ಬೆಂಗಳೂರು:- ಕೋರ್ಟ್ನಿಂದ ಜಾಮೀನು ಪಡೆದಿದ್ದರೂ, ಬಂಧನಕ್ಕೆ ಆದೇಶ ಹೊರಡಿಸಿದ್ದ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರ ಹಾಕಿದೆ. ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಎರಡನೇ ಎಫ್‌ಐಆರ್ ರದ್ದು ಕೋರಿ ಶಿವಮೂರ್ತಿ ಶರಣರ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಅರ್ಜಿ ವಿಚಾರಣೆ ನಡೆಸಿದರು. ನ್ಯಾಯಪೀಠದ ಎದುರು ಅರ್ಜಿದಾರರ ಪರ ವಕೀಲರು ತಮ್ಮ ವಾದ ಮಂಡಿಸಿ, ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮುಂದಿರುವ ಸಾಕ್ಷ್ಯಗಳ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ”ಆರೋಪಿ ಯಾರೇ ಇರಲಿ ಅದು ನಮಗೆ ಮುಖ್ಯವಲ್ಲ. ಹೈಕೋರ್ಟ್ ಆದೇಶವನ್ನು ನಿಷ್ಪಲಗೊಳಿಸುವ ಯತ್ನವನ್ನು ನ್ಯಾಯಾಲಯ ಒಪ್ಪುವುದಿಲ್ಲ. ಹೈಕೋರ್ಟ್ ಆದೇಶ ಪಾಲಿಸದಿರುವ ಈ ಕ್ರಮ ಸರಿಯಾದುದಲ್ಲ. ಆದೇಶದ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಗಮನ ಹರಿಸಬಹುದಿತ್ತು, ಸ್ವಾಮೀಜಿ ವಿರುದ್ಧದ ಎರಡು ಪ್ರಕರಣಗಳಿಗೆ ಸಂಬಂಧಸಿದಂತೆ ಎಲ್ಲ ದಾಖಲೆಗಳನ್ನು ತನ್ನ ಮುಂದೆ ಇಡಬೇಕು. ಜೊತೆಗೆ ಈ…
Author: AIN Author
ಅಮೆರಿಕ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ತಮ್ಮ ಹಿಂದೂ ಧಾರ್ಮಿಕ ನಂಬಿಕೆಗಳ ಕುರಿತಾಗಿ ಮಾತನಾಡಿದ್ದಾರೆ. ವೈಯಕ್ತಿಕವಾಗಿ ತಮಗೆ ತಮ್ಮ ಧಾರ್ಮಿಕ ನಂಬಿಕೆಗಳಿಂದ ಆಗಿರುವ ಪ್ರಯೋಜನಗಳು, ತಮಗೆ ಸಿಕ್ಕಿರುವ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಮಟ್ಟಿಗೆ ನೈತಿಕ ಬಲವನ್ನು ಹಿಂದೂ ಧರ್ಮ ತಮಗೆ ನೀಡಿದೆ ಎಂದು ವಿವೇಕ್ ರಾಮಸ್ವಾಮಿ ಹೇಳಿದ್ದಾರೆ. ಭಾರತ – ಅಮೆರಿಕ ದೇಶಗಳ ನಡುವಣ ಸೌಹಾರ್ದ ವೇದಿಕೆಯಾದ ದಿ ಡೈಲಿ ಸಿಗ್ನಲ್ ಆಯೋಜಿಸಿದ್ದ ‘ದಿ ಫ್ಯಾಮಿಲಿ ಲೀಡರ್’ ವೇದಿಕೆಯಲ್ಲಿ ಮಾತನಾಡಿದ ವಿವೇಕ್ ರಾಮಸ್ವಾಮಿ, ಹಿಂದೂ ಧರ್ಮ ಹಾಗೂ ಕ್ರೈಸ್ತ ಧರ್ಮದ ನಡುವೆ ಇರುವ ಸಮಾನತೆಗಳನ್ನು ಬಿಚ್ಚಿಟ್ಟರು. ಎರಡೂ ಧರ್ಮಗಳ ಮೌಲ್ಯಗಳು ಮುಂದಿನ ಪೀಳಿಗೆಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎಂದು ವಿವರಿಸಿದರು. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ನನ್ನ ಧಾರ್ಮಿಕ ನಂಬಿಕೆಗಳು ನನಗೆ ಸ್ವಾತಂತ್ರ್ಯ ಕೊಟ್ಟಿದೆ. ನನ್ನ ನಂಬಿಕೆಗಳೇ ನನ್ನನ್ನು ಅಧ್ಯಕ್ಷೀಯ ಚುನಾವಣಾ ಪ್ರಚಾರ ವೇದಿಕೆವರೆಗೆ ಕರೆದು ತಂದಿದೆ. ನಾನು ಓರ್ವ ಹಿಂದೂ. ನಾನು ಓರ್ವ ನಿಜ…
ಬೆಂಗಳೂರು:- ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಪೋಸ್ಟರ್ ಪಾಲಿಟಿಕ್ಸ್ ಮಾಡುತ್ತಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಪೋಸ್ಟರ್ ಪಾಲಿಟಿಕ್ಸ್ ಮೂಲಕ ಅಪಪ್ರಚಾರ ಮಾಡಿ ತೇಜೋವಧೆ ಮಾಡುವ ಕೆಲಸ ಮಾಡುತ್ತಿದೆ. ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿರುವುದಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಎ.ಮಂಜುನಾಥ್ ತಿಳಿಸಿದರು ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರಕಾರದ ಸಮಯದಲ್ಲಿ ಪೇ ಸಿಎಂ ಪೋಸ್ಟರ್‌ಗಳನ್ನು ರಾತ್ರೋ ರಾತ್ರಿ ಅಂಟಿಸಿದರು. ಈಗ ಜನಪರ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಿರುವ ಕುಮಾರಸ್ವಾಮಿ ಅವರ ಬಗ್ಗೆ ಅಶ್ಲೀಲ, ಕೀಳು ಅಭಿರುಚಿಯ ಪೋಸ್ಟರ್ ಅಂಟಿಸಿದರೆ ಮೇಲುಗೈ ಸಾಧಿಸುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ನಾವು ಕಾಂಗ್ರೆಸ್ನವರ ಪೋಸ್ಟರ್‌ಗಳನ್ನು ಅಂಟಿಸುವುದು ದೊಡ್ಡ ವಿಚಾರವಲ್ಲ. ಅವರು ಒಂದು ಮಾಡಿದರೆ ಹತ್ತು ಮಾಡುವ ಶಕ್ತಿ ನಮಗೂ ಕೂಡ ಇದೆ. ಇದು ಯಾವುದು ಕೂಡ ರಾಜಕಾರಣದಲ್ಲಿ ಶಾಶ್ವತ ಅಲ್ಲ ಎಂದು ಹೇಳಿದರು. ನಾವು ಗೃಹ ಇಲಾಖೆಗೆ ಎಚ್ಚರಿಕೆ ನೀಡುತ್ತಿದ್ದೇವೆ. ಪೊಲೀಸ್…
ಹುಬ್ಬಳ್ಳಿ: ನಗರದ ಉಣಕಲ್‌ನ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕಿ ಸವಿತಾ ಸೊಬಾಗಿನ್ ಅವರು ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್‌ನಲ್ಲಿ ಸಾಧನೆಗೈದು ಅಮೆರಿಕದಲ್ಲಿ ನಡೆಯಲಿರುವ ಪ್ಯಾನ್ ಅಮೆರಿಕನ್ ಮಾಸ್ಟರ್ಸ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ. 60 ಮೀ. ಓಟದಲ್ಲಿ ದ್ವಿತೀಯ, ಡಿಸ್ಕಸ್ ಎಸೆತದಲ್ಲಿ ದ್ವಿತೀಯ, 4*100 ಮೀ. ಮಿಶ್ರ ರಿಲೆಯಲ್ಲಿ ದ್ವಿತೀಯ, ಜಾವೆಲಿನ್ ಎಸೆತದಲ್ಲಿ ತೃತೀಯ, 400 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಪ್ರಾಚಾರ್ಯೆ ರಜನಿ ಪಾಟೀಲ, ಮಹಾವೀರ ಉಪಾಧ್ಯೆ ಅಭಿನಂದಿಸಿದರು.
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 9 ಜನ ಪೌರ ಕಾರ್ವಿುಕರು ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯು ರಾಜ್ಯದ ಪೌರ ಕಾರ್ವಿುಕರಿಗೆ ಸಿಂಗಾಪುರ ದೇಶದ ಪ್ರವಾಸವನ್ನು ಆಯೋಜಿಸಿದ್ದು, ಎರಡನೇ ತಂಡದಲ್ಲಿ ಹು-ಧಾ ಮಹಾನಗರ ಪಾಲಿಕೆಯ ಪೌರ ಕಾರ್ವಿುಕರು ಅವಕಾಶ ಪಡೆದಿದ್ದಾರೆ. ವಿಕ್ರಂ ಸಣ್ಣಮನಿ, ಕಾಶಪ್ಪ ಮೇಲಿ, ವೆಂಕಟೇಶ ಮಾರತಾಡ, ರಾಮಾಂಜನೇಯ ಸಿಂಗಲ್ಮಾಲ, ಮಲ್ಲಪ್ಪ ಬಳಗನೂರು, ಸುಭಾಷ ನವಲಗುಂದ, ಶೇಖಪ್ಪ ಬೆಣಸಮಟ್ಟಿ, ಮಂಜುನಾಥ ಲಿಂಗದಾಳ ಹಾಗೂ ಬಸವರಾಜ್ ಅವಣ್ಣವರ ನ. 20ರಂದು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದು ನ. 25ರಂದು ಮರಳಲಿದ್ದಾರೆ. ಈ ಪ್ರವಾಸದಲ್ಲಿ ಪೌರ ಕಾರ್ವಿುಕರು ಸಿಂಗಾಪುರ ದೇಶದಲ್ಲಿನ ಸ್ವಚ್ಛತೆ, ಅಲ್ಲಿನ ಕಾರ್ವಿುಕರ ಸವಲತ್ತುಗಳು, ಕಾರ್ಯವೈಖರಿ, ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆಯಲಿದ್ದು, ವಿವಿಧ ಘನ ತ್ಯಾಜ್ಯ ವಸ್ತು ಸಂಸ್ಕರಣ ಘಟಕಗಳಿಗೆ ಸಹ ಭೇಟಿ ನೀಡಲಿದ್ದಾರೆ. ಇತ್ತೀಚೆಗೆ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾಸಕ್ಕೆ ತೆರಳುತ್ತಿರುವ ಪೌರಕಾರ್ವಿುಕರಿಗೆ ಪಾಲಿಕೆ ವತಿಯಿಂದ ಬ್ಲೇಜರ್ ಕೋಟ್, ಬ್ಯಾಗ್ಗಳನ್ನು ಉಡುಗೊರೆಯಾಗಿ ನೀಡಲಾಯಿತು. ಹುಬ್ಬಳ್ಳಿ…
ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಕ್ರಾಂತಿಯನ್ನೇ ಸೃಷ್ಟಿಸಿದೆ. ಸ್ಮಾರ್ಟ್‌ಫೋನ್ ಮೂಲಕ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸುವವರ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಇಂದಿನ ಆನ್‌ಲೈನ್ ಯುಗದಲ್ಲಿ ದೇಶದ ಬಹುಪಾಲು ಜನರು ಜೇಬಿನಲ್ಲಿ ಹಣವನ್ನ ಇಡುವುದನ್ನೇ ಮರೆಯುತ್ತಿದ್ದಾರೆ ಎಂದು ಹೇಳಬಹುದು. ಆದರೆ, ಇದು ಕೆಲವೊಮ್ಮೆ ಸಮಸ್ಯೆಯನ್ನು ತರಬಹುದು.! UPI ಪಾವತಿ ಸೇವೆಯ ಬಳಕೆಯು ವ್ಯಾಪಕವಾಗಿ ಬಳಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಒಮ್ಮೊಮ್ಮೆ ಇಂಟರ್ನೆಟ್ ಸಂಪರ್ಕವು ಕೈಕೊಡಬಹುದು.! ಆದರೆ, ಚಿಂತಿಸಬೇಡಿ. ಇದೀಗ ನೀವು ಇಂಟರ್‌ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದಾದ ಆಯ್ಕೆಯನ್ನು ಸುಲಭವಾಗಿ ಬಳಸಬಹುದು.! ಇಂಟರ್‌ನೆಟ್ ಇಲ್ಲದೆಯೂ UPI ಮೂಲಕ ಪಾವತಿ ಮಾಡುವುದು ಹೇಗೆ ಮತ್ತು ಆಫ್‌ಲೈನ್ UPI ಪಾವತಿಗಳನ್ನು ಮಾಡಲು ತೆಗೆದುಕೊಳ್ಳಬೇಕಿರುವ ಕ್ರಮಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಕುರಿತ ಮಾರ್ಗದರ್ಶಿ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ಆಫ್‌ಲೈನ್ UPI ಪೇಮೆಂಟ್ಸ್ ಅನ್ನು ಸೆಟಪ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕಟ ಆಗಿರುವ ಫೋನ್ ನಂಬರ್‌ನಿಂದ ನಿಮ್ಮ ಮೊಬೈಲ್‌ನಲ್ಲಿ *99# ಡಯಲ್…
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅದೃಷ್ಟವಂತರು ( ಕುಬೇರರು) ಲಕ್ಷ್ಮಿ ಯೋಗ ಹೇಗೆ ಉಂಟಾಗುತ್ತದೆ? ಜನನ ದಿನಾಂಕ ಮತ್ತು ಸಮಯದ ಆಧಾರ ಮೇಲೆ ನಿಮ್ಮ ಜನ್ಮಜಾತಕ ಬರೆದು ಅದನ್ನು ಸರಿಯಾಗಿ ಪರೀಕ್ಷಿಸಿ ಈ ಕೆಳಕಂಡ ಮಾಹಿತಿಗಳು ಇದ್ದರೆ”ಲಕ್ಷ್ಮಿ ಯೋಗ” ಉಂಟಾಗುತ್ತದೆ. ರಾಶಿಚಕ್ರದ ಚಿಹ್ನೆಯು ಏರಿಕೆಯ ಸ್ಥಾನದಲ್ಲಿ ಯೋಗವನ್ನು ಪಡೆದುಕೊಂಡರೆ ಉತ್ತಮ ಅದೃಷ್ಟದಿಂದ ಕೂಡಿರುತ್ತದೆ. ಲಕ್ಷ್ಮಿ ದೇವಿಯು ತ್ರಿಕೋನ ಭಾವ ದೇವತೆ ಆಗಿರುತ್ತಾಳೆ. ಭಗವಾನ್ ವಿಷ್ಣು ಕೇಂದ್ರ ಭವನದ ದೇವರು. ಕೇಂದ್ರ ತ್ರಿಕೋನ ರಾಜ ಯೋಗದಲ್ಲಿ ಒಂತ್ತನೇ ಮನೆಯ ಅಧಿಪತಿ ಉದಾತ್ತನಾಗಿದ್ದರೆ ಉತ್ತಮ ಅದೃಷ್ಟವು ಪಡೆದುಕೊಳ್ಳುವವರು. ಈ ಯೋಗದಲ್ಲಿ ವಿವಿಧ ಮನೆಗಳಲ್ಲಿ ಗ್ರಹಗಳ ಸ್ಥಾನ ಹೇಗಿದೆ ಎನ್ನುವುದನ್ನು ಪರಿಗಣಿಸಿ, ಅದೃಷ್ಟದ ತೀರ್ಪು ತಿಳಿಸಲಾಗುವುದು. ಈ ಯೋಗ ಅಥವಾ ಕುಂಡಲಿಯ ಲೆಕ್ಕಾಚಾರವನ್ನು ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ತಿಳಿಯಬಹುದು. ಒಂಬತ್ತನೇ ಮನೆ ಅದು “ಭಾಗ್ಯಸ್ಥಾನ”. ಒಂಬತ್ತನೇ ಮನೆಯಲ್ಲಿ ತ್ರಿಕೋನ ಉಂಟಾದರೆ ಅದನ್ನು “ಶುಭ ಲಕ್ಷ್ಮಿ ಯೋಗ” ಎಂದು ಪರಿಗಣಿಸಲಾಗುತ್ತದೆ. ಈ ಯೋಗದಿಂದ ಸಂಪತ್ತಿನ ಆದಾಯ ಉಂಟಾಗುವುದು. ಐಷಾರಾಮಿ ಜೀವನ ನಡೆಸುವರು.…
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು? ಕಂಕಣಬಲ ಕೂಡಿ ಬರಲು ಏನು ಮಾಡಬೇಕು? ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ. ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ. 2ನೇ ಮನೆಯ ಕುಟುಂಬ ಸ್ಥಾನ 4ನೇ ಮನೆ ಸುಖದ…
ಸೂರ್ಯೋದಯ: 06.21 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ನವಮಿ 01:09 AM ತನಕ ನಂತರ ದಶಮಿ 11:03 PM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಪೂರ್ವಾ ಭಾದ್ರ 06:37 PM ತನಕ ನಂತರ ಉತ್ತರಾ ಭಾದ್ರ ಯೋಗ: ಇವತ್ತು ಹರ್ಷಣ02:46 PM ತನಕ ನಂತರ ವಜ್ರ ಕರಣ: ಇವತ್ತು ಕೌಲವ 01:09 AM ತನಕ ನಂತರ ತೈತಲೆ 12:06 PM ತನಕ ನಂತರ ಗರಜ 11:03 PM ತನಕ ನಂತರ ವಣಿಜ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 11.05 AM to 12.35 PM ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ಮೇಷ ರಾಶಿ: ರಾಜಕಾರಣಿಗಳಿಗೆ…
ಶಿವಮೊಗ್ಗ:- ಜಮೀರ್ ಅಹಮದ್ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕೆ ಎಸ್ ಈಶ್ವರಪ್ಪ ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತೆಲಂಗಾಣ ಚುನಾವಣೆ ಪ್ರಚಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿರುವ ಸಚಿವ ಜಮೀರ್ ಅಹಮದ್ ಖಾನ್ರನ್ನು ತಕ್ಷಣ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದರು ಕಾಂಗ್ರೆಸ್ ಸರ್ಕಾರ ಭಾರತದ ಸಂವಿಧಾನದ ಪ್ರಕಾರ ನಡೆಯುತ್ತಿದೆಯೋ ಅಥವಾ ಪಾಕಿಸ್ತಾನದ ಸಂವಿಧಾನದ ಪ್ರಕಾರ ಆಡಳಿತ ನಡೆಸುತ್ತಿದೆಯೋ ಎಂಬ ಬಗ್ಗೆ ಸ್ಪಷ್ಟಪಡಿಸಬೇಕಿದೆ. ಜಮೀರ್ ಅಹಮದ್ ಖಾನ್ ಅವರು ತೆಲಂಗಾಣದ ಚುನಾವಣಾ ಪ್ರಚಾರದಲ್ಲಿ ಸಂವಿಧಾನ ಬಾಹಿರವಾಗಿ ಮಾತನಾಡಿದ್ದಾರೆ. ನಾನು ಖಂಡಿಸುತ್ತೇನೆ. ನಾವು ಸ್ಪೀಕರ್ ಸ್ಥಾನಕ್ಕೆ ಗೌರವ ನೀಡುತ್ತಿದ್ದೇವೆಯೇ ಹೊರತು, ಅಲ್ಲಿ ಕುಳಿತುಕೊಳ್ಳುವವರಿಗೆ ಅಲ್ಲ ಎಂದು ಹೇಳಿದ್ದಾರೆ.