ಕೋಲಾರ: ಜಾತಿಗಣತಿ ಸಲ್ಲಿಕೆ ವಿಚಾರವಾಗಿ ಇವತ್ತು ಸಂಜೆ ಕ್ಯಾಬಿನೇಟ್ ಮೀಟಿಂಗ್ ಇದ್ದು ಇದರ ಕುರಿತು ಚರ್ಚೆ ಮಾಡುತ್ತೇವೆ ಎಂದು ಕೋಲಾರದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ನೀಡಿದ್ರು. ಇಂದು ಪುಟ್ಟಪರ್ತಿ ಸಾಯಿಬಾಬ ಹುಟ್ಟುಹಬ್ಬ ಹಿನ್ನಲೆ ಕೋಲಾರದ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಾತಿ ಗಣತಿ ವಿಚಾರವಾಗಿ ಈಗ ನಾನೂ ಯಾವುದನ್ನೂ ಹೇಳುವುದಕ್ಕೆ ತಯಾರಿಲ್ಲ ಎಂದರು.
ಅಲ್ಲದೆ ವರದಿಯನ್ನ ಜಾರಿ ಮಾಡಬೇಕು ಅನ್ನೋ ಅಭಿಪ್ರಾಯ ಇದೆ ಆದರೆ ಯಾವುದೇ ವರ್ಗಕ್ಕೆ ಅನ್ಯಾಯ ಆಗಬಾರದು, ಜನಸಂಖ್ಯೆ ಆಧಾರದ ಮೇಲೆ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕು ಎಂದರು. ಹೀಗಾಗಿ ಈ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಇವತ್ತಿನ ಕ್ಯಾಬಿನೇಟ್ ಮೀಟಿಂಗ್ ಬಲಗಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ರು. ಇನ್ನೂ ಕಾಂಗ್ರೇಸ್ ಪಕ್ಷ ಯಾವುದೇ ವರ್ಗಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತದೆ ಎಂದರು. ಇನ್ನೂ ರಾಹುಲ್ ಗಾಂಧಿ ಅವರ ಮೂಲ ಉದ್ದೇಶ ಎಲ್ಲಾ ಸಮುದಾಯದವರಿಗೆ ಸಮಾನ ಅವಕಾಶ ಕಲ್ಪಿಸುವುದು ಹೀಗಾಗಿ ಈ ವಿಚಾರ ಇನ್ನೂ ಕ್ಯಾಬಿನೇಟ್ ಮುಂದೆ ಬಂದಿಲ್ಲ ಎಂದರು.
ಅಲ್ಲದೆ ಮೂಲ ಪ್ರತಿ ಮಿಸ್ಸಿಂಗ್ ಆಗಿದೆ ಎಂಬ ಜಯಪ್ರಕಾಶ್ ಹೇಳಿಕೆಗೆ ಕ್ಯಾಬಿನೇಟ್ ನಲ್ಲಿ ಕುಳಿತು ತೀರ್ಮಾನ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು. ಇನ್ನೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡುವ ವಿಚಾರ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿರುವುದು ಸಧ್ಯ ಪಂಚ ರಾಜ್ಯಗಳ ಚುನಾವಣೆ ಮುಗಿಸಿ ನಂತರ ಯೋಚನೆ ಮಾಡಲಾಗುವುದು ಎಂದರು. ಇನ್ನೂ ತೆಲಾಂಗಣ ಚುನಾವಣೆಯಲ್ಲಿ ಕಾಂಗ್ರೇಸ್ ವಾತಾವರಣ ಇದೆ ಎಂದು ಹೇಳಿದ್ರು.