ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸರ್ಕಾರದ ಸಮ್ಮತಿ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆ ಡಿ.ಕೆ.ಶಿವಕುಮಾರ್, ಸಿಬಿಐ ವಕೀಲರ ಮನವಿ ಮೇರೆಗೆ ಮುಂದೂಡಲಾಗಿದೆ. ವಾದ ಮಂಡನೆಗಾಗಿ ವಿಚಾರಣೆಯನ್ನು ನ.29ಕ್ಕೆ ಹೈಕೋರ್ಟ್ ನಿಗದಿಪಡಿಸಿದೆ. ಸಿಬಿಐ ತನಿಖೆಗೆ ಸರ್ಕಾರದ ಅನುಮತಿಯನ್ನು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಅನುಮತಿಯನ್ನು ಹೈ ಕೋರ್ಟ್ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಹಾಗಾಗಿ ಡಿ.ಕೆ.ಶಿವಕುಮಾರ್ ದ್ವಿಸದಸ್ಯ ಪೀಠಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ, ಹೈ ಕೋರ್ಟ್ ದ್ವಿಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಅದನ್ನು ಪ್ರಶ್ನಿಸಿ, ಸಿಬಿಐ ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣವನ್ನು ಹೈ ಕೋರ್ಟ್ ನಕ್ಕೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿದ ಸುಪ್ರಿಂಕೋರ್ಟ್ 2 ವಾರಗಳ ಗಡುವು ನೀಡಿತ್ತು.
Author: AIN Author
ವಿಜಯಪುರ: ರಾಜ್ಯದಲ್ಲಿ ಜಾತಿ ಗಣತಿ ವರದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಈಗಾಗಲೇ ಜಾತಿ ಗಣತಿಯನ್ನು ಸಿದ್ಧ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡಲಿದ್ದಾರೆ ಎನ್ನುವ ಸೂಚನೆ ಸಿಕ್ಕ ಬೆನ್ನಲ್ಲಿಯೇ ಜಾತಿ ಗಣತಿಯ ಮೂಲ ಪ್ರತಿ ಅಥವಾ ಹಸ್ತಪ್ರತಿ ನಾಪತ್ತೆಯಾಗಿದೆ ಎನ್ನುವ ಮಾಹಿತಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾಪತ್ತೆ ಆಗಿಲ್ಲ, ಪತ್ರಿಕೆಗಳಲ್ಲಿ ಹಾಗೇ ವರದಿ ಬಂದಿದೆ. ಇಲಾಖೆ ಅಥವಾ ಆಯೋಗ ಈ ಬಗ್ಗೆ ಕನ್ಪರ್ಮ್ ಮಾಡಿಲ್ಲ. ಹೀಗಾಗಿ ವರದಿ ಸರಿ ಅಲ್ಲ ಎಂದು ಹೇಳಿದರು. ಜಾತಿ ಗಣತಿಗೆ ಒಕ್ಕಲಿಗರು, ಲಿಂಗಾಯತರಿಂದ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗ ಯಾವುದೆ ರೀತಿಯ ವರದಿ ಕೊಟ್ಟಿಲ್ಲ. ಕ್ಯಾಬಿನೆಟ್ ಸಮಿತಿಗೆ ಬಂದಾಗ ಚರ್ಚೆ ಆಗುತ್ತದೆ. ಅಲ್ಲಿವರೆಗೆ ವಾದ-ವಿವಾದ, ಚರ್ಚೆಗಳ ಅಗತ್ಯ ಇಲ್ಲ ಎಂದ ಸಚಿವ ಹೆಚ್ ಕೆ ಪಾಟೀಲ್. ವಿರೋಧದ ಬಗ್ಗೆ ಈಗ ಮಾತನಾಡಲ್ಲ, ಕ್ಯಾಬಿನೆಟ್‌ನಲ್ಲಿ ಮಾತನಾಡ್ತೇನೆ.…
ಮಂಡ್ಯ: ಮೇಲುಕೋಟೆಯ ತೊಟ್ಟಿಲುಮಡು ಜಾತ್ರೆಯ ವೇಳೆ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ಜನ ಭಕ್ತರು ಗಾಯಗೊಂಡು, ಸುಮಾರು 17 ಮಂದಿ ಅಸ್ವಸ್ಥರಾಗಿದ್ದಾರೆ. ಜಾತ್ರೆಯಲ್ಲಿ ಅಷ್ಟತೀರ್ಥೋತ್ಸವದ ವೇಳೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಜೇನುಗೂಡಿದ್ದ ಮರದ ಸಮೀಪವೇ ಭಕ್ತರು ಕರ್ಪೂರ ಹಚ್ಚಿದ್ದಾರೆ. https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಕರ್ಪೂರದ ಹೊಗೆಯಿಂದ ಹೆಜ್ಜೇನು ದಾಳಿ ನಡೆಸಿವೆ. ಇದರಿಂದ ಭಕ್ತರು ದಿಕ್ಕಾಪಾಲಾಗಿ ಓಡಿದ್ದಾರೆ. ಜೇನು ದಾಳಿಗೆ ಒಳಗಾದವರನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ 17 ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರು:- ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 2 ದಿನ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಈ ಸಂಬಂಧ ಮಾತನಾಡಿದ ಅವರು,ದಕ್ಷಿಣ ಒಳನಾಡಿನ ಮಲೆನಾಡು, ಮಧ್ಯ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಅಲ್ಲಲ್ಲಿ ಇಂದು ಮತ್ತು ನಾಳೆ ಮಳೆಯಾಗಬಹುದು ಎಂದು ಭಾರತೀಯ ಹಮಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಪ್ರಾದೇಶಿಕ ಕೇಂದ್ರ, ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಗಳು ಬಹಳಷ್ಟು ಇವೆ. ಆದರೆ ಕರಾವಳಿಯ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಅದೇ ರೀತಿ ಮುಂದಿನ 48 ಗಂಟೆಗಳ ಒಳಗಡೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಕಂಡು ಬರಲಿದೆ. ಅದೇ ರೀತಿ ಕರಾವಳಿ ಭಾಗದಲ್ಲೂ ಒಣ ಹವೆ ಇರಲಿದೆ. ಆದರೆ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಮುನ್ಸೂಚನೆ…
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿದ ವಿಚಾರವಾಗಿ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ JDS ಮುಖಂಡರು ದೂರು ನೀಡಿದ್ದಾರೆ. JDS ಕಚೇರಿ, ಕುಮಾರಸ್ವಾಮಿ ನಿವಾಸದ ಬಳಿ ಪೋಸ್ಟರ್ ಅಂಟಿಸಿದ್ದಾನೆ ಎಂದು ಎಸ್.ಮನೋಹರ್ ವಿರುದ್ಧ ಮಾಜಿ ಎಂಎಲ್ಸಿ ರಮೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ. https://ainlivenews.com/give-collection-corporation-board-power-bjp-poster-war-against-congress/ ಪೋಸ್ಟರ್ನಲ್ಲಿ ಏನಿದೆ? ಕರೆಂಟ್ ಕಳ್ಳ ಖ್ಯಾತಿಯ ಹೆಚ್ಡಿಕೆ ನಿರ್ಮಾಣದ ಚಿತ್ರ “ಪೆನ್ ಡ್ರೈವ್ ಬ್ರದರ್”. ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ. ಬರೀ ಟೀಸರ್ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ ಸಿನಿಮಾ ಇನ್ನೂ ಬಾಕಿಯಿದೆ. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ. ಚಿತ್ರದ ನಿರ್ಮಾಣದ ವೆಚ್ಚ 68000 ಎಂದು ಪೋಸ್ಟರ್ನಲ್ಲಿ ವ್ಯಂಗ್ಯವಾಡಲಾಗಿದೆ. ಹೆಚ್ಡಿ ಕುಮಾರಸ್ವಾಮಿಯವರ ಯಾವ ಹೇಳಿಕೆಗೆ ಆಕ್ರೋಶ? ಇನ್ನು ಇತ್ತೀಚೆಗೆ ತಮ್ಮ ವಿರುದ್ಧ ನಡೆಯುತ್ತಿರುವ ಪೋಸ್ಟರ್ ಅಭಿಯಾನಕ್ಕೆ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ಹೆಚ್ಡಿ ಕುಮಾರಸ್ವಾಮಿಯವರು ಆರೋಪಿಸಿದ್ದರು. ಈ ವೇಳೆ “ನನ್ನ ವಿರುದ್ಧ ಪೋಸ್ಟರ್ ಅಭಿಯಾನ…
ಬೆಂಗಳೂರು: ಜಾತಿ ಜನಗಣತಿ ಪಡೆಯದಿರುವಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದ್ದು, ವರದಿ ಕೊಡುವ ಮುನ್ನವೇ ಏಕೆ ವಿರೋಧಿಸುತ್ತಿದ್ದೀರಿ ಎಂದು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. https://ainlivenews.com/bbmp-is-ready-to-implement-strict-rules-in-the-city/ ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಜಾತಿ ಜನಗಣತಿ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಕೊಟ್ಟ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ಜಾತಿ ಜನಗಣತಿ ವರದಿ ತಿರಸ್ಕರಿಸಬೇಕೆಂದು ಮನವಿ ಸಲ್ಲಿಸಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಮೂಲಪ್ರತಿ ಕಾಣೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು. ನನ್ನನ್ನು ಭೇಟಿಯಾಗಿ ವರದಿ ಸಲ್ಲಿಸುತ್ತಾರೆ ಎಂದು ತಿಳಿಸಿದರು. ಅಲ್ಲಿಯವರೆಗೆ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದರು ಎಂದರು.
ಬೆಂಗಳೂರು: ಬೆಂಗಳೂರಿನಲ್ಲಿ ಬೆಸ್ಕಾಂ ದುರಂತಕ್ಕೆ ತಾಯಿ, ಮಗು ಬಲಿಯಾಗಿದ್ದಕ್ಕೆ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು ನಗರದಲ್ಲಿ ಕಠಿಣ ರೂಲ್ಸ್ ಜಾರಿಗೆ ಪಾಲಿಕೆ ಮುಂದಾಗಿದೆ. https://ainlivenews.com/bengaluru-indira-canteen-is-not-getting-proper-food-if-you-ask-the-officials-are-shy/ ನಗರಾದ್ಯಂತ ಅನಧಿಕೃತ ಕೇಬಲ್ಗಳ ಕಡಿವಾಣಕ್ಕೆ ಬಿಬಿಎಂಪಿ ಸಜ್ಜಾಗಿದೆ. ಇನ್ಮುಂದೆ ಯಾರೂ ಕೂಡ ಎಲ್ಲೆಂದರಲ್ಲಿ ರಸ್ತೆ ಅಗೆಯುವಂತಿಲ್ಲ. ಬೆಂಗಳೂರಿನಲ್ಲಿ ವಾರ್ಡ್ ರಸ್ತೆಗೆ ಸಂಬಂಧಿಸಿದಂತೆ ಒಟ್ಟು 13,800 ಕಿಲೋ ಮೀಟರ್ನಷ್ಟು ರಸ್ತೆಗಳು ಇವೆ. ಇನ್ಮುಂದೆ ಒಂದು ವಾರ್ಡ್ ಗೆ ಒಬ್ಬನೇ ಗುತ್ತಿಗೆದಾರ. ಯಾವುದೇ ಕೇಬಲ್ ಅಳವಡಿಕೆ ಮಾಡಬೇಕೆಂದರೂ ಗುತ್ತಿಗೆದಾರರು ಹೊಣೆಯಾಗಿರುತ್ತಾರೆ. ನಗರದಲ್ಲಿ ಇರುವ ಎಲ್ಲಾ ಒಎಫ್ಸಿ ಸೇರಿದಂತೆ ಎಲ್ಲಾ ರೀತಿಯ ಕೇಬಲ್ ಗಳು ಡಕ್ಟ್ ನಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ನಗರದಲ್ಲಿ ಎಲ್ಲಾ ರೀತಿಯ ಕೇಬಲ್ ಅಳವಡಿಕೆಗೆ ಡಕ್ಟ್ ನಿರ್ಮಾಣ ಮಾಡಲು ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲು ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಜೈಪುರ: ರಾಜ್ಯ ವಿಧಾನಸಭೆ ಚುನಾವಣೆ (Rajasthan Assembly Elections) ಹಿನ್ನೆಲೆ ಮತದಾರರನ್ನು ಸೆಳೆಯಲು ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆ (Manifesto) ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ರಾಜಸ್ಥಾನದ ಜನರಿಗೆ 7 ಗ್ಯಾರಂಟಿ (Guarantee) ಘೋಷಿಸಿದ್ದು ಜೊತೆಗೆ ಜಾತಿ ಸಮೀಕ್ಷೆ ನಡೆಸಿ ಬಿಡುಗಡೆ ಮಾಡುವ ಭರವಸೆ ನೀಡಲಾಗಿದೆ. ಕರ್ನಾಟಕದ ಮಾದರಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ವಾರ್ಷಿಕ 10,000 ರೂ. ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಗೊಧನ್ ಯೋಜನೆಯಡಿ ಸರ್ಕಾರವು ಹಸುವಿನ ಸಗಣಿ ಪ್ರತಿ ಕೆಜಿಗೆ 2 ರೂ.ಯಲ್ಲಿ ಖರೀದಿ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್/ಟ್ಯಾಬ್ಲೆಟ್ ವಿತರಿಸಲಾಗುವುದು ಎಂದು ಹೇಳಿದೆ. ಚಿರಂಜೀವಿ ವಿಪತ್ತು ಪರಿಹಾರ ವಿಮೆ ಯೋಜನೆಯಡಿ ಪ್ರತಿಯೊಬ್ಬರಿಗೂ 15 ಲಕ್ಷ ರೂ. ವಿಮೆ ನೀಡಲಾಗುವುದು, https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ 500 ರೂ.ಯಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ, ರಾಜ್ಯದ ಪ್ರತಿಯೊಂದು ಮಗುವಿಗೂ ಇಂಗ್ಲಿಷ್ ಶಿಕ್ಷಣ ನೀಡಲಾಗುವುದು, ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ…
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸೌತ್ ಮತ್ತು ಬಾಲಿವುಡ್ ಇಂಡಸ್ಟ್ರಿಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನಿಮಲ್ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಹಿಂದಿ ನಟ ರಣ್‌ಬೀರ್ ಕಪೂರ್‌ಗೆ (Ranbir Kapoor) ರಶ್ಮಿಕಾ ಕನ್ನಡದ ಪಾಠ ಮಾಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರದ ಟ್ರೈಲರ್, ಸಾಂಗ್ಸ್ ಎಲ್ಲವೂ ಮೋಡಿ ಮಾಡ್ತಿವೆ. ಅದರಲ್ಲೂ ರಶ್ಮಿಕಾ-ರಣ್‌ಬೀರ್ ಲಿಪ್‌ಲಾಕ್ ತುಣುಕು ಸಖತ್ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಇದೀಗ ರಶ್ಮಿಕಾ ನಡೆ ಅನೇಕರಿಗೆ ಇಷ್ಟವಾಗಿದೆ. ರಿಯಾಲಿಟಿ ಶೋವೊಂದಕ್ಕೆ ಗೆಸ್ಟ್ ಆಗಿ ರಣ್‌ಬೀರ್-ರಶ್ಮಿಕಾ ಎಂಟ್ರಿ ಕೊಡುವಾಗ ಪಾಪರಾಜಿ ಎದುರಿಗೆ ಸಿಕ್ಕಿದ್ದಾರೆ. ಏನು ನಮ್ಮ ಡಾಕ್ಯುಮೆಂಟರಿ ಮಾಡುತ್ತಾ ಇದ್ದೀರಾ? ಎಂದು ರಣ್‌ಬೀರ್ ಹೇಳಿದ್ದಾರೆ. ಬಳಿಕ ಏನಾದ್ರು ಕನ್ನಡದಲ್ಲಿ ಮಾತನಾಡಿ ಎಂದು ರಶ್ಮಿಕಾಗೆ ಪಾಪರಾಜಿ ಹೇಳಿದ್ದಾರೆ ಅದಕ್ಕೆ ಎಲ್ಲರಿಗೂ ನಮಸ್ಕಾರ ಎಂದಿದ್ದಾರೆ. ಬಳಿಕ ಹೇಗಿದ್ದೀರಾ? ಎಲ್ಲರಿಗೂ ನಮಸ್ಕಾರ ಎಂದು ರಣ್‌ಬೀರ್‌ಗೆ ರಶ್ಮಿಕಾ ಕನ್ನಡ ಕಲಿಸಿ ಕೊಟ್ಟಿದ್ದಾರೆ. ರಣ್‌ಬೀರ್ ಕೂಡ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ರಾಜ್ಯದ ಜನಸಾಮಾನ್ಯರ ರಕ್ತ ಹೀನತೆಯನ್ನ ತೊಡೆದು ಹಾಕಲು ನಮ್ಮ ಆರೋಗ್ಯ ಇಲಾಖೆ ಕಠಿಬದ್ದವಾಗಿದ್ದು ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ನಿರ್ಮಾಣದತ್ತ ನಮ್ಮ ಸರ್ಕಾರ ಸದಾ ಸಿದ್ದವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ವಹಿಸಿ ₹185.74 ಕೋಟಿ ಅನುದಾನ ಒದಗಿಸಿದ್ದಾರೆ. ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕʼ ಯೋಜನೆಗೆ ಇಂದು ಚಾಲನೆ ದೊರತಿದೆ. 2025 ರೊಳಗೆ ರಕ್ತಹೀನತೆ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ. ಇದೇ ವರ್ಷದ ಡಿಸೆಂಬರ್ ನಿಂದಲೇ ಶಾಲಾ ಮಕ್ಕಳಿಗೆ ತಪಾಸಣೆ ಆರಂಭಿಸಲಿದ್ದೇವೆ. ಪೌಷ್ಠಿಕ ಆರೋಗ್ಯ ಸಮಾಜ ನಿರ್ಮಾಣದತ್ತ ಹೆಚ್ಚು ಗಮನ ಹರಿಸಲಿದ್ಧೇವೆ ಎಂದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಮತ್ತು ಪಟ್ಟಣ…