ದಾವಣಗೆರೆ: ಸ್ಪೀಕರ್ ಯು ಟಿ ಖಾದರ್ ಗೆ ಬಿಜೆಪಿಯ ಶಾಸಕರು ಕೈ ಮುಗಿದು ನಮಸ್ಕಾರ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಚಿವ ಜಮೀರ್ ಅಹ್ಮದ್ ರನ್ನು ಮುಲಾಜಿಲ್ಲದೇ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯ ಮಾಡಿದ್ದಾರೆ. ನಗರದಲ್ಲಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೇಣುಕಾಚಾರ್ಯ, ಜಮೀರ್ ನೀವು ರಾಜ್ಯದ ಸಚಿವರಾ? ಕೇವಲ ಅಲ್ಪ ಸಂಖ್ಯಾತರ ಸಚಿವರಾ..? ಈ ಬಗ್ಗೆ ಸಚಿವ ಜಮೀರ್ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಮುಲಾಜಿಲ್ಲದೇ ಅವರನ್ನ ಮುಖ್ಯಮಂತ್ರಿಗಳು ವಜಾ ಮಾಡಬೇಕು ಎಂದು ಒತ್ತಾಯ ಮಾಡಿದರು. https://ainlivenews.com/geo-scientist-statue-murder-case-explosive-issue-comes-to-light-during-investigation/ ಇನ್ನು, ಟೀ ಮಾರಿಕೊಂಡು ಜೀವನ ಮಾಡುತ್ತೇನೆಂಬ ಬಿಜೆಪಿ ಶಾಸಕ ಬಸನಗಡೌಡ ಪಾಟೀಲ್ ಯತ್ನಾಳ ಹೇಳಿಕೆಗೆ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಿವೈ ವಿಜಯೇಂದ್ರರ ಆಯ್ಕೆಯನ್ನು ಸ್ವಾಗತ ಮಾಡಲಾಗಿದೆ. ಯತ್ನಾಳ ಜೊತೆ ಹಿರಿಯರು ಮಾತನಾಡುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರು ಒಟ್ಟಾಗಿ…
Author: AIN Author
ಕೊಲ್ಕತ್ತಾ:- ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕಂಡ ಸೋಲನ್ನು ಸಹಿಸಲಾಗದೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ವರದಿಯಾಗಿದೆ. ಬಂಕುರಾದ ಬೆಲಿಯತೋರ್ ಸಿನಿಮಾ ಹಾಲ್ ಬಳಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ. ಘಟನೆ ಇದೀಗ ಬೆಳಕಿಗೆ ಬಂದಿದ್ದು, ಮೃತ ಯುವಕನನ್ನು ರಾಹುಲ್ ಲೋಹರ್ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ‘ಕ್ರಿಕೆಟ್ ಹುಚ್ಚ’ ಎಂದು ಕರೆಯಲ್ಪಡುವ ರಾಹುಲ್, ಫೈನಲ್ ಪಂದ್ಯ ವೀಕ್ಷಿಸಲು ಕೆಲಸದಿಂದ ರಜೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನ್ನು ಅನುಭವಿಸಿದ ನಂತರ ಈ ಬೇಸರವನ್ನು ತಾಳಲಾರದೆ, ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಘಟನೆಯ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ’ ಎಂದು ಮೃತ ಲೋಹರ್ ಅಳಿಯ ಬಾಬು ಉತ್ತಮ್ ಸುರ್ ತಿಳಿಸಿದ್ದಾರೆ. ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಲೋಹರ್ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಕುರಿತು ಮಾತನಾಡಿದ…
ಬೆಂಗಳೂರು:- ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ಬೋಡಬಂಡೆನಹಳ್ಳಿ ಹಾಗೂ ದಿನ್ನೆಪಾಳ್ಯ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ದೇವರುಗಳ ವಿಸರ್ಜನಾ ಕಾರ್ಯಕ್ರಮವನ್ನು ಎರಡು ಗ್ರಾಮದ ಯುವಕರು ಜಾತಿ ಭೇದವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರುತ್ತಾ ಸ್ನೇಹಪೂರ್ವಕವಾಗಿ ಜೊತೆಗೂಡಿ ಅದ್ದೂರಿಯಾಗಿ ನೆರವೇರಿಸಿದರು.. ಗ್ರಾಮಗಳ ಪ್ರಮುಖ ಬೀದಿಯಲ್ಲಿ ಅದ್ದೂರಿ ಮೆರವಣಿಗೆ ಜೊತೆಗೆ ವಿವಿಧ ವಾದ್ಯಗೋಷ್ಠಿಗಳೊಂದಿಗೆ.. ಜನಸ್ನೇಹಿ ಪೊಲೀಸ್ ಅಧಿಕಾರಿ ಸಬ್ ಇನ್ಸ್ಪೆಕ್ಟರ್ ಚೇತನ್ ಗೌಡ ರವರ ಮಾರ್ಗದರ್ಶನದಲ್ಲಿ. ಗ್ರಾಮದ ರಾಜನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.ನಂತರ ಗ್ರಾಮಸ್ಥರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು ಇದೇ ಸಂದರ್ಭದಲ್ಲಿ ಎರಡು ಗ್ರಾಮದ ಯುವಕರು ಹಿರಿಯರು ಮಹಿಳೆಯರು ಮಕ್ಕಳು ಉಪಸಿತರಿದ್ದರು..
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್ ಯಡಿಯೂರಪ್ಪ ಅವರನ್ನ ಯಾಕೆ ಕೆಳಗೆ ಇಳಿಸಿದರು ಗೊತ್ತಾ? ಅಲ್ಲಿಯೂ ಅಪ್ಪನ ಆಡಳಿತದಲ್ಲಿ ಮಗ ವಿಜೇಯೇಂದ್ರ ಹಸ್ತಕ್ಷೇಪ ಇತ್ತು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಬಿಜೆಪಿಯವರು ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದ ಆಡಳಿತದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಕುರಿತು ಮಾತನಾಡುತ್ತಾರೆ. ಭ್ರಷ್ಟಾಚಾರ ಮುಕ್ತ ಅಭಿಯಾನ ಆರಂಭಕ್ಕೆ ಮುಂದಾಗಿದ್ದಾರೆ. ಬಿಜೆಪಿಯವರು ಯಾವ ನೈತಿಕತೆಯಿಂದ ಈ ಅಭಿಯಾನ ಮಾಡುತ್ತಾರೆ? ಈ ಹಿಂದೆ ಬಿ. ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವಿಜಯೇಂದ್ರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದರು. https://ainlivenews.com/geo-scientist-statue-murder-case-explosive-issue-comes-to-light-during-investigation/ ಹೀಗಾಗಿ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದರು’ ಎಂದು ಸಂತೋಷ್ ಲಾಡ್ ಆರೋಪಿಸಿದ್ದಾರೆ. ಇನ್ನು ಬರ ಕಾಮಗಾರಿ ಕುರಿತು ಕೇಂದ್ರ ಸರ್ಕಾರ ಯಾವುದೇ ರೀತಿಯ ಅನುದಾನ ಕೊಡುತ್ತಿಲ್ಲ. ಕೇಂದ್ರದ ಸಚಿವರನ್ನ ಭೇಟಿ ಮಾಡಲು ಸಹ ಅನುಮತಿ ಸಿಗುತ್ತಿಲ್ಲ ಎಂದರು.
ಬೆಂಗಳೂರು:- ಪೆನ್‌ಡ್ರೈನ್ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. ಪೆನ್‌ಡ್ರೈವ್ ತೋರಿಸಿದಾಗ ಅಣ್ಣ ನಿನ್ನ ಋಣದಲ್ಲಿದ್ದೇವೆ ನಿಮ್ಮಿಂದ ಬೆಳೆದಿದ್ದೇವೆ ಅಣ್ಣಾ ಅಂತ ಯಾಕೆ ಹೇಳಿದ್ರು? ಪೆನ್‌ಡ್ರೈವ್‌ನಲ್ಲಿ ನಂದು ಇದಿಯಾ ಅಂತ ನಿದ್ದೆಗೆಟ್ರಲಾ, ಯಾಕೆ ನಿದ್ರೆಗೆಟ್ಟರು ನಿಮ್ಮ ಮಂತ್ರಿಗಳು, ಯಾಕೆ ನನ್ನ ಬಳಿ ಬಂದರು. ಹಾವು ಬಿಡದೆ ಇಷ್ಟೆಲ್ಲಾ ನಿದ್ದೆಗೆಟ್ಟಿದ್ದೀರಿ, ಹಾವೇ ಇದೆ ಅಂದಿದ್ದಕ್ಕೆ ಇಷ್ಟು ಬೆಚ್ಚಿ ಹೋಗಿದಿರಲ್ಲಾ, ಹಾವು ಬಿಟ್ಟರೆ ಏನಾಗ್ತಿರಾ ನೀವು? ಟೈಂ ಬರುತ್ತೆ ರಿಲೀಸ್ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ಹೆದರಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಇವರ ದುಡ್ಡಿಗೆ, ಇವರ ಪೊಗರಿಗೆ ನಾನು ಇದಕ್ಕೆ ಹೆದರುತ್ತೇನಾ? ಇವರ ರೌಡಿಸಂಗೆ ನಾನು ಹೆದರುತ್ತೇನಾ, ನಾನು ಅದಕ್ಕೇನು ಹೆದರುವವನಲ್ಲ, ಅದ್ಯಾವನೋ ಬಂದು ಕರೆಂಟ್ ಕನೆಕ್ಷನ್ ಕೊಟ್ಟಿದ್ದಾನೆ, ನಾನು ನಿಂತುಕೊಂಡು ಹಾಕ್ಸಿದ್ದೀನಾ. ಎಲ್ಲ ಹೇಳಿದ್ರು ಯಾರು ಕನೆಕ್ಷನ್ ಕೊಟ್ಟವ್ನೆ ಅವನ ಮೇಲೆ ಆಯಕ್ಷನ್ ತೆಗೊಳಲಿ ಅಂತ. ನಾನು…
ಚಿಕ್ಕಮಗಳೂರು: ದತ್ತಮಾಲೆ ಏಕೆ ಹಾಕಬಾರದು? ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಾಭಿಮಾನಕ್ಕೆ ನಾನು ಭಯಪಡುವುದಿಲ್ಲ. ದತ್ತಮಾಲೆ ಹಾಕುವುದು ದೇವರ ಕಾರ್ಯ, ಕಾನೂನು ಬಾಹಿರ ಅಲ್ಲ. ಕಾನೂನು ಬಾಹಿರವಾದ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದರು. ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್‌ನವರಿಗೆ ಯಾವ ಯೋಗ್ಯತೆ ಇದೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸಾತನೂರಿನ ಟೆಂಟ್‌ನಲ್ಲಿ ನೀಲಿಚಿತ್ರ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವರನ್ನು ಜನ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರ ಕೊಟ್ಟಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. https://ainlivenews.com/geo-scientist-statue-murder-case-explosive-issue-comes-to-light-during-investigation/ ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಮಂತ್ರಿಗಳ ಮನೆ ಮುಂದೆ ಪೋಸ್ಟರ್ ಅಂಟಿಸಬಹುದು ಎಂದು ಬಂದೋಬಸ್ತ್ ಮಾಡಿಕೊಳ್ಳಲು ಗುಪ್ತಚರ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ಅವರ ಅಭಿರುಚಿಯನ್ನು ತೋರಿಸುತ್ತದೆ. ಟೆಂಟ್ʼನಲ್ಲಿ ನೀಲಿಚಿತ್ರ ತೋರಿಸಿಕೊಂಡು ಬಂದವರು ಈ ಸರಕಾರದಲ್ಲಿದ್ದಾರೆ. ಇಂತಹವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಲೇವಡಿ ಮಾಡಿದರು.
ಆಗ್ರಾ:- ಉತ್ತರ ಪ್ರದೇಶದ ಮದುವೆ ಸಮಾರಂಭದಲ್ಲಿ ರಸಗುಲ್ಲಾಗಳ ಕೊರತೆಯಿಂದಾಗಿ ನಡೆದ ಮಾರಾಮಾರಿಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಮಧ್ಯರಾತ್ರಿ ಶಂಸಾಬಾದ್ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದರಿಂದ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಭಾನುವಾರ ಬ್ರಿಜ್ಭಾನ್ ಕುಶ್ವಾಹಾ ಅವರ ನಿವಾಸದಲ್ಲಿ ಮದುವೆ ಕಾರ್ಯಕ್ರಮವಿತ್ತು. ಸಮಾರಂಭದಲ್ಲಿ ರಸಗುಲ್ಲಾಗಳ ಕೊರತೆಯ ಬಗ್ಗೆ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದರು. ಇದು ಜಗಳಕ್ಕೆ ಕಾರಣವಾಗಿದೆ. ಈ ಜಗಳದಲ್ಲಿ ದೇವಿ, ಯೋಗೇಶ್, ಮನೋಜ್, ಕೈಲಾಶ್, ಧರ್ಮೇಂದ್ರ ಮತ್ತು ಪವನ್ ಗಾಯಗೊಂಡಿದ್ದಾರೆ. ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ ಎನ್ನಲಾಗಿದೆ.
ಬೆಂಗಳೂರು:- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪೊಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಗೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಮತ್ತೆ ಜೆಪಿ ಭವನ ಕಚೇರಿಗೆ ಪೋಸ್ಟರ್ ಅಂಟಿಸುವ ಸಾಧ್ಯತೆ ಇರುವುದ ಹಿನ್ನೆಲೆ, ತಡರಾತ್ರಿ ಎರಡು ಹೊಯ್ಸಳ ವಾಹನಗಳಿಂದ ಪೊಲೀಸ್ ಭದ್ರತೆ ಮಾಡಲಾಗಿದೆ. 14 ರಂದು ಹೆಚ್ಡಿಕೆ ವಿರುದ್ಧ ಪೋಸ್ಟರ್ ಅಂಟಿಸಲಾಗಿತ್ತು. ಕರೆಂಟ್ ಕಳ್ಳತನ ಪ್ರಕರಣ ಸಂಬಂಧ ಹೆಚ್ಡಿಕೆ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಲಾಗಿತ್ತು. ಬಳಿಕ ನಿನ್ನೆ ಸಂಜೆ ಕೂಡ ಶೇಷಾದ್ರಿಪುರಂ, ರಾಜಾಜಿನಗರ ರಸ್ತೆಗಳಲ್ಲಿ ಪೆನ್ ಡ್ರೈವ್ ಬ್ರದರ್ ಎಂಬ ಬರಹ ಇತ್ತು. ಕಿಡಿಗೇಡಿಗಳು ವ್ಯಂಗ್ಯ ಚಿತ್ರದ ಅವಹೇಳನಕಾರಿ ಪೋಸ್ಟರ್ ಅಂಟಿಸಿದ್ದರು. ಈ ಹಿನ್ನೆಲೆ ಜೆಡಿಎಸ್ ಕಚೇರಿಗೆ ಪೊಲೀಸರು ಭದ್ರತೆ ಒದಗಿಸಿದ್ದರು.
ನವದೆಹಲಿ: ಖಾಸಗಿ ಶಾಲೆಗಳು ಆರನೇ ಮತ್ತು ಏಳನೇ ಕೇಂದ್ರ ವೇತನ ಆಯೋಗಗಳ (CPC) ಶಿಫಾರಸುಗಳನ್ನು ಜಾರಿಗೊಳಿಸಬೇಕು ಮತ್ತು ತಮ್ಮ ಬೋಧಕ, ಬೋಧಕೇತರ ಸಿಬ್ಬಂದಿಗೆ ಕಡ್ಡಾಯ ವೇತನ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು ಎಂದು ದೆಹಲಿ ಹೈಕೋರ್ಟ್ (Delhi HighCourt) ಆದೇಶಿಸಿದೆ. ರಾಷ್ಟ್ರ ರಾಜಧಾನಿಯ ವಿವಿಧ ಖಾಸಗಿ ಶಾಲೆಗಳ (Private Schools) ಬೋಧಕ ಮತ್ತು ಬೋಧಕೇತರ ಉದ್ಯೋಗಿಗಳು 6ನೇ ಮತ್ತು 7ನೇ ವೇತನ ಆಯೋಗಗಳ ಪ್ರಯೋಜನಗಳನ್ನು ಮತ್ತು ಬಡ್ಡಿಯೊಂದಿಗೆ ತಮ್ಮ ಬಾಕಿಗಳ ಪಾವತಿಸುವಂತೆ ಮತ್ತು ಇತರ ಪ್ರಯೋಜನಗಳನ್ನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರು ವೇತನ ಆಯೋಗಗಳ (Planning Commission of India) ಶಿಫಾರಸಿನ ಪ್ರಕಾರ ಖಾಸಗಿ ಶಾಲೆಗಳ ನೌಕರರು ವೇತನ ಪಡೆಯುವ ಹಕ್ಕನ್ನು ಹೊಂದಿದ್ದಾರೆ, https://ainlivenews.com/geo-scientist-statue-murder-case-explosive-issue-comes-to-light-during-investigation/ ಶಾಲೆಗಳು ತಮ್ಮ ಸಿಬ್ಬಂದಿಗೆ ಈ ಪ್ರಯೋಜನಗಳನ್ನು ನಿರಾಕರಿಸಲು ಹಣದ ಕೊರತೆಯ ನೆಪವನ್ನು ಉಲ್ಲೇಖಿಸಬಾರದು ಎಂದು ತಾಕೀತು ಮಾಡಿದೆ. ವೇತನ ಆಯೋಗಗಳ ಶಿಫಾರಸುಗಳ ಪ್ರಕಾರ ಅನುದಾನರಹಿತ ಅಲ್ಪಸಂಖ್ಯಾತ…
ಬೆಂಗಳೂರು:- ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ, ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ನಡೆಸಿದ್ದ ಫ್ಯಾಟ್ ಒಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸಾಕೇತ್ ಮತ್ತು ರಿಷಬ್ ಬಂಧಿತ ಆರೋಪಿಗಳು ಎನ್ನಲಾಗಿದೆ. ರಾಜರಾಜೇಶ್ವರಿ ನಗರದ ಫ್ಲಾಟ್ ಒಂದರಲ್ಲಿ ಬೆಟ್ಟಿಂಗ್ ನಡೆಸುತ್ತಿರುವ ಖಚಿತ ಮಾಹಿತಿ ಆಧರಿಸಿ ಸಿಸಿಬಿ ದಾಳಿ ನಡೆಸಿದೆ. ದಾಳಿ ವೇಳೆ ಲ್ಯಾಪ್ ಟಾಪ್ ಹಾಗೂ ಮೊಬೈಲ್‌ಗಳು ಪತ್ತೆ ಆಗಿದ್ದು, ಆನ್‌ಲೈನ್ ವೆಬ್ ಸೈಟ್ ಮೂಲಕ ಆರೋಪಿಗಳು ಬೆಟ್ಟಿಂಗ್ ನಡೆಸ್ತಿದ್ದರು ಎನ್ನಲಾಗಿದೆ. ಬಳಿಕ ಫ್ಲಾಟ್ ಪರಿಶೀಲನೆ ನಡೆಸಿದಾಗ ಒಂದು ಕೆಜಿ ಚಿನ್ನ ಪತ್ತೆಯಾಗಿದೆ. ನೂರು ಗ್ರಾಂ ತೂಕದ ಹತ್ತು ಚಿನ್ನದ ಬಿಸ್ಕೆಟ್ಸ್ ಪತ್ತೆಯಾಗಿವೆ. ಪತ್ತೆಯಾದ ಚಿನ್ನಕ್ಕೆ ಯಾವುದೇ ದಾಖಲೆಗಳು ಸಿಗದ ಹಿನ್ನಲೆ ಚಿನ್ನದ ಬಿಸ್ಕೆಟ್ ವಶಕ್ಕೆ ಅನ್ನು ಸಿಸಿಬಿ ವಶಕ್ಕೆ ಪಡೆದಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.