ವಿಜಯನಗರ: ಆಟ ಆಡುವಾಗ ಆಯತಪ್ಪಿ ನೀರಿನ ತೊಟ್ಟಿಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ವಿಸ್ಮೀತ( 3) ಮೃತಪಟ್ಟ ಬಾಲಕಿಯಾಗಿದ್ದು,. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಈ ದುರ್ಘಟನೆ ನಡೆದಿದೆ. https://ainlivenews.com/do-you-know-which-are-the-most-visited-websites-by-indians/ ನಾಗರಾಜ್ ಮತ್ತು ಕಾವೇರಿ ದಂಪತಿಯ ಮಗಳಾದ ವಿಸ್ಮೀತಾ ಆಟವಾಡುತ್ತಾ ನೀರಿನ ತೊಟ್ಟಿ ಬಳಿ ಬಂದಿದ್ದಾಳೆ. ಈ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಕೂಡ್ಲಿಗಿ ಶಾಸಕ ಎನ್.ಟಿ ಶ್ರೀನಿವಾಸ್ ಮೃತ ಬಾಲಕಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
Author: AIN Author
ಬೆಂಗಳೂರು: ಯಾರು ಯಾರು ಏನು ಮಾತನಾಡಿದ್ದಾರೆ ಎಲ್ಲ ನಮ್ರತೆಯಿಂದ ನೋಡ್ತಿದ್ದೇನೆ, ನೋಡಿದ್ದೇನೆ. ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shiva Kumar) ಹೇಳಿದ್ದಾರೆ. ಕೋರ್ಟ್ ಆದೇಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಅವರು, ಯಾರು ಯಾರು ಏನು ಮಾತನಾಡಿದ್ದಾರೆ ಎಲ್ಲ ನಮ್ರತೆಯಿಂದ ನೋಡ್ತಿದ್ದೇನೆ, ನೋಡಿದ್ದೇನೆ. ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡ್ತೇನೆ. ನಾನೇನು ತಪ್ಪು ಮಾಡಿಲ್ಲ. ನಾನು ಮಾಡಿದ್ದೆಲ್ಲ ಪಾರ್ಟಿ ಸಲುವಾಗಿ ಮಾಡಿದ ಕೆಲಸ. ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿದ್ದು. ಸಾಕಷ್ಟು ಅನುಭವಿಸಿದ್ದೇನೆ. ಮುಂದೆಯೂ ಕೂಡ ತೊಂದರೆ ಕೊಡ್ತೀನಿ ಅಂದ್ರೆ ಅದನ್ನು ನೋಡಲು ಭಗವಂತ ಇದ್ದಾನೆ. ನನಗೆ ತೊಂದರೆ ಕೊಟ್ಟಿದ್ದಕ್ಕೆ ಏನಾಯ್ತು ಅಂತ ರಾಜ್ಯದ ಜನರೇ ನೋಡಿದ್ದಾರೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಕೋಟಿ ವಂದನೆ ಅಂತ ತಿಳಿಸಿದರು. https://ainlivenews.com/big-big-relief-for-dk-high-court-has-withdrawn-the-appeal-and-considered-the-appeal/ ಅಕ್ರಮ ಆಸ್ತಿ ಗಳಿಕೆ (Disproportionate Assets Case) ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಗೆ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ವಾದ- ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು…
ಬೆಂಗಳೂರು : ಚೀನಾದಲ್ಲಿ ಕೊರೊನಾ ನಂತರ ಇದೀಗ ಮೈಕೋಪ್ಲಾಸ್ಮಾ ನ್ಯುಮೋನಿಯಾ ಹಾಗೂ ಇನ್ನುಯೆಂಝಾ ವೈರಸ್ ತೀವ್ರವಾಗಿ ಹರಡಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯಿಂದ ರಾಜ್ಯಕ್ಕೆ ಹೊಸ ನಿಯಮಾವಳಿಗಳು ಬಂದಿವೆ. ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಮೊನ್ನೆನೇ ತಾಂತ್ರಿಕ ಸಲಹಾ ಸಮಿತಿ ಇಂದ ಸಭೆ ಆಗಿತ್ತು ಹಾಗಾಗಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದ ಸಮಿತಿ ಇನ್ನು ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಅರೋಗ್ಯ ಇಲಾಖೆ https://ainlivenews.com/big-big-relief-for-dk-high-court-has-withdrawn-the-appeal-and-considered-the-appeal/ ಗೈಡ್ ಲೈನ್ಸ್ ಎಲ್ಲಾ ಜಿಲ್ಲಾ DHO ಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ILI ಹಾಗೂ SARI ಪ್ರಕರಣಗಳನ್ನು ವರದಿಯನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು ಸೊಂಕೀತರ ಚಿಕಿತ್ಸೆ ಗೆ ಅಗತ್ಯ ಓಷಧಿಗಳು ಹಾಗೂ PPE ಕಿಟ್ ಏನ್ 95 ಮಾಸ್ಕ್ ಕೋವಿಡ್ ಪರೀಕ್ಷಾ ಕಿಟ್ ಸ್ಟಾಕ್ ಇಡಬೇಕು ವೈದ್ಯಕೀಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿ ಸರಿಯಾಗಿ ಇಡಬೇಕು ಆಕ್ಸಿಜನ್ ಬೆಡ್ ವೆಂಟಿಲೆಟರ್ ಆಂಬುಲೆನ್ಸ್…
ಕೋಲಾರ: ತಂದೆ-ತಾಯಿಯನ್ನು ನೋಡೋದಕ್ಕೆ ಆಗದಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ ವಸತಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಇಲಿ ಪಾಶಾಣ ಹಾಕಿದ್ದಾನೆ. ಈ ನೀರು ಕುಡಿದ ಮೂವರು ವಿದ್ಯಾರ್ಥಿಗಳು ಅಸ್ವಸ್ಥ ರಾಗಿದ್ದಾರೆ. ಬಂಗಾರಪೇಟೆ ತಾಲ್ಲೂಕು ಡೊಡ್ಡಪೊನ್ನಾಂಡಹಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಒಂಬತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಪೋಷಕರಿಂದ ದೂರವಿದ್ದುದಕ್ಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಆತನ ತಂದೆ ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, https://ainlivenews.com/do-you-know-which-are-the-most-visited-websites-by-indians/ ಮಗ ಚೆನ್ನಾಗಿ ಓದಲಿ ಅನ್ನೋ ಕಾರಣಕ್ಕೆ ವಸತಿ ಶಾಲೆಗೆ ಸೇರಿಸಿದ್ದರು. ಆದ್ರೆ ತಂದೆ-ತಾಯಿಯಿಂದ ದೂರವಿದ್ದುದರಿಂದ ಆತ ಖಿನ್ನತೆಗೆ ಒಳಗಾಗಿದ್ದ. ಶಾಲೆಗೆ ರಜೆ ಸಿಕ್ಕರೆ ಮನೆಗೆ ಹೋಗಬಹುದು ಎಂದು ಲೆಕ್ಕಚಾರ ಹಾಕಿದ್ದ. ಏನು ಮಾಡಿದರೆ ಶಾಲೆಗೆ ರಜೆ ಕೊಡಬಹುದು ಎಂದು ಯೋಚಿಸಿದ ಆತ, ಟ್ಯಾಂಕ್‌ಗೆ ಇಲಿ ಪಾಶಾಣ ಹಾಕಿದ್ದಾನೆ. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ರಜೆ ಕೊಡುತ್ತಾರೆ. ಆಗ ಕೆಲ ದಿನ ಮನೆಗೆ ಹೋಗಬಹುದು. ತಂದೆ-ತಾಯಿಯನ್ನು ನೋಡಬಹುದು ಅನ್ನೋ ಆಸೆ ಅವನದಾಗಿತ್ತು. ಆದ್ರೆ…
ಬೆಂಗಳೂರು: ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಆ ಮೂಲಕ ಡಿ.ಕೆ.ಶಿವಕುಮಾರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ವಿಚಾರಣೆಯನ್ನು ಬುಧವಾರ ಹೈಕೋರ್ಟ್ ಸಿಜೆ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ರಾಜ್ಯ ಸರ್ಕಾರದ ಆದೇಶವನ್ನು ಇದುವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ಪರ ವಕೀಲರ ವಾದ ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿದಾರರು ಮನವಿ ಹಿಂಪಡೆಯಲಾಗಿದೆ ಎಂದು ಕೋರ್ಟ್ ತಿಳಿಸಿತು.
ಬೆಂಗಳೂರು: ನಿಗಮ-ಮಂಡಳಿಯಲ್ಲಿ (Corporation Board) ಮೊದಲ ಬಾರಿ ಶಾಸಕರಾದವರು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆದವರಿಗೆ ಸ್ಥಾನ ಕೊಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಿಎಂ, ಸುರ್ಜೇವಾಲ ಹಾಗೂ ನಾನು ಎಲ್ಲರೂ ಚರ್ಚೆ ಮಾಡಿ ಪಟ್ಟಿ ಅಂತಿಮ ಮಾಡಿದ್ದೇವೆ. ಸುರ್ಜೇವಾಲ (Randeep Surjewala) ಹೈಕಮಾಂಡ್ ಬಳಿ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಇವತ್ತು ಚುನಾವಣೆ ಪ್ರಚಾರ ಮುಗಿಯುತ್ತದೆ. ಆದಷ್ಟು ಬೇಗ ಪಟ್ಟಿ ಬಿಡುಗಡೆ ಆಗುತ್ತದೆ ಎಂದರು. ಮೊದಲ ಬಾರಿ ಶಾಸಕರಾದವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ ಇಲ್ಲ. ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತೆಗೆದುಕೊಂಡು ಸ್ಪರ್ಧೆ ಮಾಡಿದವರಿಗೂ ನಿಗಮ-ಮಂಡಳಿ ಸ್ಥಾನ ಇಲ್ಲ ಎಂದರು. ಮೊದಲ ಹಂತದಲ್ಲಿ ಶಾಸಕರಿಗೆ ಕೊಡಲಾಗುತ್ತದೆ. ಕಾರ್ಯಕರ್ತರಿಗೆ ಎರಡನೇ ಹಂತದಲ್ಲಿ ಸ್ಥಾನ ಕೊಡುತ್ತೇವೆ ಎಂದು ತಿಳಿಸಿದರು.
ಧಾರವಾಡ: ಚೀನಾದಲ್ಲಿ ಕೊರೊನಾ ನಂತರ ಇದೀಗ ಮೈಕೋಪ್ಲಾಸ್ಮಾ ನ್ಯುಮೋನಿಯಾ ಹಾಗೂ ಇನ್ನುಯೆಂಝಾ ವೈರಸ್ ತೀವ್ರವಾಗಿ ಹರಡಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯಿಂದ ರಾಜ್ಯಕ್ಕೆ ಹೊಸ ನಿಯಮಾವಳಿಗಳು ಬಂದಿವೆ. ಹಾಗಾಗಿ ಜಿಲ್ಲೆಯ ಜನತೆ ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು. ಈ ಸಂಬಂಧ ನಗರದ ಜಿಲ್ಲಾಧಿಕಾರಿ ಸಭಾಭವಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚೀನಾದಲ್ಲಿ ಹಬ್ಬಿರುವ ವೈರಸ್ನಿಂದ ನಮಗೆ ಸಮಸ್ಯೆ ಆಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಏನು ವ್ಯವಸ್ಥೆ ಇತ್ತೋ ಅದನ್ನೇ ಮುಂದುವರೆಸಿದ್ದೇವೆ. ಬೆಡ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಇದೆ. ಸಿಬ್ಬಂದಿ ವ್ಯವಸ್ಥೆ ಕೂಡ ಇದೆ. ಜೊತೆಗೆ ಹುಬ್ಬಳ್ಳಿ ಕಿಮ್ಸ್ ಸೇರಿ ತಾಲೂಕು ಆಸ್ಪತ್ರೆಗಳಲ್ಲಿಯು ಕೂಡ ಆಕ್ಸಿಜನ್ ಪ್ಲಾಂಟ್ ಹಾಗೂ ಆಕ್ಸಿಜನ್ ಪೂರೈಕೆ ಇದೆ. ನಮ್ಮಲ್ಲಿ ಡೆಂಘಿ ಜ್ವರ ಹೆಚ್ಚಾಗಿರುವುದು ಕಂಡು ಬಂದಿದೆ. ಅದಕ್ಕೆ ಸಂಬಂಧಿಸಿದ ಎಲ್ಲ ಔಷಧಿ ತಯಾರಿ ಮಾಡಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಅಗತ್ಯ ಕ್ರಮ ವಹಿಸಲಾಗಿದ್ದು, ಜನ ಸ್ವಲ್ಪ ಕಾಳಜಿಯಿಂದ ಇರಬೇಕು.…
ಹುಬ್ಬಳ್ಳಿ: ಹಿಂದುಳಿದ ವರ್ಗಗಳ ಪಾಲಿಗೆ ವರದಾನ ವಾಗಲಿರುವ ಕಾಂತರಾಜು ಆಯೋಗದ ವರದಿಯನ್ನು ಅಂಗೀಕರಿಸಿ, ಹಾಗೂ ಮುಸ್ಲಿಮರ 2 ಬಿ ಮೀಸಲಾತಿಯನ್ನು ಶೇಕಡಾ 8ಕ್ಕ ಏರಿಸಲು ಸರ್ಕಾರ ಮುಂದಾಗುವಂತೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತುವಂತೆ ಒತ್ತಾಯಿಸಿ ಸಾಮಾಜಿಕ ನ್ಯಾಯ ಸಂರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ಮಿನಿ ವಿಧಾನ ಸೌಧ ಮುಂದೆ ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಸಂರಕ್ಷಣಾ ವೇದಿಕೆ ಮುಖಂಡರಾದ ಎಚ್ ಎಫ್ ಜಕ್ಕಪ್ಪನವರ, ವಸಂತ ಲದ್ವಾ ಮಾತಾನಾಡಿ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಾಡಿನ ಸಮಸ್ತ ಪ್ರಜೆಗಳಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಈ ದಿಸೆಯಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳು ಸಮಾಜದ ಪ್ರತಿಯೊಂದು ಜನ ವರ್ಗಕ್ಕೂತಲುಪಿಸುವುದುನ್ನು ಖಚಿತ ಪಡಿಸಿಕೊಳ್ಳಲು ಮತ್ತು ವಿವಿಧ ಜಾತಿಗಳ ಸ್ಥಿತಿ ಗತಿ ತಿಳಿಯಲು ಸರ್ಕಾರಕ್ಕೆ ಈ ತರಹದ ಸಮೀಕ್ಷೆ ಅನಿವಾರ್ಯ ಇದರ ಉದ್ದೇಶವೇ ಸಮಾಜದ ನ್ಯೂನತೆ ಸರಿಪಡಿಸುವುದಾಗಿದೆ ಎಂದರು. ಯಾರು ಅವಕಾಶದಿಂದ…
ಧಾರವಾಡ: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಶುಲ್ಕವಿಧಿಸಿರುವ ಜೊತೆಗೆ ವಿವಿಧ ಸೇವೆಗಳ ಶುಲ್ಕ ಹೆಚ್ಚಿಸಿರುವ ರಾಜ್ಯ ಸರ್ಕಾರ ನಡೆಯನ್ನು ಖಂಡಿಸಿ ಹಾಗೂ ಶುಲ್ಕ ಹಿಂಪಡೆಯಬೇಕು ಎಂದು ಅಗ್ರಹಿಸಿ, ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ, ಸೋಷಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣ, ವಸತಿ, ಆಹಾರ ಸೇರಿ ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಧಿಕಾರದ ನಡೆಸುವ ಸರ್ಕಾರದ ಮುಖ್ಯ ಕರ್ತವ್ಯವಾಗಿದೆ. ಆದರೆ ಇಂದು ರಾಜ್ಯದಲ್ಲಿ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಮೂಲಭೂತ ಸೌಕರ್ಯಗಳಿಗೂ ಶುಲ್ಕವಿಧಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ..?. ಆಳು ಸರ್ಕಾರಗಳ ಜನವಿರೋಧಿ ನೀತಿಯಿಂದ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಸಾಗಿದೆ. ಇದರಿಂದ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರ ಈಗ…
ಕಲಬುರಗಿ: ಶತಾಯುಷಿ ಡಾ.ಭೀಮಣ್ಣ ಖಂಡ್ರೆಯವರಿಗೆ ಇದೀಗ ನೂರರ ಸಂಭ್ರಮ. ಹೀಗಾಗಿ ಎಲ್ಲ ಸಮುದಾಯದ ಜನರ ಏಳಿಗೆಗಾಗಿ ಹೋರಾಡಿದ ಖಂಡ್ರೆಯವರ ಶತಮಾನೋತ್ಸವ ಕಾರ್ಯಕ್ರಮ ಡಿಸೆಂಬರ್ 2 ರಂದು ಹುಟ್ಟೂರು ಭಾಲ್ಕಿಯಲ್ಲಿ ಆಯೋಜಿಸಿದ್ದು ಎಲ್ರೂ ಬನ್ನಿ ಅಂತ ಅಖಿಲ ಭಾರತ ವೀರಶೈವ ಮಹಾಸಭಾ ಆಹ್ವಾನ ನೀಡಿದೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾಸಭಾದ ಡಾ.ಸುಧಾ ಹಾಲಕಾಯಿ ಮತ್ತು ಗೌರಿ ಚಿಚಕೋಟಿ ಕಲ್ಯಾಣ ಕರ್ನಾಟಕದಲ್ಲಿ ಇದೊಂದು ಬೃಹತ್ ಸಮಾರಂಭ ಆಗಲಿದೆ ಅಂದ್ರು..AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ CM ಸಿದ್ರಾಮಯ್ಯ DCM ಡಿಕೆ ಶಿವಕುಮಾರ್ ಸೇರಿ ಗಣ್ಯಾತಿಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ..ಇದೇವೇಳೆ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದೇವೆ ಅಂತ ಹೇಳಿದ್ರು.