ಅಮೆರಿಕ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ತಮ್ಮ ಹಿಂದೂ ಧಾರ್ಮಿಕ ನಂಬಿಕೆಗಳ ಕುರಿತಾಗಿ ಮಾತನಾಡಿದ್ದಾರೆ. ವೈಯಕ್ತಿಕವಾಗಿ ತಮಗೆ ತಮ್ಮ ಧಾರ್ಮಿಕ ನಂಬಿಕೆಗಳಿಂದ ಆಗಿರುವ ಪ್ರಯೋಜನಗಳು, ತಮಗೆ ಸಿಕ್ಕಿರುವ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಮಟ್ಟಿಗೆ ನೈತಿಕ ಬಲವನ್ನು ಹಿಂದೂ ಧರ್ಮ ತಮಗೆ ನೀಡಿದೆ ಎಂದು ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.
ಭಾರತ – ಅಮೆರಿಕ ದೇಶಗಳ ನಡುವಣ ಸೌಹಾರ್ದ ವೇದಿಕೆಯಾದ ದಿ ಡೈಲಿ ಸಿಗ್ನಲ್ ಆಯೋಜಿಸಿದ್ದ ‘ದಿ ಫ್ಯಾಮಿಲಿ ಲೀಡರ್’ ವೇದಿಕೆಯಲ್ಲಿ ಮಾತನಾಡಿದ ವಿವೇಕ್ ರಾಮಸ್ವಾಮಿ, ಹಿಂದೂ ಧರ್ಮ ಹಾಗೂ ಕ್ರೈಸ್ತ ಧರ್ಮದ ನಡುವೆ ಇರುವ ಸಮಾನತೆಗಳನ್ನು ಬಿಚ್ಚಿಟ್ಟರು. ಎರಡೂ ಧರ್ಮಗಳ ಮೌಲ್ಯಗಳು ಮುಂದಿನ ಪೀಳಿಗೆಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎಂದು ವಿವರಿಸಿದರು.
Vishwas Vaidya: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ CM ಆಗುವುದು ಅಷ್ಟೇ ಸತ್ಯ: ಕಾಂಗ್ರೆಸ್ ಶಾಸಕ
ನನ್ನ ಧಾರ್ಮಿಕ ನಂಬಿಕೆಗಳು ನನಗೆ ಸ್ವಾತಂತ್ರ್ಯ ಕೊಟ್ಟಿದೆ. ನನ್ನ ನಂಬಿಕೆಗಳೇ ನನ್ನನ್ನು ಅಧ್ಯಕ್ಷೀಯ ಚುನಾವಣಾ ಪ್ರಚಾರ ವೇದಿಕೆವರೆಗೆ ಕರೆದು ತಂದಿದೆ. ನಾನು ಓರ್ವ ಹಿಂದೂ. ನಾನು ಓರ್ವ ನಿಜ ದೇವರು ಇದ್ದಾರೆ ಅನ್ನೋದನ್ನ ನಂಬುತ್ತೇನೆ. ದೇವರು ಇಲ್ಲಿರುವ ಪ್ರತಿಯೊಬ್ಬರನ್ನೂ ಒಂದು ಉದ್ದೇಶದೊಂದಿಗೆ ಕಳಿಸಿದ್ದಾರೆ. ನನ್ನ ನಂಬಿಕೆಯು ನನಗೆ ಒಂದು ಕರ್ತವ್ಯ ಇದೆ ಎಂದು ಬೋಧಿಸಿದೆ.
ನಮ್ಮ ಉದ್ದೇಶವನ್ನು ಅರಿತುಕೊಳ್ಳೋದು ನಮ್ಮ ನೈತಿಕ ಕರ್ತವ್ಯ. ಭಗವಂತನ ಇಚ್ಛಾನುಸಾರ ನಡೆಯೋದಕ್ಕಾಗಿ ನಮಗೆ ವಿಭಿನ್ನ ಕರ್ತವ್ಯಗಳಿವೆ. ಆದರೆ, ನಾವೆಲ್ಲರೂ ಸಮಾನರು. ಏಕೆಂದರೆ ನಮ್ಮೆಲ್ಲರಲ್ಲೂ ದೇವರು ಇದ್ದಾರೆ. ಇದೇ ನನ್ನ ನಂಬಿಕೆಯ ಮೂಲ ಎಂದು ವಿವೇಕ್ ರಾಮಸ್ವಾಮಿ ವಿವರಿಸಿದ್ದಾರೆ.