Author: AIN Author

ಬೆಂಗಳೂರು:- ಎಚ್‌ಡಿಕೆ ವಿರುದ್ಧ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಜೆಡಿಎಸ್ ದೂರು ನೀಡಿದೆ. ಪೊಲೀಸ್ ಆಯುಕ್ತ ದಯಾನಂದ್‌ ಅವರಿಗೆ ಜೆಡಿಎಸ್ ಪಕ್ಷದಿಂದ ಬುಧವಾರ ದೂರು ನೀಡಲಾಯಿತು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಹಾಗೂ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ ಅವರಿಗೆ ದೂರು ನೀಡಿದರು. ಪೋಸ್ಟರ್ ಅಂಟಿಸುವಲ್ಲಿ ಪ್ರಮುಖ ಪಾತ್ರಧಾರಿಯಾದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗಿದ್ದು, ಜತೆಗೆ ಡಿ.ಎಸ್.ಕಾರ್ತಿಕ್ ಗೌಡ, ಎಚ್.ಡಿ.ದರ್ಶನ್ ಗೌಡ, ಅರ್ಜುನ್ ಡಿ.ಗೌಡ, ಸಂತೋಷ್ ಎಂಬುವವರ ವಿರುದ್ಧ ಆಯುಕ್ತರಿಗೆ ದೂರು, ನೀಡಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಜೆಡಿಎಸ್ ಮುಖಂಡರು ಒತ್ತಾಯಿಸಿದರು. ಎಸ್.ಮನೋಹರ್ ಹಿಂದಿನಿಂದಲೂ ಇದೇ ರೀತಿಯಲ್ಲಿ ಕೀಳು ಅಭಿರುಚಿಯ ಪೋಸ್ಟರ್‌ಗಳನ್ನು ಅಂಟಿಸಿ ತೇಜೋವಧೆ ಮಾಡುವ ಚಾಳಿಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಇಂತಹ ಅನೇಕ…

Read More

ಬೆಳಗಾವಿ:- ಹೊಂಡದಲ್ಲಿ ಬಿದ್ದು 12 ವರ್ಷದ ಬುದ್ಧಿಮಾಂದ್ಯ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ. ಅಥಣಿ ತಾಲೂಕಿನ ಮದಭಾವಿ ಗ್ರಾಮದ ಅಂಧ ಮಕ್ಕಳ ಶಾಲೆಯಾದ ಶಾರದಾದೇವಿ ಬುದ್ದಿ ಮಾಂದ್ಯ ಮಕ್ಕಳ ಶಾಲೆ ಹಾಗು ವಸತಿಯುತ ವಿಶೇಷ ಶಾಲೆಯ ಸುದೀಪ್ ತಮ್ಮಣ್ಣಿ ಮಾನೆ ಎಂಬ ಬಾಲಕ ಸಾವನಪ್ಪಿದಾನೆ ಎಂದು ತಿಳಿದು ಬಂದಿದೆ. ದಿನಾಂಕ 21/11/2023 ರಂದುದು ಮುಂಜಾನೆ ಹೊರಗೆ ಹೋದ ಬಾಲಕ ಮರಳಿ ಶಾಲೆಗೆ ಬಂದಿಲ್ಲ ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿಗಳು ಬಾಲಕನನ್ನು ಹುಡುಕಾಡಿದರು ಸಿಕ್ಕಿರುದಿಲ್ಲ. ಮರುದಿನ ಅಂದರೇ ದಿನಾಂಕ್ 22/11/2023 ರಾಂಡು ಶಾಲೆಯ ಸಮೀಪದಲ್ಲಿ ಇರುವ ಒಂದು ಬಾಳೆ ತೋಟದ ಹೊಂಡಲ್ಲಿ ಬಾಲಕ ಮೃತ್ಯುವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

Read More

ಬೆಳಗಾವಿ:- ಇಟ್ಟಂಗಿ ಕಾರ್ಮಿಕರಿಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ & ಟೀಮ್ ನಿಂದ ಟಾರ್ಚರ್ ಕೊಡುತ್ತಿದ್ದಾರೆ. ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ವಿಠಲ್ ಹಲಗೇಕರ್ ಇಂದು ಪ್ರವಾಸಿಮಂದಿರದಲ್ಲಿ ನಮ್ಮ ನ್ಯೂಸ್ ಸಮೂಹದೊಂದಿಗೆ ಮಾತನಾಡಿ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಮತ್ತು ಬೆಂಬಲಿಗರು ಖಾನಾಪುರ ತಾಲ್ಲೂಕಿನಾದ್ಯಂತ ಇರುವ ಇಟ್ಟಂಗಿಗಳ ನಿರ್ಮಾಣ ಕಾರ್ಮಿಕರು ವಾಹನಗಳ ಮೂಲಕ ಮಣ್ಣು ತೆಗೆದುಕೊಂಡು ಹೋಗಲು ಅಧಿಕಾರಿಗಳ ಮೇಲೆ ಒತ್ತಡತಂದು ಪೊಲೀಸ್ ಮತ್ತು ಗಣಿ ಅಧಿಕಾರಿಗಳ ಮೂಲಕ ಒತ್ತಡ ತಂದು ವಾಹನಗಳನ್ನು ತಡೆಯುವುದು ಮಾಡುತ್ತಿದ್ದಾರೆ. ಇದರಿಂದ ಈ ಹಿಂದೆ ನಾವು ಎಂದು ಈ ರೀತಿ ಮಾಡಿಲ್ಲ, ಈಗ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅನವಶ್ಯಕವಾಗಿ ಖಾನಾಪುರ ತಾಲ್ಲೂಕು ಆಡಳಿತದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

Read More

ಬೆಂಗಳೂರು:- ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್‌ ಆಗಿ ಪೋಸ್ಟಿಂಗ್‌ ಪಡೆಯಲು ಬಹಳಷ್ಟು ಜನರು ಜಿದ್ದಾಜಿದ್ದಿ ನಡೆಸುತ್ತಿರುತ್ತಾರೆ. ಆದರೆ, ಬೆಂಗಳೂರಿನ ರಾಜಾಜಿನಗರ ಕೇಂದ್ರ ಭಾಗದಲ್ಲಿಯೇ ಇರುವ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಕಳೆದ ಒಂದು ತಿಂಗಳಿಂದ ಪೊಲೀಸ್‌ ಇನ್ಸ್‌ಪೆಕ್ಟರ್‌ ಇಲ್ಲದೇ ಅನಾಥವಾಗಿದೆ ಎನ್ನುವುದನ್ನು ಕೇಳಿದರೆ ಬೆಂಗಳೂರು ನಿವಾಸಿಗಳಿಗೆ ಸೋಜಿಗವಾಗುತ್ತದೆ. ಇನ್ನು ನಗರದ ಕೇಂದ್ರ ಭಾಗದಲ್ಲಿರುವ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ವಿಲೇವಾರಿ ಮಾಡಲು ದಕ್ಷ ಅಧಿಕಾರಿಯೇ ಇಲ್ಲವೆಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ಶಾಸಕ ಎಸ್. ಸುರೇಶ್‌ ಕುಮಾರ್, ಈ ಬಗ್ಗೆ ಸರ್ಕಾರದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಹಾಗೂ ಎಡಿಜಿಪಿ ಅವರ ಬಳಿ ರಾಜಾಜಿನಗರ ಪೊಲೀಸ್‌ ಠಾಣೆಗೆ ಒಬ್ಬ ದಕ್ಷ ಪೊಲೀಸ್‌ ಅಧಿಕಾರಿಯನ್ನು ನಿಯೋಜನೆ ಮಾಡುವಂತೆ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಪತ್ರವೊಂದನ್ನು ಸಿದ್ಧಪಡಿಸಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಮಳೆ ದಾಖಲಾಗಿದ್ದು, ಮಧ್ಯಾಹ್ನವೇ ನಗರದ ವಿವಿಧ ಕಡೆಗಳಲ್ಲಿ ತೆಂಪರೆದಿದ್ದಾನೆ. ಕೆಂಗೇರಿ ಒಂದರಲ್ಲಿಯೇ 17 ಮಿಲಿ ಮೀಟರ್ ಮಳೆ ದಾಖಲಾಗಿದೆ. ನಗರದಲ್ಲಿ ಕೆಲವು ದಿನಗಳಿಂದ ಹಿಂಗಾರು ಮಳೆ ದುರ್ಬಲವಾಗಿದ್ದರಿಂದ ಆಗಾಗ ಚುರುಕು ಬಿಸಿಲು ದಾಖಲಾಗುತ್ತಿತ್ತು. ಇದನ್ನು ಹೊರತುಪಡಿಸಿದರೆ, ಅಷ್ಟಾಗಿ ಚಳಿಯಾಗಲಿ, ಅತ್ಯಧಿಕ ತಾಪಮಾನದ ವಾತಾವರಣ ಕಂಡು ಬಂದಿಲ್ಲ. ಬದಲಾದ ವಾತಾವರಣದಲ್ಲಿ ವಿದ್ಯಮಾನಗಳಿಂದ ಬುಧವಾರ ನಗರದಲ್ಲಿ ಒಂದೆರಡು ಕಡೆ ಜೋರು ಮಳೆ ಆಗಿದೆ. ಮಧ್ಯಾಹ್ನ ದಿಢೀರ್ ಮಬ್ಬು ವಾತಾವರಣ ಶುರುವಾಗಿ, 4 ಗಂಟೆ ಹೊತ್ತಿಗೆ ಜಿಟಿ ಜಿಟಿ ಮಳೆ ಆರಂಭವಾಯಿತು. ಜಯನಗರ, ಕೆಆರ್.ಪುರ, ವೈಟ್ ಫೀಲ್ಡ್, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್, ಶಿವಾಜಿನಗರ, ಅಂಜನಾಪುರ, ವಸಂತ ನಗರ, ಪೀಣ್ಯ, ಸಿವಿ ರಾಮನ್ ನಗರ, ಬಸವನಗುಡಿ, ಕೊತ್ನೂರು, ಮಾರತ್ತಹಳ್ಳಿ, ಹೂಡಿ, ಮಹದೇವಪುರ, ಕೋರಮಂಗಲ, ಹೂಡಿ, ಮಹದೇವಪುರ, ವರ್ತೂರು, ಕಲ್ಯಾಣ ನಗರ, ಬನಶಂಕರಿ, ಕುಮಾರ ಸ್ವಾಮಿ ಬಡಾವಣೆ, ಬಿಇಎಲ್, ಉತ್ತರಹಳ್ಳಿ, ಕೆಂಗೇರಿ, ನಾಗರಭಾವಿ, ವಿಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಬಿದ್ದಿದೆ. ಇಂದು…

Read More

ಹುಬ್ಬಳ್ಳಿ:- ಗ್ರಾಮ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ ನಡೆದಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪನವರ ಕೊಲೆಯಾದ ಮೃತ ವ್ಯಕ್ತಿ ಎನ್ನಲಾಗಿದೆ. ಆಸ್ತಿ ವಿಚಾರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಕಲಘಟಗಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Read More

ಬೆಂಗಳೂರು:- ಡಿಕೆ ಶಿವಕುಮಾರ್, ಲಿಂಗಾಯತರು, ಒಕ್ಕಲಿಗರ ವಿರೋಧದ ನಡುವೆಯೂ ಜಾತಿ ಗಣತಿ ವರದಿ ಸ್ವೀಕರಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಮೀಕ್ಷೆಗೆ 162 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಸರ್ಕಾರ ವರದಿ ತರಿಸಿಕೊಂಡು ನಂತರ ತೀರ್ಮಾನಿಸಲಿದೆ ಎಂದರು. ನಾವು 162 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ನಾವು ವರದಿ ತೆಗೆದುಕೊಳ್ಳಬೇಕು. ಅವರಿಗೆ (ವೊಕ್ಕಲಿಗರಿಗೆ) ಇರುವ ಅನುಮಾನಗಳು ವರದಿಯಲ್ಲಿವೆಯೇ ಇಲ್ಲವೇ ಎಂಬುದನ್ನು ನೋಡಬೇಕು. ನಾನು ವರದಿಯನ್ನು ನೋಡಿಲ್ಲ. ನಾನೇ ನೋಡದಿದ್ದರೆ ಬೇರೆಯವರು ಅದನ್ನು ಹೇಗೆ ನೋಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವರದಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅವರು ವರದಿ ಸಲ್ಲಿಸುವವರೆಗೆ ಒಬಿಸಿ ಆಯೋಗದ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ವರದಿಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಇಬ್ಬರ ನಡುವೆ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಿಎಂ ಹೇಳಿದರು. ಈ ಬಗ್ಗೆ ಡಿಸಿಎಂ ನನ್ನೊಂದಿಗೆ ಯಾವತ್ತೂ ಮಾತನಾಡಿಲ್ಲ. ಒಕ್ಕಲಿಗ ಸಂಘದ ಮುಖಂಡರು ನನ್ನನ್ನು ಭೇಟಿ…

Read More

ದಾವಣಗೆರೆ:- ಬರ ಪರಿಹಾರ ಕುರಿತು ಕೇಂದ್ರ ಹಾಣಕಾಸು ಸಚಿವರೊಂದಿಗೆ ಚರ್ಚಿಸಲು ನ 23 ರಂದು ತಾವು ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ದೆಹಲಿಗೆ ತೆರಳುತ್ತಿರುವುದಾಗಿ ಕೃಷಿ ಸಚಿವರಾದ ಎನ್ .ಚಲುವರಾಯಸ್ವಾಮಿ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಕೃಷಿ ಮತ್ತು ಜಲಾನಯನ ಇಲಾಖೆ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು. ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಘೋಷಣೆಯಾಗಿದೆ 18000 ಕೋಟಿಗೂ ಅಧಿಕ ಪರಿಹಾರ ಕೋರಲಾಗಿದೆ .ರಾಜ್ಯದ ನಿರಂತರ ಮನವಿಗಳ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು ಭೇಟಿಗೆ ಸಮಯ ನಿಗಧಿ ಪಡಿಸಿದ್ದು ತಾವು ಸಚಿವರಾದ ಕೃಷ್ಣಾ ಬೈರೇಗೌಡ ಮತ್ತು ಪ್ರಿಯಾಂಕಾ ಖರ್ಗೆ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು. ರೈತರ ಹಿತ ಸಂರಕ್ಷಣೆ ರಾಜ್ಯ ಸರ್ಕಾರದ ಆದ್ಯತೆ ಅದಕ್ಕೆ ನಾವು ಸದಾ ಎಂದು ಚಲುವರಾಯಸ್ವಾಮಿ ಹೇಳಿದರು. ಈ ವರ್ಷ ‌ಕೃಷಿ ಭಾಗ್ಯ ಮರು ಜಾರಿ ಗೊಳಿಸಿದ್ದು 200 ಕೋಟಿ ರೂ ವೆಚ್ಚದಲ್ಲಿ 30000 ಕ್ಕೂ…

Read More

ಬೆಂಗಳೂರು:- ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ. ಮುಂದಿನ 48 ಗಂಟೆಯಲ್ಲಿ ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಮನಗರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಹಾವೇರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸಾಧ್ಯತೆ ಇದೆ. ಉಳಿದಂತೆ ಒಣಹವೆ ಇರಲಿದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ವ್ಯಾಪಕ ಮಳೆಯಾಗಲಿದ್ದು, ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಬಹುದು. ಕರಾವಳಿಯ ದಕ್ಷಿಣ ಕನ್ನಡ ಭರ್ಜರಿ ಮಳೆಯಾದರೆ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

Read More

ರಾಮನಗರ: ಎದುರು‌ ಬಂದ ಕಾರು ತಪ್ಪಿಸಲು ಹೋಗಿ ಹಳ್ಳಕ್ಕೆ ಬಸ್ ನುಗ್ಗಿದ ಘಟನೆ ರಾಮನಗರ ತಾಲೂಕಿನ ಮೇಳೇಹಳ್ಳಿ ಗೇಟ್ ಬಳಿ ಜರುಗಿದೆ. ಮಾಗಡಿಯಿಂದ ರಾಮನಗರಕ್ಕೆ ಬಾರುವಾಗ ಘಟನೆ ಜರುಗಿದೆ. ಬಸ್‌ನಲ್ಲಿದ್ದ 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರನ್ನ ಬೇರೆ ಬಸ್‌ನಲ್ಲಿ ಕೆಎಸ್‌ಆರ್‌ಟಿ‌ಸಿ ಸಿಬ್ಬಂದಿ ರಾಮನಗರಕ್ಕೆ ತಲುಪಿಸಿದ್ದಾರೆ. ಸ್ಥಳಕ್ಕೆ ರಾಮನಗರ ಕೆ‌ಎಸ್‌ಆರ್‌ಟಿಸಿ ಡಿಸಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಬಸ್ ಹಳ್ಳಕ್ಕೆ ನುಗ್ಗಿದ ಪರಿಣಾಮ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More