ರಕ್ಷಕ್ ಬುಲೆಟ್ (Rakshak Bullet) ಅವರು ಈ ವಾರ ಬಿಗ್ ಬಾಸ್ (Bigg Boss Kannada 10) ಮನೆಯಿಂದ ಔಟ್ (Eliminate) ಆಗಿದ್ದಾರೆ ಎಂದು ವರದಿಯಾಗಿದೆ. ಎರಡನೇ ವಾರ ರಕ್ಷಕ್ ಬುಲೆಟ್ ಮನೆಯ ಕ್ಯಾಪ್ಟನ್ ಆಗಿದ್ದರು. ‘’ಬುಲೆಟ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತೆ ಎಂದು ಕಳಿಸಿದರೆ ಇನ್ನೂ ಸೈಕಲ್ ಹೊಡ್ಕೊಂಡ್ ಇದ್ದೀರಾ. ಸ್ಪೀಡು ಸಾಕಾಗುತ್ತಿಲ್ಲ ಬಾಸ್’’ ಎಂದು ಹಿಂದೊಮ್ಮೆ ಪ್ರೇಕ್ಷಕರು ಪತ್ರದ ಮೂಲಕ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಸ್ನೇಕ್ ಶ್ಯಾಮ್, ಗೌರೀಶ್ ಬಳಿಕ ರಕ್ಷಕ್ ಬುಲೆಟ್ ದೊಡ್ಮನೆಯ ಆಟಕ್ಕೆ ವಿದಾಯ ಹೇಳಿದ್ದಾರೆ ಎಂದು ವರದಿಯಾಗಿದೆ. ಮೊದಲನೇ ವಾರ ಅಸಮರ್ಥರ ಗುಂಪಿನೊಂದಿಗೆ ರಕ್ಷಕ್ ತಮ್ಮ ಜರ್ನಿಯನ್ನು ಶುರು ಮಾಡಿದ್ದರು. ʻʻಮೊದಲ ವಾರ ನಾನು ಅಷ್ಟಾಗಿ ನನ್ನನ್ನು ತೊಡಗಿಸಿಕೊಂಡಿಲ್ಲ. ಬರಬರುತ್ತಾ ಅರ್ಥ ಮಾಡಿಕೊಂಡು ಬಂದೆ. ಮೂರನೇ ವಾರ ಕ್ಯಾಪ್ಟನ್ ಕೂಡ ಆದೆ. ಆದರೆ ಸೈಕಲ್ ಗಿಫ್ಟ್ ಸರಿಯಾಗೇ ಇದೆ. ನಾನು ಒಪ್ಪುತ್ತೇನೆʼʼ ಎಂದು ಹೇಳಿದ್ದರು. ಇತ್ತೀಚೆಗೆ ಡ್ರೋನ್ ಪ್ರತಾಪ್ ಅವರಿಗೆ ರಕ್ಷಕ್ ಗೂಬೆ ಎಂದಿದ್ದಕ್ಕೆ ಕಿಚ್ಚ…
Author: AIN Author
ಟೆಲ್ ಅವೀವ್: ಗಾಯಾಳುಗಳನ್ನು ಸಾಗಿಸುತ್ತಿದ್ದ ಪ್ಯಾಲೆಸ್ತೀನ್‌ನ (Palestine) ಅಂಬುಲೆನ್ಸ್ (Ambulance) ಮೇಲೆ ಇಸ್ರೇಲ್ (Israel) ಸೇನೆ ನಡೆಸಿದ ದಾಳಿಯಲ್ಲಿ ಸುಮಾರು 15 ಜನ ಸಾವಿಗೀಡಾಗಿದ್ದು, 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬೆನ್ನಲ್ಲೇ ಅಮೆರಿಕ, ಇಸ್ರೇಲ್ ಸೇನೆ ಸುತ್ತುವರಿದ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರಿಗೆ ನೆರವು ನೀಡಲು ಗಾಜಾದಲ್ಲಿ ಕದನ ವಿರಾಮ ಘೋಷಿಸುವಂತೆ ಇಸ್ರೇಲ್‍ಗೆ ಒತ್ತಾಯಿಸಿದೆ. https://ainlivenews.com/suprem-ray-healing-center-reiki/#google_vignette ಅದಾಗಿಯೂ ಅಮೆರಿಕಾದ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು (Benjamin Netanyahu) ತಿರಸ್ಕರಿಸಿದ್ದಾರೆ. ಅಲ್ಲದೇ ಒತ್ತೆಯಾಳುಗಳನ್ನು ಬಿಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಯಾವುದೇ ಕದನ ವಿರಾಮವಿಲ್ಲದೆ ಒಂದು ತಿಂಗಳು ಸಮೀಪಿಸಿದೆ. ಈ ಯುದ್ಧ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡವವರೆಗೂ ಮುಂದುವರಿಯುತ್ತದೆ. ಒತ್ತೆಯಾಳುಗಳ ಬಿಡುಗಡೆಗೆ ಇನ್ನೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನೇತಾನ್ಯಾಹು ಹೇಳಿದ್ದಾರೆ.