Author: AIN Author

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮುಖ್ಯ ದತ್ತಿ ಪ್ರಶಸ್ತಿಯಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮಾಜಿ ಪ್ರಧಾನಿಗಳ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಹಾಗೂ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಯನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದೇನೆ. ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಅನಾರೋಗ್ಯದ ಕಾರಣಕ್ಕೆ ವೈದ್ಯರ ಸಲಹೆಯ ಮೇರೆಗೆ ನಾನು ಆ ಕಾರ್ಯಕ್ರಮಕ್ಕೆ ಹಾಜರಾಗುವುದು ಕಷ್ಟ ಸಾಧ್ಯವಿತ್ತು. ಹೀಗಾಗಿ, ನನ್ನ ಮನೆಗೇ ಬಂದು ಪ್ರಶಸ್ತಿ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.

Read More

ನವದೆಹಲಿ: ಮಿಜೋರಾಂ ಮತ್ತು ಛತ್ತೀಸ್‌ʼಗಢ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ ಶುರುವಾಗಿದೆ. ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 20 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 17 ರಂದು ಉಳಿದ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಿಜೋರಾಂ‌ನಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನಕ್ಕೆ ಎಲ್ಲ ತಯಾರಿ ಮಾಡಿಕೊಂಡಿದೆ. ರಾಜ್ಯದ 1,276 ಮತದಾನ ಕೇಂದ್ರಗಳಲ್ಲಿ 149 ದೂರದ ಮತಗಟ್ಟೆಗಳಾಗಿವೆ. ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಗಡಿಗಳಲ್ಲಿ ಸುಮಾರು 30 ಮತಗಟ್ಟೆಗಳನ್ನು ನಿರ್ಣಾಯಕ ಮತ್ತು ದುರ್ಬಲ ಎಂದು ಘೋಷಿಸಲಾಗಿದೆ. ರಾಜ್ಯದಾದ್ಯಂತ ಮತ್ತು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಅಂತರರಾಷ್ಟ್ರೀಯ ಗಡಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಿಜೋರಾಂ ಮ್ಯಾನ್ಮಾರ್‌ನೊಂದಿಗೆ 510 ಕಿಮೀ ಸರಂಧ್ರ ಗಡಿಯನ್ನು ಮತ್ತು ಬಾಂಗ್ಲಾದೇಶದೊಂದಿಗೆ 318 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಛತ್ತೀಸ್‌ಗಢ ಮೊದಲ ಹಂತದ ಮತದಾನದಲ್ಲಿ ಬಸ್ತಾರ್ ವಿಭಾಗದ 12 ಸೇರಿದಂತೆ 20 ಕ್ಷೇತ್ರಗಳು ಸೇರಿವೆ. ಈ 20 ಕ್ಷೇತ್ರಗಳು ನಕ್ಸಲ್ ಪೀಡಿತ ಬಸ್ತಾರ್ ವಿಭಾಗದಲ್ಲಿ ಏಳು…

Read More

ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಪರ ಸಚಿವ ಸಂತೋಷ್ ಲಾಡ್​ ಬ್ಯಾಟ್​ ಬೀಸಿದ್ದಾರೆ. ​​​ಸಂತೋಷ್ ಲಾಡ್ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದು, ಶಾಸಕ ಕೋನರೆಡ್ಡಿ ಜೊತೆ ಚರ್ಚೆ ವೇಳೆ ನಾನು ಜಿ ಪರಮೇಶ್ವರ ಕಡೆಯವರು ಎಂದಿದ್ದಾರೆ. ನೀವು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾವು ಹೋಮ್ ಮಿನಿಸ್ಟರ್​ ಕಡೆಯವರು ಎಂದು ಎರಡು ಬಾರಿ ಉಚ್ಛರಿಸಿದರು. ಇದೇ ವೇಳೆ ನಾನು ಸಿಎಂ ಶಾಸಕ ಎಂದು ಕೋನರೆಡ್ಡಿ ಕಿಚಾಯಿಸಿದರು. ನೀವು ಯಾವ ಸಿಎಂ ಎಂದು ಸಚಿವ ಸಂತೋಷ್ ಲಾಡ್ ಕಾಲೆಳೆದರು. ಹೋಮ್ ಮಿನಿಸ್ಟರ್​​ ಇದ್ದಲ್ಲೇ ಸಿಎಂ ಎಂದು ಸಂತೋಷ್​ ಲಾಡ್​ ಹೇಳಿರುವ ವಿಡಿಯೋ  ವೈರಲ್​ ಆಗಿದೆ.

Read More

ಕಲಬುರಗಿ: ಆರೋಪಿ RD ಪಾಟೀಲ್ ತಪ್ಪಿಸಿಕೊಂಡು ಹೋಗಲು ಕಾಂಗ್ರೆಸ್ ಸರ್ಕಾರದ ಮಂತ್ರಿಗಳು & ಶಾಸಕರ ಸಹಕಾರವಿದೆ ಅಂತ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ವಿಜಯೇಂದ್ರ ಈ ಹಿಂದೆ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಗೂಬೆ ಕೂರಿಸಿತ್ತು. ಇದೀಗ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಬಗ್ಗೆ ಖಚಿತ ಮಾಹಿತಿ ಇದ್ರೂ ಯಾಕೆ ಬಂಧನ ಮಾಡ್ತಿಲ್ಲ..ಎಲ್ಲಾ ಬೆಳವಣಿಗೆ ನೋಡಿದರೆ RD ಪಾಟೀಲ್ ಗೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡ್ತಿದೆ ಅಂತ ಹೇಳಿದ್ರು..

Read More

ಇನ್ನೇನು ಬಿಡುಗಡೆಗೆ ಕೆಲವೇ ದಿನಗಳಿರುವಂತೆಯೇ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ‘ಮೆಲ್ಲಗೆ’ ಎಂಬ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಲಾಗಿದೆ. ರಾಜ್‍ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ಅವರು ತಮ್ಮ ಆಪಲ್‍ ಬಾಕ್ಸ್ ಸ್ಟುಡಿಯೋಸ್‍ ಮೂಲಕ ಇದೇ ಮೊದಲ ಬಾರಿಗೆ ನಿರ್ಮಿಸಿದ್ದಾರೆ. ಲೈಟರ್‍ ಬುದ್ಧ ಫಿಲಂಸ್‍ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರವನ್ನು ನವೆಂಬರ್‍ 24ರಂದು ಕೆ.ಆರ್.ಜಿ. ಸ್ಟುಡಿಯೋಸ್‍ ಸಂಸ್ಥೆಯು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ‘ಮೆಲ್ಲಗೆ’ ಹಾಡಿಗೆ ಮಿಥುನ್‍ ಮುಕುಂದನ್‍ ಸಂಗೀತ ಸಂಯೋಜಿಸಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಇನ್ನು, ಮಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಪೃಥ್ವಿ ಈ ಹಾಡನ್ನು ಬರೆದಿದ್ದಾರೆ. ಈ ಕುರಿತು ಮತನಾಡುವ ನಿರ್ದೇಶಕ ರಾಜ್‍ ಶೆಟ್ಟಿ, ‘ಇದು ಪ್ರೀತಿಯ ಕುರಿತ ಒಂದು ಮಹಿಳೆಯ ದೃಷ್ಟಿಕೋನದ ಹಾಡು’. ಈ ಪ್ರೀತಿಯನ್ನು ಮಹಿಳೆಯರು ಹೇಗೆ ಅನುಭವಿಸುತ್ತಾರೆ ಎನ್ನುವುದು ಬೇಕಾಗಿತ್ತು. ಹಾಗಾಗಿ, ಪೃಥ್ವಿ ಅವರಿಂದಲೇ ಬರೆಸಿದೆ’ ಎನ್ನುತ್ತಾರೆ ರಾಜ್‍. ಈ…

Read More

ಹುಬ್ಬಳ್ಳಿ: ಪಾಲಿಕೆ ಆಯುಕ್ತರ ವರ್ಗಾವಣೆ ಬೇಡ ಎಂದು ಹುಬ್ಬಳ್ಳಿಯಲ್ಲಿ ಹೋರಾಟಗಾರ ರಾಜು ಸಾ ನಾಯಕವಾಡಿ ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡ  ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿಅವರನ್ನು ನಿಯುಕ್ತಿಗೊಳಿಸುವಂತೆ ವಾರ್ಡ್ ನಂಬರ್ 53ರ ಪಾಲಿಕೆ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಸರಿಯಲ್ಲ, ಈಶ್ವರ ಉಳ್ಳಾಗಡ್ಡಿ ಅವರು ಇತ್ತೀಚಿಗೆ ಬಂದವರು ಉತ್ತಮ ಕೆಲಸ ಮಾಡುತಿದ್ದಾರೆ. ಪಾಲಿಕೆಗೆ ಈಶ್ವರ ಉಳ್ಳಾಗಡ್ಡಿ ಅವರು ವರ್ಗಾವಣೆ ಆಗಿ ಬಂದ ನಂತರ ಸಾಕಷ್ಟು ಕೆಲಸ ಮಾಡುತಿದ್ದಾರೆ. ಯಾರೂ ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಒಳ್ಳೆಯ ಅಧಿಕಾರಿಗಳನ್ನ ವರ್ಗಾವಣೆ ಮಾಡುವುದು ಸರಿಯಲ್ಲ, ಅನಗತ್ಯವಾಗಿ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ, ಒಂದು ವೇಳೆ ಸರಕಾರ ಅಥವಾ ಹಿರಿಯ ಅಧಿಕಾರಿಗಳು ವರ್ಗಾವಣೆಗೆ ಮುಂದಾದರೆ ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Read More

ಅಕ್ಷರ ಕಲಿಸಿದ ಶಾಲಾ ಕಾಲೇಜುಗಳ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳೋ ಅವಕಾಶ ಸಿಗುವುದು ಯಾರ ಪಾಲಿಗೇ ಆದರೂ ರೋಮಾಂಚಕ ಅನುಭೂತಿ. ಅದು ಎಷ್ಟೋ ಜನರ ಕನಸೂ ಹೌದು. ಓದು ಮುಗಿಸಿ ಒಂದಷ್ಟು ವರ್ಷಗಳಾದ ನಂತರ, ಅದೇ ಕಾಲೇಜಿನ ಸಮಾರಂಭಕ್ಕೆ ಆಹ್ವಾನ ಬರುವ ಸೌಭಾಗ್ಯ ಕೆಲವೇ ಕೆಲ ಮಂದಿಗೆ ಮಾತ್ರ ಸಿಗಲು ಸಾಧ್ಯ. ಸದ್ಯ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವ ಅರ್ಚನಾ ಕೊಟ್ಟಿಗೆಗೆ ಅಂಥಾದ್ದೊಂದು ಅವಕಾಶ ತಾನೇ ತಾನಾಗಿ ಒಲಿದು ಬಂದಿದೆ. ಅದರ ಭಾಗವಾಗಿಯೇ, ತಾನು ಡಿಗ್ರಿ ವ್ಯಾಸಂಗ ನಡೆಸಿದ್ದ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಸಿಯ ಭಾಗವಾಗಿರುವ ಕ್ರೈಸ್ಟ್ ಶಾಲೆಯಲ್ಲಿ ನಡೆದ ಅರ್ಥಪೂರ್ಣವಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅರ್ಚನಾ ಕೊಟ್ಟಿಗೆ ಮುಖ್ಯ ಅತಿಥಿಯಾಗಿ ಭಾಗಿಯಾದ ಸಾರ್ಥಕ ಕ್ಷಣಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ತಿಂಗಳ ಮೂರನೇ ತಾರೀಕಿನಂದು ಬೆಂಗಳೂರಿನ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಟಿಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿದೆ. ಅದರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅರ್ಚನಾ ಪಾಲಿಗೆ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ, ಕನ್ನಡದ ಹಬ್ಬದಲ್ಲಿ ಭಾಗಿಯಾದ…

Read More

ಬೆಂಗಳೂರು: ನಗರದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಗುಡುಗು ಗಾಳಿ ಸಹಿತ ಮೂರು ದಿನಗಳ ಕಾಲ ಭಾರಿ ಮಳೆಯಾಗುತ್ತದೆ ಎಂದು ಹೇಳಿದೆ.  ತಗ್ಗುಪ್ರದೇಶದಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ. ನಿನ್ನೆ  ಸಂಜೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಅಂಡರ್​ಪಾಸ್​ಗಳಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಭಾರಿ ಮಳೆಯಾಗುತ್ತಿದ್ದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್​ ಬಿಬಿಎಂಪಿಯ ವಾರ್ ರೂಂಗೆ ಧಿಡೀರನೆ ಭೇಟಿ ನೀಡಿದ್ದರು ಹಾಗೆ ನಿನ್ನೆ  ಸಂಜೆ ಸುರಿದ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ಧಾರಾಕಾರ ಮಳೆಯಿಂದ ನಗರದಲ್ಲಿ ನಾಲ್ಕು ಮರಗಳು ಧರೆಗೆ ಉರುಳಿವೆ. ಬೆಂಗಳೂರು ಪೂರ್ವ ವಲಯ-1, ಮಹದೇವಪುರ ವಲಯ-1, ಬೆಂಗಳೂರು ದಕ್ಷಿಣ ವಲಯದಲ್ಲಿ  2 ಮರಗಳು ಧರೆಗುರುಳಿವೆ. ಏಳು ವಲಯಗಳ ಪೈಕಿ 18…

Read More

ಬೆಂಗಳೂರು: ಲಿವಿಂಗ್ ಇನ್ ಟುಗೆದರ್​ನಲ್ಲಿದ್ದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸೌಮಿನಿ ದಾಸ್ (20) ಹಾಗೂ ಕೇರಳದ ಅಭಿಲ್ ಅಬ್ರಹಾಂ (29) ಎಂದು ಮೃತರನ್ನು ಗುರುತಿಸಲಾಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಇಬ್ಬರೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ. ಸೌಮಿನಿ ದಾಸ್​ಗೆ ಮದುವೆಯಾಗಿದ್ದು, ಗಂಡನಿಂದ ದೂರವಾಗಿದ್ದರು.ಈ ವೇಳೆ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಈ ವೇಳೆ, ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಆಕೆಗೆ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ ಅಭಿಲ್ ಅಬ್ರಹಾಂನ ಪರಿಚಯವಾಗಿದೆ. ಅನಂತರ ಇಬ್ಬರು ಒಟ್ಟಿಗೆ ಜೀವನ ನಡೆಸಲು ತೀರ್ಮಾನಿಸಿ, ದೊಡ್ಡಗುಬ್ಬಿಯ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಭಾನುವಾರ ಸೌಮಿನಿ ದಾಸ್‌ಗೆ ತನ್ನ ಗಂಡನಿಂದ ಫೋನ್ ಬಂದಿದೆ. ಫೋನ್‌ನಲ್ಲೇ ಸೌಮಿನಿ ಹಾಗೂ ಗಂಡನ ನಡುವೆ ಜಗಳ ಆಗಿದ್ದು, ಕಿರುಚಾಟ, ಕೂಗಾಟ ನಡೆಸಿದ್ದಾರೆ.

Read More

ಬಳ್ಳಾರಿ: ಕಾಂಗ್ರೆಸ್​ ಪಕ್ಷದಲ್ಲಿ ಇರುವವರೆಲ್ಲ ಮುಖ್ಯಮಂತ್ರಿ ಆಗುವವರೇ? ನಾನು ಸಿಎಂ, ನಾನು ಸಿಎಂ ಎಂದು 224 ಜನರೂ ಹೇಳುತ್ತಿದ್ದಾರೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಡದ ಪ್ರಿಯಾಂಕ್ ಸಿಎಂ ಅಂತಿದ್ದಾರೆ. ಇನ್ನು ಪ್ರಿಯಾಂಕ್​ ಖರ್ಗೆ ತಂದೆ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. https://ainlivenews.com/supreme-ray-healing-centre-reiki-treatment/ ಮಲ್ಲಿಕಾರ್ಜುನ ಖರ್ಗೆಯನ್ನೇ ಸಿಎಂ ಆಗಲು ಬಿಟ್ಟಿಲ್ಲ, ಇವರನ್ನು ಬಿಡ್ತಾರಾ? ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ರೇಸ್​ನಲ್ಲಿದ್ದಾರೆ ಅಂತಾರೆ. ಡಾ.ಜಿ.ಪರಮೇಶ್ವರ್​ ಮುಖ್ಯಮಂತ್ರಿಯಾಗಲಿ ಎಂದು ರಾಜಣ್ಣ ಹೇಳ್ತಾರೆ. ಪರಮೇಶ್ವರ್​​ ದೇವರು ಅನುಗ್ರಹ ಇದ್ರೆ ಸಿಎಂ ಆಗ್ತೇನೆ ಅಂತಾ ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದರು.

Read More