ಬಾಗಲಕೋಟೆ: ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪ್ರತಿಯೊಂದು ಕ್ರೀಡೆಗಳಲ್ಲಿ ಭಾಗವಹಿಸಿ. ಸೋಲಿಗೆ ಹೆದರದೆ ಮೊದಲು ಭಾಗವಹಿಸಿ ನಂತರ ನಿಮ್ಮ ಗೆಲುವು ಸುಗಮ. ಇದರಿಂದ ನಿಮ್ಮ ದೇಹ ಸದೃಢವಾಗುತ್ತದೆ ಮತ್ತು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲು ನಮಗೆ ಸಹಾಯ ಮಾಡುತ್ತದೆ. ಪಿಯುಸಿ ವರ್ಗದಲ್ಲಿ ಓದುತ್ತಿರುವ ಕುಮಾರಿ ಸ್ವಾತಿ ಮುಳವಾಡ ವಿದ್ಯಾರ್ಥಿಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಾಧನೆಗೈದ ವಿದ್ಯಾರ್ಥಿ ಇಂದಿನ ಮಕ್ಕಳಿಗೆ ಪ್ರೇರಣೆಯಾಗಿದ್ದಾಳೆ ಕ್ರೀಡೆಗಳಲ್ಲಿ ಭಾಗವಹಿಸಿ ಸೋಲೇ ಗೆಲುವಿನ ಸೋಪಾನ ಎಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಚೇರ್ಮಣ್ಣರಾದ ಸಿದ್ದಪ್ಪ ಮೇನಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಪಿಯುಸಿ ವಿದ್ಯಾರ್ಥಿ ಕುಮಾರಿ ಸ್ವಾತಿ ಮಲ್ಲಿಕಾರ್ಜುನ ಮುಳವಾಡ
ವಿದ್ಯಾರ್ಥಿಯು 2023 24ನೇ ಸಾಲಿನ ಪದವಿಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಜೋಡು ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಮತ್ತು ಹೈಜಂಪ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಕುಮಾರ ರೋಹನ ರಾಮು ಗಾಡಿವಡ್ಡರ ಉತ್ತಮ ಸಾಧನೆ ಮಾಡಿದ ನಮ್ಮ ಕಾಲೇಜಿನ ವಿದ್ಯಾರ್ಥಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಕಂಕಣವಾಡಿ ಆರ್. ಎಸ್. ಸಿಂಗನ್ ಶಂಕರ ಸಿಂಗನ ಪದವಿ ಪೂರ್ವ ಎಸ್ ಕೆ. ಕರಡಿ, ಎ. ಕೆ. ಕಾಡದೇವರ, ಎ. ಎಚ್. ಬಾಗೇನ್ನವರ, ಎಸ್. ಬಿ. ಹಟ್ಟಿ, ಬಿ. ಆರ್. ಬಾಗಲಕೋಟ, ಎಂ. ಎಸ್. ಉಮದಿ, ಆರ್. ಎಸ್. ಮಟ್ಟಿಕಲಿ, ಎಲ್. ಜಿ. ಹುಲಕುಂದ, ವಿ. ಎ. ಲಠೆ, ಎಸ್. ಹಾಡಕರ, ಎಲ್. ಪಿ. ಗಂಟೆನ್ನವರ, ಎಫ್. ಎನ್. ಕುಳ್ಳಿ, ಎಸ್. ಬಿ. ಬಸನ್ನವರ, ಎ.ಎಸ್. ಗುಟ್ಲಿ, ಡಿ. ಎನ್ ಸರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ