ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ ಸೇರಿದ್ದು ಎನ್ನಲಾದ ಮೊಬೈಲ್ ಪತ್ತೆ ಮಾಡುವಲ್ಲಿ ಪೋಲೀಸರು ಸಕ್ಸಸ್ ಆಗಿದ್ದಾರೆ. ಅಪಾರ್ಟಮೆಂಟ್ ದಲ್ಲಿ RD ಇದ್ದಾನೆ ಅಂತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ವೇಳೆ ಮೊಬೈಲ್ ಪತ್ತೆಯಾಗಿದೆ..
ಸೀಜ್ ಮಾಡಿದ ಮೊಬೈಲ್ ಇದೀಗ ಫೊರೆನ್ಸಿಕ್ ಲ್ಯಾಬ್ ಗೆ ಕಳಿಸಲಾಗಿದೆ..ಅಕ್ರಮ ದಂಧೆಗೆ ಹೊಸ ಮೊಬೈಲ್ ಖರೀದಿಸಿ WhatsApp ಕಾಲ್ ಮಾಡ್ತಿದ್ದ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆದಿದ್ದು ಹಲವು ಮಹತ್ವದ ದಾಖಲೆಗಳು ಮೊಬೈಲ್ ದಲ್ಲಿವೆ ಎನ್ನಲಾಗಿದೆ..