ವಿಶ್ವಕಪ್ ಫೈನಲ್ನಲ್ಲಿ ಅವಕಾಶ ನೀಡದಿದ್ದಕ್ಕೆ ನಾಯಕ ರೋಹಿತ್ ಶರ್ಮ ಮೇಲೆ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದಿದ್ದಾರೆ.
ಆಸ್ಟ್ರೇಲಿಯಾದ ಫೈನಲ್ ಪಂದ್ಯಕ್ಕೆ ರೋಹಿತ್ ಶರ್ಮ ಅವರ ಮನಸ್ಥಿತಿಯನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ. ಆಟಗಾರರ ಸಂಯೋಜನೆಯ ಬಗ್ಗೆ ರೋಹಿತ್ ನೂರು ಬಾರಿ ಯೋಚಿಸುತ್ತಿದ್ದರು. ಆದರೆ, ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಅದೇ ಹನ್ನೊಂದರ ಬಳಗವನ್ನು ರೋಹಿತ್ ಉಳಿಸಿಕೊಂಡರು. ಆ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಇದನ್ನೇ ಮಾಡುತ್ತಿದ್ದರು ಎಂದರು.
ಅಂದಹಾಗೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಭಾರತದ ಮೊದಲ ಲೀಗ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗ ಸೇರಿದ್ದ ಅಶ್ವಿನ್, 34 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಆ ಬಳಿಕ ಅಶ್ವಿನ್ರನ್ನು ಬೆಂಚ್ ಕಾಯಿಸಲಾಯಿತು. ಫೈನಲ್ನಲ್ಲೂ ಅವಕಾಶ ನೀಡಲಿಲ್ಲ. ಏಕೆಂದರೆ, ಭಾರತ ಫೈನಲ್ಗೂ ಮುಂಚೆ ಆರು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಹೀಗಾಗಿ ಅದೇ ತಂಡವನ್ನು ಉಳಿಸಿಕೊಳ್ಳಲು ರೋಹಿತ್ ನಿರ್ಧರಿಸಿದರು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ರೋಹಿತ್ ಶರ್ಮ ಅವರ ಚಿಂತನೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ಫೈನಲ್ನಲ್ಲಿ ಆಡುವುದು ಒಂದು ದೊಡ್ಡ ಅವಕಾಶ. ಅದಕ್ಕಾಗಿ ನಾನು 3 ದಿನಗಳ ಕಾಲ ಭರ್ಜರಿ ತಯಾರಿ ನಡೆಸಿದ್ದೆ. ಆದರೂ ಅವಕಾಶ ಸಿಗಲಿಲ್ಲ. ಹೀಗಾಗಿ ನನ್ನನ್ನು ಸಾಕಷ್ಟು ಮಂದಿ ಪ್ರಶ್ನೆ ಮಾಡಿದರು. ವಾಟ್ಸ್ಆಯಪ್ನಲ್ಲಿ ಸಾಕಷ್ಟು ಮೆಸೇಜ್ಗಳನ್ನು ನಾನು ಓದಿದ್ದೇನೆ. ಇದರಿಂದ ನಾನು ನನ್ನ ಫೋನ್ ಅನ್ನೇ ಸ್ವಿಚ್ ಆಫ್ ಮಾಡಿದ್ದೆ. ನಿಜ ಹೇಳಬೇಕೆಂದರೆ, ಒಂದು ಅವಕಾಶಕ್ಕಾಗಿ ನಾನು ನನ್ನನ್ನು ಚೆನ್ನಾಗಿ ತಯಾರಿ ನಡೆಸಿದ್ದೆ ಎಂದಿದ್ದಾರೆ.