ಶಿವಮೊಗ್ಗ: ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಯಾವ ರೀತಿಯಲ್ಲಿ ಹೇಳಿದ್ದಾರೆಂದು ಅವರೇ ಉತ್ತರ ಕೊಡಬೇಕಾಗುತ್ತೆ. ನಮ್ಮಂಥವರು ಕೆಲವೊಮ್ಮೆ ಮಾತಾಡುವಾಗ ಹುಷಾರಾಗಿ ಇರಬೇಕು. ನಮ್ಮ ಸರ್ಕಾರ ಧರ್ಮಾತೀತವಾಗಿ ಒಳ್ಳೆ ಉದ್ದೇಶಕ್ಕೆ ಕೆಲಸ ಮಾಡ್ತಿದೆ ಎಂದರು.
Author: AIN Author
ಬೆಂಗಳೂರು: ಇವರೆಲ್ಲಾ ಬ್ಲೂಫಿಲಂ ತೋರಿಸಿ ಮೇಲೆ ಬಂದವರು ಎಂಬ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಾನು ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಮಾಡಿದರೇ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ನಗರದಲ್ಲಿ ಮಾತನಾಡಿದ ಡಿಕೆಶಿ, ದೊಡ್ಡ ಆಲಹಳ್ಳಿ ಸುತ್ತಮುತ್ತ ಯಾವನಾದರೂ ಒಬ್ಬ ನಾನು ಬ್ಲೂ ಫಿಲಂ ತೋರಿಸಿದ್ದೀನಿ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕುಮಾರಸ್ವಾಮಿ ಕನಕಪುರಕ್ಕೆ ಬರಲಿ, ಬ್ಲೂ ಫಿಲಂ ಬಗ್ಗೆ ಮಾತಾಡಲಿ. ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ವಿಧಾನಸಭೆ ಚುನಾವಣೆಯಲ್ಲಿ ಕನಕಪುರಕ್ಕೆ ಬಂದು ಕುಮಾರಸ್ವಾಮಿ ಪ್ರಚಾರ ಮಾಡಿಲ್ಲ. ಬಂದು ಬ್ಲೂ ಫಿಲಂ ಬಗ್ಗೆ ಹೇಳಬೇಕಿತ್ತು, ಆಗ ಗೊತ್ತಾಗೋದು ಎಂದು ಟಾಂಗ್ ಕೊಟ್ಟರು. ನನಗೆ ಯಾರ್ ಬ್ರೇಕ್ ಹಾಕ್ತಾರೆ ರೀ, ಪ್ರಕೃತಿ ನಿಯಮ ಇದೆ. ನನಗೆ ಯಾರು ಬ್ರೇಕ್ ಗೀಕ್ ಹಾಕಲ್ಲ. ಕೆಲವರು ಲಿಮಿಟೇಶನ್ ದಾಟುತ್ತಾರೆ ಅಷ್ಟೇ. ಕುಮಾರಸ್ವಾಮಿ ಜೊತೆ ಗುದ್ದಾಟಕ್ಕೆ ನನಗೆ ಟೈಂ ಇಲ್ಲ. ಅಯ್ಯೋ ಪಾಪ ಅವರಿಗೆ ಪ್ರಾಬ್ಲಂ ಇದೆ.…
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮತ್ತೆ ಪೋಸ್ಟರ್ ವಾರ್ ಶುರುವಾಗಿದೆ. ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಕೆರಳಿದ ದುಷ್ಕರ್ಮಿಗಳು, ಸಿನಿಮಾ ಮಾದರಿಯ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಪೋಸ್ಟರ್ ಅಂಟಿಸಿದ್ದಾರೆ. ಕರೆಂಟ್ ಕಳ್ಳ ಖ್ಯಾತಿಯ ಹೆಚ್ಡಿಕೆ ನಿರ್ಮಾಣದ ಚಿತ್ರ “ಪೆನ್ ಡ್ರೈವ್ ಬ್ರದರ್” ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ, ಬರೀ ಟೀಸರ್ ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ ಸಿನಿಮಾ ಇನ್ನೂ ಬಾಕಿಯಿದೆ. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ. ಚಿತ್ರದ ನಿರ್ಮಾಣದ ವೆಚ್ಚ 68,000 ಎಂದು ಪೋಸ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ನನ್ನ ಮೊದಲ ಆದ್ಯತೆ ‘ಮಂಡ್ಯ ಜಿಲ್ಲೆಯಿಂದಲೇ ಪಕ್ಷ ಸಂಘಟನೆ’. ನನ್ನನ್ನು ಈ ಭಾಗದಿಂದ ಹೆಚ್ಚು ನಾಡಿಗೆ ಪರಿಚಯಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಶಾಸಕರನ್ನು ಗೆಲ್ಲಿಸಲು ಶ್ರಮ ಹಾಕುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ನಾರಾಯಣಗೌಡರು ನಮ್ಮ ಜೊತೆಯಲ್ಲೇ ಇದ್ದಾರೆ. ಎಲ್ಲೂ ಹೋಗಿಲ್ಲ. ನಾನು ಅಧ್ಯಕ್ಷರಾದ ನಂತರ ಬಂದು ಆಶೀರ್ವಾದ ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ಉಪ ಚುನಾವಣೆ ನಂತರ ಜನರತ್ತ ಹೋಗುವಲ್ಲಿ ವಿಫಲರಾಗಿದ್ದೇವೆ. ಹೀಗಾಗಿ, ನಮ್ಮ ಕ್ಷೇತ್ರಗಳನ್ನ ಕಳೆದುಕೊಂಡಿದ್ದೇವೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಶಾಸಕರನ್ನ ಗೆಲ್ಲಿಸಬೇಕು. ಆ ಮೂಲಕ ಪಕ್ಷಕ್ಕೆ ಭದ್ರ ಬುನಾದಿ ಹಾಕಲು ಸಂಕಲ್ಪ ಮಾಡಲಾಗುವುದು ಎಂದು ಹೇಳಿದರು. ನಿಮ್ಮ ದರ್ಪಕ್ಕೆ ತಕ್ಕ ಉತ್ತರ ಕೊಡ್ತೀವಿ ಕಲಬುರ್ಗಿಯಲ್ಲಿ ಮಣಿಕಂಠ್ ರಾಠೋಡ್ ಕ್ಷೇತ್ರದ ಶಾಸಕರ ವಿರುದ್ಧ ಲೋಕಾಯುಕ್ತಗೆ ದೂರು ಕೊಟ್ಟಿದ್ದಾರೆ. ಅವರಿಗೆ ಕೊಟ್ಟಿದ್ದ ಗನ್ ಮ್ಯಾನ್ ಹಿಂಪಡೆದಿದ್ದಾರೆ. ನಿಮ್ಮ ಅಧಿಕಾರದ ದರ್ಪಕ್ಕೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಸಚಿವ ಬಿ.ಝಡ್.…
ಬೆಂಗಳೂರು: ನಿಮ್ಮಬಳಿ ಅಡಮಾನ ಇಡಲು ಆಸ್ತಿ ಇದೆಯ.ಅಷ್ಟು ಸಾಕು ಸಾಲ ನಾವು ಕೊಡ್ತಿವಿ ಅಂತ ಲಕ್ಷ ಲಕ್ಷ ಸಾಲ ಕೊಡುವ ಬ್ಯಾಂಕ್ ಇರುತ್ವೆ.ಆದರೆ ಒಂದು ಕೈಲಿ ಸಾಲ ಕೊಟ್ಟು ಮತ್ತೊಂದು ಕೈಲಿ ಹಣ ದೋಚುವ ಬ್ಯಾಂಕ್ ಗಳು ಕೂಡ ಇವೆ.ಇಂತಹ ಬ್ಯಾಂಕ್ ನಿಂದ ಲಕ್ಷಾನುಗಟ್ಟಲೆ ಸಾಲ ಪಡೆದು ಕ್ಷಣದಲ್ಲೆ ಆ ಹಣವನ್ನ ಅದೇ ಬ್ಯಾಂಕ್‌ನವರು ಕಬಳಿಸ್ತಾರೆ.ಅಷ್ಟಕ್ಕೂ ಯಾವುದು ಆ ಖತರ್್ನಾಕ್ ಬ್ಯಾಂಕ್, ಇವರು ಮಾಡಿದ್ದೇನು ಅಂತ ತಿಳಿಬೇಕ ಈ ಸ್ಟೋರಿ ನೋಡಿ. ಇವರ ಹೆಸರು ಅಕ್ರಮ್ ಬೆಂಗಳೂರಿನ ಕದಿರೇನಹಳ್ಳಿ ನಿವಾಸಿ.ಅವಶ್ಯಕತೆಗಾಗಿ ತನ್ನ ಜಮೀನನ್ನು ಅಡವಿಟ್ಟು ಹತ್ತು ಲಕ್ಷ ಸಾಲ ಪಡೆಯಲು ಮುಂದಾಗಿದ್ದಾರೆ.ಅದರಂತೆ ಇವರಿಗೆ ಬ್ಯಾಂಕ್್ನಲ್ಲಿ ಹತ್ತು ಲಕ್ಷ ಸಾಲವು ದೊರೆತು,ಇವರ ಖಾತೆಗೆ ಜಮಾ ಆಗಿದೆ.ಆದರೆ ಜಮಾ ಆದ ಕೆಲವೆ ನಿಮಿಷಗಳಲ್ಲಿ ಹತ್ತು ಲಕ್ಷಗಳಲ್ಲಿ ಆರು ಲಕ್ಷದ ಐವತ್ತು ಸಾವಿರ ಹಣ ಶ್ರೀಧರ್ ಎನ್ನುವವರ ಖಾತೆಗೆ ವರ್ಗಾವಣೆ ಆಗಿದೆ.ಇದರಿಂದ ಆತಂಕಕ್ಜೆ ಒಳಗಾದ ಅಕ್ರಮ್ ಮರುದಿನವೆ ಬ್ಯಾಂಕ್ ಗೆ ತೆರಳಿ ವಿಚಾರಿಸಿದಿದ್ದಾರೆ. ಬ್ಯಾಂಕ್ ಸಿಬ್ಬಂದಿ…
ಬೆಂಗಳೂರು: ಬೆಸ್ಕಾಂ ನಿರ್ಲಕ್ಷದ ಪರಿಣಾಮ ತಾಯಿ ಮತ್ತು ಪುಟ್ಟ ಕಂದಮ್ಮ ಎಲೆಕ್ಟ್ರಿಕ್ ವೈರ್ ಗೆ ಸಿಲುಕಿ, ಸಾರ್ವಜನಿಕರ ಮುಂದೆ ಉರಿದು ಬಿದ್ದ ಅಮಾನುಷ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಈ ಸರಕಾರದ ಮುಖ್ಯಸ್ಥರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಇಂಧನ ಸಚಿವ ಜಾರ್ಜ್ ಅವರೇ ಈ ಸಾವಿಗೆ ಕಾರಣ. ಆದ್ದರಿಂದ ಅವರ ಮೇಲೆ ಎಫ.ಐ.ಆರ್ ಹಾಕಬೇಕು ಎಂದು ವಿಧಾನಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ಹಿರಿಯ ನಾಯಕ ಟಿ. ಎ.ಶರವಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾರೋ ಮಾಡಿದ ಸಣ್ಣ ತಪ್ಪಿಗೆ, ಕುಮಾರಸ್ವಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡಿ ವಿದ್ಯುತ್ ಕಳ್ಳತನದ ಆರೋಪ ಹಾಕಿ ದಂಡ ಕಟ್ಟಿಸಿಕೊಂಡ ಈ ಸರಕಾರ, ಹಾಡು ಹಗಲೇ ತಾಯಿ ಮತ್ತು ಪುಟ್ಟ ಕಂದಮ್ಮಗಳ ಸಾವಿಗೆ ಕಾರಣವಾಗಿದೆ. ಇದು ಅಕ್ಷಮ್ಯ ನಿರ್ಲಕ್ಷ. ಸರಕಾರವೇ ಮಾಡಿದ ಕೃತ್ಯ ಆಗಿದೆ. ಆದ್ದರಿಂದ ಸರಕಾರದ ಮುಖ್ಯಸ್ಥರು, ಮತ್ತು ಇಂಧನ ಸಚಿವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು…
ರಾಮನಗರ: ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಂಟಿಸಿಕೊಳ್ಳಲಿ ಯಾರು ಬೇಡ ಅಂತಾರೆ, ಏನೂ ಮಾಡಲು ಆಗಲ್ಲ. ನನಗೆ ಯಾರು ಏನೂ ಮಾಡೋಕಾಗಲ್ಲ. ಸರ್ಕಾರದ ತಪ್ಪುಗಳನ್ನ ಏಕಾಂಗಿಯಾಗಿ ಪ್ರಶ್ನೆ ಮಾಡುವುದು ಕುಮಾರಸ್ವಾಮಿ ಒಬ್ಬನೆ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ನಾನು ಇಲ್ಲಿವರೆಗೂ ಏನು ಹೇಳಿದ್ದೇನೆ ಸರ್ಕಾರ ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ಇನ್ನೂ ಬರದ ವಿಚಾರವಾಗಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ರೈತರಿಗೆ ಯಾವುದೇ ಪರಿಹಾರ ಹಣವನ್ನು ಇನ್ನೂ ಕೊಟ್ಟಿಲ್ಲ. ರಾಜ್ಯದಲ್ಲಿ ಈ ವರ್ಷದಲ್ಲಿ 33,700 ಕೋಟಿ ರೂ. ಬೆಳೆ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಮಂಡ್ಯ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಇಂದು ಮಳವಳ್ಳಿ ತಾಲ್ಲೂಕಿನ ಹಲಗೂರು ಹಾಗೂ ಕ್ಯಾತನಹಳ್ಳಿ ಗ್ರಾಮದಲ್ಲಿ ಬರ ಪರಿಸ್ಥಿತಿಯಿಂದ ರಾಗಿ ಹಾಗೂ ಮುಸುಕಿನ ಜೋಳ ಬೆಳೆ ಹನಿ ಉಂಟಾಗಿರುವ ಸ್ಥಳ ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿ, ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯದ 224 ತಾಲ್ಲೂಕು ಕೂಡ ಬರ ಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿದೆ. ಈಗಾಗಲೇ ಕೇಂದ್ರ ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದೆ ಎಂದರು. ಇಂದಿನ ವರದಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಕೇಂದ್ರ ಸರ್ಕಾರದ ಹಣ ಬಿಡುಗಡೆ ಮಾಡುವುದು ತಡವಾದರೆ, ರಾಜ್ಯ ಸರ್ಕಾರವೇ ರೈತರ ನೆರವಿಗೆ ನಿಲ್ಲಲಿದೆ ಎಂದರು. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 18 ಸಾವಿರ ಕೋಟಿ ಅನುದಾನ ಕೇಳಿದ್ದೇವೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಹಂತ ಹಂತವಾಗಿ ಪರಿಹಾರ ವಿತರಿಸುತ್ತೇವೆ ಎಂದರು. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತದೆ. ಕೇಂದ್ರ ತಂಡ…
ಬೆಂಗಳೂರು: ಟಿವಿಯ ಪ್ರಸಾರವಾದ ದಿನವನ್ನು ಸಂಭ್ರಮಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 21ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ. ಟಿವಿ ಎಂದು ಮನೆಮನೆಯ ಈ ಸ್ನೇಹಿತನನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಪ್ರತಿವರ್ಷ ಪ್ರಪಂಚದಾದ್ಯಂತ ವಿಶ್ವ ದೂರದರ್ಶನ ದಿನ ಅಥವಾ ವರ್ಲ್ಡ್ ಟೆಲಿವಿಷನ್ ಡೇ ಆಚರಿಸಲಾಗುತ್ತದೆ. ಹಾಗಾದರೆ ಈ ದಿನದ ಆಚರಣೆಯ ಹಿಂದಿನ ಉದ್ದೇಶವೇನು ತಿಳಿಯಿರಿ. ಟಿವಿ ಮನೆಗಳಿಗೆ ಲಗ್ಗೆಯಿಟ್ಟಾಗ ಡೂಮ್ ಟಿವಿಗಳವು ಇದವು ನಂತರ ಕಾಲ ಕಳೆದಂತೆ ಎಲ್‌ಇಡಿ, ಎಲ್‌ಸಿಡಿ ಸ್ಮಾರ್ಟ್ ಟಿವಿಗಳ ಹವಾ ಶುರುವಾತ್ತು. ಡೂಮ್ ಟಿವಿಗೆ ಡಿಶ್, ಆಂಟೆನಾ ಅಳವಡಿಸಿ ಟಿವಿ ನೋಡುತ್ತಿದ್ದ ದಿನಗಳೇ ಬಲು ಸುಂದರ. ಟಿವಿ ಎಂಬ ಎಲೆಕ್ಟ್ರಾನಿಕ್ ಪರಿಕರವು ಎಲ್ಲ ವಯೋಮಾನದವರಿಗೂ ಮಾಹಿತಿ, ಮನೋರಂಜನೆ ಎಲ್ಲವನ್ನೂ ನೀಡುತ್ತದೆ. ಪುಟಾಣಿ ಮಕ್ಕಳಿಗೆ ಕಾರ್ಟೂನ್‌ಗಳು ಮನರಂಜಿಸುವ ಜೊತೆಗೆ ವಿವಿಧ ಕಾರ್ಯಕ್ರಮಗಳು, ನ್ಯೂಸ್, ಧಾರಾವಾಹಿಗಳು, ಸಿನಿಮಾಗಳು ಹೀಗೆ ಮಕ್ಕಳಿಂದ ವಯಸ್ಸಾದವರೆಗೂ ಟಿವಿ ಎಲ್ಲರ ಆಕರ್ಷಣೀಯ ಕೇಂದ್ರಬಿಂದುವಾಗಿರುತ್ತದೆ.ದೂರದರ್ಶನವು ಪ್ರಾರಂಭದ ದಿನಗಳಿಂದಲೂ ಸಾಕಷ್ಟು ಅಭಿವೃದ್ಧಿಗೆ ಹೆಸರಾಗಿದೆ. ಪ್ರಸ್ತುತ ಯುಗದಲ್ಲಿ ಇದು ಇನ್ನಷ್ಟು ಬದಲಾವಣೆ ಕಂಡಿದೆ. ‘…
ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಈ ರಾಜ್ಯದ ಜವಾಬ್ದಾರಿ ಹಾಗೂ ಜನರ ಸಮಸ್ಯೆ ಮುಖ್ಯ ಅಲ್ಲ. ಕುಮಾರಸ್ವಾಮಿ ಯಾವತ್ತು ಜನರ ಸಮಸ್ಯೆ ಬಗ್ಗೆ ಮಾತಾಡಿಲ್ಲ. ಎರಡು ಮೂರು ತಿಂಗಳಿನಿಂದ ಹಿಡಿತ ಇಲ್ಲದೇ ಮಾತಾಡುತ್ತಿದ್ದಾರೆ. ಅವರ ರೀತಿ ಮಾತನಾಡುವುದು ಸರಿ ಅಂದರೇ ನಾನು ಅವರಪ್ಪನ ರೀತಿ ಮಾತಾಡುತ್ತೇನೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಅವರಿಗೆ ಯಾವ ಸಚಿವರು ಕರೆ ಮಾಡಿದ್ದಾರೆ ಅಂತ ದಾಖಲೆ ಬಿಡುಗಡೆ ಮಾಡಲಿ. ಅವರ ಬಳಿ ಇರುವ ಪೆನ್ ಡ್ರೈವ್ ಬಿಡುಗಡೆ ಮಾಡಲು. ಆದರೆ ಈಗ ಮಂತ್ರಿಗಳು ಕರೆ ಮಾಡಿ ಬಿಡುಗಡೆ ಮಾಡಬೇಡಿ ಅಂತಾ ಹೇಳಿದ್ದಾರೆ ಅಂತಾರೆ. ಅದ್ಯಾವ ಮಂತ್ರಿ ಅಂತಾ ಹೇಳಲಿ. ಅವರ ಹತ್ತಿರ ಇರುವುದು ಪೆನ್ ಡ್ರೈವ್ ಅಲ್ಲ ಪೆನ್ಸಿಲ್ ಡ್ರೈವ್, ಇರೋದು ಅಳಿಸಿ ಹೋಗಿದೆ ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದರು.