ಬೆಂಗಳೂರು;- ಕೇಂದ್ರ ಸರ್ಕಾರದಿಂದ ನಯಾ ಪೈಸೆ ಬರ ಪರಿಹಾರ ಬಂದಿಲ್ಲ ಎಂದು ಹೆಚ್ ಕೆ ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಂಪುಟ ಸಭೆಯಲ್ಲಿ ಬರದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ನರೇಗಾ ದಡಿ ನೂರು ದಿನ ಕೆಲಸ ಮುಗಿಸಿದ ಕುಟುಂಬ ಬಹಳಷ್ಟು ಇದೆ. ಮಾನವ ದಿನಗಳನ್ನು 150 ಏರಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೂಡಲೇ ಮಾನವ ದಿನವನ್ನು 150ಕ್ಕೆ ಏರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು. ಬರ ನಿರ್ವಹಣೆ ಹಾಗೂ ಮಾನವ ದಿನ ವೃದ್ಧಿಸುವ ಸಂಬಂಧ ಕೇಂದ್ರಕ್ಕೆ ಮನವಿ ಕೊಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂಗೆ ಪ್ರಧಾನಿ ಭೇಟಿಗೆ ಸಮಯ ನೀಡಿಲ್ಲ. ಕಂದಾಯ ಸಚಿವರಿಗೆ ಸಮಯಾವಕಾಶ ನೀಡಿಲ್ಲ. ಕೇಂದ್ರದ ಬರ ಅಧ್ಯಯನ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ತಮ್ಮ ವರದಿ ನೀಡಿದ್ದಾರೆ. ಆದರೆ, ಇಂದಿನವರೆಗೆ ಕೇಂದ್ರ ಸರ್ಕಾರ ನಯಾ ಪೈಸೆ ಬರ ಪರಿಹಾರ ಕೊಟ್ಟಿಲ್ಲ. ಇದಕ್ಕೆ ತೀವ್ರ ಕಳವಳ…
Author: AIN Author
ಚೆನ್ನೈ: ಮದ್ಯ ಖರೀದಿಗೆ ಹಣ ನೀಡಲಿಲ್ಲ ಎಂದು ಜ್ಯೂನಿಯರ್ ಒಬ್ಬನ ಮೇಲೆ ಹಲ್ಲೆ ನಡೆಸಿದ ಕೊಯಮತ್ತೂರಿನ ಖಾಸಗಿ ಕಾಲೇಜಿನ 7 ಜನ ವಿದ್ಯಾರ್ಥಿಗಳನ್ನು (Students) ಪೊಲೀಸರು (Police) ಬಂಧಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್‍ನಲ್ಲಿರುವ ಹಾಸ್ಟೆಲ್‍ಗೆ ತೆರಳಿ ಮದ್ಯ ಖರೀದಿಸಲು ಹಣ ಕೇಳಿದ್ದಾರೆ. ಈ ವೇಳೆ ನಿರಾಕರಿಸಿದ ವಿದ್ಯಾರ್ಥಿಯನ್ನು ತಮ್ಮ ಕೋಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. https://ainlivenews.com/knee-pain-treatment-joint-pain-treatment/ ಅಲ್ಲದೇ ಟ್ರಿಮ್ಮರ್ ಬಳಸಿ ಕೈಗಳ ಮೇಲೆ ಗಾಯಮಾಡಿದ್ದಾರೆ. ಮರುದಿನ ಆತನ ರೂಮ್‍ಗೆ ತೆರಳುವಂತೆ ಹೇಳಿ ನಡೆದ ವಿಚಾರ ಬಾಯಿಬಿಟ್ಟರೆ ಮತ್ತೆ ಹಲ್ಲೆಗೈಯುವ ಬೆದರಿಕೆ ಹಾಕಿದ್ದಾರೆ. ಕಾಲೇಜು ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪೀಲಮೇಡು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ದೂರಿನ ಅನ್ವಯ ಪೊಲೀಸರು ರ‍್ಯಾಗಿಂಗ್ ನಿಷೇಧ ಕಾಯ್ದೆ ಅಡಿ ಐಪಿಸಿ ಸೆಕ್ಷನ್ 355 ಹಾಗೂ 323 ಹಲ್ಲೆ ಪ್ರಕರಣ ದಾಖಲಿಸಿಕೊಂಡು 7 ಜನ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಪರ ಬಿಗ್ ಬಿ, ನಾಗಚೈತನ್ಯ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ಧ್ವನಿಯೆತ್ತಿದ್ದಾರೆ. ಈ ಬೆನ್ನಲ್ಲೇ, ಗೆಳತಿ ರಶ್ಮಿಕಾ ಪರ ವಿಜಯ್ ದೇವರಕೊಂಡ (Vijay Devarakonda) ಕೂಡ ಮಾತನಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ವಿಜಯ್ ಕಿಡಿಕಾರಿದ್ದಾರೆ. ರಶ್ಮಿಕಾ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬಳಿಕ ಡೀಪ್ ಫೇಕ್ರ್ಸ್ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಎಂದು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, ಭವಿಷ್ಯಕ್ಕಾಗಿ ಇದು ಮುಖ್ಯವಾದ ಕ್ರಮ. ಇದು ಯಾರಿಗೂ ಆಗಬಾರದು. ಸೈಬರ್ ಕ್ರೈಮ್ ತೆಡೆಯಲು ಸಮರ್ಥವಾದ ಮತ್ತು ಸುಲಭಕ್ಕೆ ಜನರ ಸಂಪರ್ಕಕ್ಕೆ ಸಿಗುವಂತಹ ಸೈಬರ್ ಘಟಕ ಎಲ್ಲರಿಗೂ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾದರೆ ಜನರಿಗೆ ಹೆಚ್ಚು ರಕ್ಷಣೆ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ. ವಿಜಯ್- ರಶ್ಮಿಕಾ (Rashmika) ತೆಲುಗು ಸಿನಿಮಾರಂಗದಲ್ಲಿ ಬೆಸ್ಟ್ ಜೋಡಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇಬ್ಬರ…
ಕೊಬ್ಬರಿ, ಮಾವಿನಕಾಯಿ, ಬೆಳ್ಳುಳ್ಳಿ, ಟೊಮೆಟೊ ಚಟ್ನಿ ಎಲ್ಲರ ಮನೆಯಲ್ಲಿ ತಯಾರಿಸುತ್ತೇವೆ. ಆದರೆ ಇವತ್ತು ನಾವು ಖಾರ ಮತ್ತು ರುಚಿಯಾಗಿರುವ ಕ್ಯಾರೆಟ್ ಚಟ್ನಿ ಮಾಡುವುದರ ಕುರಿತು ತಿಳಿಯೋಣ. ಈ ಮಿಶ್ರಣವನ್ನು ಶುದ್ಧವಾದ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ 2 ದಿನಗಳವರೆಗೆ ಹಾಗೇ ಇಡಬಹುದಾಗಿದೆ, ಹಾಗಾದ್ರೆ ಬನ್ನಿ ಈ ಚಟ್ನಿಯನ್ನು ಹೇಗೆ ಮಾಡುವುದುಯ ಎನ್ನುವುದನ್ನು ಇಲ್ಲಿ ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ವಿವರಿಸಲಾಗಿದೆ. ಬೇಕಾಗುವ ಸಾಮಗ್ರಿಗಳು: * ಕ್ಯಾರೆಟ್ 3-4 * ಕೆಂಪು ಮೆಣಸಿನ ಪುಡಿ- 2ಚಮಚ * ಕರಿಮೆಣಸಿನ ಪುಡಿ- 1 ಚಮಚ * ಶುಂಠಿ- ಸ್ವಲ್ಪ * ಬೆಳ್ಳುಳ್ಳಿ-2 * ಬಾದಾಮಿ-2 * ಗಸೆಗಸೆ- 2 ಚಮಚ * ಏಲಕ್ಕಿ-3 * ವಿನಿಗರ್- 1 ಚಮಚ * ಚಮಚ ಸಕ್ಕರೆ- 1 ಚಮಚ ಮಾಡುವ ವಿಧಾನ: * ಚಿಕ್ಕ ತುಂಡಾಗಳಾಗಿ ಕ್ಯಾರೆಟ್‍ಗಳನ್ನು ಕತ್ತರಿಸಿ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಸೇರಿಸಬೇಕು. * ಈ…
ಕೋಲಾರ;- 17 ವರ್ಷದ ಬಾಲಕ ಕಾರ್ತಿಕ್ ಸಿಂಗ್ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಐಜಿಪಿ ರವಿಕಾಂತೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರದಲ್ಲಿ ಕೊಲೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಐಜಿಪಿ ರವಿಕಾಂತೇಗೌಡ, ಈ ಪ್ರಕರಣದಲ್ಲಿನ ಆರೋಪಿಗಳು ಈ ಹಿಂದೆ ಅದೇ ಬಾಲಕನ ಮೇಲೆ ಹಲ್ಲೆ ಮಾಡಿರುತ್ತಾರೆ. ಅಲ್ಲದೇ ಆರೋಪಿ ಬೇರೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾನೆ. ನಂತರ ಬಾಲಾಪರಾಧಿ ಕೇಂದ್ರದಿಂದ ಹೊರಗೆ ಬರುತ್ತಾನೆ. ಹೊರಪ್ರಕರಣ ರೂವಾರಿ ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾನೆ. ಈತನ ಚಟುವಟಿಕೆಗಳನ್ನ ನಿಗಾವಹಿಸುವಲ್ಲಿ ಪೊಲೀಸರು ವಿಫಲ ಆಗಿದ್ದಾರೆ. ಹಿಂದಿನ ದ್ವೇಷದ ಹಿನ್ನಲೆಯಲ್ಲಿ ಕಳೆದ ವಾರ ಪಾರ್ಕ್‌ನಿಂದ ಬಾಲಕನ ಅಪಹರಣ ಮಾಡಿ, ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿ ಬಾಲಕನನ್ನ ಬರ್ಬರವಾಗಿ ಕೊಲೆ ಮಾಡಿರುತ್ತಾರೆ. ಈ ಪ್ರಕರಣದಲ್ಲಿ ಎಂಟು ಜನ ಆರೋಪಿಗಳಲ್ಲಿ ಏಳು ಜನರನ್ನ ಬಂಧಿಸಿದ್ದೇವೆ. ಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನ ಮಾಡಲಾಗಿತ್ತು. ಹೊರ ರಾಜ್ಯದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ಗುಂಡನ್ನ ಹಾರಿಸಲಾಗಿದೆ. ಇವರಿಗೆ ಸಹಾಯ…
ಕಲಬುರ್ಗಿ: ಕಲಬುರಗಿಯ ಹಲಕರ್ಟಾ ಬಳಿ ಟ್ಯಾಂಕರ್ ಮತ್ತು ಆಟೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಸುದ್ದಿ ತಿಳಿದು ಅತೀವ ನೋವುಂಟಾಗಿದೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಅಪಘಾತದಲ್ಲಿ ಮೃತಪಟ್ಟವರೆಲ್ಲ ನನ್ನ ಮತಕ್ಷೇತ್ರ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದವರಾಗಿದ್ದು, ಅವರ ಕುಟುಂಬ ವರ್ಗಕ್ಕೆ ಈ ಕಠಿಣ ಸಂದರ್ಭದಲ್ಲಿ ನನ್ನ ತೀವ್ರ ಸಂತಾಪಗಳನ್ನು ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿ: ಬಿಲಿಯನೇರ್ ಡೆಮೋಕ್ರಾಟ್ ದಾನಿ ಜಾರ್ಜ್ ಸೊರೋಸ್ ವಿರುದ್ಧ ಎಕ್ಸ್ ಮಾಲೀಕ ಹಾಗೂ ಸ್ಪೇಸ್ ಎಕ್ಸ್, ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ಕಿಡಿ ಕಾರಿದ್ದಾರೆ. ಜೋ ರೋಗನ್ ಅವರೊಂದಿಗಿನ ಇತ್ತೀಚಿನ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ಮಾತನಾಡಿದ ಎಲಾನ್ ಮಸ್ಕ್ ಸೊರೋಸ್ ವಿರುದ್ಧ ಟೀಕೆ ಮಾಡಿದ್ದಾರೆ. ಜಾರ್ಜ್ ಸೊರೋಸ್ “ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ” ಎಂದು ಎಲಾನ್ ಮಸ್ಕ್ ಟೀಕಿಸಿದ್ದಾರೆ. ಹಾಗೂ ಸೊರೋಸ್‌ನ ಕ್ರಮಗಳ ಬಗ್ಗೆ ಎಲಾನ್ ಮಸ್ಕ್ ತನ್ನ ಕಳವಳ ವ್ಯಕ್ತಪಡಿಸಿದ್ದು, ಇದರಿಂದ ನಾಗರಿಕತೆಯ ಅಡಿಪಾಯವನ್ನು ನಾಶಪಡಿಸುತ್ತಿದೆ ಎಂದು ನಂಬಿರುವುದಾಗಿಯೂ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದಾರೆ. ಇನ್ನೊಂದೆಡೆ, ಅಪರಾಧಗಳನ್ನು ವಿಚಾರಣೆ ಮಾಡಲು ನಿರಾಕರಿಸುವ ಜಿಲ್ಲಾ ವಕೀಲರನ್ನು (District Attorneys) (ಡಿಎ) ಆಯ್ಕೆ ಮಾಡುವ ವಿಷಯವನ್ನು ಎಲಾನ್ ಮಸ್ಕ್ ಪ್ರಸ್ತಾಪಿಸಿದ್ದು, ಇದು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲೀಸ್‌ನಂತಹ ನಗರಗಳ ಮೇಲೆ ಪರಿಣಾಮ ಬೀರುವ ಸಮಸ್ಯೆ ಎಂದು ಅವರು ನೋಡುತ್ತಾರೆ. https://ainlivenews.com/knee-pain-treatment-joint-pain-treatment/ ಇನ್ನು, ಈ ಆತಂಕಗಳು ಅಮೆರಿಕಕ್ಕೆ ಮಾತ್ರ ಸೀಮಿತವಾಗಿದೆಯೇ ಎಂದು ಎಲಾನ್ ಮಸ್ಕ್…
ದೇಶಾದ್ಯಂತ ಶಹನಾಜ್ ಹುಸೇನ್ ಬ್ಯೂಟಿ ಪಾರ್ಲರ್ ಉತ್ಪನ್ನಗಳು ದೇಶಾದ್ಯಂತ ಜನಪ್ರಿಯತೆ ಗಳಿಸಿವೆ. ಶಹನಾಜ್ ಹುಸೇನ್ ಅವರನ್ನು ಭಾರತದ ಮೊದಲ ಮಹಿಳಾ ಉದ್ಯಮಿ ಕೂಡ ಹೌದು. ಶಹನಾಜ್ ಹುಸೇನ್ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಅದರಲ್ಲೂ ಮಹಿಳೆಯರು ಶಹನಾಜ್ ಹುಸೇನ್ ಸೌಂದರ್ಯವರ್ಧಕಗಳ ಬಗ್ಗೆ ತಿಳಿದೇ ಇರುತ್ತದೆ. ಬ್ಯೂಟಿ ಪಾರ್ಲರ್ ಗಳಲ್ಲಿ ಈ ಬ್ರ್ಯಾಂಡ್ ನ ಉತ್ಪನ್ನಗಳು ಇದ್ದೇ ಇರುತ್ತವೆ. ಆದರೆ, ಈ ಸಂಸ್ಥೆ ಸ್ಥಾಪನೆಗೊಂಡಿದ್ದು ಹೇಗೆ? ಅದರ ಹಿಂದಿರುವ ವ್ಯಕ್ತಿ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಶಹನಾಜ್ ಹುಸೇನ್ ಎಂಬ ಹೆಸರಿನ ಮಹಿಳೆಯೇ ಈ ಸಂಸ್ಥೆ ಸಂಸ್ಥಾಪಕಿ. ಇಂದು ಶಹನಾಜ್ ಹುಸೇನ್ ಬ್ರ್ಯಾಂಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ನವದೆಹಲಿ ಮನೆಯ ಪುಟ್ಟ ಕೋಣೆಯಲ್ಲಿ ಬ್ಯೂಟಿ ಪಾರ್ಲರ್ ಮೂಲಕ ಉದ್ಯಮ ಪ್ರಾರಂಭಿಸಿದ ಶಹನಾಜ್ ಹುಸೇನ್ ಇಂದು 250 ಕೋಟಿ ರೂ. ನಿವ್ವಳ ಆದಾಯ ಹೊಂದಿದ್ದಾರೆ. ಭಾರತದ ಗಿಡಮೂಲಿಕೆ, ಆಯುರ್ವೇದದ ಮಹಿಮೆಯನ್ನು ಜಗತ್ತಿಗೆ ಸಾರಿದ ಕೀರ್ತಿ ಶಹನಾಜ್ ಹುಸೇನ್ ಅವರಿಗೆ ಸಲ್ಲುತ್ತದೆ. ಶಹನಾಜ್ ಹುಸೇನ್ 1944ರ…
ಪ್ರತಿಯೊಬ್ಬರಿಗೂ ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಬೇಕೆಂಬ ಕನಸು ಇದ್ದೇ ಇರುತ್ತದೆ. ಅದು ಸೆಲೆಬ್ರಿಟಿಯಾಗಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಲಿ. ಹೀಗಾಗಿ ಮಕ್ಕಳ ಶಿಕ್ಷಣಕ್ಕಾಗಿ ಎಷ್ಟೇ ಹಣ ಖರ್ಚಾದರೂ ಪರ್ವಾಗಿಲ್ಲ. ತಮ್ಮ ಮಕ್ಕಳು ಗುಣಮಟ್ಟ ಶಿಕ್ಷಣ ಪಡೆಯಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಲಕ್ಷಲಕ್ಷ ಖರ್ಚು ಮಾಡುತ್ತಾರೆ. ಇನ್ನು, ಸೆಲೆಬ್ರಿಟಿ ಮಕ್ಕಳಾದರಂತೂ ಕೇಳುವ ಮಾತೇ ಇಲ್ಲ. ಅವರು ಸಾಮಾನ್ಯ ಶಾಲೆಯಲ್ಲಿ ಓದೋಕೆ ಸಾಧ್ಯವಿಲ್ಲ. ಹೀಗಾಗಿ, ಪ್ರತಿಷ್ಠಿತ ಸ್ಕೂಲ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾದರೆ ಬಾಲಿವುಡ್ ತಾರೆಯರ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಮಕ್ಕಳ ಶಿಕ್ಷಣಕ್ಕೆ ವರ್ಷಕ್ಕೆ ಎಷ್ಟು ಹಣ ಖರ್ಚು ಮಾಡುತ್ತಾರೆ ಎಂಬುವುದನ್ನು ತಿಳಿಯಲು ಈ ಸುದ್ದಿ ಪೂರ್ತಿ ಓದಿ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬಾಲಿವುಡ್ ತಾರೆಯರ ತಮ್ಮ ಮಕ್ಕಳನ್ನು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ಗೆ ಕಳುಹಿಸುತ್ತಿದ್ದಾರೆ. ಈ ಶಾಲೆ ಮುಂಬೈನ ಬಾಂದ್ರಾದಲ್ಲಿ ಇದೆ. ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯಾ ಬಚ್ಚನ್, ಶಾರುಖ್ ಖಾನ್ ಅವರ ಕಿರಿಯ…
ಮುಂಬೈ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ (Mukesh Ambani) ತಮ್ಮ ಪತ್ನಿ ನೀತಾ ಅಂಬಾನಿಗೆ (Nita Ambani) ದೇಶದ ಅತ್ಯಂತ ದುಬಾರಿ ಕಾರನ್ನು (Car) ಉಡುಗೊರೆ ನೀಡಿರುವುದಾಗಿ ವರದಿಯಾಗಿದೆ. ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ತಮ್ಮ ವ್ಯವಹಾರ, ದೇಣಿಗೆ ಮಾತ್ರವಲ್ಲದೆ ಐಷಾರಾಮಿ ಜೀವನಶೈಲಿಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಅಂಬಾನಿ ಕುಟುಂಬ ಭಾರತದ ಅತ್ಯಂತ ಶ್ರೀಮಂತ ಕುಟುಂಬವಾಗಿದೆ. ತಮ್ಮ ಆಂಟಿಲಿಯಾ ಹೆಸರಿನ 15,000 ಕೋಟಿ ರೂ.ಯ ನಿವಾಸದಲ್ಲಿರುವ ಗ್ಯಾರೇಜ್‌ನಲ್ಲಿ ಪ್ರಪಂಚದ ಅತ್ಯಂತ ದುಬಾರಿ ಕಾರುಗಳೇ ತುಂಬಿವೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ನಿವಾಸದ ಪಾರ್ಕಿಂಗ್ ಸ್ಥಳದಲ್ಲಿ ದೇಶದ ಅತ್ಯಂತ ದುಬಾರಿ ಕಾರುಗಳನ್ನು ಕಾಣಬಹುದು. ಮುಖೇಶ್ ಅಂಬಾನಿ, ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ತಮ್ಮ ದುಬಾರಿ ಕಾರುಗಳಲ್ಲಿ ಕೆಲ ಕಾರ್ಯಕ್ರಮಗಳಿಗೆ ಆಗಮಿಸುವುದನ್ನು ಆಗಾಗ ಕಾಣಬಹುದು. ಇದೀಗ ಈ ದುಬಾರಿ ಕಾರುಗಳ ಸಂಗ್ರಹಣೆಗೆ ಮತ್ತೊಂದು ಅತ್ಯಂತ ದುಬಾರಿ ಕಾರೊಂದು ಸೇರ್ಪಡೆಯಾಗಿದೆ.…