Author: AIN Author

ದೆಹಲಿ : ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ , ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳಿಗೆ ಮತದಾನ  ನಡೆದಿದ್ದು, ಪೋಲ್‌ ಸ್ಟ್ರಾಟ್ (Pollstrat) ಸಮೀಕ್ಷಾ ಸಂಸ್ಥೆಯು  ಇಂದು ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ. ಪ್ರಸ್ತುತ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ, ರಾಜಸ್ಥಾನದಲ್ಲಿ ಬಿಜೆಪಿ, ಮಧ್ಯ ಪ್ರದೇಶ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟುಗಳನ್ನು ಗಳಿಸಲಿದೆ. ಪೋಲ್‌ ಸ್ಟ್ರಾಟ್ ಸಮೀಕ್ಷಾ ಸಂಸ್ಥೆಯ  ಎಕ್ಸಿಟ್ ಪೋಲ್ ಫಲಿತಾಂಶ  ಪ್ರಕಾರ ತೆಲಂಗಾಣದಲ್ಲಿ ಒಟ್ಟು 119 ಸೀಟುಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ 49-59, ಬಿಜೆಪಿಗೆ 5-10, ಬಿಆರ್ ಎಸ್- 48-58,ಇತರೆ ಪಕ್ಷಗಳು 6-8 ಸೀಟುಗಳನ್ನು ಗಳಿಸಿದೆ. ಮತಹಂಚಿಕೆಯ ಪ್ರತಿಶತ ಬಗ್ಗೆ ನೋಡುವುದಾದರೆ  ಕಾಂಗ್ರೆಸ್ ಶೇ 41.4, ಬಿಜೆಪಿ ಶೇ 15.0, ಬಿಆರ್ ಎಸ್ ಶೇ 42, ಇತರೆ ಶೇ 1.6 ಗಳಿಸಲಿದೆ. ರಾಜಸ್ಥಾನದ ಒಟ್ಟು 199 ಸೀಟುಗಳಲ್ಲಿ ಕಾಂಗ್ರೆಸ್ ಪಕ್ಷ 90-100, ಬಿಜೆಪಿ-100-110, ಇತರೆ 5-15 ಸೀಟುಗಳನ್ನು ಗಳಿಸಲಿದೆ. ಸೀಟು ಹಂಚಿಕೆ ಪ್ರತಿಶತ ನೋಡುವುದಾದರೆ ಕಾಂಗ್ರೆಸ್ ಶೇ 39.9, ಬಿಜೆಪಿ ಶೇ41.8, ಇತರೆ…

Read More

ಬೆಂಗಳೂರು: ಬುಧವಾರ ಹಾಸನದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ನೀಡದೇ ಹೋಗಿದ್ದಕ್ಕೆ 1 ವರ್ಷದ ಮಗು (Child) ಸಾವನ್ನಪ್ಪಿರುವ ಪ್ರಕರಣಕ್ಕೆ ಆಸ್ಪತ್ರೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. https://ainlivenews.com/feticide-case-state-government-orders-cid-probe/ ಈ ಬಗ್ಗೆ ಮಾಹಿತಿ ನೀಡಿರುವ ನಿಮ್ಹಾನ್ಸ್ ಸ್ಥಾನಿಕ ಅಧಿಕಾರಿ ಡಾ. ಶಶಿಧರ್, ನಮಗೆ ಹಾಸನದ ಸರ್ಕಾರಿ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಮಗು ಆಸ್ಪತ್ರೆಗೆ ತಲುಪುವ 1 ಗಂಟೆ ಮೊದಲು ಮಾಹಿತಿ ಬಂದಿತ್ತು. ಅಂಬುಲೆನ್ಸ್ ಚಾಲಕರೊಬ್ಬರು ಹಾಸನ ಮೆಡಿಕಲ್ ಕಾಲೇಜಿನ ರಿಪೋರ್ಟ್ ತೋರಿಸಿದ್ದರು. ಅದನ್ನು ನೋಡಿದಾಗಲೇ ನಮ್ಮ ವೈದ್ಯರು ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಾಗಿತ್ತು, ಇಲ್ಲಿಗೆ ಕರೆತರುವ ಅಗತ್ಯವಿಲ್ಲ ಅಂತಾ ಹೇಳಿದ್ದೆವು ಎಂದು ತಿಳಿಸಿದರು. ನಾವು ಮಗುವನ್ನು ಆಸ್ಪತ್ರೆಗೆ ತಂದ ಬಳಿಕ ಅಂಬುಲೆನ್ಸ್‌ನಲ್ಲೇ ಪರೀಕ್ಷೆ ಮಾಡಿದ್ದೇವೆ. ಅಂಬುಲೆನ್ಸ್ನಲ್ಲಿಯೇ ಮಗು ವೆಂಟೀಲೇಟರ್‌ನಲ್ಲಿ ಇತ್ತು. ಆದರೆ 10 ನಿಮಿಷದ ಬಳಿಕ ಮಗುವನ್ನು ಒಳಗಡೆ ಚಿಕಿತ್ಸೆಗೆ ಕಳುಹಿಸಿದ್ದೇವೆ. ಆದರೆ 2 ಗಂಟೆ ಚಿಕಿತ್ಸೆ ಕೊಟ್ಟರೂ ಮಗು ಬದುಕಲಿಲ್ಲ. ಸತತ 2 ಗಂಟೆಯ…

Read More

ಗಾಂಧೀನಗರ: ಗುಜರಾತ್‌ನ (Gujarat) ಖೇಡಾ ಜಿಲ್ಲೆಯಲ್ಲಿ ಮಿಥೈಲ್ ಆಲ್ಕೋಹಾಲ್ ಹೊಂದಿರುವ ಕಲುಷಿತ ಆಯುರ್ವೇದಿಕ್ ಸಿರಪ್ (Ayurvedic Syrup) ಸೇವಿಸಿದ ಶಂಕೆಯಿಂದ ಕಳೆದ ಎರಡು ದಿನಗಳಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಕಲ್ಮೇಘಸವ್ – ಅಸವ ಅರಿಷ್ಟ’ ಎಂಬ ಹೆಸರಿನ ಆಯುರ್ವೇದಿಕ್ ಸಿರಪ್ ಅನ್ನು ಬಿಲೋದರ ಗ್ರಾಮದ ಅಂಗಡಿಯಾತ ಕೌಂಟರ್‌ನಲ್ಲಿ ಸುಮಾರು 50 ಜನರಿಗೆ ಮಾರಾಟ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗ್ರಾಮಸ್ಥರೊಬ್ಬರ ರಕ್ತದ ಮಾದರಿ ವರದಿಯು ಸಿರಪ್‌ಗೆ ಮಿಥೈಲ್ ಆಲ್ಕೋಹಾಲ್ ಅನ್ನು ಮಾರಾಟ ಮಾಡುವ ಮೊದಲು ಸೇರಿಸಿರುವುದು ದೃಢಪಟ್ಟಿದೆ ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಧಿಯಾ ಹೇಳಿದ್ದಾರೆ. ಕಳೆದ ಎರಡು ದಿನಗಳಲ್ಲಿ ಸಿರಪ್ ಸೇವಿಸಿ ಐವರು ಪ್ರಾಣ ಕಳೆದುಕೊಂಡಿದ್ದರೆ, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ನಾವು ಅಂಗಡಿ ವ್ಯಾಪಾರಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ

Read More

ಗದಗ: ಲೋಕಸಭಾ ಚುನಾವಣೆ ಬಳಿಕ ಮತ್ತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೈಲಿಗೆ ಹೋಗೋದು ಫಿಕ್ಸ್ ಎಂದು ಡಿಕೆಶಿ ಕೇಸ್ ಗೆ ಈಶ್ವರಪ್ಪ ಮತ್ತೆ ಕೌಂಟರ್ ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಸಿಬಿಐ ತನಿಖೆ ಮುಂದುವರಿಸಲು ಅಭ್ಯಂತರ ಇಲ್ಲ ಎಂದು ಕೋರ್ಟ್ ಹೇಳಿದೆ. ಮೇಲ್ನೋಟಕ್ಕೆ ಡಿಕೆಶಿ ಅಕ್ರಮ ಹಣ ಸಂಪಾದನೆ ಮಾಡಿರೋದು ಬಹಿರಂಗ ಆಗಿದೆ. ನೂರಾರು ಕೋಟಿ ಹಣ ಸಿಕ್ಕಿರೋದು ಇಡೀ ರಾಜ್ಯದ ಜನ ನೋಡಿದ್ದಾರೆ. ಸಿಬಿಐ ತನಿಖೆ ಆಗಿದೆ, ಅವರು ಜೈಲಿಗೆ ಹೋಗೋದ್ರಲ್ಲಿ ಯಾವುದೇ ಸಂಶಯ ಇಲ್ಲ. ಲೋಕಸಭಾ ಚುನಾವಣೆ ಮುನ್ನ ಅಥವಾ ಚುನಾವಣೆಯ ಬಳಿಕ ಡಿಕೆಶಿ ಜೈಲಿಗೆ ಹೋಗೋದು ಖಚಿತ ಎಂದರು. https://ainlivenews.com/feticide-case-state-government-orders-cid-probe/ ಇಡಿ, ಸಿಬಿಐ ಇವೆಲ್ಲ ಸ್ವಾಯತ್ತ ಸಂಸ್ಥೆಗಳು ಹಾಗಾದ್ರೆ ಕಾಂಗ್ರೆಸ್‌ನಲ್ಲಿದ್ದು ಎಷ್ಟು ಬೇಕಾದರೂ ಲೂಟಿ‌ ಮಾಡಬಹುದಾ… ಯಾವುದೇ‌ ಕಾರಣಕ್ಕೂ ಕಾಂಗ್ರೆಸ್ ನವರ ಮುಟ್ಟಬಾರದು ಅಂತ‌ ಇದೆಯಾ..? ಇಡೀ ದೇಶದಲ್ಲಿ ಸಿಬಿಐನವರು ಎಲ್ಲ ಪಕ್ಷದವರನ್ನ ಮುಟ್ಟಿದ್ದಾರೆ. ಸಾವಿರಾರು‌ ಕೋಟಿ ಸಿಗ್ತಾ ಇರೋದು ಕಾಂಗ್ರೆಸ್ ನಲ್ಲಿ ಡಿಕೆಶಿ ಮನೆಯಲ್ಲಿ ಸಿಬಿಐ ರೇಡ್ ಆದಾಗ ನೂರಾರು…

Read More

ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದ ಹೊರತಾಗಿಯೂ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್‌ ಗಾಯಕ್ವಾಡ್‌ ಅವರನ್ನು ನಾಯಕ ಸೂರ್ಯಕುಮಾರ್‌ ಯಾದವ್‌ ಮುಕ್ತಕಂಠಿಂದ ಗುಣಗಾನ ಮಾಡಿದ್ದಾರೆ. ಗಾಯಕ್ವಾಡ್‌ ಅತ್ಯಂತ ವಿಶೇಷ ಆಟಗಾರ ಎಂದು ಶ್ಲಾಘಿಸಿದ್ದಾರೆ. ಮಂಗಳವಾರ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ ಆರಂಭದಲ್ಲಿಯೇ ಯಶಸ್ವಿ ಜೈಸ್ವಾಲ್‌ ಮತ್ತು ಇಶಾನ್‌ ಕಿಶನ್‌ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೂ ಕುಗ್ಗದ ಋತುರಾಜ್ ಗಾಯಕ್ವಾಡ್‌ ಕೊನೆಯವರೆಗೂ ಬ್ಯಾಟ್‌ ಮಾಡಿ ಅಜೇಯ 123 ರನ್‌ಗಳನ್ನು ಗಳಿಸಿದರು. ಆ ಮೂಲಕ ಭಾರತ ತಂಡ 222 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದರು. ಪೋಸ್ಟ್‌ ಮ್ಯಾಚ್‌ ಪ್ರಸೆಂಟೆಷನ್‌ನಲ್ಲಿ ಮಾತನಾಡಿದ ಸೂರ್ಯಕುಮಾರ್‌ ಯಾದವ್‌, “ಅದ್ಭುತ. ನಾನು ಔಟ್‌ ಆದ ಬಳಿಕ ಋತುರಾಜ್‌ ಗಾಯಕ್ವಾಡ್‌ ಅವರು ಕೊನೆಯವರೆಗೂ ಬ್ಯಾಟ್‌ ಮಾಡಿದ್ದರು. ಗಾಯಕ್ವಾಡ್‌ ಅತ್ಯಂತ ವಿಶೇಷ ಆಟಗಾರ ಎಂದು ನಾನು ಫ್ರಾಂಚೈಸಿ ಕ್ರಿಕೆಟ್‌ ವೇಳೆ ಸಾಕಷ್ಟು ಬಾರಿ ಹೇಳಿದ್ದೇನೆ.…

Read More

ಇಸ್ಲಾಮಾಬಾದ್: ದೇಶೀಯ ಪಂದ್ಯವೊಂದರಲ್ಲಿ ಪ್ಯಾಲೆಸ್ತೀನ್‌ ಧ್ವಜವನ್ನು (Palestine Flag) ಬ್ಯಾಟ್‌ನಲ್ಲಿ ಪ್ರದರ್ಶನಿಸಿದ್ದ ಬ್ಯಾಟರ್‌ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ದಂಡ ವಿಧಿಸಿ ನಂತರ ಆದೇಶ ವಾಪಸ್‌ ಪಡೆದುಕೊಂಡಿರುವ ಘಟನೆ ನಡೆದಿದೆ.ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಜಂ ಖಾನ್ ಅವರ ತಂಡ ಕರಾಚಿ ವೈಟ್ಸ್ ಲಾಹೋರ್ ಬ್ಲೂಸ್ ವಿರುದ್ಧ ಸೆಣಸಿತ್ತು. ಆಗ ಖಾನ್ ಬ್ಯಾಟ್ ಪ್ಯಾಲೆಸ್ತೀನ್ ಧ್ವಜವನ್ನು ಒಳಗೊಂಡಿತ್ತು. ಆಜಮ್‌ಗೆ ಪಂದ್ಯದ ಶುಲ್ಕದಲ್ಲಿ 50% ದಂಡವನ್ನು ವಿಧಿಸಲಾಯಿತು. ನಂತರ ಪಿಸಿಬಿ ಪರಿಶೀಲಿಸಿ, ಮ್ಯಾಚ್ ಅಧಿಕಾರಿಗಳು ವಿಧಿಸಿದ ಪೆನಾಲ್ಟಿಯನ್ನು ಮನ್ನಾ ಮಾಡಲು ನಿರ್ಧರಿಸಿತು.  ಆಜಮ್ ಖಾನ್‌ಗೆ ಪಂದ್ಯದ ಅಧಿಕಾರಿಗಳು ವಿಧಿಸಿದ ಶೇಕಡಾ 50 ರಷ್ಟು ದಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪರಿಶೀಲಿಸಿ ಮನ್ನಾ ಮಾಡಿದೆ. ಕರಾಚಿಯ ನ್ಯಾಶನಲ್ ಬ್ಯಾಂಕ್ ಸ್ಟೇಡಿಯಂನಲ್ಲಿ ಲಾಹೋರ್ ಬ್ಲೂಸ್ ವಿರುದ್ಧ 2023-24ರ ರಾಷ್ಟ್ರೀಯ T20 ಕಪ್ ಪಂದ್ಯ ನಡೆದಿತ್ತು. ಪಂದ್ಯದ ವೇಳೆ ಆಜಂ ಖಾನ್‌, ಅಪರಾಧ ಎಸಗಿದ್ದಕ್ಕಾಗಿ ತಪ್ಪಿತಸ್ಥರೆಂದು ಪರಿಗಣಿಸಿ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿತ್ತು. https://ainlivenews.com/residents-own-property-in-bangalore-heres-the-good-news/ ಪಂದ್ಯದ ಸಮಯದಲ್ಲಿ ಅಂಪೈರ್‌ನ…

Read More

ಬೆಂಗಳೂರು: ಭ್ರೂಣ ಹತ್ಯೆಯ ಜಾಲವನ್ನ ಬುಡಸಮೇತ ಕಿತ್ತುಹಾಕಬೇಕಿದೆ. ಮಂಡ್ಯದ ಆಲೆಮನೆ ಹಾಗೂ ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಇಂದು ಮಂಡ್ಯದ ಆಲೆಮನೆ ಸ್ಥಳಕ್ಕೆ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಕ್ಯಾನಿಂಗ್ ಸೆಂಟರ್ ಗಳಿಗೂ ಕೂಡ ಭೇಟಿ ನೀಡಿದ್ದು, ಇವುಗಳ ಮೇಲೆ ಹೆಚ್ಚು ನಿಗಾ ಇಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. https://ainlivenews.com/feticide-case-state-government-orders-cid-probe/ ಮೈಸೂರಿನ  ಮಾತಾ ಆಸ್ಪತ್ರೆಯ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಅಲ್ಲಿಯ ಸ್ಥಳೀಯರೊಂದಿಗೆ ಆಸ್ಪತ್ರೆ ನಡೆಸುತ್ತಿದ್ದ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಆರೋಗ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾಗಿ ಕಂಡುಬಂದಿದ್ದು, ಅಧಿಕಾರಿಗಳು ತಪ್ಪು ಮಾಹಿತಿ ನೀಡಿರವುದನ್ನ ಸಚಿವರು ಗಮನಿಸಿದರು. ಭೇಟಿ ಬಳಿಕ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ,  ಹಿರಿಯ ಪೊಲೀಸ್ ಅಧಿಕಾರಿಗಳು, ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಭ್ರೂಣ…

Read More

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈಗಾಗಗಲೇ ತಾನು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಪ್ರಕಟ ಮಾಡಿದೆ. ಈ ಬಗ್ಗೆ ತಮ್ಮ ಯೂ ಟ್ಯೂಬ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್‌ಸಿಬಿ ತಂಡದ ಮಾಜಿ ಸ್ಟಾರ್‌ ಬ್ಯಾಟರ್‌ ಎಬಿ ಡಿ ವಿಲಿಯರ್ಸ್‌ ಅಸಮಾಧಾನ ಹೊರಹಾಕಿದ್ದಾರೆ. ಕೋಚಿಂಗ್‌ ಬಳಗ ಬದಲಾಯಿಸಿಕೊಂಡು ಟೀಮ್‌ ಮ್ಯಾನೇಜ್ಮೆಂಟ್‌ನಲ್ಲಿ ಕ್ರಿಕೆಟ್‌ ಜಗತ್ತಿನ ಅತ್ಯಂತ ಚತುರ ತಂತ್ರಗಾರರಲ್ಲಿ ಒಬ್ಬರಾದ ಮೋ ಬೋಬಟ್‌ ಅವರನ್ನು ಆರ್‌ಸಿಬಿ ಕ್ರಿಕೆಟ್‌ ಡೈರೆಕ್ಟರ್‌ ಆಗಿ ನೇಮಕ ಮಾಡಿದೆ. ಈ ನಿಟ್ಟಿನಲ್ಲಿ ಚಾಲೆಂಜರ್ಸ್‌ ಮುಂದಿನ ಆವೃತ್ತಿಗೆ ವಿಭಿನ್ನ ಯೋಜನೆಗಳನ್ನು ಹಾಕಿಕೊಂಡಂತ್ತಿದೆ. ಆದರೆ, ಜಾಶ್‌ ಹೇಝಲ್‌ವುಡ್‌ ಅವರಂತಹ ಮ್ಯಾಚ್‌ ವಿನ್ನಿಂಗ್ ಫಾಸ್ಟ್‌ ಬೌಲರ್‌ನ ಕೈಬಿಟ್ಟು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ ಅವರನ್ನು ಉಳಿಸಿಕೊಂಡಿರುವ ಹಿಂದಿನ ಆಲೋಚನೆ ಅಚ್ಚರಿ ತಂದಿದೆ ಎಂದು ಎಬಿಡಿ ಹೇಳಿಕೊಂಡಿದ್ದಾರೆ. “ದಿನೇಶ್‌ ಕಾರ್ತಿಕ್ ಅವರನ್ನು ಉಳಿಸಿಕೊಂಡಿರುವುದು ನನಗೆ ದೊಡ್ಡ ಅಚ್ಚರಿ ತಂದಿದೆ. ಕಳೆದ ಆವೃತ್ತಿಯಲ್ಲಿ ಅವರ ಬ್ಯಾಟ್‌ನಿಂದ ರನ್‌ ಬಂದೇ…

Read More

ಧಾರವಾಡ: ಕಳೆದ ಏಪ್ರಿಲ್ 19 ರಂದು ಕೋಟೂರು ಗ್ರಾಮದಲ್ಲಿ ಹತ್ಯೆಯಾಗಿದ್ದ ಧಾರವಾಡ ಜಿಲ್ಲಾ ಬಿಜೆಪಿಯ ಯುವ ಮೋರ್ಚಾ ಉಪಾಧ್ಯಕ್ಷ ದಿ. ಪ್ರವೀಣ ಕಮ್ಮಾರ ಕುಟುಂಬಸ್ಥರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಧನ ಸಹಾಯ ಮಾಡುವ ಮೂಲಕ ಕುಟುಂಬದ ಕಷ್ಟಕ್ಕೆ ನೇರವಾಗಿದ್ದಾರೆ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಹತ್ಯೆಯ ನಂತರ ಆರ್ಥಿಕ ಸಂಕಷ್ಟದಿಂದಾಗಿ ನೂತನ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತವಾಗಿತ್ತು. ಇದನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ತಿಳಿದುಕೊಂಡ ಕೇಂದ್ರ ಸಚಿವರು ಕುಟುಂಬಸ್ಥರಿಗೆ ಧನ ಸಹಾಯ ಮಾಡಿ ಸಂಕಷ್ಟದಲ್ಲಿ ಕುಟುಂಬಸ್ಥರ ಬೆನ್ನಿಗೆ ನಿಂತಿದ್ದಾರೆ. ಇನ್ನೂ ಕೇಂದ್ರ ಸಚಿವರ ಸಹಾಯಧನವನ್ನು ಇಂದು ಧಾರವಾಡ ಗ್ರಾಮೀಣ ಮಾಜಿ ಶಾಸಕರಾದ ಅಮೃತ ದೆಸಾಯಿ, ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಮಂಡಲ ಅಧ್ಯಕ್ಷ ರುದ್ರಪ್ಪ ಅರಿವಾಳ,ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಂಕರ ಕೋಮಾರದೇಸಾಯಿ ಮತ್ತು ಯಲ್ಲಪ ಜಾನಕನೂರ್ ಸೇರಿದಂತೆ ಪ್ರಮುಖರೆಲ್ಲರು ಸೇರಿ ಕುಟುಂಬಸ್ಥರಿಗೆ ಕೇಂದ್ರ ಸಚಿವರ ಧನ ಸಹಾಯದ ಹಣವನ್ನು ನೀಡಿ, ಕುಟುಂಬಸ್ಥರಿಗೆ…

Read More

ಬೆಂಗಳೂರು: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ. ಭ್ರೂಣ ಹತ್ಯೆಯ ಜಾಲವನ್ನ ಬುಡಸಮೇತ ಕಿತ್ತುಹಾಕಬೇಕಿದೆ. ಮಂಡ್ಯದ ಆಲೆಮನೆ ಹಾಗೂ ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದೆ.. ಪ್ರಕರಣವನ್ನ ‘ಸಿಐಡಿ’ ತನಿಖೆಗೆ ವಹಿಸಲಾಗಿದ್ದು, ಭ್ರೂಣ ಹತ್ಯೆ ಪ್ರಕರಣದ ತನಿಖೆಗೆ ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಭ್ರೂಣ ಹತ್ಯೆ ಒಂದು ಸಾಮಾಜಿ ಪಿಡುಗು. ಇದನ್ನು ಕಾನೂನಿನ ಚೌಕಟ್ಟಿನಲ್ಲಿ ಎಷ್ಟು ಮಟ್ಟ ಹಾಕಲು ಸಾಧ್ಯ ಆರೋಗ್ಯ ಇಲಾಖೆ, ಸರ್ಕಾರ ಸಂಪೂರ್ಣವಾಗಿ ಪ್ರಮಾಣಿಕ ಪ್ರಯತ್ನ ನಡೆಸಲಿದೆ.‌ ಈಗಿರುವ ಕಾನೂನು ಗಳನ್ನ ಇನ್ನಷ್ಟು ಬಿಗಿಗೊಳಿಸುತ್ತೇವೆ. ಆದರೆ ನಮ್ಮ ಸಮಾಜ ಕೂಡ ಬದಲಾಗಬೇಕು. ಹೆಣ್ಣು ಎಂಬ ಒಂದೇ ಕಾರಣಕ್ಕೆ ಭ್ರೂಣ ಹತ್ಯೆ ಮಾಡಿಸುವುದು ಸರಿಯಲ್ಲ. ಭ್ರೂಣ ಹತ್ಯೆ ಮಾಡಿಸುವವರ ವಿರುದ್ಧವು ಕ್ರಮಗಳಾಗಬೇಕು. ನಮ್ಮ ಸಮಾಜ ಕೂಡ ಜಾಗೃತರಾಗಿ ಭ್ರೂಣ ಹತ್ಯೆ ಪಿಡುಗನ್ನ ತೊಡಗಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು.

Read More