Author: AIN Author

ಬೆಂಗಳೂರು:- ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ವಿದೇಶಿ ಪ್ರಜೆ ಸೇರಿ ಮೂವರನ್ನು ಅರೆಸ್ಟ್ ಮಾಡಲಾಗಿದೆ. 50 ಲಕ್ಷ ಮೌಲ್ಯದ 180 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್, 58 ಗ್ರಾಂ 150 ಎಕ್ಸ್‍ಟಸಿ ಪಿಲ್ಸ್ ಗಳು ಮತ್ತು 15 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಒರಿಸ್ಸಾ ಮೂಲದ ಇಬ್ಬರು ಆರೋಪಿ ಗಳು ಸುಮಾರು 6 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಫುಟ್‍ಪಾತ್ ಮೇಲೆ ತಳ್ಳುವ ಗಾಡಿಯಲ್ಲಿ ತಿಂಡಿ-ತಿನಿಸುಗಳ ವ್ಯಾಪಾರ ಮಾಡಿಕೊಂಡಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಒರಿಸ್ಸಾದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿ ಮಾಡಿ ಸ್ಥಳೀಯ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದರು. ಇವರಿಂದ 15 ಕೆಜಿ ಗಾಂಜಾ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More

ಪೀಣ್ಯ ದಾಸರಹಳ್ಳಿ:’ ಕೀರ್ತನೆಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡಿದ ಕನಕದಾಸರು ನಮ್ಮೆಲ್ಲರಿಗೆ ದಾರಿ ದೀಪ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. ಶೆಟ್ಟಿಹಳ್ಳಿಯಲ್ಲಿ ಕ್ಷೇತ್ರದ ಬಿಜೆಪಿ ವತಿಯಿಂದ ಆಯೋಜಿಸಲಾದ ಕನಕದಾಸ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ‘ಕನಕದಾಸರ ಸಂದೇಶಗಳು ಎಲ್ಲಾ ಕಾಲಕ್ಕೂ ಮೌಲ್ಯಯುತವಾದ ಸಂದೇಶ. ಯಾವುದೇ ಒಂದು ಜಾತಿ, ಮತ, ಪ್ರದೇಶ, ಭಾಷೆಗೆ ಸೀಮಿತವಾಗದ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳನ್ನು ನಾವೆಂದು ಮರೆಯಬಾರದು’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ.ಎಚ್. ರಾಜು, ವಿನೋದ್ ಗೌಡ, ಬಿಜೆಪಿ ಮುಖಂಡರಾದ ಸುರೇಶ್ ಕೆಂಪೇಗೌಡ, ರಘು, ಕಣ್ಣಪ್ಪ ,ಮಂಜು ಭಾಷಣಿ ಹಾಗೂ ಸ್ಥಳೀಯ ಮುಖಂಡರು ಇದ್ದರು.

Read More

ಎಲ್ಲರೂ ಪ್ರತೀ ದಿನವನ್ನು ಆರಂಭಿಸೋದೇ ಒಂದು ಸ್ಪೂನ್ ತುಪ್ಪದಿಂದ. ಹೌದು, ಖಾಲಿ ಹೊಟ್ಟೆಗೆ ಒಂದು ಸ್ಪೂನ್ ತುಪ್ಪ ತಿಂದ್ರೆ ಏನಾಗುತ್ತದೆ? ನೋಡಿ.. ಆರೋಗ್ಯಕರ ಫ್ಯಾಟ್ಸ್ ಹಾಗೂ ಒಮೆಗಾ ೩ ಫೈಆಟಿ ಆಸಿಡ್ಸ್ ಇದೆ. ಇದರಿಂದಾಗಿ ನಿಮ್ಮ ಚರ್ಮದ ಆರೋಗ್ಯ ಹೆಚ್ಚಳವಾಗುತ್ತದೆ. ಶೀತ, ಗಂಟಲು ನೋವು ಎಲ್ಲಕ್ಕೂ ಇದು ಮದ್ದು. ಇಮ್ಯುನಿಟಿ ಹೆಚ್ಚು ಮಾಡುತ್ತದೆ. ಮೆದುಳಿನಲ್ಲಿ ಅರ್ಧಕ್ಕಿಂತ ಹೆಚ್ಚು ಪಟ್ಟು ಫ್ಯಾಟ್ ಇದೆ, ತುಪ್ಪ ಒಳ್ಳೆಯ ಫ್ಯಾಟ್ ಇದು ನಿಮ್ಮ ಮೆದುಳನ್ನು ಚುರುಕಾಗಿ ಇಡಿಸುತ್ತದೆ. ಜಾಯಿಂಟ್ ನೋವು, ಕ್ಯಾಲ್ಶಿಯಂ ಕೊರತೆ. ಗಟ್ಟಿಯಾದ ಮೂಳೆ ಹಾಗೂ ತೂಕ ಇಳಿಕೆಗೂ ಇದು ಸಹಕಾರಿ. ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ. ರೂಟ್ ಗಟ್ಟಿಮಾಡಿ, ಡ್ಯಾಂಡ್ರಫ್ ದೂರ ಮಾಡುತ್ತದೆ. ಶೀತ, ಗಂಟಲು ನೋವು ಎಲ್ಲಕ್ಕೂ ಇದು ಮದ್ದು. ಇಮ್ಯುನಿಟಿ ಹೆಚ್ಚು ಮಾಡುತ್ತದೆ. ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ. ರೂಟ್ ಗಟ್ಟಿಮಾಡಿ, ಡ್ಯಾಂಡ್ರಫ್ ದೂರ ಮಾಡುತ್ತದೆ.

Read More

ಬಳ್ಳಾರಿ,ನ.30: ಭಕ್ತ ಕನಕದಾಸರ ತಾತ್ವಿಕತೆಯ ಚಿಂತನೆ, ಸಂಗೊಳ್ಳಿ ರಾಯಣ್ಣನ ಧೈರ್ಯ ಹಾಗೂ ಇದೇ ಸಮುದಾಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಚಾಣಕ್ಯತನ ಮಾದರಿಯಾಗಿದ್ದು, ಮಹನೀಯರ ಆದರ್ಶ ನಮಗೆಲ್ಲ ಸ್ಫೂರ್ತಿಯಾಗಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ರಾಘವ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಸಂತ ಶ್ರೇಷ್ಠ ಕವಿ ಭಕ್ತ ಕನಕದಾಸ 536ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರ ಆಧ್ಯಾತ್ಮಕ ವಿಷಯಗಳಿಂದ ಸಮಾಜದ ತಲ್ಲಣಕ್ಕೆ ಕಾರಣವಾಯಿತು. ಅದೇ ರೀತಿಯಾಗಿ ಸಂಗೋಳ್ಳಿ ರಾಯಣ್ಣನಂತಹ ಪರಾಕ್ರಮಿಯು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಯುದ್ಧಗಳನ್ನು ಎದುರಿಸಿದನು. ನಮ್ಮ ನಾಡಿನ ಮುಖ್ಯಮಂತ್ರಿಯವರು ಅದೇ ಸಮುದಾಯದವರಾಗಿದ್ದು, ನಾಡಿನ ಅಭಿವೃದ್ಧಿಗೆ ಒತ್ತು ನೀಡಿ, ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಈ ಸಮುದಾಯದವರು, ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಪ್ರಶಾಂತ್…

Read More

ಬಳ್ಳಾರಿ,ನ.30:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಸಂತ ಶ್ರೇಷ್ಠ ಕವಿ ಭಕ್ತ ಕನಕದಾಸ ಜಯಂತ್ಯೋತ್ಸವದ ಮೆರವಣಿಗೆಯು ಅದ್ದೂರಿಯಾಗಿ, ಸಂಭ್ರಮದಿಂದ ನಡೆಯಿತು. ನಗರದ ಅಗ್ನಿಶಾಮಕ ದಳ ಕಚೇರಿ ಹತ್ತಿರ ಕನಕದಾಸ ವೃತ್ತದ ಭಕ್ತ ಕನಕದಾಸ ಅವರ ಪುತ್ಥಳಿಗೆ ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿದರು. ಡಮರುಗ, ಡೊಳ್ಳು ಬಾರಿಸಿ ಸಂಭ್ರಮಿಸುವ ಮೂಲಕ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಉಪ ಮೇಯರ್ ಬಿ.ಜಾನಕಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಕುರುಬ ಸಮಾಜದ ಮುಖಂಡರುಗಳು ಇದ್ದರು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕಹಳೆ ವಾದನ, ಗೊರವರ…

Read More

ಬಳ್ಳಾರಿ, ನ.30: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್.ಐ.ವಿ.ಏಡ್ಸ್ ಸೋಂಕಿನಿಂದ ಈ ವರೆಗೆ 4218 ಜನರು ಸಾವನ್ನಪ್ಪಿದ್ದು. ಈಗ ಸೋಂಕಿತ 5030 ಜನರು ಏಆರ್ ಟಿ ಚಿಕಿತ್ಸೆ ಒಡೆಯುತ್ತಿದ್ದಾರೆ.  ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. 2021 ರಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಈಗ ರಾಜ್ಯದಲ್ಲಿ 11 ನೇ ಸ್ಥಾನದಲ್ಲಿದೆ. ಈ ವರ್ಷ “ಸಮುದಾಯಗಳು ಮುನ್ನಡೆಸಲಿ” ಎಂಬ ಘೋಷಣೆ ಹೆಚ್ ಐ ವಿ ಯನ್ನು ಶೂನ್ಯಕ್ಕೆ ತರಬೇಕೆಂಬ ನಿಟ್ಟನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆಂದು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟಾರೆ 10 ಇ.ಐ.ಡಿ ಕೇಂದ್ರಗಳಲ್ಲಿ, 2010 ರಿಂದ 2023 ಅಕ್ಟೋಬರ್ ವರೆಗೆ 696 ಮಕ್ಕಳಿಗೆ 6 ವಾರದ ಡಿ.ಬಿ.ಎಸ್ ಪರೀಕ್ಷೆಯನ್ನು ಮಾಡಿಸಲಾಗಿರುತ್ತದೆ. ಇವರಲ್ಲಿ 30 ಮಕ್ಕಳಿಗೆ ಹೆಚ್.ಐ.ವಿ ಸೋಂಕು ಇರುವುದು ಕಂಡು ಬಂದಿರುತ್ತದೆ. ಇಲ್ಲಿಯವರೆಗೆ 577 ಮಕ್ಕಳನ್ನು 18 ತಿಂಗಳ ನಂತರ ಹೆಚ್.ಐ.ವಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ ತಿಮಕ್ಕಳಿಗೆ ಜೆಟ್.ಐ.ವಿ ಇರುವುದು ದೃಡಪಟ್ಟಿರುತ್ತದೆಂದು ಹೇಳಿದ್ದಾರೆ. ಎ.ಆರ್.ಟಿ ಕೇಂದ್ರಗಳು: ಸೋಂಕಿತರಿಗೆ…

Read More

ಬೆಂಗಳೂರು: ರಾಜ್ಯದ ಜನರ ಅನುಕೂಲಕ್ಕಾಗಿ ಈ ವರ್ಷ ಹೊಸದಾಗಿ 188 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇಂದು ಶಾಸಕರ ಭವನದ ಆವರಣದಲ್ಲಿ ಸಂತ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 225 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು. ಇದಲ್ಲದೇ ಅಗತ್ಯ ಇರುವ ಕಡೆ ಕ್ಯಾಂಟೀನ್ ಆರಂಭಿಸಲಾಗುವುದು. ಇಂದಿರಾ ಕ್ಯಾಂಟೀನ್‌ಗೆ ಜಾಗದ ಕೊರತೆ ಇರುವ ಕಡೆ ಸಂಚಾರಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದರು. ರಾಜ್ಯದ ಜನತೆಗೆ ಕನಕದಾಸ ಜಯಂತಿಯ ಶುಭಾಶಯ ಕೋರಿದ ಸಿಎಂ, ”ಕನಕದಾಸರು ಸಮಾಜ ಸುಧಾರಕರಾಗಿದ್ದರು. ಸಾಹಿತ್ಯದ ಮೂಲಕ ಮಾನವೀಯತೆ ಸಾರಿದ್ದರು.ವಿಶ್ವಮಾನವನ ಜಯಂತಿಯನ್ನು ಇಂದು ಸರ್ಕಾರ ಆಚರಿಸುತ್ತಿದೆ’ ಎಂದು ಹೇಳಿದರು.

Read More

ಬೆಂಗಳೂರು: ಹಸುಗೂಸುಗಳ ಮಾರಾಟ ಜಾಲದ ಬಂಧನ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ..ಇದೀಗ ಮತ್ತಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಬಂಧಿತ 10 ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದು ಮಹತ್ವದ ಮಾಹಿತಿ ಹೊರುತ್ತವೆ. ಈ ಕುರಿತ ರಿಪೋರ್ಟ್ ಇಲ್ಲಿದೆ ಇದೆ ನೋಡಿ . ಎಳೆ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ ತಡ ಎಲ್ಲೆಡೆ ಆತಂಕ ಶುರುವಾಗಿದೆ. ಬಂಧಿತರ ವಿಚಾರಣೆ ವೇಳೆ ದಿನೆ ದಿನೆ ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ಹಲವು ವರ್ಷಗಳಿಂದ ಪುಟ್ಟ ಪುಟ್ಟ ಕಂದಮ್ಮಗಳನ್ನ ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಕಳ್ಳಸಾಕಣಿಕೆ ಮಾಡ್ತಿದ್ದ ಈ ಕಿರಾತಕರು ಕೋಟಿ ಕೋಟಿ ಬಾಚಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ 6 ವರ್ಷಗಳಲ್ಲಿ ಬರೋಬ್ಬರಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ ಮಾಡಿರೊದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೇವಲ 50-60 ಮಕ್ಕಳನ್ನು ಮಾರಾಟ ಮಾಡಿದ್ದು, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದಾರಂತೆ. ಸದ್ಯ ಕರ್ನಾಟಕದಲ್ಲಿ…

Read More

ತುಮಕೂರು: ಗದ್ದುಗೆಯಲ್ಲಿ ಹುತ್ತ ಕಾಣಿಸಿಕೊಂಡಿದೆ. ಹೌದು ಯಡಿಯೂರು ಸಿದ್ದಲಿಂಗೇಶ್ವರರ 12 ವರ್ಷ ತಪಗೈದ ತಪೋ ಕ್ಷೇತ್ರ ಕಗ್ಗೆರೆಯಲ್ಲಿ 15 ಶತಮಾನದ  ಹುತ್ತ ಪುನಃ ಬೆಳೆಯಲು ಆರಂಭಿಸಿದ್ದು, ಸಾರ್ವಜನಿಕರು ಹಾಗೂ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ. ರಾಜ್ಯ ಸರ್ಕಾರದಿಂದ ಸುಮಾರು ನಾಲ್ಕು ಕೋಟಿ ಅಂದಾಜು ವೆಚ್ಚದಲ್ಲಿ ಕಗ್ಗೆರೆ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದ ಹಳೆಯ ದೇವಾಲ ತೆರುವುಗೊಳಿಸಿದ ವೇಳೆ ದೇವಾಲಯದ ಗದ್ದುಗೆಯನ್ನು ಕೂಡ ತೆರವುಗೊಳಿಸಲಾಯಿತು. ಆ ಗದ್ದುಗೆಯ ಸ್ಥಳದಲ್ಲಿ ಕೆಲವು ದಿನಗಳಿಂದ ಹುತ್ತದ ರೀತಿಯ ಕೊಳವೆ ಆಕಾರದ ಕೋವೆಗಳು ಇದೆ ಎಂಬುದನ್ನು ಹಲವಾರು ಭಕ್ತರು ಗುರುತಿಸಿ ಅಧಿಕಾರಿಗಳಿಗೆ ತೋರಿಸಿದ್ದಾರೆ. ದೀಪೋತ್ಸವ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೇರಳವಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಭಕ್ತರು ಆ ಬೆಳೆಯುವ ಹುತ್ತಗಳನ್ನು ಮುಟ್ಟುವ ಪ್ರಯತ್ನ ಮಾಡಿದ್ದರು. ಕೆಲವು ಭಕ್ತರ ಒತ್ತಾಯದ ಮೇರೆಗೆ ಸ್ಥಳೀಯ ಆಡಳಿತ ಮಂಡಳಿಯ ಅಧಿಕಾರಿಗಳು ಒಡೆದು ಹಾಕಲಾಗಿದ್ದ ಗದ್ದಿಗೆಯ ಸುತ್ತಲೂ ಬ್ಯಾರಿಕೆಟ್ ಹಾಕಿ ತಾತ್ಕಾಲಿಕ ರಕ್ಷಣೆ ಮಾಡಿದ್ದಾರೆ.

Read More

ತುಮಕೂರು: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ  ಶರಣಾಗಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ನಡೆದಿದೆ. 11 ತಿಂಗಳ ಮಗು, 4 ವರ್ಷದ ಪುತ್ರಿ ಜೊತೆ ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ವಿಜಯಲಕ್ಷ್ಮೀ ಪತಿ ಮೃತಪಟ್ಟಿದ್ದರು. ಮಕ್ಕಳ ಜೊತೆ ತಾಯಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More