Author: AIN Author

ಬೆಂಗಳೂರು:“ಟೆಕ್ ಸಮ್ಮೇಳನದಲ್ಲಿ ಭಾಗವಹಿಸಿರುವ ಕಾರಣ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬಗ್ಗೆ ನನಗೆ ಮಾಹಿತಿ ಇಲ್ಲ. ನ್ಯಾಯಾಲಯದ ವಿಚಾರದಲ್ಲಿ ವಕೀಲರಿಂದ ಸರಿಯಾದ ಮಾಹಿತಿ ಇಲ್ಲದೆ ಈ ವಿಚಾರವಾಗಿ ಮಾತನಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಅರಮನೆ ಮೈದಾನದಲ್ಲಿ ನಡೆದ ಟೆಕ್ ಸಮಿಟ್ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು. ನಿಮ್ಮ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ರಿಲೀಫ್ ನೀಡುವ ಆದೇಶ ನೀಡಿದೆ ಎಂದು ಮಾಧ್ಯಮಗಳು ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. “ಈ ವಿಚಾರವಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯಕ್ಕೆ ನಾನು ಟೆಕ್ ಸಮಿಟ್ ನಲ್ಲಿ ಭಾಗವಹಿಸಲು ಬಂದಿದ್ದೇನೆ. ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ  ಹಾಗೂ ಎಂ.ಬಿ ಪಾಟೀಲ್ ಅವರು ರಾಜ್ಯದಲ್ಲಿ ಬಂಡವಾಳ ಆಕರ್ಷಿಸಿ ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಟಿಸಲು, ರಾಜ್ಯವನ್ನು ಸಮೃದ್ಧಿಗೊಳಿಸಲು ಈ ಪ್ರಯತ್ನಕ್ಕೆ ಮುಂದಾಗಿದ್ದು, ಅವರಿಗೆ ಬೆಂಬಲವಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ನಮ್ಮ ಸರ್ಕಾರ ನೂತನ ಬಿಟಿ…

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಇದರ ಬೆನ್ನಲ್ಲೆ ಈಗ ಪ್ರತಿ ತಿಂಗಳು ನಾಡ ದೇವತೆ  ಚಾಮುಂಡೇಶ್ವರಿಗೆ 2 ಸಾವಿರ ಮಾಡಲಾಗುತ್ತಿದ್ದು, 59 ತಿಂಗಳ ಒಟ್ಟು ಮೊತ್ತವನ್ನು ಸಂದಾನ ಮಾಡಿದ್ದಾರೆ. https://ainlivenews.com/rockline-venkatesh-theft-in-his-house-khatarnak-nepali-gang-arrested/ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಹಣವನ್ನು ಅರ್ಪಿಸುವ ಮೂಲಕ ಸರ್ಕಾರದ ಹರಕೆ ತೀರಿಸಿದರು. ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 59 ತಿಂಗಳ ಕಂತಿನ ಹಣ ಒಟ್ಟು 1.18 ಲಕ್ಷ ರೂ.ಗಳನ್ನು ಸಚಿವೆ ಹೆಬ್ಬಾಳ್ಕರ್ ವೈಯಕ್ತಿಕವಾಗಿ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭಾ ಚುನಾವಣೆಗೂ ಪೂರ್ವ ಮೇ 9ರಂದು ಸಿದ್ದರಾಮಯ್ಯ  ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ದಿನೇಶ್ ಗೂಳಿಗೌಡ ಹಾಗೂ ಇತರ ಕಾಂಗ್ರೆಸ್ ನಾಯಕರು ಚಾಮುಂಡಿ ದೇವಿ ಸನ್ನಿಧಿಯಲ್ಲಿ ಗ್ಯಾರಂಟಿ ಕಾರ್ಡ್ ಗಳನ್ನಿಟ್ಟು…

Read More

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹೃದಯಾಘಾತದಿಂದ ಸಾವನಪ್ಪಿದ್ದು, ಈ ಸಾವಿಗೆ ಬಿಜೆಪಿ ಶಾಸಕರೇ ಕಾರಣ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ  ಆರೋಪಿಸಿದರು. https://ainlivenews.com/fetal-killing-issue-in-the-state-what-is-the-warning-given-by-police-commissioner-b-dayanand/ ಈ ಕುರಿತು ಬೆಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಸಾವಿಗೆ ಹಿಂದಿನ ಬಿಜೆಪಿ ಸರ್ಕಾರದ ಶಾಸಕರು ಹಾಗೂ ಸರ್ಕಾರದ ಅಧಿಕಾರಿಗಳೇ ಕಾರಣ, ಮಾನಸಿಕ ಟಾರ್ಚರ್‌ನಿಂದ ಅಂಬಿಕಾಪತಿ ಅವರಿಗೆ ನೋವಾಗಿತ್ತು. ಇತ್ತೀಚೆಗೆ ಆದ ಕೆಲ ಘಟನೆಗಳಿಂದ ಬಹಳ ನೊಂದಿದ್ದರು ಎಂದರು. ಕಳೆದ ಸರ್ಕಾರದ ಸಚಿವರೊಬ್ಬರು ಹಾಗೂ ಈಗಿನ ಸರ್ಕಾರದ ಕೆಲ ಅಧಿಕಾರಿಗಳು ಇವರ ಸಾವಿಗೆ ಕಾರಣ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್​ ಸಿಡಿಸಿದ್ದಾರೆ.

Read More

ಬೆಂಗಳೂರು:ಮಂಡ್ಯದ ಆಲೆಮನೆಯಲ್ಲಿ ಮೂರು ತಿಂಗಳಲ್ಲಿ 245 ಭ್ರೂಣ ಹತ್ಯೆ ಮಾಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅ.15ರಂದು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಕಾರು ನಿಲ್ಲಸದೇ ಹೋಗಿದ್ದಾರೆ.ಅವರನ್ನು ಹಿಂಬಾಲಿಸಿ ವಿಚಾರಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. https://ainlivenews.com/rockline-venkatesh-theft-in-his-house-khatarnak-nepali-gang-arrested/ ಹೆಣ್ಣು ಮಗು ಎಂದು ಗೊತ್ತಾದರೇ ಹತ್ಯೆ ಮಾಡುತ್ತಿರುವುದು ಗೊತ್ತಾಗಿದೆ. ಇಲ್ಲಿಯವರೆಗೂ 9 ಜನರನ್ನು ಬಂದಿಸಿದ್ದು, ಇಬ್ಬರು ಡಾಕ್ಟರ್‌ಗಳು, ಮೂವರು ಲ್ಯಾಬ್ ಟೆಕ್ನಿಷಿಯನ್ ಮತ್ತು ಮಧ್ಯವರ್ತಿಗಳು ಸಿಕ್ಕಿದ್ದಾರೆ. ಇವರೆಲ್ಲರೂ ಕೂಡಾ ಮೈಸೂರು (Mysuru) ಮತ್ತು ಮಂಡ್ಯ ಮೂಲದವರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಿದ್ದು, ಆರೋಪಿಗಳೇ ಒಪ್ಪಿಕೊಂಡಂತೆ ಎರಡು ವರ್ಷಗಳಿಂದ ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಒಂದು ವರ್ಷಕ್ಕೆ ಕನಿಷ್ಠ 1,000 ಭ್ರೂಣ ಹತ್ಯೆ ಮಾಡುತ್ತಾರೆ. ಎರಡು ವರ್ಷಕ್ಕೆ 2,000 ಭ್ರೂಣ…

Read More

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ಮಾಪಕ ಹಾಗೂ ನಟ ರಾಕ್‌ಲೈನ್‌ ವೆಂಕಟೇಶ್‌ ಅವರ ಸಹೋದರನ ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನ ಬಂಧಿಸಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದು, ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಅವರ ತಮ್ಮ ಭ್ರಮರೇಶ್ ಅವರು ಕುಟುಂಬ ಸಮೇತ ಕಳೆದ ತಿಂಗಳು ಯುರೋಪ್​ಗೆ ಪ್ರವಾಸ ಹೋಗಿದ್ದ ವೇಳೆ ಮನೆ ಕಳ್ಳತನವಾಗಿತ್ತು. ಈ ಸಂಬಂಧ ಇದೀಗ ಪೊಲೀಸರು, 7 ಆರೋಪಿಗಳ‌ ತಂಡವನ್ನು ಅರೆಸ್ಟ್ ಮಾಡಿದ್ದು, ಬಂಧಿತರಿಂದ ಸುಮಾರು ಮೂರು ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. https://ainlivenews.com/the-gang-was-selling-15-20-days-old-hookahs-what-is-the-role-of-whom/ ಇನ್ನು, ಈ ನೇಪಾಳಿ ಗ್ಯಾಂಗ್ ದರೋಡೆ ಮಾಡಲು ಬರೋಬ್ಬರಿ ಮೂರು ತಿಂಗಳುಗಳ ಕಾಲ ಸ್ಕೆಚ್​ ಹಾಕಿತ್ತು ಎಂದು ತಿಳಿದುಬಂದಿದೆ. ಭ್ರಮರೇಶ್ ಅವರ ನಿವಾಸದ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಕುಳಿತುಕೊಂಡು ಮನೆ ದರೋಡೆಗೆ ಪ್ಲ್ಯಾನ್ ಮಾಡಿದ್ದರು ಎನ್ನುವ ಸ್ಫೋಟಕ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ.

Read More

ನವದೆಹಲಿ: ವಿದೇಶಗಳಲ್ಲಿ ಮದುವೆ ಸಮಾರಂಭಗಳನ್ನು ಆಯೋಜಿಸಬೇಡಿ ಎಂದು ಭಾರತೀಯ ಜೋಡಿಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಲಹೆ ನೀಡಿದ್ದಾರೆ. ಮನ್‌ ಕಿ ಬಾತ್‌ (Mann Ki Baat) ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಮದುವೆಗಳಿಗೆ ಶಾಪಿಂಗ್ ಮಾಡುವಾಗ, ಜನರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಶ್ರೀಮಂತ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ನಡೆಸುವ ಪ್ರವೃತ್ತಿಯಿಂದ ದೇಶಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ದೇಶದ ಹಣ ಹೊರಗಡೆ ಹೋಗದಂತೆ ಭಾರತದ ನೆಲದಲ್ಲಿ ಇಂತಹ ಸಮಾರಂಭಗಳನ್ನು ನಡೆಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. https://ainlivenews.com/do-you-know-which-are-the-most-visited-websites-by-indians/ ಈಗ ಮದುವೆ ಸೀಸನ್ ಕೂಡ ಶುರುವಾಗಿದೆ. ಈ ಮದುವೆ ಸೀಸನ್‌ನಲ್ಲಿ ಸುಮಾರು 5 ಲಕ್ಷ ಕೋಟಿ ರೂ. ವ್ಯಾಪಾರ ಆಗಬಹುದು ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸುತ್ತವೆ. ಮದುವೆಗೆ ಶಾಪಿಂಗ್ ಮಾಡುವಾಗ ನೀವೆಲ್ಲರೂ ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.  ಹೌದು, ಮದುವೆಯ ವಿಷಯ ಬಂದಾಗಿನಿಂದ ಒಂದು ವಿಷಯವು ನನ್ನನ್ನು…

Read More

ಹೊಂಬಾಳೆ ಫಿಲಂಸ್‍ ನಿರ್ಮಾಣದ, ರಿಷಭ್‍ ಶೆಟ್ಟಿ (Rishabh Shetty) ನಿರ್ದೇಶಿಸಿ ನಟಿಸಿರುವ  ‘ಕಾಂತಾರ’ (Kantara) ಚಿತ್ರದ ಪೂರ್ವ ಭಾಗವಾದ ‘ಕಾಂತಾರ – ಅಧ್ಯಾಯ 1’, ಸೋಮವಾರವಷ್ಟೇ ಅದ್ಧೂರಿಯಾಗಿ ಪ್ರಾರಂಭವಾಗಿತ್ತು. ಇಂದು ಚಿತ್ರವು ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಮಂಗಳವಾರ, ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು (Award) ರಿಷಬ್ ಶೆಟ್ಟಿ, ತಮ್ಮ ನೆಚ್ಚಿನ ನಟ, ನಿರ್ದೇಶಕ ಶಂಕರ್ ನಾಗ್ (Shankar Nag) ಅವರಿಗೆ ಅರ್ಪಿಸಿದ್ದಾರೆ. ಈ ಪ್ರಶಸ್ತಿಯು ಹಿಂದೆ ಶಂಕರ್ ನಾಗ್ ಅವರಿಗೆ ಸಂದಿತ್ತು. ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ “ಕಾಂತಾರ” ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ…

Read More

ಕಲಬುರಗಿ: ಬಸ್‌-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿಯ ಕಟ್ಟಿ ಸಂಗಾವಿ ಬಳಿ ಅಪಘಾತ ನಡೆದಿದೆ. ಶಶಿಕುಮಾರ್ (21), ಪ್ರಜ್ವಲ್ (22) ಮೃತ ದುರ್ದೈವಿಗಳಾಗಿದ್ದು,. ಸ್ನೇಹಿತರೊಬ್ಬರ ಬರ್ತ್ ಡೇ ಪಾರ್ಟಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ಸಾರಿಗೆ ಬಸ್‌ಗೆ ಬೈಕ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. https://ainlivenews.com/do-you-know-which-are-the-most-visited-websites-by-indians/ ಗಂಭೀರ ಗಾಯಗೊಂಡಿದ್ದ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಜೇವರ್ಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಜೇವರ್ಗಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Read More

ಮೈಸೂರು: ಕೆಲ ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವ್ಯಾಪ್ತಿಯಲ್ಲಿ 50 ವರ್ಷದ ಮಹಿಳೆಯನ್ನು ಕೊಂದಿದ್ದ ಹುಲಿ ಇಂದು ಮಂಗಳವಾರ ನಸುಕಿನ ಜಾವ 1.40ರ ಸುಮಾರಿಗೆ ಸೆರೆ ಸಿಕ್ಕಿದೆ. ಸೆರೆಸಿಕ್ಕ ಹತ್ತು ವರ್ಷದ ಗಂಡು ಹುಲಿ ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಮೈಸೂರು ಸಮೀಪದ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. https://ainlivenews.com/do-you-know-which-are-the-most-visited-websites-by-indians/ ನವೆಂಬರ್ 24 ರಂದು ಮಹಿಳೆಯನ್ನು ಕೊಂದಿದ್ದ ಹುಲಿ ಎರಡು ಜಾನುವಾರುಗಳನ್ನು ಕೊಂದಿತ್ತು. ಬೋನಿನೊಳಗೆ ಕಾದು ಕುಳಿತಿದ್ದ ಅರಣ್ಯ ಸಿಬ್ಬಂದಿ ಸಮಾಧಾನಪಡಿಸಿ ಹಸುವನ್ನು ತಿನ್ನಲು ಬಂದಾಗ ಸೆರೆ ಹಿಡಿದಿದ್ದಾರೆ. ಬಿಟಿಆರ್ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಎಸಿಎಫ್ ಪರಮೇಶ್ ಕಾರ್ಯಾಚರಣೆ ವೇಳೆ ಹಾಜರಿದ್ದರು.

Read More

ಬೆಂಗಳೂರು: ಶಾಸಕ ಬಿಆರ್ ಪಾಟೀಲ್ (MLA BR Patil) ಸೂಕ್ಷ್ಮ ಸ್ವಭಾವದವರು. ಹೀಗಾಗಿ ಎಮೋಷನಲ್ ಆಗಿ ಈ ರೀತಿ ಪತ್ರ ಬರೆದಿರಬಹುದು ಎಂದು ಅಂತ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ಶಾಸಕ ಬಿ.ಆರ್ ಪಾಟೀಲ್ ಪತ್ರ ಬರೆದಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿ.ಆರ್ ಪಾಟೀಲ್ ನಮಗೆಲ್ಲಾ ಹಿರಿಯ ನಾಯಕರು. ಅವರ ಮೇಲೆ ಅಪಾರ ಗೌರವ ನಮಗಿದೆ. ಅವರು ಸಜ್ಜನ ರಾಜಕಾರಣಿ. ತತ್ವ ಸಿದ್ದಾಂತದ ಮೇಲೆ ರಾಜಕಾರಣ ಮಾಡಿದವರು. ನಾನು ಚಿಕ್ಕವನಿಂದ ಅವರನ್ನ ನೋಡಿದ್ದೇನೆ. ಅವರ ನೋವನ್ನ ಅವರು ಹೇಳಿಕೊಂಡಿದ್ದಾರೆ. ಅವರ ಮೇಲೆ ಯಾರಾದರೂ ಆರೋಪ ಮಾಡಿದರೆ ಜನ ಒಪ್ಪಲ್ಲ ಎಂದರು. https://ainlivenews.com/big-relief-for-dks-check-out-dcms-first-reaction-here/ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪಗಳು ಸಹಜ. ಬಿಆರ್ ಪಾಟೀಲ್ ಸೂಕ್ಷ್ಮ ಸ್ವಭಾವದವರುಹೀಗಾಗಿ ಎಮೋಷನಲ್ ಆಗಿ ಈ ರೀತಿ ಪತ್ರ ಬರೆದಿರಬಹುದು. ನಾನು ಆ ಪತ್ರ ನೋಡಿಲ್ಲ. ಸಿಎಂ ಅವರು ಬಿಆರ್ ಪಾಟೀಲ್ ಜೊತೆ ಮಾತಾಡ್ತಾರೆ. ಅವರ ಘನತೆಗೆ ಧಕ್ಕೆ ಬಾರದಂತೆ ತನಿಖೆ ಮಾಡಿಸುತ್ತಾರೆ ಎಂದರು. ಇದೇ ವೇಳೆ ಬಿಆರ್…

Read More