ಧಾರವಾಡ: ಚೀನಾದಲ್ಲಿ ಕೊರೊನಾ ನಂತರ ಇದೀಗ ಮೈಕೋಪ್ಲಾಸ್ಮಾ ನ್ಯುಮೋನಿಯಾ ಹಾಗೂ ಇನ್ನುಯೆಂಝಾ ವೈರಸ್ ತೀವ್ರವಾಗಿ ಹರಡಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯಿಂದ ರಾಜ್ಯಕ್ಕೆ ಹೊಸ ನಿಯಮಾವಳಿಗಳು ಬಂದಿವೆ. ಹಾಗಾಗಿ ಜಿಲ್ಲೆಯ ಜನತೆ ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಈ ಸಂಬಂಧ ನಗರದ ಜಿಲ್ಲಾಧಿಕಾರಿ ಸಭಾಭವಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚೀನಾದಲ್ಲಿ ಹಬ್ಬಿರುವ ವೈರಸ್ನಿಂದ ನಮಗೆ ಸಮಸ್ಯೆ ಆಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಏನು ವ್ಯವಸ್ಥೆ ಇತ್ತೋ ಅದನ್ನೇ ಮುಂದುವರೆಸಿದ್ದೇವೆ. ಬೆಡ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಇದೆ. ಸಿಬ್ಬಂದಿ ವ್ಯವಸ್ಥೆ ಕೂಡ ಇದೆ. ಜೊತೆಗೆ ಹುಬ್ಬಳ್ಳಿ ಕಿಮ್ಸ್ ಸೇರಿ ತಾಲೂಕು ಆಸ್ಪತ್ರೆಗಳಲ್ಲಿಯು ಕೂಡ ಆಕ್ಸಿಜನ್ ಪ್ಲಾಂಟ್ ಹಾಗೂ ಆಕ್ಸಿಜನ್ ಪೂರೈಕೆ ಇದೆ.
ನಮ್ಮಲ್ಲಿ ಡೆಂಘಿ ಜ್ವರ ಹೆಚ್ಚಾಗಿರುವುದು ಕಂಡು ಬಂದಿದೆ. ಅದಕ್ಕೆ ಸಂಬಂಧಿಸಿದ ಎಲ್ಲ ಔಷಧಿ ತಯಾರಿ ಮಾಡಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಅಗತ್ಯ ಕ್ರಮ ವಹಿಸಲಾಗಿದ್ದು, ಜನ ಸ್ವಲ್ಪ ಕಾಳಜಿಯಿಂದ ಇರಬೇಕು. ಸರ್ಕಾರ ಕೂಡ ಈ ರೀತಿಯ ವ್ಯವಸ್ಥೆಯಲ್ಲಿ ಇರಬೇಕು ಎಂದು ಹೇಳಿದ್ದು, ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು