Author: AIN Author

ಬೆಂಗಳೂರು:- ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವಿನ ಕಿರಿಕ್ ವಿಡಿಯೋ ವೈರಲ್ ಆಗಿದೆ. ಶಕ್ತಿ ಯೋಜನೆಯಡಿ ನಿತ್ಯ ಲಕ್ಷಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಬಟ್ ಸ್ಮಾರ್ಟ್ ಕಾರ್ಡ್ ವಿಳಂಬವಾಗ್ತಿರೋದ್ರಿಂದ ಸಮಸ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ತಪ್ಪದ ಕಿರಿಕ್ ಉಂಟಾಗಿದೆ. ಟಿಕೆಟ್ ತಗೊಂಡ ಜಾಗದಲ್ಲಿಯೇ ಇಳಿಬೇಕೆಂದು ಕಂಡಕ್ಟರ್ ಸೂಚನೆ ನೀಡಿದ್ದಾರೆ ಬೇರೆ ಜಾಗದಲ್ಲಿ ಇಳಿದ್ರೆ ಚೆಕಿಂಗ್ನವರು ಬಂದಾಗ ನಮಗೆ ನೋಟಿಸ್ ಕೊಡ್ತಾರೆ ಎಂದು ಕಂಡಕ್ಟರ್ ಅಳಲು ತೋಡಿಕೊಂಡಿದ್ದಾರೆ. ಬಟ್ ಎಮರ್ಜೆನ್ಸಿ ಸಮಯದಲ್ಲಿ ಅರ್ಧ ದಾರಿಯಲ್ಲಿ ಇಳಿಬೇಕಾಗುತ್ತೆಂದು ಮಹಿಳಾ ಪ್ರಯಾಣಿಕರು ವಾದ ಮಾಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಟಿಕೆಟ್ ತಗೊಂಡ ಜಾಗದಲ್ಲಿಯೇ ಇಳಿಯಕ್ಕಾಗಲ್ಲವೆಂದು ಲೇಡಿ ಆಕ್ರೋಶ ಹೊರ ಹಾಕಿದ್ದಾರೆ. ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವಿನ ಮಾತಿನ ಕಾಳಗದ ವಿಡಿಯೋ ವೈರಲ್ ಆಗಿದೆ.

Read More

ವಿಜಯಪುರ: ಆಕಸ್ಮಿಕ ಅಗ್ನಿ ಅವಘಡದಿಂದ 20 ಎಕರೆಗೂ ಅಧಿಕ ಕಬ್ಬಿಗೆ ಬೆಂಕಿ ತಗುಲಿ ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆ, ಚಡಚಣ ತಾ, ಧೂಳಖೇಡ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಸನ್ನ ನೀಲೂರೆ, ವೀರೇಶ ಕೋರೆ, ದಯಾನಂದ ಕೋರೆ. ಜಗನ್ನಾಥ ರೇವತಗಾಂವ ಎನ್ನುವವರಿಗೆ ಸೇರಿದ ಜಮೀನು ಆಗಿದ್ದು, ಕಟಾವಿಗೆ ಸಿದ್ಧವಾಗಿದ್ದ ಕಬ್ಬು, ಸುಮಾರು 20 ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಇಂಡಿಯಿಂದ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಉಳಿದ ಕಬ್ಬು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದ್ದು, ಕೂಡಲೇ ಹತ್ತಿರದಲ್ಲಿದ್ದ ಕಬ್ಬು ಕಟಾವಿನ ಗ್ಯಾಂಗ್‌ ಕರೆಸಿ ಕಟಾವು ಮಾಡಿ ಹತ್ತಿರದ ಸಕ್ಕರೆ ಕಾರ್ಖಾನೆಗೆ ಸಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Read More

ಬಳ್ಳಾರಿ:  ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಸ್ಥಾನದ ಉಪ ಚುನಾವಣೆ ಅನಿವಾರ್ಯ ಕಾರಣದಿಂದ ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ  ಮುಂದೂಡಲಾಗಿದೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ಅವರು ಪ್ರಕಟಿಸಿದ್ದಾರೆ. ಅವರು ಇಂದು ಬೆಳಿಗ್ಗೆ 9 ರಿಂದ 10.30 ರ ವರೆಗೆ ನಾಮಪತ್ರ ತೆಗೆದುಕೊಂಡರು. ಆಯ್ಕೆ ಬಯಸಿ ಕಾಂಗ್ರೆಸ್ ನಿಂದ 38 ನೇ ವಾರ್ಡಿನ ಸದಸ್ಯ ವಿ.ಕುಬೇರ ಮತ್ತು 31 ನೇ ವಾರ್ಡಿನ  ಶ್ವೇತ,  ಬಿಜೆಪಿ ಒಂದನೇ ವಾರ್ಡಿನ‌ ಸದಸ್ಯ ಹನುಮಂತ ಗುಡಿಗಂಟಿ ಮತ್ತು  ಮತ್ತು 35 ನೇ ವಾರ್ಡಿನ  ಪಕ್ಷೇತರ ಕಾರ್ಪೋರೇಟರ್ ಆಗಿ ಗೆದ್ದು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ವಿ. ಶ್ರೀನಿವಾಸಲು (ಮಿಂಚು)ನಾಮಪತ್ರ ಸಲ್ಲಿಸಿದ್ದರು.ಪಾಲಿಕೆಯಲ್ಲಿ 39 ಕಾರ್ಪೋಟರ್ ಗಳು ಐವರು ಶಾಸಕರು, ಸಂಸದರು ಸೇರಿ 44 ಜನ ಮತದಾನದ ಹಕ್ಕು ಪಡೆದಿದ್ದಾರೆ. ಇಂದು ಪಾಲಿಕೆಯತ್ತ ಶಾಸಕರು ಸಂಸದರು, ಕೆಲ ಸದಸ್ಯರು ಬಂದಿರಲಿಲ್ಲ. 39 ಸದಸ್ಯರ ಪೈಕಿ 21 ಜನ  ಕಾಂಗ್ರೆಸ್, 13ಜನ…

Read More

ವಿಜಯನಗರ: ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್​ ಬಾರದ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ನೋವಿನಿಂದ ನಡು ರಸ್ತೆಯಲ್ಲಿ ನರಳಾಡಿರುವ ಘಟನೆ ಕೂಟ್ಟೂರು ಪಟ್ಟಣದಲ್ಲಿ ನಡೆದಿದೆ. ಮನಕಲುಕುವ ದೃಶ್ಯಕ್ಕೆ ಕೂಟ್ಟೂರು ಪಟ್ಟಣ ಸಾಕ್ಷಿಯಾಗಿದೆ. ಬಸವರಾಜಪ್ಪ ಗಾಯಗೊಂಡ ವ್ಯಕ್ತಿಯಾಗಿದ್ದು, ಬಸವರಾಜಪ್ಪ ಅವರು ಇಂದು ಬೆಳಿಗ್ಗೆ ಕೊಟ್ಟೂರು ಬಸ್ ನಿಲ್ದಾಣ ಬಳಿ ಹೋಗುತ್ತಿದ್ದರು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಕೆಎಸ್​ಆರ್​ಟಿಸಿ ಬಸ್ ಬಸವರಾಜಪ್ಪ ಅವರಿಗೆ​ ಡಿಕ್ಕಿ ಹೊಡೆದಿದೆ. ಇದರಿಂದ ಬಸವರಾಜಪ್ಪ ಅವರ ಎಡಗಾಲಿಗೆ ಗಂಭೀರ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಿಯರು ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಆಂಬ್ಯುಲೆನ್ಸ್​ ಸ್ಥಳಕ್ಕೆ ಬರಲಿಲ್ಲ. ಹೀಗಾಗಿ ಗಾಯಗೊಂಡಿದ್ದ ಬಸವರಾಜಪ್ಪ ನಡು ರಸ್ತೆಯಲ್ಲಿ ನೋವಿನಿಂದ ನರಳಾಡಿದ್ದಾರೆ. ಕೊನೆಗೆ ಸ್ಥಳೀಯರು ಬಸ್‌ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಕೂಟ್ಟೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:- ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕನ್ನಡ ಚಲನಚಿತ್ರವೊಂದಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಪಡೆಯುವಾಗ ಸಿಬಿಐ ಅಧಿಕಾರಿಗಳ ಕೈಗೆ ನೇರವಾಗಿ ಸಿಕ್ಕಿಬಿದ್ದಿದ್ದಾರೆ ಸೆನ್ಸಾರ್ ಮಂಡಳಿಯ ಅಧಿಕಾರಿ ಪ್ರಶಾಂತ್ ಕುಮಾರ್. ‘ಅಡವಿ’ ಹೆಸರಿನ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರ್ಮಾಪಕರಿಗೆ ಪ್ರಶಾಂತ್ ಕುಮಾರ್ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಾಗಾಗಿ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿರುವ ಟೈಗರ್ ನಾಗ್, ನಟ ಆಸ್ಕರ್ ಕೃಷ್ಣ ಸಿಬಿಐ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು. ಇದೀಗ ಲಂಚ ಪಡೆಯುವಾಗಲೇ ಅಧಿಕಾರಿ ಪ್ರಶಾಂತ್ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಮಲ್ಲೇಶ್ವರಂ ಎಸ್.ಆರ್.ವಿ ಸ್ಟುಡಿಯೋದಲ್ಲಿ ರೀಜನಲ್ ಆಫೀಸರ್ ಅನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಹೊಸ ನಿರ್ಮಾಪಕರನ್ನು ಟಾರ್ಗೆಟ್ ಮಾಡಿ ಸತಾಯಿಸಿ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಹಣ ಪೀಕುತಿದ್ದ ಎನ್ನಲಾಗಿದೆ. ‘ಅಡವಿ’ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ಒಂದು ವಾರದಿಂದ ಸತಾಯಿಸುತ್ತಿದ್ದ, ಸೆನ್ಸಾರ್…

Read More

ಬಾಗಲಕೋಟೆ: ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪ್ರತಿಯೊಂದು ಕ್ರೀಡೆಗಳಲ್ಲಿ ಭಾಗವಹಿಸಿ. ಸೋಲಿಗೆ ಹೆದರದೆ ಮೊದಲು ಭಾಗವಹಿಸಿ ನಂತರ ನಿಮ್ಮ ಗೆಲುವು ಸುಗಮ. ಇದರಿಂದ ನಿಮ್ಮ ದೇಹ ಸದೃಢವಾಗುತ್ತದೆ ಮತ್ತು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲು ನಮಗೆ ಸಹಾಯ ಮಾಡುತ್ತದೆ. ಪಿಯುಸಿ ವರ್ಗದಲ್ಲಿ ಓದುತ್ತಿರುವ ಕುಮಾರಿ ಸ್ವಾತಿ ಮುಳವಾಡ ವಿದ್ಯಾರ್ಥಿಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ  ಸಾಧನೆಗೈದ ವಿದ್ಯಾರ್ಥಿ ಇಂದಿನ ಮಕ್ಕಳಿಗೆ ಪ್ರೇರಣೆಯಾಗಿದ್ದಾಳೆ ಕ್ರೀಡೆಗಳಲ್ಲಿ ಭಾಗವಹಿಸಿ ಸೋಲೇ ಗೆಲುವಿನ ಸೋಪಾನ ಎಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಚೇರ್ಮಣ್ಣರಾದ ಸಿದ್ದಪ್ಪ ಮೇನಿ ಹೇಳಿದರು.  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ಪೂರ್ಣಪ್ರಜ್ಞ  ಶಿಕ್ಷಣ ಸಂಸ್ಥೆಯ ಪಿಯುಸಿ ವಿದ್ಯಾರ್ಥಿ  ಕುಮಾರಿ ಸ್ವಾತಿ ಮಲ್ಲಿಕಾರ್ಜುನ ಮುಳವಾಡ  ವಿದ್ಯಾರ್ಥಿಯು 2023 24ನೇ ಸಾಲಿನ ಪದವಿಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಜೋಡು ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಮತ್ತು  ಹೈಜಂಪ  ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ…

Read More

ಕಲಬುರಗಿ: ತಾಯಿಗೆ ಬೈದ ಅನ್ನೋ ಕಾರಣಕ್ಕೆ ಮೊಮ್ಮಗ ತನ್ನ ತಾತನಿಗೆ ಚಾಕುವಿನಿಂದ ಇರಿದು ಕೊಲೆಮಾಡಿದ ಘಟನೆ ಕಲಬುರಗಿಯ ಜವಳಗಾ ಗ್ರಾಮದಲ್ಲಿ ನಡೆದಿದೆ.. ಮೊಮ್ಮಗ ಆಕಾಶ್ ಕೊಲೆಗೈದ ಆರೋಪಿಯಾಗಿದ್ದು 70 ವರ್ಷದ ತಾತ ಸಿದ್ರಾಮಪ್ಪ ಕೊಲೆಗೀಡಾದ ದುರ್ದೈವಿಯಾಗಿದ್ದಾನೆ.. ಸಂಭಂಧಿಕರ ಸಾವಿನ ಅಂತ್ಯಕ್ರಿಯೆ ಮುಗಿಸಿ ವಾಪಾಸ್ ಬರುವಾಗ ಕ್ರೂಸರ್ ವಾಹನದಲ್ಲಿ ಕೂರುವಾಗ ಕಿರಿಕ್ ಶುರುವಾಗಿದೆ..ತಾತನಿಗೆ ಬೈಕ್ ಮೇಲೆ ಕೂರಲು ಹೇಳಿದಾಗ ನನಗೆ ವಯಸ್ಸಾಗಿದೆ ಆಗಲ್ಲ ಅಂದ್ರೂ ಕೂರಲು ಹೇಳ್ತೀಯಾ ಅಂತ ಆಕಾಶನ ತಾಯಿ ಸರೋಜಾಳ ಮೇಲೆ ರೇಗಾಡಿದ್ದಾನೆ. ಅಷ್ಟಕ್ಕೆ ಕೋಪಿಸಿಕೊಂಡ ಆಕಾಶ್ ಕೊಲೆಮಾಡಿದ್ದಾನೆ ಅಂತ ಹೇಳಲಾಗ್ತಿದೆ. ನರೋಣಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Read More

ಬೆಂಗಳೂರು:- ಬೆಂಗಳೂರು ಸೇರಿ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೆ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ, ಕರಾವಳಿಯಲ್ಲಿ ಒಣಹವೆ ಇತ್ತು. ಚಾಮರಾಜನಗರದಲ್ಲಿ 17.3 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಕೆಲವೆಡೆ ಮಂಗಳವಾರ ತುಂತುರು ಮಳೆಯಾಗಿದೆ. ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಎಚ್​ಎಎಲ್​ನಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 28.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.6…

Read More

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ತಿಳಿಸಲು ನಾಲ್ಕು ಬಾರಿ ಹೋದರೂ ಅವರು ನಮ್ಮ ಮಂತ್ರಿಗಳ ಭೇಟಿಗೆ ಅವಕಾಶ ನೀಡಲಿಲ್ಲ. ನಮ್ಮ ದೇಶದ ಪ್ರಧಾನಿಗಳಿಗೂ ಕೂಡಾ ಕರ್ನಾಟಕವೂ ಭಾರತದಲ್ಲಿ ಇದೆ ಎಂಬ ಭಾವನೆ ಬರಬೇಕಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಕಾರ್ಯವನ್ನು ತಾನು ಮಾಡಬೇಕಾಗಿದೆ. ನಮ್ಮ ರಾಜ್ಯದ ಅಳಲನ್ನು ತೋಡಿಕೊಳ್ಳಲು ಹೋದ ಮಂತ್ರಿಗಳಿಗೆ ಪ್ರಧಾನಿಯವರು ಭೇಟಿಗೆ ಅವಕಾಶ ನೀಡುತ್ತಿಲ್ಲ.  ಬಿಜೆಪಿ ನಾಯಕರು ಅಂಕಿ ಸಂಖ್ಯೆಗಳು ಸರಿಯಿಲ್ಲ ಎಂಬ ಸಣ್ಣತನದ ಮಾತುಗಳನ್ನು ಆಡುತ್ತಿದ್ಧಾರೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿ ಹಾಯ್ದರು.ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ಬರ ಪರಿಸ್ಥಿತಿ ಅಧ್ಯಯನದ ಅಧಿಕಾರಿಗಳ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಬಿಜೆಪಿ ಸಂಸದರು ಕೇಂದ್ರದ ಹಣವನ್ನು ತಂದರೆ ಇಲ್ಲಿಯ ಜನರು ಶಬ್ಬಾಶನ್ನು ನೀಡುತ್ತಾರೆ. ಇಷ್ಟೊಂದು ಜನರನ್ನುಆಯ್ಕೆ ಮಾಡಿ ಕಳುಹಿಸಿದರೂ ನಮ್ಮ ಸಂಸದರು ಬರ…

Read More

ಶುಭ ಸಮಾರಂಭಗಳಿಗೆ ಚಿನ್ನಾಭರಣಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೀಗಾಗಿ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳೆಯ ಬೆಲೆ ದುಬಾರಿಯೇ ಇದೆ. ಕಳೆದ ಆರು ತಿಂಗಳಿಗೆ ಹೋಲಿಸಿದರೆ ಚಿನ್ನ ಸದ್ಯ ಗಗನ ಕುಸುಮವಾಗಿದೆ. ಆದರೆ ಬೆಳ್ಳಿಯ ಬೆಲೆ ಇಂದು ತುಸು ಕಡಿಮೆಯಾಗಿದೆ. ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 56,850 ರುಪಾಯಿ ಇದ್ದು, 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 62,020 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,600 ರುಪಾಯಿ ಇದೆ. ಹಾಗಾದರೆ ಇಂದು (ನವೆಂಬರ್‌ 23) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ. ಒಂದು ಗ್ರಾಂ ಚಿನ್ನದ ದರ * 22 ಕ್ಯಾರೆಟ್ ಚಿನ್ನದ ದರ – 5,685 ರೂಪಾಯಿ * 24 ಕ್ಯಾರೆಟ್ ಚಿನ್ನದ ದರ – 6,202 ರೂಪಾಯಿ 10 ಗ್ರಾಂ ಚಿನ್ನದ ದರ * 22 ಕ್ಯಾರೆಟ್ ಆಭರಣ ಚಿನ್ನದ…

Read More