ಸ್ಪೇನ್: ಸಲಿಂಗಿ ದಂಪತಿ ಮಗುವಿಗೆ ಜನ್ಮ ನೀಡಿದ ಘಟನೆ ಸ್ಪೇನ್‌ನಲ್ಲಿ ನಡೆದಿದೆ. 30ರ ಹರೆಯದ ಎಸ್ಟಫಾನಿಯಾ ಹಾಗೂ 27ರ ಹರೆಯದ ಅಜಹರಾ ಇದೀಗ ಗಂಡು ಮಗುವಿನ ಪೋಷಕರಾಗಿದ್ದಾರೆ. ಇದೀಗ ಸಲಿಂಗಿ ದಂಪತಿಗಳ ಸಂಭ್ರಮ ಮನೆ ಮಾಡಿದೆ. ಅಕ್ಟೋಬರ್ 30 ರಂದು ಅಜಹರಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಇದೀಗ ಡೆರೆಕ್ ಎಲೋಯ್ ಎಂದು ಹೆಸರಿಡ ಲಾಗಿದೆ. ಸಲಿಂಗಿಗಳಾದ 30 ವರ್ಷದ ಎಸ್ಟೆಫಾನಿಯಾ ಹಾಗೂ 27 ವರ್ಷದ ಅಜಹರಾ ಮಗುವಿಗೆ ಜನ್ಮ ನೀಡಿದ ವಿಶ್ವದ 2ನೇ ಪ್ರಕರಣ ಇದಾಗಿದೆ. ಯೂರೋಪ್‌ನ ಮೊದಲ ಘಟನೆ ಇದಾಗಿದೆ. ಅಜಹರಾ ಒಂಭತ್ತು ತಿಂಗಳ ಕಾಲ ಮಗುವನ್ನು ಗರ್ಭಾಶಯದಲ್ಲಿ ಹೊತ್ತು ಜನ್ಮ ನೀಡಿದ್ದಾರೆ. ಇನೋಸೆಲ್ ಎಂಬ ಸಂಸ್ಥೆಯ ನೆರವಿನಿಂದ ಸಲಿಂಗಿ ದಂಪತಿ ಗರ್ಭ ಧರಿಸಿದ್ದಾರೆ. ಆರಂಭದಲ್ಲಿ ಗರ್ಭ ಫಲವತ್ತತೆಯ ಚಿಕಿತ್ಸೆಯನ್ನು ಎಸ್ಟೆಫಾನಿಯಾಗೆ ನೀಡಲಾಯಿತು. ಫಲವತ್ತ ಮೊಟ್ಟೆ ಹಾಗೂ ವೀರ್ಯದ ಕ್ಯಾಪ್ಸುಲ್‌ನನ್ನು ಎಸ್ಟೆಫಾನಿಯಾ ಯೋನಿಯೊಳಗೆ ಸೇರಿಸಲಾಯಿತು. https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಐದು ದಿನಗಳ ಬಳಿಕ ನೈಸರ್ಗಿಕ ಫಲೀಕರಣ ಮಾಡಲಾಗಿತ್ತು. ಭ್ರೂಣ ರೂಪುಗೊಂಡ…
Author: AIN Author
ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ (BCCI) ಅಂದುಕೊಂಡಂತೆ ಯಶಸ್ವಿಯಾಗಿ ಏಕದಿನ ವಿಶ್ವಕಪ್ ಟೂರ್ನಿಯನ್ನ ನಡೆಸಿಕೊಟ್ಟಿದೆ. ಟೀಂ ಇಂಡಿಯಾ ಮೊದಲ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ರೂ ಫೈನಲ್ ಪಂದ್ಯದ ಸೋಲಿನಿಂದ ವಿಶ್ವಕಪ್ ಕಳೆದುಕೊಂಡು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ವಿಶ್ವಕಪ್ ಮುಗಿಯುತ್ತಿದ್ದಂತೆ ಸಾಲು ಸಾಲು ಟಿ20 ಕ್ರಿಕೆಟ್ ಸರಣಿಯನ್ನ ಟೀಂ ಇಂಡಿಯಾ ಸಾಲು ಸಾಲು ಸರಣಿಗಳನ್ನ (T20I Series) ಹಮ್ಮಿಕೊಂಡಿದೆ. ಇದೇ ನವೆಂಬರ್ 23ರಂದು ಆಸ್ಟ್ರೇಲಿಯಾ (Austsralia) ವಿರುದ್ಧ ನಡೆಯಲಿರುವ ಸರಣಿ ಮೂಲಕ ಟೀಂ ಇಂಡಿಯಾ (Team India) ಟಿ20 ಕ್ರಿಕೆಟ್ ಹಬ್ಬ ಶುರುವಾಗಲಿದೆ. ನವೆಂಬರ್ 23 ರಿಂದ ಡಿಸೆಂಬರ್ 3ರ ವರೆಗೆ ಭಾರತ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಡಿಸೆಂಬರ್ 10 ರಿಂದ 14ರ ವರೆಗೆ ದಕ್ಷಿಣ ಆಫ್ರಿಕಾ (South Africa) ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ನಂತರ 2024ರ ಜನವರಿ 11 ರಿಂದ 17ರ ವರೆಗೆ ಅಫ್ಘಾನಿಸ್ತಾನದ ವಿರುದ್ಧ 3 ಪಂದ್ಯಗಳ…
ರಾಜಕೀಯ, ಜಾತಿ, ಭಾಷೆಗಳನ್ನ ಮೀರಿದ ಕಾರ್ಯಕ್ರಮ ಕಂಬಳ ಎಂದು ಗುರುಕಿರಣ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬೆಂಗಳೂರು ಕಂಬಳ – ನಮ್ಮ ಕಂಬಳಕ್ಕೆ ದಕ್ಷಿಣ ಕನ್ನಡದ ನಂಟು ಇರುವ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ. ಇದು ಯಾವುದೇ ಕಮರ್ಷಿಯಲ್ ಅಗ್ರಿಮೆಂಟ್ ಅಲ್ಲ. ಆದರೆ ಕಾರ್ಯಕ್ರಮಕ್ಕೆ ಎಲ್ಲರ ಬೆಂಬಲವಿದೆ ಎಂದರು. ಕನ್ನಡ ಸಿನಿಮಾರಂಗದ ಎಲ್ಲರಿಗೂ ಆಮಂತ್ರಣ ನೀಡಲಾಗಿದ್ದು, ಎಲ್ಲರೂ ಬರುವ ನಿರೀಕ್ಷೆಯಿದೆ. ಶಿವಣ್ಣ ಹಾಗೂ ಅವರ ಪತ್ನಿ ಬರುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಯುವ ಬರುತ್ತಿದ್ದಾರೆ. ಸುದೀಪ್ ಅವರು ಶನಿವಾರ ಬಿಗ್ಬಾಸ್ ಶೂಟಿಂಗ್ನ ನಡುವೆ ಬಿಡುವು ಮಾಡಿಕೊಂಡು ಬರುವುದಾಗಿ ತಿಳಿಸಿದ್ದಾರೆ. ಯಶ್ ಸದ್ಯಕ್ಕೆ ಊರಿನಲ್ಲಿಲ್ಲ. ಉಪೇಂದ್ರ ಹಾಗೂ ಅವರ ಪತ್ನಿ ಬರುತ್ತಿದ್ದಾರೆ. ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಬರುವುದಾಗಿ ತಿಳಿಸಿದ್ದಾರೆ. ಜೂನಿಯರ್ ಎನ್.ಟಿ.ಆರ್ ಅವರನ್ನ ಆಹ್ವಾನಿಸಿದ್ದೇವೆ, ಆ ದಿನ ಶೂಟಿಂಗ್ ಇದೆ ಎಂದಿದ್ದಾರೆ ಎಂದು ಮಾಹಿತಿ ನೀಡಿದರು. ಇದರಲ್ಲಿ ರಾಜಕೀಯವಿಲ್ಲ, ಜಾತಿಯಿಲ್ಲ, ಭಾಷೆ ವಿಚಾರವೆಂದಾಗ ಕುಂದಾಪುರ, ಮಂಜೇಶ್ವರದಲ್ಲಿಯೂ ಕಂಬಳ ನಡೆಯುತ್ತದೆ. ಮಂಗಳೂರು…
ಬೆಂಗಳೂರು:- ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತಂತೆ ಸಭೆ ಜರುಗಿದೆ. ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್ , ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಅಭಿವೃದ್ಧಿ ಆಯುಕ್ತೆ ಡಾ : ಶಾಲಿನಿ ರಜನೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಿ.ಸಿ.ಪ್ರಕಾಶ್ ನಿರ್ದೇಶಕಿ ಎಂ.ಎಸ್. ಅರ್ಚನಾ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಶಕ್ತಿ ಯೋಜನೆ: ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ನವೆಂಬರ್ 21ರ ವರೆಗೆ ಒಟ್ಟಾರೆ 99.75 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ನೂರು ಕೋಟಿ ದಾಟಲಿದೆ. ಪ್ರತಿ ತಿಂಗಳ ಪ್ರಯಾಣಿಕರ ಸಂಖ್ಯೆ ಏಪ್ರಿಲ್ 2023 ರಲ್ಲಿ 84.17 ಲಕ್ಷ ದಿಂದ ಶಕ್ತಿ…
ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡದ ಆರೋಪಗಳಿಂದ ಹದಗೆಟ್ಟಿರುವ ಭಾರತ ಕೆನಡಾದ ರಾಜತಾಂತ್ರಿಕ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡು ಬಂದಿದ್ದು ಎರಡು ತಿಂಗಳ ಬಳಿಕ ಕೆನಡಾ ಪ್ರಜೆಗಳಿಗೆ ಇ ವೀಸಾ (e-visa) ಸೇವೆಯನ್ನು ಪುನಾರಂಭಿಸಲು ಭಾರತ ಸರ್ಕಾರ ನಿರ್ಧರಿಸಿದೆ. G20 ಸಭೆಯ ಬಳಿಕ ಕೆನಡಾ ಪ್ರಧಾನಿ (Canada PM) ತೀವ್ರ ಮುಜುರಗ ಎದುರಿಸಿದ ಬಳಿಕ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಈ ಆರೋಪದ ಬಳಿಕ ಭಾರತ (India) ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿತ್ತು, ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದನ್ನು ಭಾರತ ನಿಲ್ಲಿಸಿತ್ತು. https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಜೂನ್‍ನಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಗುರುದ್ವಾರದ ಹೊರಗೆ ಅಪರಿಚಿತ ದಾಳಿಕೋರರಿಂದ ನಿಜ್ಜಾರ್‍ನನ್ನು ಗುಂಡಿಕ್ಕಿ ಕೊಂದ ಬಳಿಕ ಭಾರತ ಕೆನಡಾ ನಡುವೆ ಸಮಸ್ಯೆ ಶುರುವಾಯಿತು. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸಂಸತ್ತಿನಲ್ಲಿ ಗುಪ್ತಚರ ವರದಿಗಳ ಆಧಾರದ ಮೇಲೆ ಭಾರತೀಯ ಸರ್ಕಾರಿ ಏಜೆಂಟರು…
ಆಮ್ಲಾ ಜ್ಯೂಸ್‌ನಲ್ಲಿ (Amla Juice) ಅನೇಕ ಔಷಧೀಯ ಗುಣಗಳು ಅಡಗಿವೆ. ಆಮ್ಲಾವನ್ನು ವಿಟಮಿನ್ ಸಿ ಸೇರಿದಂತೆ ಅನೇಕ ಪೋಷಕಾಂಶಗಳ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದನ್ನು ಬಳಕೆ ಮಾಡುವುದರಿಂದ ಕೂದಲು ಬಲಗೊಳ್ಳುತ್ತದೆ. ಜೊತೆಗೆ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಇದರ ಹೊರತಾಗಿ ಫೈಬರ್, ಕಬ್ಬಿಣ, ಸತು, ವಿಟಮಿನ್ ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವು ನಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತವೆ. ಇದಲ್ಲದೆ ಆಮ್ಲಾ ಜ್ಯೂಸ್ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಆಮ್ಲಾ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು ಮೊಡವೆಗಳನ್ನು ತಡೆಯುತ್ತದೆ ಹಾನಿಗೊಳಗಾದ ಅಂಗಾಂಶ ಸುಧಾರಣೆ ವಯಸ್ಸಾದ ಚಿಹ್ನೆಗಳ ವಿರುದ್ಧ ಹೋರಾಡುತ್ತದೆ ಮೈಬಣ್ಣವನ್ನು ಹೆಚ್ಚಿಸುತ್ತದೆ ತಲೆಹೊಟ್ಟು ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ ಆಮ್ಲ ಜ್ಯೂಸ್‌ನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಜೊತೆ ಸೌದರ್ಯಕ್ಕೂ ಕೂಡ ಇದು ಪ್ರಯೋಜಕಾರಿ. ನಾವು ಇದನ್ನು ಜ್ಯೂಸ್, ಪೌಡರ್ ಅಥವಾ ಹಸಿಯಾಗಿ ಸೇವಿಸಿದರೂ, ಆಮ್ಲಾ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.
ದೆವುತ್ಥನ ಏಕಾದಶಿ ಸೂರ್ಯೋದಯ: 06.22 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಏಕಾದಶಿ 09:01 PM ತನಕ ನಂತರ ದ್ವಾದಶಿ ನಕ್ಷತ್ರ: ಇವತ್ತು ಉತ್ತರಾ ಭಾದ್ರ 05:16 PM ತನಕ ನಂತರ ರೇವತಿ ಯೋಗ: ಇವತ್ತು ವಜ್ರ 11:54 AM ತನಕ ನಂತರ ಸಿದ್ಧಿ ಕರಣ: ಇವತ್ತು ವಣಿಜ 10:02 AM ತನಕ ನಂತರ ವಿಷ್ಟಿ 09:01 PM ತನಕ ನಂತರ ಬವ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 12.44 PM to 02.15 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:40 ನಿಂದ ಮ.12:24 ವರೆಗೂ ಮೇಷ: ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ, ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ,…
ನೆಲಮಂಗಲ; ನಗರದ ಸೋಲದೇವನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ಜರುಗಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ವಿನೋದ್ ರಾಜ್ ತೋಟದ ಬಳಿ ಪ್ರತ್ಯಕ್ಷವಾಗಿದೆ. ತೋಟದ ಮುಂದಿನ ಗೇಟ್ ಬಳಿ ಓಡಾಡಿರುವ ಚಿರತೆ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ಸಾಕಷ್ಟು ದಿನಗಳಿಂದ ಚಿರತೆ ದಾಳಿ ಮಾಡುತ್ತಿವೆ. ದಾಳಿಯಾದ್ರು ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಮುಂದಾಗಿಲ್ಲ ಎನ್ನಲಾಗಿದೆ.
ಬೆಂಗಳೂರು:-545 ಮಂದಿ ಪೋಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳನ್ನು ಡಿಸೆಂಬರ್ ಒಳಗಾಗಿ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನ್ಯಾಯಾಲಯದಿಂದ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ 545 ಮಂದಿ ಪೋಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳನ್ನು ಡಿಸೆಂಬರ್ ಒಳಗಾಗಿ ಭರ್ತಿ ಮಾಡಲಾಗುವುದು ಬಳಿಕ 402 ಪೋಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳ ಹುದ್ದೆ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು. ಬಳಿಕ 600 ಪಿಎಸ್‌ಐ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ವಿವರಿಸಿದರು. ಒಟ್ಟಾರೆ 1547 ಪಿಎಸ್‌ಐ ಹುದ್ದೆಗಳನ್ನು ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದ ಅವರು ಇಲಾಖೆಗೆ ಹದಿನೈದು ಸಾವಿರ ಕಾನ್‌ಸ್ಟೆಬಲ್ ಅಗತ್ಯವಿದ್ದು, ಮೊದಲು ಮೂರು ಸಾವಿರ ಕಾನ್‌ಸ್ಟೆಬಲ್ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೂ ಆದಷ್ಟು ಶೀಘ್ರವಾಗಿ ಚಾಲನೆ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು:- ಸಚಿವ ಜಮೀರ್ ರನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸ್ಪೀಕರ್ ಸ್ಥಾನದಲ್ಲಿ ಕುಳಿತ ವ್ಯಕ್ತಿಗೆ ಒಂದು ಜಾತಿ, ಧರ್ಮದ ಬಣ್ಣ ಕೊಡುವ ಕೆಲಸ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು. ಇಲ್ಲವಾದರೆ ಅವರು ಮುಂದಿನ ಅಧಿವೇಶನದಲ್ಲಿ ಹೇಗೆ ಪಾಲ್ಗೊಳ್ಳುತ್ತಾರೋ ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸವಾಲು ಹಾಕಿದ್ದಾರೆ