿಗೆ ಎದ್ದುಓಡಾಡೋಕೆ ಸಾಧ್ಯವಾಗ್ತಿಲ್ಲ. ಹಾಸಿಗೆಯಲ್ಲೇ ಲೀಲಾವತಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ತಮ್ಮ ನಿವಾಸದಲ್ಲಿ ಲೀಲಾವತಿ ಅನಾರೋಗ್ಯದಿಂದ ಬಳಲುತ್ತಿರೋ ದೃಶ್ಯಗಳು ಒಮ್ಮೆ ಮನಸ್ಸಿಗೆ ಚುರುಕ್ ಎನಿಸಿದೇ ಇರದು. ಚಿತ್ರರಂಗದಲ್ಲಿ ದೈತ್ಯಪ್ರತಿಭೆಯಾಗಿ ಮೆರೆದ ಲೀಲಾವತಿಯವರಿಗೆ 87 ವರ್ಷವಾಗಿದೆ. ಹಾಸಿಗೆ ಹಿಡಿದಿರೋ ಲೀಲಾವತಿಯವರನ್ನ ನೋಡಿ ಆರೋಗ್ಯ ವಿಚಾರಿಸಿಕೊಂಡು ಹೋಗೊಕೆ ಚಿತ್ರರಂಗದಿಂದ ನಟನಟಿಯರು ಹಾಗೂ ಗಣ್ಯರು ಬರ್ತಾವನೆ ಇದ್ದಾರೆ. ಇಂದು ಡಾ.ಶಿವರಾಜ್ ಕುಮಾರ್ ಭೇಟಿ ಮತ್ತೆ ಲೀಲಾವತಿ ಕುಟುಂಬಕ್ಕೊಂದು ಶಕ್ತಿ,ಉತ್ಸಾಹ ಕೊಟ್ಟಿದೆ. ಇಂದು ಶಿವಣ್ಣ ನೆಲಮಂಗಲದ ಸೋಲದೇವನಹಳ್ಳಿ ವಿನೋದ್‌ರಾಜ್ ನಿವಾಸಕ್ಕೆ ಭೇಟಿ ಕೊಟ್ರು. ವಿನೋದ್‌ರಾಜ್‌ರನ್ನ ನೋಡುತ್ತಿದ್ದಂತೆ ಪ್ರೀತಿಯಿಂದ ಹಗ್ ಮಾಡಿದ್ರು. ಲೀಲಾವತಿಯವರು ಮತ್ತೆ ಅನಾರೋಗ್ಯವನ್ನ ಗೆದ್ದು ಬರ್ತಾತರೆ ಎಂಬ ಆಶ್ವಾಸನೆ ತುಂಬಿದ್ರು. ಲೀಲಾವತಿಯವರನ್ನ…
ಬೆಂಗಳೂರು:- ಮಧ್ಯರಾತ್ರಿ ನಡು ರಸ್ತೆಯಲ್ಲಿ ಆಂಬುಲೆನ್ಸ್ ಹೊತ್ತಿ ಉರಿದ ಘಟನೆ ನಗರದ ಸೌಥ್ ಅಂಡ್ ಸರ್ಕಲ್ ಬಳಿ ಜರುಗಿದೆ. ಶಾರ್ಟ್ ಸೆಕ್ಯೂರ್ಟ್ ಅಥವಾ ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಒಂದು ಅಗ್ನಿಶಾಮಕ ವಾಹನ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕಾರ್ಯ ನಡೆದಿದೆ. ಜಯನಗರ ಪೊಲೀಸ್ರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಆಂಬುಲೆನ್ಸ್ ಚಾಲಕ ಅಂಬರೀಶ್ ಮಾತನಾಡಿ, ಜಯನಗರದಿಂದ ಬ್ಲಡ್ ಟೆಸ್ಟ್ ಸ್ಯಾಂಪಲ್ ಪಡೆಯೋಕೆ ಹೋಗ್ತಿದ್ದೆ.. ಇದೇ ವೇಳೆ ಇದ್ದಕ್ಕಿದ್ದಂತೆ ಗಾಡಿ ಆಫ್ ಆಯ್ತು, ಗೇರ್ ವರ್ಕ್ ಆಗಿಲ್ಲ..ಸ್ಟೇರಿಂಗ್ ಕೂಡಾ ಜಾಮ್ ಆಯ್ತು.. ಹಿಂದೆ ಹೊಗೆ ಬರ್ತಿತ್ತು..ನೋಡಿದ್ರೆ ಇಂಜಿನ್ ನಲ್ಲಿ ಬೆಂಕಿ ಕಾಣಿಸ್ತು. ಕೆಲವೇ ಸೆಕೆಂಡ್ ನಲ್ಲಿ ಬೆಂಕಿ ಜಾಸ್ತಿ ಆಯ್ತು..ನಾನ್ ಕೆಳಗಿಳಿದು ದೂರು ಓಡಿದೆ. ಯಾರೂ ಗಾಡಿಯಲ್ಲಿ ಇರ್ಲಿಲ್ಲ ಎಂದಿದ್ದಾರೆ.
ಬೆಂಗಳೂರು:- ನಿಗಮ ಮಂಡಳಿ ಪಟ್ಟಿ ಹೈಕಮಾಂಡ್ಗೆ ಕಳುಹಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೊದಲು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡುತ್ತೇವೆ. ನಂತರದ ಪಟ್ಟಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ನಿಗಮ ಮಂಡಳಿ ನೇಮಕದ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಿದ್ದೇವೆ. ಹೈಕಮಾಂಡ್ ಒಪ್ಪಿಗೆ ಕೊಡಬೇಕು ಎಂದರು. ಮೊದಲು ಶಾಸಕರಿಗೆ ನಿಗಮ ಮಂಡಳಿ ನೇಮಕಾತಿಯಲ್ಲಿ ಅವಕಾಶ ನೀಡುತ್ತೇವೆ. ಎರಡು, ಮೂರನೇ ಹಂತದಲ್ಲಿ ಕಾರ್ಯಕರ್ತರಿಗೆ ನೀಡುತ್ತೇವೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು. ಬಿ. ಆರ್ ಪಾಟೀಲ್ ಪತ್ರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಇನ್ನೂ ಪತ್ರ ನೋಡಿಲ್ಲ. ನನಗೆ ಪತ್ರ ಇನ್ನೂ ತಲುಪಿಲ್ಲ. ಅವರು ಏನು ಬರೆದಿದ್ದಾರೆ ಅಂತ ನೋಡ್ತೇನೆ ಎಂದು ತಿಳಿಸಿದರು. ನಿಗಮ ಮಂಡಳಿಗಳ ನೇಮಕಾತಿಯನ್ನು ಮೂರು ನಾಲ್ಕು ಹಂತಗಳಲ್ಲಿ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು. ನಿಗಮ ಮಂಡಳಿ ನೇಮಕಾತಿ, ಸಮಿತಿಗಳ ರಚನೆ, ಗ್ಯಾರಂಟಿಗಳ ಅನುಷ್ಠಾನದ ವಿಚಾರವನ್ನು ಒಂದೊಂದಾಗಿ ಬಗೆಹರಿಸಲಿದ್ದೇವೆ ಎಂದು ತಿಳಿಸಿದರು. ತೆಲಂಗಾಣದಲ್ಲಿ…
ಬೆಂಗಳೂರು:- ಸಾರ್ವಜನಿಕರನ್ನು ವಂಚಿಸುತ್ತಿದ್ದ ನಾಲ್ವರು ಸೈಬರ್ ವಂಚಕರನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಲಾಗಿದ್ದು, ₹60 ಲಕ್ಷ ಸೀಜ್ ಮಾಡಲಾಗಿದೆ. ಸೈಯದ್ ಯೂನಸ್, ಮೊಹಮ್ಮದ್ ಕಲೀಮುಲ್ಲಾ, ಸೈಯ್ಯದ್ ಅರ್ಬಾಜ್ ಹಾಗೂ ಇಬ್ರಾಹಿಂ ಕಲೀಂ ಬಂಧಿತರು. ವಂಚನೆಗೊಳಗಾದ ಸಾವಂತ್ ಪೂಜಾರಿ ಎಂಬುವರು ಫೇಸ್ಬುಕ್ ನೋಡುವಾಗ ಆನ್ಲೈನ್ ಶಾಪಿಂಗ್ ಆಯಪ್ವೊಂದರಲ್ಲಿ ಪಾರ್ಟ್ ಟೈಮ್ ವರ್ಕ್ ಫ್ರಂ ಹೋಮ್ ಕೆಲಸ ಇರುವುದನ್ನು ಗಮನಿಸಿ ಲಿಂಕ್ ಒತ್ತಿದ್ದರು. ಯೂಸರ್ ಐಡಿ, ಪಾರ್ಸ್ ವರ್ಡ್ ರಚಿಸಿಕೊಂಡಿದ್ದಕ್ಕೆ ಅವರಿಗೆ ಬೋನಸ್ ರೂಪದಲ್ಲಿ 100 ರೂ. ಆರೋಪಿಗಳು ಕಳುಹಿಸಿದ್ದರು. ಬಳಿಕ ಟೆಲಿಗ್ರಾಮ್ ಗ್ರೂಪ್ ರಚಿಸಿ ಫ್ಲಿಪ್ ಕಾರ್ಟ್ ಮಾಲ್ ಇಂಡಿಯಾದಲ್ಲಿ ಪ್ರಾಡಕ್ಟ್ ಖರೀದಿಸುವಂತೆ ವಿವಿಧ ಟಾಸ್ಕ್ ನೀಡಿದ್ದರು. ಅದೇ ರೀತಿ, 88 ಸಾವಿರ ರೂಪಾಯಿ ಮೌಲ್ಯ ವಸ್ತುಗಳ ಖರೀದಿಗೆ ಪ್ರತಿಯಾಗಿ ಯಾವುದೇ ಹೆಚ್ಚುವರಿ ಹಣ ನೀಡದೇ ಆರೋಪಿಗಳು ವಂಚಿಸಿದ್ದರು. ಈ ಸಂಬಂಧ ಸಾವಂತ್ ಪೂಜಾರಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಎಂ.ಮಲ್ಲಿಕಾರ್ಜುನ್ ಹಾಗೂ ಪಿಎಸ್‌ಐ ರಮಣ್ ಗೌಡ ನೇತೃತ್ವದ…
ಬೆಂಗಳೂರು:- ನಿಗಮ ಮಂಡಳಿ ನೇಮಕ ಸಂಬಂಧ ನನ್ನ ಅಭಿಪ್ರಾಯ ಕೇಳಿಲ್ಲ ಎಂದು ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಿಗಮ ಮಂಡಳಿ ನೇಮಕಾತಿ ವಿಚಾರವಾಗಿ ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದ್ರೆ ಒಳ್ಳೆಯದಾಗಿತ್ತು ಎಂದರು. ಕಳೆದ ವಾರ ಸಭೆ ಮಾಡಿದ್ದಾರೆ. ನಮ್ಮ ಜನರಲ್ ಸೆಕ್ರೆಟರಿ ಸಿಎಂ, ಅಧ್ಯಕ್ಷರ ಜೊತೆ ಮಾತಾಡಿದ್ದಾರೆ. ಅಂತಿಮಗೊಳಿಸಬಹುದು, ನನಗೆ ಗೊತ್ತಿಲ್ಲ ಎಂದರು. ಅವರು ನಮ್ಮ ಜೊತೆಗೆ ಚರ್ಚೆ ಮಾಡಿಲ್ಲ. ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದ್ದರೆ ಒಳ್ಳೆಯದಾಗಿತ್ತು. ಯಾಕಂದ್ರೆ ನಾನು ಎಂಟು ವರ್ಷ ಅಧ್ಯಕ್ಷನಾಗಿದ್ದೆ. ಯಾರನ್ನ ಮಾಡಿದ್ರೆ ಒಳಿತು ಅಂತ ಸಲಹೆ ಕೊಡ್ತಿದ್ದೆ. ನಮ್ಮನ್ನು ಕೇಳಿ ಮಾಡಿದ್ರೆ ಚೆನ್ನಾಗಿರುತ್ತಿತ್ತು. ಹೈಕಮಾಂಡ್ ಅನುಮತಿಯಿಂದ ಅವರು ಮಾಡುತ್ತಿದ್ದಾರೆ. ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಆದ್ರೆ ಒಳ್ಳೆಯದು ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಭ್ರೂಣ ಹತ್ಯೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಸಂಪೂರ್ಣ ಆಗಲಿ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ. ಹೇಗೆ…
ಆಧಾರ್ ಕಾರ್ಡ್ನಲ್ಲಿ ಜನ್ಮದಿನಾಂಕವನ್ನು ತಿದ್ದಲು ಒಮ್ಮೆ ಮಾತ್ರವೇ ಅವಕಾಶ ಇರುತ್ತದೆ. ಎರಡನೇ ಬಾರಿ ತಿದ್ದಲು ಅವಕಾಶವೇ ಇಲ್ಲ ಎನ್ನುವಂತಿಲ್ಲ. ಅದಕ್ಕೂ ಅವಕಾಶ ಇದೆ. ಆದರೆ, ಕೆಲವೊಂದು ನಿಯಮಗಳು ಅನ್ವಯ ಆಗುತ್ತವೆ. ಆಧಾರ್ನಲ್ಲಿ ನಿಮ್ಮ ಡೇಟ್ ಆಫ್ ಬರ್ತ್ ಅನ್ನು ಎರಡನೇ ಬಾರಿ ಅಪ್‌ಡೇಟ್ ಮಾಡಲೇಬೇಕೆಂದಿದ್ದರೆ ಅದಕ್ಕೆ ಎಕ್ಸೆಪ್ಷನ್ ಪ್ರೋಸಸ್ ಅಥವಾ ವಿಶೇಷ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ನಿಮ್ಮ ಹೊಸ ಜನ್ಮದಿನಾಂಕಕ್ಕೆ ಸಾಕ್ಷ್ಯವಾಗಿರುವ ದಾಖಲೆ ನಿಮ್ಮ ಜೊತೆ ಇರಬೇಕು. ಜನ್ಮದಿನಾಂಕ ಸಾಕ್ಷ್ಯದ ದಾಖಲೆಗಳು ಭಾರತೀಯ ಪಾಸ್ಪೋರ್ಟ್ ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳಿಂದ ನೀಡಿದ ಸರ್ವಿಸ್ ಫೋಟೋ ಐಡಿ ಸರ್ಕಾರದಿಂದ ಒದಗಿಸಿದ ಪಿಂಚಣಿ, ಫ್ರೀಡಂ ಫೈಟರ್ ಫೋಟೋ ಐಡಿ ಕಾರ್ಡ್ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಯಾವುದೇ ವಿವಿ ಅಂಕಪಟ್ಟಿ, ತೇರ್ಗಡೆ ಪ್ರಮಾಣಪತ್ರ ತೃತೀಯ ಲಿಂಗಿ ಐಡಿ ಕಾರ್ಡ್ ಜನನ ಪ್ರಮಾಣಪತ್ರ ವಿಶೇಷ ಪ್ರಕ್ರಿಯೆಗೆ ಬಿಬಿಎಂಪಿ ಅಥವಾ ನಿಮ್ಮ ಜಿಲ್ಲೆಯ ಪ್ರಾಧಿಕಾರ ನೀಡಿದ ಜನನ ಪ್ರಮಾಣಪತ್ರ ಹಾಗೂ ಸೆಲ್ಫ್ ಡಿಕ್ಲರೇಶನ್ ಅರ್ಜಿ ಇರಬೇಕು. ಬಳಿಕ ಯುಐಡಿಎಐ ವೆಬ್ಸೈಟ್ಗೆ…
ಬೆಂಗಳೂರು:- ಇಂದಿನಿಂದ ಮೂರು ದಿನ ಏಷ್ಯಾದ ಅತಿ ದೊಡ್ಡ ಬೆಂಗಳೂರು ಟೆಕ್ ಸಮ್ಮಿಟ್ 2023 ಆರಂಭಗೊಳ್ಳಲಿದೆ. ನ.29 ರಿಂದ ಡಿ.1ವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದ್ದು, ಏಷ್ಯಾದ ಅತಿ ದೊಡ್ಡ ಟೆಕ್ ಸಮ್ಮಿಟ್ ಇದಾಗಿರಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಿಟಿಎಸ್ 2023ಗೆ ಚಾಲನೆ ನೀಡಲಿದ್ದಾರೆ. ಬಿಟಿಎಸ್ನಲ್ಲಿ ಒಟ್ಟು 75 ಸೆಷನ್, 400 ಸ್ಪೀಕರ್, 350 ಸ್ಟಾರ್ಟ್ ಅಪ್, 600 ಪ್ರದರ್ಶಕರು, 20,000 ಉದ್ಯಮಿಗಳು ಭಾಗವಹಿಸಲಿದ್ದಾರೆ. 30ಕ್ಕೂ ಅಧಿಕ ದೇಶಗಳು ಸಮ್ಮಿಟ್ ನಲ್ಲಿ ಭಾಗವಹಿಸಲಿವೆ. ಇದು ಏಷಿಯಾದ ದೊಡ್ಡ ಟೆಕ್ ಸಮ್ಮಿಟ್ ಆಗಿರಲಿದೆ. ನಾರಾಯಣ ಮೂರ್ತಿಯೂ ಈ ಬಾರಿಯ ಬಿಟಿಎಸ್ನಲ್ಲಿ ಭಾಗವಹಿಸಲಿದ್ದಾರೆ. ಲೆಜೆಂಡ್, ಲೆಗಸಿ ಅಂಡ್ ಲೀಡರ್ ಶಿಪ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೆರೋದಾ ಸಂಸ್ಥಾಪಕ ನಿಕಿಲ್ ಕಾಮತ್ ಜೊತೆ ಅವರು ಸಂವಾದ ನಡೆಸಿಕೊಡಲಿದ್ದಾರೆ. ಬ್ರೇಕಿಂಗ್ ಬೌಂಡರೀಸ್, ಇನ್ನೊವೇಷನ್ ಫ್ರಂ ಇಂಡಿಯಾ ಇಂಪಾಕ್ಟ್ ಫಾರ್ ದಿ ವರ್ಲ್ಡ್ ಎಂಬ ಥೀಮ್ನೊಂದಿಗೆ ಈ ಸಮ್ಮಿಟ್ ನಡೆಯಲಿದೆ. ಈ ಬಾರಿಯ ಬಿಟಿಎಸ್ನಲ್ಲಿ 33 ದೇಶಗಳ ಪೈಕಿ…