ವಿಶ್ವಕಪ್ ಫೈನಲ್‌ನಲ್ಲಿ ಅವಕಾಶ ನೀಡದಿದ್ದಕ್ಕೆ ನಾಯಕ ರೋಹಿತ್ ಶರ್ಮ ಮೇಲೆ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದಿದ್ದಾರೆ. ಆಸ್ಟ್ರೇಲಿಯಾದ ಫೈನಲ್ ಪಂದ್ಯಕ್ಕೆ ರೋಹಿತ್ ಶರ್ಮ ಅವರ ಮನಸ್ಥಿತಿಯನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ. ಆಟಗಾರರ ಸಂಯೋಜನೆಯ ಬಗ್ಗೆ ರೋಹಿತ್ ನೂರು ಬಾರಿ ಯೋಚಿಸುತ್ತಿದ್ದರು. ಆದರೆ, ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಅದೇ ಹನ್ನೊಂದರ ಬಳಗವನ್ನು ರೋಹಿತ್ ಉಳಿಸಿಕೊಂಡರು. ಆ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಇದನ್ನೇ ಮಾಡುತ್ತಿದ್ದರು ಎಂದರು. ಅಂದಹಾಗೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಭಾರತದ ಮೊದಲ ಲೀಗ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗ ಸೇರಿದ್ದ ಅಶ್ವಿನ್, 34 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಆ ಬಳಿಕ ಅಶ್ವಿನ್ರನ್ನು ಬೆಂಚ್ ಕಾಯಿಸಲಾಯಿತು. ಫೈನಲ್ನಲ್ಲೂ ಅವಕಾಶ ನೀಡಲಿಲ್ಲ. ಏಕೆಂದರೆ, ಭಾರತ ಫೈನಲ್ಗೂ ಮುಂಚೆ ಆರು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಹೀಗಾಗಿ ಅದೇ ತಂಡವನ್ನು ಉಳಿಸಿಕೊಳ್ಳಲು ರೋಹಿತ್ ನಿರ್ಧರಿಸಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು…
Author: AIN Author
ನವದೆಹಲಿ: ಕೊರೊನಾ ಅವಧಿಯ ನಂತರ ಭಾರತದ ದೇಶೀಯ ವಿಮಾನಯಾನ ಕ್ಷೇತ್ರವು ಪುನಶ್ಚೇತನಗೊಂಡಿದ್ದು, ದೇಶೀಯ ವಿಮಾನ (Airlines) ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ನವೆಂಬರ್ ತಿಂಗಳಿನಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಕನಿಷ್ಠ ನಾಲ್ಕು ಪಟ್ಟು ಅತ್ಯಧಿಕ ಮಟ್ಟವನ್ನು ತಲುಪಿದ್ದು, ಕಳೆದ ಒಂದೇ ದಿನ 4,63,417 ಮಂದಿ ವಿಮಾನದ ಮೂಲಕ ಸಂಚರಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, https://ainlivenews.com/do-you-know-which-are-the-most-visited-websites-by-indians/ ಸಕಾರಾತ್ಮಕ ಮನೋಭಾವ, ಪ್ರಗತಿಪರ ನೀತಿಗಳು ಮತ್ತು ಪ್ರಯಾಣಿಕರ ವಿಶ್ವಾಸದಿಂದಾಗಿ ವಿಮಾನ ಪ್ರಯಾಣಿಕರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ ಎಂದು ಹೇಳಿದೆ. ಕಳೆದ ಗುರುವಾರ 5,998 ವಿಮಾನ ಪ್ರಯಾಣವಾಗಿದ್ದು, ಈ ಪೈಕಿ 4,63,417 ಮಂದಿ ವಿಮಾನಗಳ ಮೂಲಕ ಸಂಚರಿಸಿದ್ದಾರೆ. 2022 ಇದೇ ದಿನಕ್ಕೆ 5,413 ಬಾರಿ ವಿಮಾನಗಳ ಹಾರಾಟವಾಗಿದ್ದು, 3,86,002 ಮಂದಿ ವಿಮಾನಗಳ ಮೂಲಕ ಸಂಚರಿಸಿದ್ದರು.
ತುಮಕೂರು:-ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಪೊಲೀಸ್ ಪೇದೆ ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟ ಬಳಿ ಜರುಗಿದೆ. ಮಹೇಶ್,ಚಂದ್ರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ಮೃತ ಮಹೇಶ್,ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಪೇದೆ ಎನ್ನಲಾಗಿದೆ. ನಿನ್ನೆ ತಡರಾತ್ರಿ ಸಂಬಂಧಿಗಳ ಮದುವೆಗೆ ಮೂವರು ಬಂದಿದ್ದರು. ಮದುವೆ ಮುಗಿಸಿ ಬೈಕ್ ನಲ್ಲಿ ವಾಪಸ್ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಮೇಲೆ ಬಿದ್ದು ಅಪಘಾತ ಸಂಭವಿಸಿದೆ. ಬೈಕ್ ನಲ್ಲಿದ್ದ ಮತ್ತೋರ್ವ ಗಾಯಾಳು ಭರತ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಯಾಂಡಲ್ವುಡ್ ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ಒಕ್ಕೂಟ ಡಿ. 17 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಅಭಿಮಾನಿಗಳ ಪಾಲಿನ ‘ಹೃದಯವಂತ’ ಡಾ.ವಿಷ್ಣುವರ್ಧನ್ ಬಾರದ ಲೋಕಕ್ಕೆ ಪಯಣ ಬೆಳೆಸಿ ಡಿಸೆಂಬರ್ 30ಕ್ಕೆ 14 ವರ್ಷಗಳಾಗಲಿದೆ. ಇಷ್ಟು ವರ್ಷಗಳು ಕಳೆದರು ವಿಷ್ಣು ಪುಣ್ಯಭೂಮಿಯನ್ನು ನಿರ್ಲಕ್ಷಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಈ ಹಿನ್ನೆಲೆ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಗಾಗಿ ಇದೆ ಡಿಸೆಂಬರ್ 17 ರಂದು ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಟನೆಗಳ ಒಕ್ಕೂಟದಿಂದ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ. ಈ ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಸೇರಿಸಬೇಕಾಗಿರುವುದರಿಂದ ಡಾ.ವಿಷ್ಣು ಸೇನಾ ಸಮಿತಿ ಕೇಂದ್ರ ಸಮಿತಿ ವತಿಯಿಂದ ಎಲ್ಲಾ ಜಿಲ್ಲಾವಾರು, ತಾಲೂಕುವಾರು, ಶಾಖೆ ಘಟಕಗಳ ಅಧ್ಯಕ್ಷರುಗಳು ಇದೆ ಡಿ.03ರಂದು ಭಾನುವಾರ ಆಯಾ ಭಾಗದಲ್ಲಿರುವ ಅಭಿಮಾನಿಗಳನ್ನು ಒಳಗೊಂಡಂತೆ ಒಂದು ಸಭೆ ಮಾಡುವ ಮೂಲಕ ಪುಣ್ಯಭೂಮಿಗಾಗಿ ಮಾಡುತ್ತಿರುವ ಹೋರಾಟದ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿ 17 ರ ಪ್ರತಿಭಟನೆಗೆ ಸಾವಿರಾರು ಜನರು…
ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಟೀಮ್ ಇಂಡಿಯಾ ಹೆಡ್ ಕೋಚ್ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ ವಿಸ್ತರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ ಎಂದು ವರದಿಯಾಗಿದೆ. ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಟೆಸ್ಟ್ ಚಾಂಪಿಯನ್‌ಷಿಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ರನ್ನರ್ ಅಪ್ ಆಗಿದೆ. 2021ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಹೆಡ್ ಕೋಚ್ ಹುದ್ದೆಯನ್ನು ಅಲಂಕರಿಸಿದ್ದ ರಾಹುಲ್ ದ್ರಾವಿಡ್, ಇತ್ತೀಚೆಗೆ ಅಂತ್ಯವಾಗಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಅವರ ಅವಧಿ ಮುಗಿದಿತ್ತು. ಈ ಹಿನ್ನೆಲೆಯಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹಲವು ಫ್ರಾಂಚೈಸಿಗಳು ದ್ರಾವಿಡ್ ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿದೆ. ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಅಲ್ಲದೆ ಹಲವು ಪ್ರತಿಭಾವಂತ ಆಟಗಾರರು ಬೆಳಕಿಗೆ ಬಂದಿದ್ದಾರೆ. 2023ರ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಹಾಗೂ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ…
ಬೆಂಗಳೂರು:- ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿಸಿ ಬಟ್ಟೆ ಮಾರುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಸಿಸಿಬಿ ಜಪ್ತಿ ಮಾಡಿದೆ. ದಾಳಿ ವೇಳೆ ಬರೋಬ್ಬರಿ1.5ಕೋಟಿ ಮೌಲ್ಯದ ಬಟ್ಟೆಯನ್ನು ಸಿಸಿಬಿ ಸೀಜ್ ಮಾಡಿದೆ. ಅರ್ಮನಿ, ಬರ್ಬರಿ, ಗ್ಯಾಂಟ್ ಸೇರಿದಂತೆ ಪ್ರತಿಷ್ಠಿತ ಬ್ರಾಂಡ್ ಗಳ ಬಟ್ಟೆ ಎಂದು ಅಕ್ರಮ ಮಾರಾಟ ಮಾಡಲಾಗುತ್ತಿತು. ಪಟೆಲ್ ಎಕ್ಸ್ಪೋರ್ಟ್ ಹಾಗೂ ಆರ್ ಬಿ ಫ್ಯಾಷನ್ ಗೋಡೌನ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಬೇರೆ ಬೇರೆ ಕಡೆಯೂ ಇದೇ ರೀತಿ ಫೇಕ್ ಬ್ರಾಂಡ್ ಗೋಡೌನ್ ಹೊಂದಿರೋದು ಬೆಳಕಿಗೆ ಬಂದಿದೆ. ಎಸ್ ಆರ್ ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ನಕಲಿ ಬ್ರಾಂಡ್ ಬಟ್ಟೆಯ ಗೋಡೌನ್ ಇರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸಿಸಿಬಿ…
ಐಸಿಸಿ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಮತ್ತು ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಬೆಂಗಳೂರು ಮೂಲದ ಸ್ಟಾರ್ಟಪ್ ಒಂದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನ ‘ತಗ್ಡಾ ರಹೋ’ ಹೆಸರಿನ ಫಿಟ್ನೆಸ್ ಸ್ಟಾರ್ಟ್ಅಪ್ನಲ್ಲಿ ಧೋನಿ ಹಣ ಹೂಡಿದ್ದಾರೆ. ಆದರೆ, ಸ್ಟಾರ್ಟಪ್ ಮಾಲೀಕರು ಧೋನಿ ಎಷ್ಟು ಪ್ರಮಾಣದ ಹೂಡಿಕೆ ಮಾಡಿದ್ದಾರೆ ಅಥವಾ ಎಷ್ಟು ಷೇರುಗಳನ್ನು ಖರೀದಿಸಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಕ್ರಿಕೆಟಿಗರ ಫಿಟ್ನೆಸ್ಗೆ ಬೇಕಾಗುವ ಭಾರತೀಯ ಭೌತಿಕ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಗ್ಡಾ ರಹೋ ಸಂಸ್ಥಾಪಕ ರಿಷಬ್ ಮಲ್ಹೋತ್ರಾ ಹೇಳಿದ್ದಾರೆ. ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಗರುಡ ಏರೋಸ್ಪೇಸ್, ಹೋಮ್ಲೇನ್, ರಿಗಿ ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಇದೀಗ ಅವರು ಆಧುನಿಕ ತರಬೇತಿಗೆ ಬೇಕಾದ ಸಾಂಪ್ರದಾಯಿಕ ಭಾರತೀಯ ವ್ಯಾಯಾಮ ಸಾಧನಗಳನ್ನು ಒದಗಿಸುವ ಈ ಫಿಟ್ನೆಸ್ ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಸ್ಟಾರ್ಟ್ಅಪ್ ತನ್ನ ವೆಬ್ಸೈಟ್ ಮೂಲಕವೂ ಫಿಟ್ನೆಸ್ಗೆ ಬೇಕಾದ ತರಬೇತಿ ಸಾಧನಗಳನ್ನು…
ಒಟಿಟಿ ಪ್ಲಾಟ್ಫಾರ್ಮ್ಗಳ ಬಗ್ಗೆ ನಟ ರಿಷಬ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರು ಗೋವಾದಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದ ಇವರಿಗೆ ಸ್ಪೆಷಲ್ ಜ್ಯೂರಿ ಅವಾರ್ಡ್ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಅವರು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಒಟಿಟಿ ಪ್ಲಾಟ್ಫಾರ್ಮ್ಗಳು ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೋರಿದ್ದಾರೆ. ‘ಒಟಿಟಿ ಪ್ಲಾಟ್ಫಾರ್ಮ್ಗಳು ಕನ್ನಡ ಚಿತ್ರರಂಗಕ್ಕೆ ಹೆಚ್ಚು ತೆರೆದುಕೊಂಡಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಲ್ಲಿ ಸಬ್ಸ್ಕ್ರೈಬ್ಗಳು ಸಿಗುವುದಿಲ್ಲ. ಅಂತಾರಾಷ್ಟ್ರೀಯ ಸಿನಿಮೋತ್ಸವದವದರ ಬಳಿ ಹಾಗೂ ಅದರ ಸ್ಪಾನ್ಸರ್ಗಳ ಬಳಿ ನಮ್ಮ ಸಿನಿಮಾಗಳನ್ನು ಗುರುತಿಸುವಂತೆ ಕೋರುತ್ತೇನೆ. ಥಿಯೇಟರ್ನಲ್ಲಿ ಹೆಚ್ಚು ಮಾನ್ಯತೆ ಸಿಗದೇ ಇರುವ ಸಿನಿಮಾಗಳನ್ನು ಒಟಿಟಿ ಪ್ಲಾಟ್ಫಾರ್ಮ್ಗಳು ತೆಗೆದುಕೊಳ್ಳಬೇಕು’ ಎಂದು ಅವರು ಬೇಡಿಕೆ ಇಟ್ಟಿದ್ದಾರೆ.
ಬೆಳಗಾವಿ : ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವುದಕ್ಕೂ, ಗ್ಯಾರಂಟಿ ಯೋಜನೆಗೂ ಯಾವುದೇ ಸಂಬಂಧವಿಲ್ಲ. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವ ಪ್ರಕ್ರಿಯೆ 10 ವರ್ಷಗಳ ಹಿಂದಯೇ ನಡೆದಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅನುದಾನ ಕೊರತೆಯಾಗಿದ್ದಕ್ಕೆ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, https://ainlivenews.com/do-you-know-which-are-the-most-visited-websites-by-indians/ ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇಲ್ಲ. ಹಾಗಾಗಿ ಈ ಇಲಾಖೆಗಳನ್ನು ವಿಲೀನಗೊಳಿಸುವ ಬಗ್ಗೆ 10 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಈ ರೀತಿ ಹಿಂದಿನ ಸರ್ಕಾರಗಳಲ್ಲೂ ವಿಲೀನ ಪ್ರಕ್ರಿಯೆ ನಡೆದಿವೆ. ಗ್ಯಾರಂಟಿ ಯೋಜನೆಗಳಿಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು. ಕಾಂತರಾಜ್ ಆಯೋಗದ ವರದಿ ಜಾರಿಯಾದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆಯಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಗದವರು ನಮಗೆ ಇನ್ನೂ ವರದಿಯನ್ನೇ ಕೊಟ್ಟಿಲ್ಲ. ವರದಿ ನೀಡಿದ ನಂತರ, ಅದರ…
ದೇಶ ವಿದೇಶಗಳಲ್ಲಿ ಚಿನ್ನ & ಬೆಳ್ಳಿ ಇವೆರಡೂ ಲೋಹಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,100ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,380 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,920 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,100 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,800 ರೂಪಾಯಿಯಲ್ಲಿ ಇದೆ. ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)., ಬೆಂಗಳೂರು: 58,100 ರೂ., ಚೆನ್ನೈ: 58,700 ರೂ., ಮುಂಬೈ: 58,100 ರೂ., ದೆಹಲಿ: 58,250 ರೂ., ಕೋಲ್ಕತಾ: 58,100 ರೂ., ಕೇರಳ: 58,100 ರೂ., ಅಹ್ಮದಾಬಾದ್: 58,150 ರೂ., ಜೈಪುರ್: 58,250 ರೂ., ಲಕ್ನೋ: 58,250 ರೂ., ಭುವನೇಶ್ವರ್: 58,100 ರೂ.