ನವದೆಹಲಿ;- ಎಎಪಿ ಯಶಸ್ಸು ಮತ್ತು ಮುನ್ನಡೆ ಕಂಡು ಪ್ರಧಾನಿ ಹೆದರಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಆಮ್ ಆದ್ಮಿ ಪಕ್ಷ ಬೆಳೆಯುತ್ತಿರುವ ವೇಗ ಮತ್ತು ಯಶಸ್ಸನ್ನು ಕಂಡು ಹೆದರಿದ್ದಾರೆ. ಎಎಪಿಯ ಯಶಸ್ಸು ಮತ್ತು ಪಕ್ಷವು ಮುನ್ನಡೆಯುತ್ತಿರುವ ವೇಗದ ಬಗ್ಗೆ ಪ್ರಧಾನಿ ನರೇಂದ್ರ ಅವರಿಗೆ ಹೆದರಿಕೆ ಉಂಟಾಗಿದೆ. ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಕೇವಲ 11 ವರ್ಷಗಳ ನಂತರ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಮ್ಮ ಪಾರ್ಟಿ ಮುನ್ನಡೆಯುತ್ತಿರುವ ವೇಗವು ಪ್ರತಿ ಪಕ್ಷವನ್ನು ಹೊರಹಾಕುತ್ತದೆ ಎಂಬ ಭಯ ಆವರಲ್ಲಿ ಕಾಡುತ್ತಿದೆ’ ಎಂದು ಹೇಳಿದ್ದಾರೆ.
Author: AIN Author
ವಿರಾಟ್ ಕೊಹ್ಲಿ ಅವರು, ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ. ಸೌತ್ ಆಫ್ರಿಕಾ ವಿರುದ್ದ ದಿಟ್ಟ ಹೋರಾಟ ನೀಡಿದ ಕೊಹ್ಲಿ ಹುಟ್ಟು ಹಬ್ಬ ದಿನವೇ ಶತಕ ಸಾಧನೆ ಮಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್, ಸೆಂಚುರಿ ಕುರಿತು ಭಾರಿ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇದೇ ವೇಳೆ ಕೊಹ್ಲಿ ಸೆಂಚುರಿ ಅತ್ಯಂತ ಸ್ವಾರ್ಥ ಶತಕವಾಗಿತ್ತು ಅನ್ನೋ ಟೀಕೆಯೂ ಕೇಳಿಬಂದಿದೆ. ಸೌತ್ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶತಕಕ್ಕಾಗಿ ಆಡಿದ ರೀತಿ ಇತ್ತು ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಆಟದಲ್ಲಿ ಸೆಂಚುರಿ ಪೂರೈಸಲೇಬೇಕು ಅನ್ನೋ ಹಠವಿತ್ತೇ ಹೊರತು ಭಾರತಕ್ಕಾಗಿ ಆಡುತ್ತಿದ್ದೇನೆ ಅನ್ನೋ ಛಾಯೆ ಕಾಣಿಸಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಶತಕದ ಸನಿಹದಲ್ಲಿ ಕೊಹ್ಲಿ ಅತೀವ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶನ ನಡೆಸಿದ್ದಾರೆ. ಬೌಂಡರಿ ಸಿಕ್ಸರ್‌ಗಿಂತ ಕೊಹ್ಲಿ, ತಮ್ಮ ಶತಕದ ಮೇಲೆ ಹೆಚ್ಚು ಗಮನಕೇಂದ್ರಿಕರಿಸಿದ್ದರು. ಹೀಗಾಗಿ ಇದು ಸೆಲ್ಫಿಶ್ ಸೆಂಚುರಿ ಅನ್ನೋ ಟೀಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದೆ. ಇದೇ ವೇಳೆ…
ಬಾಗಲಕೋಟೆ;- ಸಮಯ ಕೂಡಿ ಬಂದಾಗ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಆಗಲು ಕಾಯಬೇಕಾಗುತ್ತದೆ. ಸಮಯ ಕೂಡಿ ಬಂದಾಗ ಮಾತ್ರ ಸಾಧ್ಯ. ಈ ಕುರಿತು ನಿರ್ಣಯ ಕೈಗೊಳ್ಳಲು ಪಕ್ಷ, ಶಾಸಕರಿದ್ದಾರೆ. ಪಕ್ಷದ ತೀರ್ಮಾನ ಬಹಳ ಮುಖ್ಯ’ ಎಂದರು. ನನಗೆ ಯಾವುದೇ ರೀತಿಯ ಅಸಮಾಧಾನ ಆಗಿಲ್ಲ. ಪಕ್ಷದೊಳಗೆ ಯಾರಿಗಾದರೂ ಅಸಮಾಧಾನವಿದ್ದರೆ ಮಾತುಕತೆ ಮೂಲಕ ಬಗೆಹರಿಸಲಾಗುವುದು’ ಎಂದು ಹೇಳಿದರು. ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆಯೇ ಎಂಬ ಪ್ರಶ್ನೆಗೆ, ‘ಅವರೇ ಈ ಬಗ್ಗೆ ಈಗಾಗಲೇ ಹೇಳಿದ್ದಾರಲ್ಲ. ಕಾದು ನೋಡೋಣ’ ಎಂದರು. ನಿಮ್ಮನ್ನು ಮಹಾರಾಷ್ಟ್ರದ ಅಜಿತ್ ಪವಾರ್‌ಗೆ ಹೋಲಿಸಲಾಗುತ್ತಿದೆಯೆಲ್ಲ ಎಂಬ ಪ್ರಶ್ನೆಗೆ, ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮಹಾರಾಷ್ಟ್ರದ ಸ್ಥಿತಿ ಇಲ್ಲಿ ಬರಲ್ಲ’ ಎಂದರು
ಪೀಣ್ಯ ದಾಸರಹಳ್ಳಿ: ಎಂಟನೇ ಮೈಲಿ ಕಡೆಯಿಂದ ಐಕಿಯ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಐಕಿಯಗೆ ನೀರಿನ ಸಂಪರ್ಕಕ್ಕೆ ಪೈಪ್ ಅಳವಡಿಸಲು ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚದೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ. ರಾಮಯ್ಯ ಬಡಾವಣೆಯಿಂದ ಮೆಟ್ರೋ ನಿಲ್ದಾಣದ ಕಡೆಗೆ ಹೋಗುವ ತಿರುವಿನಲ್ಲಿ ಇರುವ ಗುಂಡಿಗೆ ಬಿದ್ದು ಸಾಕಷ್ಟು ಅವಗಡಗಳು ಸಂಭವಿಸಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಎಷ್ಟೋ ಮಂದಿ ಬಿದ್ದು ಪೆಟ್ಟು ತಿಂದು ಆಸ್ಪತ್ರೆಗೆ ಸೇರಿದ್ದಾರೆ ಎಂದು ಸ್ಥಳೀಯರು ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಹಾಯಕ ಎಂಜಿನಿಯರ್ ಕಾರ್ತಿಕ್ ಅವರಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಅವರು ಇದಕ್ಕೆ ಸ್ಪಂದಿಸುತ್ತಿಲ್ಲ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ದುರಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು. ನಮ್ಮ ಕಣ್ಣೆದುರೇ ತಾಯಿ ಮಗು ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆಗೆ ಹೋದರು, ದಿನನಿತ್ಯ ಈ ರಸ್ತೆ ಗುಂಡಿಗೆ ಬಿದ್ದು, ಎದ್ದು ಹೋಗುತ್ತಿದ್ದಾರೆ ಯಾರೂ ಇತ್ತ ಕಡೆ ಗಮನ…
ಪ್ರತಾಪ್ ಮನೆಯಲ್ಲಿನ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿ ಇಲ್ವಾ? ಕಳೆದ ವಾರ ವಿನಯ್ ಬಾಯಲ್ಲಿ ಇಂಥದೊಂದು ಮಾತು ಹೊರಬಂದಿತ್ತು. ಅದಕ್ಕೆ ಇಶಾನಿ ಕೂಡ ‘ಹೌದು. ನಂಗೂ ಗೊತ್ತು ಅದು’ ಎಂದು ಅನುಮೋದಿಸಿದ್ದರು. ತುಕಾಲಿ, ನಮ್ರತಾ ಕೂಡ ಆ ಮಾತನ್ನು ಅನುಮೋದಿಸಿದ್ದರು. ಈಗ ವೀಕೆಂಡ್ ಎಪಿಸೋಡಿನಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ಇದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಪ್ರತಾಪ್ ಕ್ಯಾರೆಕ್ಟರಿಗೇ ಕಳಂಕ ತರುವಂಥ ಮಾತುಗಳನ್ನಾಡಿದ ವಿನಯ್, ಇಶಾನಿ ಏನು ಹೇಳುತ್ತಾರೆ? ಸ್ವತಃ ಪ್ರತಾಪ್ ಗೆ ಇವೆಲ್ಲದರ ಅರಿವಿದೆಯೇ?ಎಂಬುವ ಪ್ರಶ್ನೆಗಳಿಗೆ ಇಂದಿನ ‘ಸೂಪರ್ ಸಂಡೆ ವಿಥ್ ಸುದೀಪ್’ ಕಾರ್ಯಕ್ರಮದಲ್ಲಿ ಗೊತ್ತಾಗಲಿದೆ.
ರಕ್ಷಕ್ ಬುಲೆಟ್ (Rakshak Bullet) ಅವರು ಈ ವಾರ ಬಿಗ್ ಬಾಸ್ (Bigg Boss Kannada 10) ಮನೆಯಿಂದ ಔಟ್ (Eliminate) ಆಗಿದ್ದಾರೆ ಎಂದು ವರದಿಯಾಗಿದೆ. ಎರಡನೇ ವಾರ ರಕ್ಷಕ್ ಬುಲೆಟ್ ಮನೆಯ ಕ್ಯಾಪ್ಟನ್ ಆಗಿದ್ದರು. ‘’ಬುಲೆಟ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತೆ ಎಂದು ಕಳಿಸಿದರೆ ಇನ್ನೂ ಸೈಕಲ್ ಹೊಡ್ಕೊಂಡ್ ಇದ್ದೀರಾ. ಸ್ಪೀಡು ಸಾಕಾಗುತ್ತಿಲ್ಲ ಬಾಸ್’’ ಎಂದು ಹಿಂದೊಮ್ಮೆ ಪ್ರೇಕ್ಷಕರು ಪತ್ರದ ಮೂಲಕ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಸ್ನೇಕ್ ಶ್ಯಾಮ್, ಗೌರೀಶ್ ಬಳಿಕ ರಕ್ಷಕ್ ಬುಲೆಟ್ ದೊಡ್ಮನೆಯ ಆಟಕ್ಕೆ ವಿದಾಯ ಹೇಳಿದ್ದಾರೆ ಎಂದು ವರದಿಯಾಗಿದೆ. ಮೊದಲನೇ ವಾರ ಅಸಮರ್ಥರ ಗುಂಪಿನೊಂದಿಗೆ ರಕ್ಷಕ್ ತಮ್ಮ ಜರ್ನಿಯನ್ನು ಶುರು ಮಾಡಿದ್ದರು. ʻʻಮೊದಲ ವಾರ ನಾನು ಅಷ್ಟಾಗಿ ನನ್ನನ್ನು ತೊಡಗಿಸಿಕೊಂಡಿಲ್ಲ. ಬರಬರುತ್ತಾ ಅರ್ಥ ಮಾಡಿಕೊಂಡು ಬಂದೆ. ಮೂರನೇ ವಾರ ಕ್ಯಾಪ್ಟನ್ ಕೂಡ ಆದೆ. ಆದರೆ ಸೈಕಲ್ ಗಿಫ್ಟ್ ಸರಿಯಾಗೇ ಇದೆ. ನಾನು ಒಪ್ಪುತ್ತೇನೆʼʼ ಎಂದು ಹೇಳಿದ್ದರು. ಇತ್ತೀಚೆಗೆ ಡ್ರೋನ್ ಪ್ರತಾಪ್ ಅವರಿಗೆ ರಕ್ಷಕ್ ಗೂಬೆ ಎಂದಿದ್ದಕ್ಕೆ ಕಿಚ್ಚ…
ಟೆಲ್ ಅವೀವ್: ಗಾಯಾಳುಗಳನ್ನು ಸಾಗಿಸುತ್ತಿದ್ದ ಪ್ಯಾಲೆಸ್ತೀನ್‌ನ (Palestine) ಅಂಬುಲೆನ್ಸ್ (Ambulance) ಮೇಲೆ ಇಸ್ರೇಲ್ (Israel) ಸೇನೆ ನಡೆಸಿದ ದಾಳಿಯಲ್ಲಿ ಸುಮಾರು 15 ಜನ ಸಾವಿಗೀಡಾಗಿದ್ದು, 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬೆನ್ನಲ್ಲೇ ಅಮೆರಿಕ, ಇಸ್ರೇಲ್ ಸೇನೆ ಸುತ್ತುವರಿದ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರಿಗೆ ನೆರವು ನೀಡಲು ಗಾಜಾದಲ್ಲಿ ಕದನ ವಿರಾಮ ಘೋಷಿಸುವಂತೆ ಇಸ್ರೇಲ್‍ಗೆ ಒತ್ತಾಯಿಸಿದೆ. https://ainlivenews.com/suprem-ray-healing-center-reiki/#google_vignette ಅದಾಗಿಯೂ ಅಮೆರಿಕಾದ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು (Benjamin Netanyahu) ತಿರಸ್ಕರಿಸಿದ್ದಾರೆ. ಅಲ್ಲದೇ ಒತ್ತೆಯಾಳುಗಳನ್ನು ಬಿಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಯಾವುದೇ ಕದನ ವಿರಾಮವಿಲ್ಲದೆ ಒಂದು ತಿಂಗಳು ಸಮೀಪಿಸಿದೆ. ಈ ಯುದ್ಧ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡವವರೆಗೂ ಮುಂದುವರಿಯುತ್ತದೆ. ಒತ್ತೆಯಾಳುಗಳ ಬಿಡುಗಡೆಗೆ ಇನ್ನೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನೇತಾನ್ಯಾಹು ಹೇಳಿದ್ದಾರೆ.