ಬೆಂಗಳೂರು: ಶಾಸಕ ಬಿಆರ್ ಪಾಟೀಲ್ (MLA BR Patil) ಸೂಕ್ಷ್ಮ ಸ್ವಭಾವದವರು. ಹೀಗಾಗಿ ಎಮೋಷನಲ್ ಆಗಿ ಈ ರೀತಿ ಪತ್ರ ಬರೆದಿರಬಹುದು ಎಂದು ಅಂತ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಶಾಸಕ ಬಿ.ಆರ್ ಪಾಟೀಲ್ ಪತ್ರ ಬರೆದಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿ.ಆರ್ ಪಾಟೀಲ್ ನಮಗೆಲ್ಲಾ ಹಿರಿಯ ನಾಯಕರು. ಅವರ ಮೇಲೆ ಅಪಾರ ಗೌರವ ನಮಗಿದೆ. ಅವರು ಸಜ್ಜನ ರಾಜಕಾರಣಿ. ತತ್ವ ಸಿದ್ದಾಂತದ ಮೇಲೆ ರಾಜಕಾರಣ ಮಾಡಿದವರು. ನಾನು ಚಿಕ್ಕವನಿಂದ ಅವರನ್ನ ನೋಡಿದ್ದೇನೆ. ಅವರ ನೋವನ್ನ ಅವರು ಹೇಳಿಕೊಂಡಿದ್ದಾರೆ. ಅವರ ಮೇಲೆ ಯಾರಾದರೂ ಆರೋಪ ಮಾಡಿದರೆ ಜನ ಒಪ್ಪಲ್ಲ ಎಂದರು.
Bigg News: ಡಿಕೆಶಿಗೆ ಬಿಗ್ ರಿಲೀಫ್: ಮೇಲ್ಮನವಿ ಹಿಂಪಡೆದು ಮನವಿ ಪರಿಗಣಿಸಿದ ಹೈಕೋರ್ಟ್
ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪಗಳು ಸಹಜ. ಬಿಆರ್ ಪಾಟೀಲ್ ಸೂಕ್ಷ್ಮ ಸ್ವಭಾವದವರುಹೀಗಾಗಿ ಎಮೋಷನಲ್ ಆಗಿ ಈ ರೀತಿ ಪತ್ರ ಬರೆದಿರಬಹುದು. ನಾನು ಆ ಪತ್ರ ನೋಡಿಲ್ಲ. ಸಿಎಂ ಅವರು ಬಿಆರ್ ಪಾಟೀಲ್ ಜೊತೆ ಮಾತಾಡ್ತಾರೆ. ಅವರ ಘನತೆಗೆ ಧಕ್ಕೆ ಬಾರದಂತೆ ತನಿಖೆ ಮಾಡಿಸುತ್ತಾರೆ ಎಂದರು.
ಇದೇ ವೇಳೆ ಬಿಆರ್ ಪಾಟೀಲ್ ರಾಜಿನಾಮೆ ವಿಚಾರ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಆರ್ ಪಾಟೀಲ್ ಹಿರಿಯರು ನಮಗೆಲ್ಲಾ ಮಾರ್ಗದರ್ಶಕರು. ಅವರು ರಾಜೀನಾಮೆ ಕೊಡೊಲ್ಲ. ಸಿಎಂ ಮತ್ತು ಸಂಬಂಧಿಸಿದ ಸಚಿವರು ತನಿಖೆ ಬಗ್ಗೆ ಗಮನ ಹರಿಸುತ್ತಾರೆ. ಪತ್ರ ಬರೆದರೆ ತಪ್ಪೇನಿದೆ..? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಳ್ಳು ಆಪಾದನೆ ಮಾಡಿದ್ದಾರೆ ಹೀಗೆಲ್ಲಾ ಪತ್ರದಲ್ಲಿದೆ. ಪತ್ರ ಬರೆದು ಉತ್ನತ ಮಟ್ಟದ ನೈತಿಕತೆ ಮೆರೆದಿದ್ದಾರೆ.ಪತ್ರ ಬರೆದಿದ್ದಕ್ಕೆ ಪ್ರಶಂಸಿಸಬೇಕು. ಸಿಎಂ, ಹಾಗೂ ಸಚಿವರು ತನಿಖೆ ಮಾಡಿಸ್ತಾರೆ ಅಂತ ತಿಳಿಸಿದರು.