ಬೆಂಗಳೂರು:- ಸಂವಿಧಾನದ ಮೂಲಸ್ಪೂರ್ತಿಗೆ ವಿರುದ್ಧವಾಗದ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ X ನಲ್ಲಿ ಪೋಸ್ಟ್ ಮಾಡಿರುವ ಅವರು,ರಾಜ್ಯ ಸರ್ಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯುವ ಕೆಲಸವನ್ನು ಮಾಡುವುದಿಲ್ಲ. ನಾವು ಸಂವಿಧಾನದ ಮೂಲಸ್ಪೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ. ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕೆ ಒಂದೆರಡು ಅನಾವಶ್ಯಕವಾದ ಗೊಂದಲಗಳು ನಿರ್ಮಾಣವಾಗಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಗೊಂದಲಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ನಾನು ಪೊಲೀಸ್ ಮಹಾನಿರ್ದೇಶಕರಿಗೆ ಸೂಕ್ತ ಸೂಚನೆಗಳನ್ನು ನೀಡಿರುತ್ತೇನೆ” ಎಂದಿದ್ದಾರೆ. “ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ಸರ್ಕಾರವು ಸದಾ ನಿಲ್ಲುತ್ತದೆ ಎಂಬುದನ್ನು ತಿಳಿಯ ಸಬಯಸುತ್ತೇನೆ. ಆದ್ದರಿಂದ ಯಾವುದೇ ರೀತಿಯ ಗೊಂದಲಗಳನ್ನು ಸೃಷ್ಟಿಸಬಾರದು ಎಂದು, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕಿತ…
Author: AIN Author
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ಪೋಷಕರು ಮನೆಗೆ ಕರೆದೊಯ್ದಿದ್ದಾರೆ. ಬಸವೇಶ್ವರ ನಗರದ ನ್ಯಾಷನಲ್, ವಿದ್ಯಾಶಿಲ್ಪ, ಎನ್ಪಿಎಸ್, ಕಾರ್ಮೆಲ್, ಹೆಬ್ಬಗೋಡಿಯ ಎಬಿನೈಜರ್ ಸೇರಿದಂತೆ 15 ಶಾಲೆಗಳಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಎಂದಿನಂತೆ ಶಾಲೆಗಳು ಆರಂಭವಾಗುತ್ತಿದ್ದಂತೆ, ಶಾಲೆಗಳ ಇಮೇಲ್ ಪರಿಶೀಲಿಸಿದ್ದು, ಬೆದರಿಕೆ ಸಂದೇಶ ಬಂದಿದ್ದು ಗೊತ್ತಾಗಿದೆ. ಕೂಡಲೇ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಶಾಲೆಯಿಂದ ಹೊರ ಕಳುಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ಬಾಂಬ್ ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆ ಪೋಷಕರು ಆತಂಕ ವ್ಯಕ್ತಪಡಿಸಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶಾಲೆಗಳಿಗೆ ಭೇಟಿ ನೀಡಿದರು. ನಗರದ ಕೆಲವು ಶಾಲೆಗಳಿಗೆ ಇಂದು ಬೆಳಗ್ಗೆ ಇಮೇಲ್ ಮೂಲಕ ‘ಬಾಂಬ್ ಬೆದರಿಕೆ’ ಕರೆಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ನಮ್ಮ ಬಾಂಬ್ ಪತ್ತೆ ದಳದವರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗಿನ…
ಶಾರುಖ್ ಖಾನ್ ಹಾಗೂ ರಾಜ್ ಕುಮಾರ್ ಹಿರಾನಿ ಈ ಕ್ರೇಜಿ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಡಂಕಿ..ಇದೇ 21ರಂದು ವರ್ಲ್ಡ್ ವೈಡ್ ಚಿತ್ರ ಬಿಡುಗಡೆಯಾಗ್ತಿದ್ದು, ಪ್ರಚಾರ ಭರಾಟೆ ಕೂಡ ಜೋರಾಗಿದೆ. ಡಂಕಿ ಡ್ರಾಪ್-1 ವಿಡಿಯೋ ಅನಾವರಣ ಮಾಡುವ ಮೂಲಕ ಪ್ರಮೋಷನ್ ಶುರು ಮಾಡಿದ್ದ ಚಿತ್ರತಂಡವೀಗ ಡಂಕಿ ಡ್ರಾಪ್-3 ಟೈಟಲ್ ನಡಿ ಎರಡನೇ ಹಾಡನ್ನು ರಿಲೀಸ್ ಮಾಡಿದೆ. ಡಂಕಿ ಸಿನಿಮಾದ ಲುಟ್ ಪುಟ್ ಗಯಾ ಹಾಡು ಮೋಡಿ ಮಾಡ್ತಿದೆ. ಶಾರುಖ್ ಹಾಗೂ ತಾಪ್ಸಿ ನಡುವಿನ ಪ್ರೇಮಗೀತೆ ಹಿಟ್ ಲೀಸ್ಟ್ ಸೇರಿದೆ. ಇದೀಗ ಡಂಕಿ ಸಿನಿಮಾದ ಎಮೋಷನಲ್ ನಂಬರ್ ಬಿಡುಗಡೆಯಾಗಿದೆ. ‘ನಿಕ್ಲೆ ದ ಕಭಿ ಹಮ್ ಘರ್ ಸೆ’ ಎಂಬ ಸಾಹಿತ್ಯದ ಸಾಂಗ್ ರಿಲೀಸ್ ಆಗಿದೆ. ಜಾವೇದ್ ಅಖ್ತಾರ್ ಸಾಹಿತ್ಯ ಬರೆದಿದ್ದು, ಸೋನು ನಿಗಂ ಕಂಠ ಕುಣಿಸಿದ್ದು, ಪ್ರೀತಂ ಸಂಗೀತ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ.. ನಾಲ್ಕು ಜನ ಸ್ನೇಹಿತರು ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ಹೋಗುವುದ್ದೇ ಚಿತ್ರದ ಕಥೆ. ಆ ಕಥೆಯ ಎಮೋಷನಲ್…
ಬೆಂಗಳೂರು:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ನಿಟ್ಟಿನಲ್ಲಿ ಡಿಸೆಂಬರ್ 2, 3ನೇ 2023 ರಂದು ಎರಡು ದಿನಗಳ ಕಾಲ ನಗರದಾದ್ಯಂತ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳು-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ: 27.10.2023 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 27.10.2023 ರಿಂದ 09.12.2023 ರವರೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ವಿಶೇಷ ನೋಂದಣಿ ಅಭಿಯಾನಗಳನ್ನು ಬಿಬಿಎಂಪಿಯ ಎಲ್ಲಾ ಕಂದಾಯ ಅಧಿಕಾರಿಗಳು / ಸಹ ಕಂದಾಯ ಅಧಿಕಾರಿಗಳು / ವಾರ್ಡ್ ಕಛೇರಿಗಳು / ಮತಗಟ್ಟೆಗಳಲ್ಲಿ ಆಯೋಜಿಸಲಾಗಿರುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದು, ನೋಂದಣಿ ಮಾಡಿಕೊಳ್ಳುವುದರ ಜೊತೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಸಹ ಸ್ವೀಕರಿಸಲಿದ್ದಾರೆ. ಮತದಾರರು ಈ ವಿಶೇಷ ನೋಂದಣಿ ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕುರಿತು (ನಮೂನೆ-6: ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು,…
ಬೆಂಗಳೂರು:- ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಮಾರ್ಕ್ ಮಾಡಿದ್ದು, ತಹಶೀಲ್ದಾರ್ ರವರಿಂದ ಆದೇಶಗಳನ್ನು ಜಾರಿಮಾಡಿರುವಂತಹ ಒತ್ತುವರಿಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರಿಗೆ ತಹಶೀಲ್ದಾರ್ ರವರಿಂದ ಆದೇಶ ನೀಡೀರುವಂತಹ ಒತ್ತುವರಿಗಳನ್ನು ಕೂಡಲೆ ತೆರವುಗೊಳಿಸಬೇಕು. ಆದೇಶಗಳನ್ನು ನೀಡದೇ ಇರುವ ಒತ್ತುವರಿಗಳಿಗೆ ಕೂಡಲೆ ಆದೇಶಗಳನ್ನು ನೀಡಿ ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ನಗರದ ಎಲ್ಲಾ ವಲಯಗಳಲ್ಲಿಯೂ ಬೃಹತ್ ನೀರುಗಾಲುವೆ ಒತ್ತುವರಿ ತೆರವು ಕಾಯಾಚರಣೆಯನ್ನು ನಡೆಸಬೇಕು. ಈ ಸಂಬಂಧ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿಗಳ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಭೂ ಮಾಪನ ಕಾರ್ಯ ಮಾಡಿರುವ ಕಡೆ ಗ್ರಾಮ ನಕ್ಷೆ ಮತ್ತು ಟಿಪ್ಪಣಿಗಳ ಅನ್ವಯ ಯಾವುದೇ…
ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತಿಯ PUC ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಆಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ದ್ವಿತಿಯ ಪಿಯುಸಿ ಪರೀಕ್ಷೆಯು ಮಾರ್ಚ್ 2 ರಂದು ಪ್ರಾರಂಭವಾಗಿ ಮಾರ್ಚ್ 22ಕ್ಕೆ ಮುಗಿಯಲಿವೆ. ಇದಾದ ಬಳಿಕ 10ನೇ ತರಗತಿ ಪರೀಕ್ಷೆಗಳು ನಡೆಯಲಿವೆ.ಪಿಯುಸಿ ಪರೀಕ್ಷೆ ಮುಗಿದ 3ನೇ ದಿನಕ್ಕೆ SSLC ಪರೀಕ್ಷೆ ಆರಂಭವಾಗಲಿದೆ. https://ainlivenews.com/ms-dhoni-bought-a-car-worth-3-30-crores-full-viral-on-social-media/ ಮಂಡಳಿ ರಿಲೀಸ್ ಮಾಡಿರುವ ಟೈಮ್ ಟೇಬಲ್ನಲ್ಲಿ ಮಾರ್ಚ್ 25 ರಂದು SSLC ಎಕ್ಸಾಂ ಪ್ರಾರಂಭವಾಗಿ ಏಪ್ರಿಲ್ 6 ಕ್ಕೆ ಕೊನೆ ಪರೀಕ್ಷೆ ನಡೆಯಲಿದೆ.ಸದ್ಯ ಬಿಡುಗಡೆ ಮಾಡಿರುವ ಟೈಮ್ ಟೇಬಲ್ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು 15 ದಿನಗಳ ಒಳಗೆ ಸಲ್ಲಿಸಬಹುದು. ಡಿಸೆಂಬರ್ 1 ರಿಂದ ಡಿಸೆಂಬರ್ 15ರ ಒಳಗೆ ಆಕ್ಷೇಪಣೆಗಳನ್ನು ಇ-ಮೇಲ್ ಮೂಲಕ ಸಲ್ಲಿಸಬಹುದು ಎಂದು ಮಂಡಳಿ ತಿಳಿಸಿದೆ.
ಅಡುಗೆ ಮಾಡಲು ಸುಲಭವಾಗುತ್ತೆ ಎಂದು ನೀವು ಹೆಚ್ಚು ಆಲೂಗಡ್ಡೆಯನ್ನು ಒಟ್ಟಿಗೆ ಬೇಯಿಸಿ ಫ್ರಿಜ್ ನಲ್ಲಿ ಸಂಗ್ರಹಿಸುತ್ತೀರಾ? ಹಾಗಿದ್ರೆ ಇದನ್ನು ನೀವು ಓದಲೇಬೇಕು. ಏಕೆಂದರೆ ಬೇಯಿಸಿದ ಆಲೂಗಡ್ಡೆಯನ್ನು ಸಂಗ್ರಹಿಸುವ ಸರಿಯಾದ ವಿಧಾನ ಮತ್ತು ಅದನ್ನು ಫ್ರಿಜ್ ನಲ್ಲಿ ಸಂಗ್ರಹಿಸುವುದರಿಂದ ಉಂಟಾಗುವ ಹಾನಿ ಅಷ್ಟಿಷ್ಟಲ್ಲ. ಬೇಯಿಸಿದ ಆಲೂಗಡ್ಡೆಯನ್ನು ಬಹುತೇಕ ಪ್ರತಿ ಮನೆಯಲ್ಲೂ ಅಡುಗೆಯಲ್ಲಿ ಬಳಸುತ್ತಾರೆ. ಏಕೆಂದರೆ ಇದು ಸಸ್ಯಾಹಾರಿಯಿಂದ ಮಾಂಸಾಹಾರದವರೆಗೆ ಎಲ್ಲಾ ರೀತಿಯ ಆಹಾರಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಆದರೆ ಅದರ ಸಂಗ್ರಹದ ವಿಷಯಕ್ಕೆ ಬಂದಾಗ, ಹೆಚ್ಚಿನ ಜನರು ತಪ್ಪು ಮಾಡುತ್ತಾರೆ. ಅದರ ತಾಜಾತನವನ್ನು ಕಾಪಾಡಿಕೊಳ್ಳಲು, ಬೇಯಿಸಿದ ಆಲೂಗಡ್ಡೆಯನ್ನು ಫ್ರಿಜ್ನಲ್ಲಿ ಸಂಗ್ರಹಿಸೋದು ತುಂಬಾ ದೊಡ್ಡ ತಪ್ಪು ಮತ್ತು ಹಾನಿಕಾರಕ ಮಾರ್ಗ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ನೋಡೋಣ. ವಿನ್ಯಾಸ ಹದಗೆಡುತ್ತದೆ ಫ್ರಿಜ್‌ನಲ್ಲಿ ಅತಿಯಾದ ಶೀತದಿಂದಾಗಿ ಬೇಯಿಸಿದ ಆಲೂಗಡ್ಡೆ ಕೆಟ್ಟದಾಗಿ ಕಾಣಿಸುತ್ತದೆ. ಅದರಲ್ಲಿರುವ ಪಿಷ್ಟ ಹೆಚ್ಚು ಸ್ಫಟಿಕ ರೂಪಕ್ಕೆ ಬದಲಾಗುವ ಮೂಲಕ, ಅದು ಮೂಲ ವಿನ್ಯಾಸವನ್ನು ಕಳೆದುಕೊಳ್ಳುತ್ತದೆ. ವಿಚಿತ್ರ ರುಚಿ ಫ್ರಿಜ್‌ನಲ್ಲಿಟ್ಟ ಬೇಯಿಸಿದ ಆಲೂಗಡ್ಡೆ ತಮ್ಮ ಮೂಲ…
ಮಂಡ್ಯ :- ಜಮೀನಿನಲ್ಲಿ ಕುರಿ ಮೇಯಿಸುವ ವೇಳೆ ರೈತನ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ರೈತ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಅಡಗನಹಳ್ಳಿ ಗ್ರಾಮದ ರೈತ ಪ್ರಕಾಶ್ (40) ದಾಳಿಗೆ ಒಳಗಾಗುವ ವ್ಯಕ್ತಿಯಾಗಿದ್ದಾರೆ. ರೈತ ಪ್ರಕಾಶ್ ಶುಕ್ರವಾರ ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಕುರಿ ಮೇಯಿಸುವ ವೇಳೆ ಚಿರತೆಯೊಂದು ಕುರಿ ಮಂದೆ ಮೇಲೆ ಏಕಾಏಕಿ ದಾಳಿ ಮಾಡಿ ಕುರಿ ಮರಿಯೊಂದನ್ನು ಎತ್ತೋಯ್ಯುವ ವೇಳೆ ಅದನ್ನು ಬಿಡಿಸಿಕೊಳ್ಳಲು ರೈತ ಪ್ರಕಾಶ್ ಯತ್ನಿಸಿದ್ದಾರೆ. ಆದರೆ, ಚಿರತೆ ಕುರಿ ಮರಿ ಬಿಟ್ಟು ರೈತ ಪ್ರಕಾಶ್ ಮೇಲೆ ದಾಳಿ ಮಾಡಿ ಕಿವಿ ಮತ್ತು ದೇಹದ ವಿವಿಧ ಭಾಗಗಳಲ್ಲಿ ಚಿರತೆ ಗಾಯಗೊಳಿಸಿ ಪರಾರಿಯಾಗಿದ್ದು, ರೈತ ಪ್ರಕಾಶ್ ಗೆ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮದ್ದೂರು ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಘಟನೆಗಳು ಸಂಭವಿಸುತ್ತಿವೆ. ಇಷ್ಟಾದರೂ ಚಿರತೆಗಳ ಸೆರೆಗೆ ಅರಣ್ಯ…
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಲಾಡು ತಯಾರಿಸುವ ಕೋಣೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮಹದೇಶ್ವರ ದೇಗುಲದ ಹಿಂಭಾಗದಲ್ಲೇ ಇರುವ ಲಾಡು ತಯಾರಿಸುವ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆ ಅಲ್ಲಿನ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ. ಘಟನೆ ಬಳಿಕ ಪ್ರಾಧಿಕಾರದ ನೌಕರರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಬೆಂಕಿ ಹೊತ್ತಿಕೊಳ್ಳಲು ಸಿಲಿಂಡರ್ ಕಾರಣವೆಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಎಣ್ಣೆ ಬಾಣಲೆಯಿಂದ ಬೆಂಕಿ ಪ್ರಜ್ವಲಿಸಿ, ಹೆಚ್ಚಿನ ಭಾಗಕ್ಕೆ ಹರಡಿಕೊಂಡಿದೆ. 2 ಟ್ಯಾಂಕರ್ ನೀರಿನ ಮೂಲಕ ಮಹದೇಶ್ವರ ಬೆಟ್ಟದ ಸ್ವಚ್ಚತಾ ಸಿಬ್ಬಂದಿ ಜೊತೆಗೂಡಿ ಬೆಂಕಿ ನಂದಿಸಿದ್ದಾರೆ. ಒಂದು ಭಾಗದ ಗೋಡೆ ಹಾಳಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂದು ಹೇಳಿದ್ದಾರೆ.
ಬೆಂಗಳೂರು:- ಎಕ್ಸಿಟ್ ಪೋಲ್ ಮೇಲೆ ವೈಯಕ್ತಿಕವಾಗಿ ನನಗೆ ನಂಬಿಕೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ಕುರಿತು ಕೇಳಿದ ಪ್ರಶ್ನೆಗೆ, ‘ಪಕ್ಷದ ಅಧ್ಯಕ್ಷ ಹೊರತಾಗಿ ವೈಯಕ್ತಿಕವಾಗಿ ನನಗೆ ಎಕ್ಸಿಟ್ ಪೋಲ್ಗಳ ಮೇಲೆ ನಂಬಿಕೆ ಇಲ್ಲ ಎಂದರು. ನಮ್ಮ ರಾಜ್ಯದಲ್ಲಿ ನಾನು ಏನು ಮಾಡಿದ್ದೆ, ಯಾವ ರೀತಿ ಎಕ್ಸಿಟ್ ಪೋಲ್ ಗಳು ಬಂದವು ಎಂಬುದು ನನಗೆ ಗೊತ್ತಿದೆ. ಯಾರು ಕ್ಷೇತ್ರಗಳಲ್ಲಿ ಸುತ್ತಾಡಿರುತ್ತಾರೋ ಅವರಿಗೆ ಮಾತ್ರ ವಾಸ್ತವಾಂಶ ತಿಳಿದಿರುತ್ತದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾದರಿಗಳು ಅಲ್ಪಪ್ರಮಾಣದ್ದಾಗಿರುತ್ತದೆ. ಅದು ಇಡೀ ರಾಜ್ಯದ ಚಿತ್ರಣವನ್ನು ನಿರ್ಧರಿಸುವುದಿಲ್ಲ’ ಎಂದು ತಿಳಿಸಿದರು. ಕೆಲ ರಾಜ್ಯಗಳಲ್ಲಿ ನೇರಹಣಾಹಣಿ ಇದ್ದು, ಆ ರಾಜ್ಯಗಳ ಶಾಸಕರನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ‘ಈ ಬಗ್ಗೆ ಗೊತ್ತಿಲ್ಲ. ರಾಜಸ್ಥಾನ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಕ್ಷ ಹೇಳಿದ ಕೆಲಸ ಮಾಡಬೇಕಾಗುತ್ತದೆ. ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ’ ಎಂದು…