ಇದೇ ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ‘ಬೆಂಗಳೂರು ಕಂಬಳ’ಕ್ಕೆ (Kambala) ಕನಿಷ್ಠ 3ರಿಂದ 5 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಕಂಬಳ ಸಮಿತಿ (ರಿ.) ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು. https://ainlivenews.com/knee-pain-treatment-joint-pain-treatment/ ಈ ಬಾರಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ(Aishwarya Rai), ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ ಎಂದು ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದ್ದಾರೆ. ನವೆಂಬರ್ 25, 26ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ತಯಾರಿ ಸಲುವಾಗಿ ಇಂದು ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆಗಳ ಜೊತೆ ನಡೆದ ಬೃಹತ್ ಸಮಾಲೋಚನಾ ಸಭೆ ಬಳಿಕ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದರು.
Author: AIN Author
ಡ್ರೋನ್ ಪ್ರತಾಪ್ (Drone Prathap) ಅವರು ದೊಡ್ಮನೆಗೆ ಕಾಲಿಡುವ ಮುನ್ನ ಜನರಿಗೆ ಇದ್ದ ಅಭಿಪ್ರಾಯವೇ ಬೇರೆಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆದ ಬಳಿಕ ಪ್ರತಾಪ್ ಮೇಲೆ ಜನರಿಗೆ ನಂಬಿಕೆ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಬಿಗ್ ಬಾಸ್‌ಗೆ (Bigg Boss Kannada 10) ಬಂದ ಮೇಲೆ ಡ್ರೋನ್ ಪ್ರತಾಪ್ ಅವರು ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಇನ್ನೂ ದೊಡ್ಮನೆಯಲ್ಲಿ ಪ್ರತಾಪ್, ಬುದ್ಧಿವಂತ ಎಂದು ತಿಳಿದ ಮೇಲೆ ಅವರ ಜೊತೆ ಫ್ರೆಂಡ್‌ಶಿಪ್ ಮಾಡಿಕೊಳ್ಳಲು ತುಕಾಲಿ ಸಂತೂ, ವರ್ತೂರು ಸಂತೋಷ್, ವಿನಯ್, ಸ್ನೇಹಿತ್ ಮುಂದಾಗಿದ್ದಾರೆ. https://ainlivenews.com/knee-pain-treatment-joint-pain-treatment/ ಸಂತೋಷ್‌ಗೆ ಮನೆಯ ಒಳಗೆ ಇರುವ ಸ್ಪರ್ಧಿಗಳ ಬಗ್ಗೆ ಜನರಿಗೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ಅವರಿಗೆ ತಿಳಿದಿದೆ. ಹೀಗಾಗಿ, ದೊಡ್ಮನೆ ಒಳಗೆ ಬಂದ ಅವರು ವಿನಯ್ & ಟೀಮ್‌ನಿಂದ ದೂರಯುಳಿದಿದ್ದಾರೆ. ತುಕಾಲಿ ಸಂತೂ ಬಳಿ ಸಂತೋಷ್ ಹೋಗಿ ಪ್ರತಾಪ್ ಜೊತೆ ಸೇರಿಕೊಳ್ಳೋಕೆ ಅವರು ಸೂಚಿಸಿದ್ದಾರೆ. ವಿನಯ್-ಕಾರ್ತಿಕ್ ಕಿತ್ತಾಡುತ್ತಿದ್ದರು. ಆದರೆ, ಈಗ ಅವರಿಬ್ಬರೂ ಒಂದಾಗಿದ್ದಾರೆ. ಪ್ರತಾಪ್…
ಬೆಂಗಳೂರಿನ ಶ್ವಾನ ಪ್ರೇಮಿಗಳೇ ಈ ಸ್ಟೋರಿ ಮಿಸ್ ಮಾಡಬೇಡಿ ನೀವು ಪೆಟ್ಸ್ ಪ್ರೇಮಿಗಳಾ ಹಾಗಿದ್ರೆ ಇನ್ಮುಂದೆ ಈ ಹೊಸ ಪ್ರಾಬ್ಲಂ ಫೇಸ್ ಮಾಡಲು ರೆಡಿ ಆಗಿ ಎಂದು ತಿಳಿಸುತ್ತದೆ ಏನಪ್ಪಾ ಅಂತೀರಾ ಇಲ್ಲಿದೆ ನೋಡಿ . https://ainlivenews.com/knee-pain-treatment-joint-pain-treatment/ ಸಿಲಿಕಾನ್ ಸಿಟಿಯಲ್ಲಿ ಶ್ವಾನ ಸಾಕಲು ಇಡಬೇಕಂತೆ ಠೇವಣಿ ಹಾಗೆ ಜೊತೆಗೆ ನಿಮ್ ಮನೆಲಿ ಶ್ವಾನ ಇದ್ರೆ ಇಲ್ಲಿ ಪಾಲಿಸಬೇಕಂತೆ ಶಿಫ್ಟ್ ಚಾರ್ಟ್ ಎಂದು ಪ್ರಕಟಣೆ ಮೂಲಕ ತಿಳಿಸಲಾಗುತ್ತಿದೆ. ಶ್ವಾನ ಸಾಕಲು ಸಾವಿರ ಸಾವಿರ ದುಡ್ಡು ಕೊಡಬೇಕು ನಿಗಧಿತ ಟೈಮ್ ಲ್ಲಿ ಮಾತ್ರ ಆಚೆ ತರಬೇಕು ನಾಯಿ ಸಾಕಲು ನಯಾ ರೂಲ್ಸ್ ತಂದ ನಗರದ ಈ ಅಪಾರ್ಟ್ಮೆಂಟ್ ಅಪಾರ್ಟ್ಮೆಂಟ್ ಅಲ್ಲಿ ನಾಯಿ ಸಾಕಲು 10 ಸಾವಿರ ದುಡ್ಡು ಠೇವಣಿ ಇಡಬೇಕಂತೆ ಸಿಲಿಕಾನ್ ಸಿಟಿಯಲ್ಲಿ ನಾಯಿ ಸಾಕೋದು ತುಂಬಾ ಕಾಸ್ಟ್ಲಿ ಗುರು ಅಂತಿದ್ದಾರೆ ಸಿಟಿ ಮಂದಿ 1,000 ಕ್ಕೂ ಹೆಚ್ಚು ಜನರು ವಾಸಿಸುವ ಬೆಂಗಳೂರಿನ ಅಪಾರ್ಟ್ಮೆಂಟ್ ಇದು ಎಲೆಕ್ಟ್ರಾನಿಕ್ಸ್ ಸಿಟಿಯ ಇಟ್ಟಿನ ಮಹಾವೀರ್ ಅಪಾರ್ಟ್‌ಮೆಂಟ್‌ನಲ್ಲಿ ಈ…
ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದವರು ಎಲ್ಲ ವರ್ಗದವರಿಗೆ ಮೀಸಲಾತಿ ಕೊಡಲಾಗುವುದು ಎಂದು ಹೇಳಿ ಚಾಕಲೇಟ್ ಹಂಚಿಕೆ ಮಾಡಿದ ಹಾಗೇ ಬಿಜೆಪಿಯವರು ಮಾಡಿ ಹೋದರು ಎಂದುಸಮಾಜ ಕಲ್ಯಾಣ ಸಚಿವ ಎಚ್. ಸಿ.ಮಹದೇವಪ್ಪ ಗಂಭೀರ ಸ್ವರೂಪದ ಆರೋಪ ಮಾಡಿದರು. ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಡಾ.ಸದಾಶಿವ ಆಯೋಗ ಜಾರಿ ವಿಚಾರ ಕುರಿತು ಮಾತನಾಡಿದ ಅವರುಡಾ. ಸದಾಶಿವ ಆಯೋಗ ವರದಿ ಜಾರಿ ಮಾಡುವುದು ನಮ್ಮ ಆದ್ಯ ಕರ್ತವ್ಯಡಾ.ಸದಾಶಿವ ವರದಿ ಜಾರಿ ಮಾಡುವುದು 2-3 ದಶಕಗಳ ಕಾಲದ್ದು ಈಗಿನದು ಅಲ್ಲಾ. ಭಾರತೀಯ ಜನತಾ ಪಕ್ಷದವರು ಡಾ. ಸದಾಶಿವ ಆಯೋಗ ವರದಿ ತಿರಸ್ಕಾರ ಮಾಡಿದ್ದಾರೆ ಅವರು ಮೀಸಲಾತಿ ವಿಚಾರದಲ್ಲಿ ಕಾಟಾಚಾರಕ್ಕೆ ಮೀಸಲಾತಿ ಜಾರಿ ಮಾಡಿದ್ದಾರೆ ನಾವು ಚುನಾವಣಾ ಸಂದರ್ಭದಲ್ಲಿ ಮಾತು ಕೊಟ್ಟಿದ್ದೇವೆ ಈ ಕುರಿತುಚಿತ್ರದುರ್ಗದ ಸಮಾವೇಶದಲ್ಲಿ ಡಾ.ಸದಾಶಿವ ಆಯೋಗ ವರದಿ ಯಥಾವತ್ತಾಗಿ ಜಾರಿ ಮಾಡುತ್ತೇವೆ ಅಂತಾ ಮಾತುಕೊಟ್ಟಿದ್ದೇವು. ಮೀಸಲಾತಿ ಜಾರಿಗೆ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ ಅಂತಾ ಹೇಳಿದ್ದವು. ಮೀಸಲಾತಿ ಜಾರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ…
ಹುಬ್ಬಳ್ಳಿ: ವಿದ್ಯಾರ್ಥಿಗೆ ಲಂಚದ ಬೇಡಿಕೆ ಇಟ್ಟ ಆರೋಪ ಹಿನ್ನೆಲೆ ಕರ್ನಾಟಕ ರಾಜ್ಯ ಕಾನೂನು ವಿವಿಯ ಚೇಂಬರ್‌ಗೆ ನುಗ್ಗಿದ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್( ಎಬಿವಿಪಿ )ಕಾರ್ಯಕರ್ತರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ (ಕೆಎಸ್‌ಎಲ್‌ಯು) ಸಿಬ್ಬಂದಿ ನಯೀಮ್ ಎಂಬಾತ ವಿದ್ಯಾರ್ಥಿಗೆ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಮಾಡಲಾಗಿದೆ. ನಯೀಂ ಚೇಂಬರ್ ಗೆ ನುಗ್ಗಿದ ಅಖಿಲ್ ಭಾರತೀಯ ವಿದ್ಯಾರ್ಥಿ ( ಎಬಿವಿಪಿ )ಕಾರ್ಯಕರ್ತರು. ಲಂಚದ ಬೇಡಿಕೆಯಿಟ್ಟ ಆಡಿಯೋ ಸಂಭಾಷಣೆ ಕೇಳಿಸಿ ನಯೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು. ಕಚೇರಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಎಸೆದು ಪ್ರತಿಭಟನೆ ನಡೆಸಲಾಯಿತು. ಸೂಕ್ತ ಕ್ರಮ ಕೈಗೊಳ್ಳುವಂತೆ ಕುಲಪತಿ ಬಸವರಾಜು ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು. ಕುಲಸಚಿವರಿಂದ ಸೂಕ್ತ ಕ್ರಮದ ಭರವಸೆ ಸಿಕ್ಕ ನಂತರ ಪ್ರತಿಭಟನೆ ವಾಪಸ್ ಪಡೆದ ಎಬಿವಿಪಿ ಕಾರ್ಯಕರ್ತರು. ಕಾನೂನು ವಿವಿ ಯುವ ಜನೋತ್ಸವಕ್ಕೆ ಚೇತನ್ ಅಹಿಂಸಾ ಅತಿಥಿ, ಎಬಿವಿಪಿ ಕಿಡಿಕಿಡಿ ತುಮಕೂರು…
ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ ಸೇರಿದ್ದು ಎನ್ನಲಾದ ಮೊಬೈಲ್ ಪತ್ತೆ ಮಾಡುವಲ್ಲಿ ಪೋಲೀಸರು ಸಕ್ಸಸ್ ಆಗಿದ್ದಾರೆ. ಅಪಾರ್ಟಮೆಂಟ್ ದಲ್ಲಿ RD ಇದ್ದಾನೆ ಅಂತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ವೇಳೆ ಮೊಬೈಲ್ ಪತ್ತೆಯಾಗಿದೆ.. ಸೀಜ್ ಮಾಡಿದ ಮೊಬೈಲ್ ಇದೀಗ ಫೊರೆನ್ಸಿಕ್ ಲ್ಯಾಬ್ ಗೆ ಕಳಿಸಲಾಗಿದೆ..ಅಕ್ರಮ ದಂಧೆಗೆ ಹೊಸ ಮೊಬೈಲ್ ಖರೀದಿಸಿ WhatsApp ಕಾಲ್ ಮಾಡ್ತಿದ್ದ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆದಿದ್ದು ಹಲವು ಮಹತ್ವದ ದಾಖಲೆಗಳು ಮೊಬೈಲ್ ದಲ್ಲಿವೆ ಎನ್ನಲಾಗಿದೆ..
ಬೆಂಗಳೂರು: ರಾಜ್ಯಾದ್ಯಂತ 4 ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರಿನಲ್ಲಿ ಇಂದು ಕೂಡ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ರಾಜ್ಯದ 6 ಜಿಲ್ಲೆಗಳಿಗೆ ಎರಡು ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. https://ainlivenews.com/knee-pain-treatment-joint-pain-treatment/ ಬೆಂಗಳೂರಿನಲ್ಲಿ ಗುಡುಗಿನ ಜೊತೆಗೆ ಮೇಲ್ಮೈ ಗಾಳಿ ಬಲವಾಗಿ ಬೀಸುವ ಸಾಧ್ಯತೆಯಿದ್ದು, ಮರದ ಕೆಳಗೆ, ತಾತ್ಕಾಲಿಕ ಶೆಲ್ಟರ್ ಕೆಳಗೆ ನಿಲ್ಲದಿರಿ ಎಂದು ಎಚ್ಚರಿಕೆ ನೀಡಲಾಗಿದೆ. ಬಲವಾದ ಗಾಳಿ ಜೊತೆಗೆ ಧಾರಾಕಾರ ಮಳೆ ಸಾಧ್ಯತೆಯಿದೆ. ಸಂಜೆಯ ನಂತರ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ
ಮಹದೇವಪುರ: ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಹಾಗೂ ಬಂಡೆ ಹೊಸೂರಿನಲ್ಲಿ ಬಿಬಿಎಂಪಿಯ ಘನ ತ್ಯಾಜ್ಯ ವಿಲೇವಾರಿ ಘಟಕದಿಂದ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಕುರಿತು ಸ್ಥಳೀಯರಿಂದ ದೂರು ಬಂದ ಹಿನ್ನೆಲೆ , ಶಾಸಕಿ ಮಂಜುಳಾ ಲಿಂಬಾವಳಿ , ಮಹದೇವಪುರ ಟಾಸ್ಕ್ ಫೋರ್ಸ್ ಅಧ್ಯಕ್ಷರು ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ , ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ತ್ಯಾಜ್ಯ ಘಟಕಗಳ ಪರಿವೀಕ್ಷಣೆ ನಡೆಸಿದರು. ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಿಟ್ಟಗಾನಹಳ್ಳಿ ಹಾಗೂ ಬಂಡೆ ಹೊಸೂರು ಗ್ರಾಮಗಳ ಕಲ್ಲುಕ್ವಾರಿಗಳಲ್ಲಿ ಕಳೆದ ಹಲವು ವರ್ಷಗಳಿಂದ ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ, ದಿನ ಕಳೆದಂತೆ ಲಕ್ಷಾಂತರ ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಗೊಂಡಿದೆ, ತ್ಯಾಜ್ಯ ಮತ್ತು ಲಿಚ್ಚೇಡ್ ನೀರು ಶೇಖರಣೆಯಿಂದ ಸುತ್ತಮುತ್ತಲಿನ ಗ್ರಾಮಗಳ ನೀರು, ವಾತಾವರಣ ಸಂಪೂರ್ಣ ಕಲುಷಿತಗೊಂಡಿದ್ದು , ಶುದ್ಧ ಗಾಳಿಯು ಲಭಿಸಿದಂತಾ ಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಸಮಸ್ಯೆಗಳು ಮತ್ತಷ್ಟು ಬಿಗಾಡಾಸಿದ ಹಿನ್ನಲೆ ಸ್ಥಳೀಯರು ಶಾಸಕರಿಗೆ ದೂರನ್ನು ನೀಡಿದ್ದು ,…
ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಪೋಕ್ಸೋ (Pocso Case) ಕಾಯ್ದೆ ಅಡಿ ಬಂಧನಕ್ಕೊಳಗಾದ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರ (MurughaShri) ಜಾಮೀನು (Bail) ಅರ್ಜಿ ವಿಚಾರಣೆಯ ಆದೇಶವನ್ನು ಹೈಕೋರ್ಟ್ (High Court) ಇಂದು ಪ್ರಕಟಿಸಲಿದೆ. ಈ ಮೂಲಕ ಸ್ವಾಮೀಜಿಯ ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ. https://ainlivenews.com/knee-pain-treatment-joint-pain-treatment/ ಕಳೆದ ವರ್ಷ ಸೆ.2 ರಂದು ಮುರುಘಾಶ್ರೀ ಶಿವಮೂರ್ತಿ ಸ್ವಾಮೀಜಿಯನ್ನು ಪೋಕ್ಸೊ ಪ್ರಕರಣದಡಿ ಬಂಧಿಸಲಾಗಿತ್ತು. ಕಳೆದ 13 ತಿಂಗಳಿಂದ ಜೈಲಿನಲ್ಲಿರುವ ಸ್ವಾಮೀಜಿ ಜಾಮೀನು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಅ.31 ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಆದೇಶವನ್ನು ಕಾಯ್ದಿರಿಸಿತ್ತು
ಶಿಡ್ಲಘಟ್ಟ: ಪಿಎಸ್ಐ ವೇಣುಗೋಪಾಲ್ ಅಧಿಕ ಶಬ್ದ ಉಂಟು ಮಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿ ಸೈಲೆನ್ಸರ್ ಗಳನ್ನು ತೆರವು ಗೊಳಿಸಿದರು. ಮಧ್ಯಾಹ್ನ ನಗರದಲ್ಲಿ ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ಹಲವು ಬೈಕ್ ಗಳನ್ನು ತಡೆದು ಬೈಕ್ ಸವಾರಿಂದಲೇ ಆಲ್ಟ್ರೇಷನ್ ಸೈಲೆನ್ಸರ್ಗಳನ್ನು ತೆರವು ಮಾಡಿಸಿದರು. ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದರು. ವಾಹನಗಳಿಗೆ ಸಂಭಂದಿಸಿದ ಅಗತ್ಯ ದಾಖಲೆಗಳೊಂದಿಗೆ ಇನ್ಶೂರೆನ್ಸ್ ಕಡ್ಡಾಯವಾಗಿ ಮಾಡಿಸಬೇಕು ಹಾಗು ಆಲ್ಟ್ರೇಷನ್ ಸೈಲೆನ್ಸರ್ ತೆರವು ಮಾಡುವುಂತೆ ಈ ಹಿಂದೆ ನಗರ ವ್ಯಾಪ್ತಿಯ ವಾಹನ ಸವಾರರಿಗೆ ಹೆಚ್ಚರಿಕೆ ಕೊಟ್ಟಿದ್ದರು. ಎಚ್ಚರಿಕೆಯ ನಂತರವೂ ತೆರವುಗೊಳಿಸದ ವಾಹನಗಳಿಂದ ಅನಗತ್ಯ ಉಪಟಳ ಮುಂದುವೆರದಿತ್ತು. ವಶಕ್ಕೆ ಪಡೆದ ವಾಹನ ಸವಾರರು ಹಾಗು ಸಾರ್ವಜನಿಕರಿಗೆ ಪಿಎಸ್ ಐ ವೇಣುಗೋಪಾಲ್ ಸುರಕ್ಷತಾ ಕ್ರಮಗಳು ಮತ್ತು ಸಂಚಾರ ನಿಯಮಗಳ ಕುರಿತು ತಿಳಿ ಹೇಳಿದರು.