ಬೆಂಗಳೂರು: ಮೆಟ್ರೋದಲ್ಲಿ ಸಿಕ್ಕ ಚಿನ್ನದ ಉಂಗುರವನ್ನ ವಾಪಸ್ ಒಪ್ಪಿಸಿದ ಹೋಮ್ ಗಾರ್ಡ್ಸ್.ಈ ಹೋಮ್ ಗಾರ್ಡ್ಸ್ ಪ್ರಾಮಾಣಿಕ ನಡೆಗೆ ಭಾರಿ ಮೆಚ್ಚುಗೆ ಎಲ್ಲೆಡೆ ವ್ಯಕ್ತವಾಗಿದೆ.
ಸೋಮವಾರ ಮೆಟ್ರೋ ಪ್ರಯಾಣದ ವೇಳೆ 30,000 ಅಧಿಕ ಮೌಲ್ಯದ ಚಿನ್ನದ ಉಂಗುರು ಸಿಕ್ಕಿತ್ತು ಈ ಚಿನ್ನದ ಉಂಗುರವನ್ನು ಬ್ಯಾಂಕ್ ಉದ್ಯೋಗಿ ದಿವ್ಯ ಎಂಬುವರು ಕಳೆದುಕೊಂಡಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸಕೋಟೆ ಶಾಖೆಯಲ್ಲಿ ಕೆಲಸ ಮಾಡ್ತಿದ್ದ ದಿವ್ಯ
Bigg News: ಶಬರಿಮಲೆ ತೆರಳುವವರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ KSRTC ಬಸ್ ವ್ಯವಸ್ಥೆ!
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದು ಅಲ್ಲಿಂದ ತಮ್ಮ ಕಚೇರಿಗೆ ಬಸ್ನಲ್ಲಿ ಹೋಗಿದ್ದಾರೆ ಈ ವೇಳೆ ಚಿನ್ನದ ಉಂಗುರ ಕಳೆದುಕೊಂಡಿದ್ದ ದಿವ್ಯಾ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಿಂದ ಹೊರಡುವಾಗ ಉಂಗುರ ಮಿಸ್ ಆಗಿರೋದು ಗೊತ್ತಾಗಿದೆ ಕೂಡಲೇ ಕಂಟ್ರೋಲರ್ ರೂಂಗೆ ಮಾಹಿತಿ ಕೊಟ್ಟಿದ್ದ ದಿವ್ಯಾ ಬಟ್ ಚಿನ್ನದ ಉಂಗುರ ಸಿಕ್ಕಿದ ತಕ್ಷಣ ಅದನ್ನ ಸಹಾಯಕ ಸುರಕ್ಷತಾ ಅಧಿಕಾರಿಗೆ ಒಪ್ಪಿಸಿದ್ದ ಹೋಮ್ ಗಾರ್ಡ್ಸ್
ಸೋಮವಾರ ಸಂಜೆ 6.45ರ ಸುಮಾರಿಗೆ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದ 2ನೇ ಪ್ಲಾಟ್ಫಾರ್ಮ್ನಲ್ಲಿ ರೈಲು ನಿಂತಾಗ ರೈಲಿನ ಲೇಡಿಸ್ ಕೋಚ್ ಬಳಿ ಉಂಗುರ ಬಿದ್ದಿತ್ತು ಆ ಉಂಗುರವನ್ನು ಗಮನಿಸಿದ ಹೋಂಗಾರ್ಡ್ಗಳಾದ ಶಿಲ್ಪಾ ಜಿ ಆರ್ ಮತ್ತು ಈಶ್ವರಮ್ಮ ಅವರು ಬಿಎಂಆರ್ಸಿಎಲ್ ಸಹಾಯಕ ಸುರಕ್ಷತಾ ಅಧಿಕಾರಿ ಕೆಎನ್ ರಾಜಣ್ಣ ಅವರಿಗೆ ಅದನ್ನು ಹಸ್ತಾಂತರಿಸಿದ್ರು
ಇದೀಗ ಆ ಉಂಗುರವನ್ನ ದಿವ್ಯಾರಿಗೆ ಹಸ್ತಾಂತರ ಮಾಡಲಾಗಿದ್ದು ಹೋಮ್ ಗಾರ್ಡ್ಸ್ ಪ್ರಮಾಣಿಕತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ