Author: AIN Author

ಪೀಣ್ಯ ದಾಸರಹಳ್ಳಿ:’ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರವಾಗಿ ಎಲ್ಲೂ ಕಳಪೆ ಕಾಮಗಾರಿ ನಡೆಯಬಾರದು. ಹಾಗೇನಾದರೂ ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕಮ್ಮಗೊಂಡನಹಳ್ಳಿಯಲ್ಲಿ ಒಂದು ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ ರಸ್ತೆ, ಚರಂಡಿ ಅಭಿವೃದ್ಧಿ ಆಗಬೇಕು. ಕೆಲವೊಂದು ರಸ್ತೆಗಳ ಪಕ್ಕದ ಚರಂಡಿಗಳಲ್ಲಿ ಜಲ್ಲಿಕಲ್ಲು, ಮಣ್ಣು ತುಂಬಿ ನೀರು ಹರಿಯುತ್ತಿಲ್ಲ ಅದನ್ನು ಕೂಡಲೇ ತೆಗಿಸುವ ಕೆಲಸ ಆಗಬೇಕು’ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಜನರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ. ಅದನ್ನು ಹುಸಿಗೊಳಿಸಬಾರದು. ಆದಕಾರಣ ಗುಣಮಟ್ಟದ ರಸ್ತೆ ಅಭಿವೃದ್ಧಿಯಾಗಬೇಕು. ಎಲ್ಲೂ ಕಳಪೆಯಿಂದ ಕೂಡಿರಬಾರದು’ ಎಂದರು. ಈ ಸಂದರ್ಭದಲ್ಲಿ ದಾಸರಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಶೆಟ್ಟಿಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ರಮೇಶ್ ಯಾದವ್, ಬಿಜೆಪಿ ಮುಖಂಡರಾದ ಹನಶ್ರೀ ಮಂಜಣ್ಣ, ಜಬ್ಬಾರ್, ಶ್ರೀಹರಿ, ಅಬ್ಬಿಗೆರೆ ವಿನೋದ್, ಎಇಇ ಕೃಷ್ಣಮೂರ್ತಿ ಮತ್ತು ಸ್ಥಳೀಯರಿದ್ದರು.

Read More

ಬೆಂಗಳೂರು:- ಲೋಕಸಭೆ ಚುನಾವಣೆ ಹಿನ್ನೆಲೆ, ಎಲ್ಲರೂ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಎಲ್ಲರೂ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ. ನಾವು ಇಬ್ಬರೂ ಸೇರಿ ಚರ್ಚೆ ಮಾಡಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಮಾಡಿದ ಚರ್ಚೆಯನ್ನು ಬಹಿರಂಗವಾಗಿ ಹೇಳಲ್ಲ. ವಿಜಯೇಂದ್ರ ಅವರು ಈಗ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ಅವರ ಬಗ್ಗೆ ನಾವು ಪ್ರಶ್ನೆ ಮಾಡಲ್ಲ. ನಿನ್ನೆ ನಾನು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್, ಶಾಸಕ ಸುನೀಲ್ ಕುಮಾರ್ ಅವರು ಸೇರಿ ಚರ್ಚೆ ಮಾಡಿ, ಸಹಕಾರ ಕೊಡಲು ನಿರ್ಣಯ ತೆಗೆದುಕೊಂಡಿದ್ದೇವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಗೆಲುವಿಗಾಗಿ ಎಲ್ಲಾ ನಾಯಕರು ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ ಎಂದರು. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಇವತ್ತು ನಮ್ಮ ಬಳಿ ಬಂದಿದ್ದಾರೆ. ಎಲ್ಲವೂ ಈಗ ಸರಿಯಾಗಿದೆ. ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತೇವೆ. ನಾವು ಅಸಮಾಧಾನ ತೋರಿಸಲ್ಲ. ವಿಜಯೇಂದ್ರ…

Read More

ಬೆಂಗಳೂರು:- ಮಾಜಿ ಸಿಎಂ ಯಡಿಯೂರಪ್ಪ ಅವರು, ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಆರ್.ಅಶೋಕ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ಮಾಜಿ ಸಚಿವ ವಿ ಸೋಮಣ್ಣ ಜೊತೆ ಕೂಡ ಮಾತನಾಡುತ್ತೇವೆ. ಸೋಮಣ್ಣ ಕೂಡ ಒಳ್ಳೆಯ ಸಂಘಟಕ. ಮುಂದಿನ ದಿನಗಳಲ್ಲಿ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಆರ್. ಅಶೋಕ್ ಅವರನ್ನು ಪ್ರತಿಪಕ್ಷ ನಾಯಕ, ವಿಜಯೇಂದ್ರನನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಮಾಜಿ ಸಿಎಂ ಬೊಮ್ಮಾಯಿ‌ ಎಲ್ಲರೂ ಸೇರಿ ಪಕ್ಷವನ್ನು ಮುನ್ನಡೆಸುತ್ತೇವೆ. ಇಂದು ಚುನಾವಣೆ ನಡೆದರು ನಾವು ಗೆಲ್ಲುತ್ತೇವೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು. ಜಾತಿ ಗಣತಿ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸರ್ಕಾರ ಏನಂತ ತೀರ್ಮಾನ‌ ಮಾಡಲಿ. ಆಮೇಲೆ ನೋಡೋಣ ಎಂದರು.

Read More

ಮಂಡ್ಯ:  ಬಿಜೆಪಿಯವರು ಹೇಳಿದರೆ ಕುಮಾರಸ್ವಾಮಿ (H.D.Kumaraswamy) ಚಡ್ಡಿನೂ ಹಾಕ್ತಾರೆ, ಮಾಲೆನೂ ಎಂದಿದ್ದ ಸಚಿವ ಚಲುವರಾಯಸ್ವಾಮಿಗೆ (Chaluvaraya Swamy) ಜೆಡಿಎಸ್ ನಾಯಕರು ಟಾಂಗ್ ನೀಡಿದ್ದಾರೆ. ಚಲುವರಾಯಸ್ವಾಮಿಗೆ ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮದೇ ಶೈಲಿನಲ್ಲಿ ವಾಗ್ದಾಳಿ ನಡೆಸಿದ್ದರು. ಇಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ (Suresh Gowda) ವಾಗ್ದಾಳಿ ನಡೆಸಿದ್ದಾರೆ. https://ainlivenews.com/housewifes-body-found-hanging-in-bangalore/ ಚಲುವರಾಯಸ್ವಾಮಿ ಮೊದಲೇ ಚಡ್ಡಿ‌ ಹಾಕಲ್ಲ. ಇವರಿಗೆ ಯಾರು ಹೇಳಬೇಕು ಚಡ್ಡಿ ಹಾಕು ಅಂತ ಎಂದು ತಿರುಗೇಟು ನೀಡಿದ್ದಾರೆ.  ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯ ಹೇಳಬೇಕಾ? ಇವರಿಗೆ ಯಾಕೆ ನಮ್ಮ ವಿಷಯ. ಇವರದ್ದು ಎಷ್ಟಿದೆ ಅಷ್ಟು ನೋಡಿಕೊಳ್ಳಬೇಕು. ಈತನಿಗೆ ಪ್ಯಾಂಟ್ ಹಾಕೋದು ಕಲಿಸಿದ್ದವರು ಯಾರು? ಚಲುವರಾಯಸ್ವಾಮಿಗೆ ಚಡ್ಡಿ ಹಾಕಿದ್ರೆ ತೊಂದರೆ ಆಗಬಹುದು. ಅದಕ್ಕೆ ಆತ ಚಡ್ಡಿ ವಿಚಾರ ಹೇಳ್ತಾ ಇದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. 

Read More

ಬೆಂಗಳೂರು:- ಕಾಂತರಾಜು ವರದಿ ಸ್ವೀಕಾರಕ್ಕೆ ಗೊಂದಲ ಏಕೆ!? ಎಂದು ಮಾಜಿ ಸಚಿವ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವರದಿ ಸ್ವೀಕಾರಕ್ಕೆ ತರಾತುರಿ‌ ಏಕೆ?. ವರದಿ ಮೂಲ ಯಾರು ಕದ್ದಿದ್ದಾರೆ ಅನ್ನೋದು ತನಿಖೆ ಆಗಬೇಕು. ಅದರ ಮೂಲ ಕಳೆದುಹೋಗಿದೆ. ಅವರೇ ಬರೆಸಿ ವರದಿ ಮಾಡಿದ್ದಾರಾ?. ವರದಿ ವೈಜ್ಞಾನಿಕವಾದರೆ ಕಾರ್ಯದರ್ಶಿ ಏಕೆ ಸಹಿ ಹಾಕಿಲ್ಲ?. ಯಾರ ಮನೆಯಲ್ಲಿ ಬರೆದಿದ್ದಾರೆ, ಎಲ್ಲಿ ಕೂತು ಬರೆದಿದ್ದಾರೆ ಎಂಬುದು ಗೊತ್ತಾಗಬೇಕು ಎಂದರು. ಕಾಂತರಾಜು ವರದಿ ಗೊಂದಲಕ್ಕೆ ಕಾರಣವಾಗಿದೆ. ಕಾಂತರಾಜು ವರದಿ ಘೋಷಣೆ ಮಾಡುವಾಗ ಸಮಿತಿ ಮಾಡದೆ ಏಕಾಏಕಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದು ಹತ್ತು ವರ್ಷ ಹಳೆಯ ವರದಿ‌. ಜನಸಂಖ್ಯೆ ಬದಲಾವಣೆ ಆಗಿದೆ. ನಮ್ಮ ಮನೆಗೆ ಬಂದಿಲ್ಲ ಎಂದು ಸಾರ್ವಜನಿಕರಿಂದ ದೂರು ಇದೆ. ಕಾಂತರಾಜು ವರದಿಗೆ ಮೆಂಬರ್ ಸೆಕ್ರೆಟರಿ ಸಹಿ ಹಾಕಿಲ್ಲ. ಅಲ್ಲದೆ ವರದಿಯ ಮೂಲ ಪ್ರತಿ ಕಾಣೆಯಾಗಿದೆ ಎಂದು ತಿಳಿಸಿದರು. 168 ಕೋಟಿ ರೂಪಾಯಿ ಸರ್ಕಾರದ ಹಣ ಖರ್ಚು ಮಾಡಿದ ವರದಿ ಮೂಲ…

Read More

ಕೋಲಾರ: ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರನ್ನು ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.24 ರಿಂದ ನಗರದ ಶಾಶ್ವತ ನೀರಾವರಿ ವೇದಿಕೆಯಲ್ಲಿ ಪದವಿ ಕಾಲೇಜುಗಳ ತರಗತಿಗಳನ್ನು ಬಹಿಷ್ಕಾರಿಸಿ ಅನಿರ್ದಿಷ್ಟವಧಿ ಧರಣಿ ನಡೆಯಲಿದೆ ಎಂದು ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯಾಧ್ಯಕ್ಷ ನಾಗನಾಳ ಮುನಿಯಪ್ಪ ಅವ್ರು ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಡಿ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಯುಜಿಸಿ ನಿಯಮಾನುಸಾರವಾಗಿ ಸುಮಾರು 10 ಸಾವಿರದ 30 ಮಂದಿ ಹಾಗೂ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 530 ಮಂದಿ ಕೆಲಸ ಮಾಡುತ್ತಾ ಇದ್ದು ಸರಕಾರ ಕೂಡಲೇ ಅಥಿತಿ ಉಪನ್ಯಾಸಕರನ್ನು ಖಾಯಂ ಸೇರಿದಂತೆ ರಜೆ, ವೇತನ ಸೌಲಭ್ಯದಲ್ಲಿ ಆಗುತ್ತಾ ಇರುವ ತಾರತಮ್ಯವನ್ನು ಸರ್ಕಾರ ಸ್ಪಂದಿಸಬೇಕು ಎಂದು ತಿಳಿಸಿದ್ರು. ರಾಜ್ಯ ಸರಕಾರ ಗ್ರಾಪಂನ ಸಿಬ್ಬಂಧಿ ಹಾಗೂ ಇತರೇ ಇಲಾಖೆ ಸಿಬ್ಬಂದಿಗಳಿಗೆ ಸೇವಾ ಭದ್ರತೆಯನ್ನು ನೀಡಲಾಗಿದೆ. ಹೀಗಾಗಿ ಇದೇ ಮಾದರಿಯಲ್ಲಿ ಅಥಿತಿ ಉಪನ್ಯಾಸಕರಿಗೂ ಸಹ ಸೇವಾ ಸೌಲಭ್ಯವನ್ನು ನೀಡಬೇಕು ರಾಜ್ಯದಲ್ಲಿ ಅಥಿತಿ ಉಪನ್ಯಾಸಕ ರಾಗಿ ಕಳೆದ…

Read More

ಕೋಲಾರ: ಜಾತಿಗಣತಿ ಸಲ್ಲಿಕೆ ವಿಚಾರವಾಗಿ ಇವತ್ತು ಸಂಜೆ ಕ್ಯಾಬಿನೇಟ್ ಮೀಟಿಂಗ್ ಇದ್ದು ಇದರ ಕುರಿತು ಚರ್ಚೆ ಮಾಡುತ್ತೇವೆ ಎಂದು ಕೋಲಾರದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ನೀಡಿದ್ರು. ಇಂದು ಪುಟ್ಟಪರ್ತಿ ಸಾಯಿಬಾಬ ಹುಟ್ಟುಹಬ್ಬ ಹಿನ್ನಲೆ ಕೋಲಾರದ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಾತಿ ಗಣತಿ ವಿಚಾರವಾಗಿ ಈಗ ನಾನೂ ಯಾವುದನ್ನೂ ಹೇಳುವುದಕ್ಕೆ ತಯಾರಿಲ್ಲ  ಎಂದರು. ಅಲ್ಲದೆ ವರದಿಯನ್ನ ಜಾರಿ ಮಾಡಬೇಕು ಅನ್ನೋ ಅಭಿಪ್ರಾಯ ಇದೆ ಆದರೆ ಯಾವುದೇ ವರ್ಗಕ್ಕೆ ಅನ್ಯಾಯ ಆಗಬಾರದು, ಜನಸಂಖ್ಯೆ ಆಧಾರದ ಮೇಲೆ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕು ಎಂದರು. ಹೀಗಾಗಿ ಈ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಇವತ್ತಿನ ಕ್ಯಾಬಿನೇಟ್ ಮೀಟಿಂಗ್ ಬಲಗಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ರು. ಇನ್ನೂ ಕಾಂಗ್ರೇಸ್ ಪಕ್ಷ ಯಾವುದೇ ವರ್ಗಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತದೆ ಎಂದರು. ಇನ್ನೂ ರಾಹುಲ್ ಗಾಂಧಿ ಅವರ ಮೂಲ ಉದ್ದೇಶ ಎಲ್ಲಾ ಸಮುದಾಯದವರಿಗೆ ಸಮಾನ ಅವಕಾಶ ಕಲ್ಪಿಸುವುದು ಹೀಗಾಗಿ ಈ ವಿಚಾರ ಇನ್ನೂ  ಕ್ಯಾಬಿನೇಟ್…

Read More

ಬೆಂಗಳೂರು: ಬೆಂಗಳೂರಿನಲ್ಲಿ ಬೆಸ್ಕಾಂ ದುರಂತಕ್ಕೆ ತಾಯಿ, ಮಗು ಬಲಿಯಾಗಿದ್ದಕ್ಕೆ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು ನಗರದಲ್ಲಿ ಕಠಿಣ ರೂಲ್ಸ್‌ ಜಾರಿಗೆ ಪಾಲಿಕೆ ಮುಂದಾಗಿದೆ. https://ainlivenews.com/mplementation-report-on-four-guarantee-schemes-led-by-cm-siddaramaiah/ ನಗರಾದ್ಯಂತ ಅನಧಿಕೃತ ಕೇಬಲ್​ಗಳ ಕಡಿವಾಣಕ್ಕೆ ಬಿಬಿಎಂಪಿ ಸಜ್ಜಾಗಿದೆ. ಇನ್ಮುಂದೆ ಯಾರೂ ಕೂಡ ಎಲ್ಲೆಂದರಲ್ಲಿ ರಸ್ತೆ ಅಗೆಯುವಂತಿಲ್ಲ. ಬೆಂಗಳೂರಿನಲ್ಲಿ ವಾರ್ಡ್ ರಸ್ತೆಗೆ ಸಂಬಂಧಿಸಿದಂತೆ ಒಟ್ಟು 13,800 ಕಿಲೋ ಮೀಟರ್​ನಷ್ಟು ರಸ್ತೆಗಳು ಇವೆ. ಇನ್ಮುಂದೆ ಒಂದು ವಾರ್ಡ್ ಗೆ ಒಬ್ಬನೇ ಗುತ್ತಿಗೆದಾರ. ಯಾವುದೇ ಕೇಬಲ್ ಅಳವಡಿಕೆ ಮಾಡಬೇಕೆಂದರೂ ಗುತ್ತಿಗೆದಾರರು ಹೊಣೆಯಾಗಿರುತ್ತಾರೆ. ನಗರದಲ್ಲಿ ಇರುವ ಎಲ್ಲಾ ಒಎಫ್​ಸಿ ಸೇರಿದಂತೆ ಎಲ್ಲಾ ರೀತಿಯ ಕೇಬಲ್ ಗಳು ಡಕ್ಟ್ ನಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ನಗರದಲ್ಲಿ ಎಲ್ಲಾ ರೀತಿಯ ಕೇಬಲ್‌ ಅಳವಡಿಕೆಗೆ ಡಕ್ಟ್ ನಿರ್ಮಾಣ ಮಾಡಲು ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲು ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

Read More

ದೊಡ್ಡಬಳ್ಳಾಪುರ :ಚುನಾವಣೆ ಸಂಧರ್ಭದಲ್ಲಿ ಜನರಿಗೆ ಶಾಸಕರು ಸೀರೆ ಹಂಚಿ ,ತೀರ್ಥ ಕ್ಷೇತಗಳಿಗೆ ಪ್ರವಾಸ ಭಾಗ್ಯ ಕೊಟ್ಟು, ಷಷ್ಠಿ ಪೂರ್ತಿ ಕಾರ್ಯಕ್ರಮ ಮಾಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಮೇಲೆ ತಾಲೂಕಿನ ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಹಾಲಿ ಹಾಗು ಮಾಜಿ ಸಾಸಕರ ವಿರುದ್ದ ಗುಡುಗಿದರು. ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರೀಶ್ ಗೌಡರವರು ಕ್ಷೇತ್ರದಲ್ಲಿ ಅಭಿವೃದ್ಧಿ ಅನ್ನುವುದು ಕಣ್ಮರೆಯಾಗಿದೆ.ರಾಜಕೀಯ ಕಾರಣಕ್ಕಾಗಿ ಮಾಜಿ‌ ಶಾಸಕರು ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಿಡುವುದಿಲ್ಲ. ಸ್ವಾರ್ಥ ಮತ್ತ ರಾಜಕೀಯ ಕಾರಣದಿಂದ ದೊಡ್ಡಬಳ್ಳಾಪುರ ಕ್ಷೇತ್ರ ಹಿಂದುಳಿದಿದೆ, ದೊಡ್ಡಬಳ್ಳಾಪುರ ನಗರಸಭೆಯಾಗಿ 15 ವರ್ಷಗಳೇ ಆದ್ರೂ ನಗರದಲ್ಲಿನ ಸಮಸ್ಯೆಗಳು ಇನ್ನೂ ಜೀವಂತವಾಗಿವೆ, ನಗರದಂತೆ ದೊಡ್ಡಬಳ್ಳಾಪುರು ಗ್ರಾಮಾಂತರ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿದೆ. ಮಾಜಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುವುದು ಇಲ್ಲ, ಹಾಲಿ ಶಾಸಕರನ್ನ ಮಾಡುವುದಕ್ಕೂ ಬಿಡುವುದಿಲ್ಲ, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಆಗಿನ ಶಾಸಕರು ಕೆಲಸ ಮಾಡದಂತೆ ಮಾಡಿದ್ರು, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು…

Read More

ಬೆಂಗಳೂರು : ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. https://ainlivenews.com/so-moody-so-beautiful-to-whom-did-rakshith-shetty-say-this/ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಾವಾಗ ಚುನಾವಣೆ ಆಗುತ್ತೋ ಆಗ ಅವರು ಮನೆಗೆ ಹೋಗ್ತಾರೆ. ಇಂದು ಚುನಾವಣೆ ನಡೆದರೂ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ನಿವಾಸಕ್ಕೆ ಬಿ.ವೈ. ವಿಜಯೇಂದ್ರ ಹೋಗಿದ್ದರ ಬಗ್ಗೆ ಮಾತನಾಡಿದ ಅವರು, ಆರ್. ಅಶೋಕ್ ಅವರನ್ನು ವಿಪಕ್ಷ ನಾಯಕ, ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ್ದೇವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಎಲ್ಲಾರೂ ಸೇರಿ ಪಕ್ಷವನ್ನು ಮುನ್ನಡೆಸುತ್ತೇವೆ. ವಿಜಯೇಂದ್ರ, ಅಶೋಕ್ ಎಲ್ಲಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದಾರೆ.

Read More