Author: AIN Author

ಭೋಪಾಲ್: 4ನೇ ತರಗತಿಯ ವಿದ್ಯಾರ್ಥಿಗೆ (Student) ಆತನ ಮೂವರು ಸಹಪಾಠಿಗಳೇ ಕೈವಾರದಿಂದ 108 ಬಾರಿ ಚುಚ್ಚಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನ ಖಾಸಗಿ ಶಾಲೆಯೊಂದರಲ್ಲಿ (School) ನಡೆದಿದೆ. ಏರೋಡ್ರೋಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ ಏರ್ಪಟ್ಟಿತ್ತು. ಈ ವೇಳೆ ಒಬ್ಬ ವಿದ್ಯಾರ್ಥಿಯ ಮೇಲೆ ಇತರ ಮೂವರು ಸಹಪಾಠಿಗಳು ಜ್ಯಾಮಿತಿ ಕಂಪಾಸ್‌ನಿಂದ (Geometry Compass) 108 ಬಾರಿ ಹಲ್ಲೆ ನಡೆಸಿರುವುದಾಗಿ ಮಕ್ಕಳ ಕಲ್ಯಾಣ ಸಮಿತಿ (CWC) ಅಧ್ಯಕ್ಷೆ ಪಲ್ಲವಿ ಪೋರ್ವಾಲ್ ತಿಳಿಸಿದ್ದಾರೆ. ಈ ಪ್ರಕರಣ ಆಘಾತಕಾರಿ ಯಾಗಿದೆ. ಇಷ್ಟು ಚಿಕ್ಕ ವಯಸ್ಸಿನ ಮಕ್ಕಳು ಹಿಂಸಾತ್ಮಕ ವರ್ತನೆ ತೋರಿರುವುದರ ಹಿಂದಿನ ಕಾರಣವನ್ನು ಕಂಡುಹಿಡಿಯಲು ನಾವು ಪೊಲೀಸರಿಂದ ತನಿಖಾ ವರದಿಯನ್ನು ಕೇಳಿದ್ದೇವೆ ಎಂದು ಅವರು ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಸಿಡಬ್ಲ್ಯುಸಿ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸಲಹೆ ನೀಡಲಿದೆ. https://ainlivenews.com/ms-dhoni-bought-a-car-worth-3-30-crores-full-viral-on-social-media/ ಮಕ್ಕಳು ಹಿಂಸಾತ್ಮಕ ದೃಶ್ಯಗಳನ್ನು ಒಳಗೊಂಡಿರುವ ವೀಡಿಯೋ ಗೇಮ್‌ಗಳನ್ನು ಆಡುತ್ತಾರೆಯೇ ಎಂಬುದನ್ನು ಕಂಡುಹಿಡಿಯ ಲಾಗುತ್ತಿದೆ ಎಂದು ಪೋರ್ವಾಲ್ ಹೇಳಿದರು.…

Read More

ವಿಜಯನಗರ: ”ಜನಪರ ಆಡಳಿತ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ಸುಭದ್ರ ಕಾಂಗ್ರೆಸ್‌ ಸರಕಾರ, ಈಗ ಬೀಳುತ್ತೆ, ಆಗ ಬೀಳುತ್ತೆ ಎನ್ನುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಹೈಟೆಕ್‌ ಜ್ಯೋತಿಷ್ಯ ಕೇಂದ್ರ ಸ್ಥಾಪಿಸಲಿ,” ಎಂದು ಕೃಷಿ ಸಚಿವ ಎನ್‌.ಚಲುರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕಳೆದ ಬಾರಿ 113 ಶಾಸಕರನ್ನು ಹೊಂದಿದ್ದ ಬಿಜೆಪಿಯೇ 5 ವರ್ಷ ಆಡಳಿತ ನಡೆಸಿತ್ತು. ಇನ್ನು 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಸರಕಾರ ಬೀಳುತ್ತೆ ಎನ್ನುವುದು ಆರ್‌ ಅಶೋಕ ಹಾಗೂ ಬಿಜೆಪಿಯ ಇತರ ಮುಖಂಡರ ಭ್ರಮೆಯಷ್ಟೇ. https://ainlivenews.com/ms-dhoni-bought-a-car-worth-3-30-crores-full-viral-on-social-media/ ಚುನಾವಣೆ ಹಾಗೂ ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲೂ ಬಿಜೆಪಿಯವರು ಕಾಂಗ್ರೆಸ್‌ ಬಗ್ಗೆ ಕೊಂಕು ನುಡಿದಿದ್ದರು. ಆದರೆ, ಸಿಎಂ ಆಯ್ಕೆ ಸುಸೂತ್ರವಾಗಿ ನಡೆದಿದ್ದಲ್ಲದೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ಜೋಡಿ ಉತ್ತಮ ಆಡಳಿತ ನಡೆಸುತ್ತಿದೆ. ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ಸರಕಾರ ಬೀಳುತ್ತೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ,” ಎಂದು ಟೀಕಿಸಿದರು.

Read More

ಕೊಡಗು:- ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಿಂತಿದ್ದ ಕಾರಿನಲ್ಲಿ ವೈದ್ಯ ಹೆಣ ವಾಗಿ ಪತ್ತೆಯಾಗಿರುವಂತಹ ಘಟನೆ ಜರುಗಿದೆ. ಡಾ.ಸತೀಶ್ ಮೃತ ವೈದ್ಯ. ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕೇಸ್​ನಲ್ಲಿ ಸತೀಶ್ ಹೆಸರು ಕೇಳಿಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಾ.ಸತೀಶ್​ನನ್ನು ವಿಚಾರಣೆಗೆ ಕರೆದಿದ್ದರು. ಹೀಗಾಗಿ ಕಾರಿನಲ್ಲಿಯೇ ಇಂಜೆಕ್ಷನ್​ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಡಾ ಸತೀಸ್ ಮೂಲತಃ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಶಿವಳ್ಳಿ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಜೊತೆಗೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೊಸನೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಲೆಮನೆಗೆ ಆರೋಗ್ಯ ಸಚಿವರು ಭೇಟಿ ನೀಡಿದ್ದಾಗ ಸ್ಥಳೀಯರು ಸತೀಶ್ ಬಗ್ಗೆ ಮಾಹಿತಿ ನೀಡಿದ್ದರು. ಡಾ.ಸತೀಶ್ ವಿಚಾರಣೆ ಮಾಡುವಂತೆ ಆರೋಗ್ಯ ಸಚಿವ ಹೇಳಿದ್ದರು. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಕಾರಿನಲ್ಲಿ ಸಿರೆಂಜ್ ಮತ್ತು ಔಷಧಿ ಡಬ್ಬಿ ಪತ್ತೆಯಾಗಿದೆ. ಸದ್ಯ ವೈದ್ಯ ಅನುಮಾನಾಸ್ಪದ ಸಾವಿನ ಬಗ್ಗೆ…

Read More

ಬೆಂಗಳೂರು: ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ ಸೋಲಿನ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂಬ ವರದಿಗಳು ಬಂದಿದ್ದವು. ಕಳೆದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ಟಿ20ಯಿಂದ ದೂರ ಉಳಿದಿರುವ ರೋಹಿತ್, ಈಗ ಸಂಪೂರ್ಣವಾಗಿ ಚುಟುಕು ಕ್ರಿಕೆಟ್‌ ತೊರೆಯುತ್ತಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆ ಮೂಲಕ ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಆದರೆ ಈ ಎಲ್ಲಾ ಸುದ್ದಿಗಳು ಸುಳ್ಳು ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಇದರ ನಡುವೆ ಬಿಸಿಸಿಐ ನಾಯಕ ರೋಹಿತ್‌ ಶರ್ಮಾ ಅವರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. ಭಾರತ ಟಿ20 ತಂಡಕ್ಕೆ ನಾಯಕನನ್ನು ಬದಲಾಯಿಸುವ ಯಾವುದೇ ಉದ್ದೇಶವಿಲ್ಲ. ನೀವೇ ಮುಂದುವರಿಯಬೇಕು ಎಂದು ಬಿಸಿಸಿಐ ರೋಹಿತ್‌ ಶರ್ಮಾಗೆ ಸ್ಪಷ್ಟಪಡಿಸಿದೆ ಎಂದು ವಿಶ್ವಾಸನೀಯ ಮೂಲಗಳು ಹೇಳಿವೆ. ರೋಹಿತ್ ಹೊರತುಪಡಿಸಿ…

Read More

ಮಾಗಡಿ:- ಬರ ಪರಿಹಾರ ಕೇಳಿದ ರೈತನ ಮೇಲೆ ಡಿಕೆ ಸುರೇಶ್ ಸಿಟ್ಟು ಮಾಡಿಕೊಂಡಿದ್ದಾರೆ. ಅಲ್ಲದೇ ನಿನೆಷ್ಟು ಟ್ಯಾಕ್ಸ್ ಕಟ್ಟುತ್ತಿದ್ದೀಯಾ ಹೇಳು ಎಂದು ಹೇಳಿ ಗರಂ ಆಗಿದ್ದಾರೆ. ಜನಸಂಪರ್ಕ ಸಭೆಯಲ್ಲಿ ರೈತ ಪರಿಹಾರದ ಬಗ್ಗೆ ಮಾತನಾಡಿದ್ದು, ಈ ವೇಳೆ ಸಂಸದರು ಸಿಟ್ಟಾಗಿದ್ದಾರೆ. ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಕೊಡ್ತಿದೆ, ಇನ್ನುಳಿದ 5ಕೆಜಿಗೆ ಹಣ ಕೊಡ್ತಿದೆ. ರೈತರ ಪಂಪ್ ಸೆಟ್ ಗೆ ವಿದ್ಯುತ್ ಖರೀದಿ ಮಾಡ್ತಿದೆ. ನಾವು ದಿನಾ ಬೆಳಗಾದ್ರೆ ಜೆಡಿಎಸ್ ನವ್ರು, ಬಿಜೆಪಿ ಅವ್ರ ಕೈಯಲ್ಲಿ ಬೈಸಿಕೊಳ್ಳುತ್ತಿದ್ದೇವೆ. ನೀನಿನ್ನೂ ಅದು ಕೊಡಿ, ಇದು ಕೊಡಿ ಅಂತಿದ್ದೀಯಾ? ನೀನು‌ ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದೀಯ ಹೇಳು ಎಂದು ಪ್ರಶ್ನಿಸಿದ ಸಂಸದ ಮುಂದುವರಿದು, ನೀನು ಟ್ಯಾಕ್ಸ್ ಕಟ್ಟೋದಿಲ್ಲ. ಟ್ಯಾಕ್ಸ್ ಕಟ್ಟದೇ ಇರೋರಿಗೆಲ್ಲ ಯಾಕೆ ಫ್ರೀ ಕೊಡುತ್ತೀಯಾ ಅಂತಾ ಮೋದಿ ಕೇಳ್ತಿದ್ದಾರೆ. ಮೋದಿ ಯಾರ ಹತ್ತಿರನೂ ಮಾತನಾಡಲ್ಲ‌, ಅವನು ಹೇಳಿದನ್ನ ನೀನು ಕೇಳಿಕೊಳ್ಳಬೇಕು. ನೀನು ಮೋದಿ‌ನೇ ಸರಿ ಅಂದರೆ ನಾನು‌ ಏನು‌ ಮಾಡೋಕಾಗುತ್ತೆ ಎಂದರು. ವ್ಯವಸ್ಥೆಯನ್ನು ಅರ್ಥ…

Read More

ಬೆಂಗಳೂರು: ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ.. ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಸೋಷಿಯಲ್ ಮೀಡಿಯಾ ಸೇರಿದಂತೆ ಇಡೀ ಇಂಟರ್ ನೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ ಹೆಸರು. ವಿಶ್ವಕಪ್‌ನಲ್ಲಿ ಆಡಿದ ಪ್ರತಿ ಪಂದ್ಯದಲ್ಲೂ ದಾಖಲೆ ಬರೆದ ಕಿಂಗ್ ಕೊಹ್ಲಿ, ಕೊನೆಗೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅತಿ ಹೆಚ್ಚು ಒಡಿಐ ಶತಕಗಳ ದಾಖಲೆಯನ್ನು ಮುರಿದಿದ್ದರು. ಈ ಟೂರ್ನಿಯಲ್ಲಿ ಕೊಹ್ಲಿ ಮೂರು ಶತಕಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದಾದ ಬಳಿಕ ಟೀಮ್‌ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಮೂರು ಟಿ20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಪ್ರವಾಸದ ಸೀಮಿತ ಓವರ್‌ಗಳ ಸರಣಿಗಳಿಗೆ ವಿರಾಮ ಪಡೆಯಲು ವಿರಾಟ್‌ ಕೊಹ್ಲಿ ಬಯಸಿದ್ದಾರೆ. ಭಾರತ ಮತ್ತು…

Read More

ಬೆಂಗಳೂರು:- ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ತೆಲಂಗಾಣ ಪ್ರವಾಸ ಕೈಗೊಳ್ಳಲಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಡಿ.3ರ ಭಾನುವಾರ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಅತಂತ್ರ ಫಲಿತಾಂಶ ಉಂಟಾದರೆ ಕಾಂಗ್ರೆಸ್‌ ಶಾಸಕರನ್ನು ನಿಭಾಯಿಸಲು ಶನಿವಾರವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೆಲಂಗಾಣಕ್ಕೆ ತೆರಳಲಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದ್ದು, ಒಂದೊಮ್ಮೆ ಅತಂತ್ರ ಫಲಿತಾಂಶ ಉಂಟಾದರೆ ಕಾಂಗ್ರೆಸ್‌ ಶಾಸಕರನ್ನು ಆಪರೇಷನ್‌ ಮಾಡುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್‌ ಶಾಸಕರಿಗೆ ರಕ್ಷಣೆ ನೀಡಿ ತೆಲಂಗಾಣದಲ್ಲೂ ಕಾಂಗ್ರೆಸ್‌ ಸರ್ಕಾರ ರಚನೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಪಾಲಿನ ಟ್ರಬಲ್ ಶೂಟರ್‌ ಡಿ.ಕೆ. ಶಿವಕುಮಾರ್ ತೆರಳಲಿದ್ದಾರೆ. 119 ವಿಧಾನಸಭೆ ಸದಸ್ಯರನ್ನು ಹೊಂದಿರುವ ತೆಲಂಗಾಣದ ಫಲಿತಾಂಶ ಕಾಂಗ್ರೆಸ್‌ ಪಾಲಿಗೆ ಮಹತ್ವದ್ದಾಗಿದೆ.

Read More

ದುಬೈ: 2028 ರಲ್ಲಿ ಭಾರತದಲ್ಲಿ (India) COP33 ಶೃಂಗಸಭೆಯನ್ನು ಆಯೋಜಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಸ್ತಾಪಿಸಿದ್ದಾರೆ. ದುಬೈನಲ್ಲಿ (Dubai) ನಡೆಯುತ್ತಿರುವ ಸಿಒಪಿ-28 ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಮೋದಿ, ಭಾರತದ ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಶೇ.17 ರಷ್ಟಿದೆ. ಆದರೆ ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ಭಾರತದ ಪಾತ್ರ ಕೇವಲ 4% ನಷ್ಟಿದೆ ಎಂದು ಹೇಳಿದ್ದಾರೆ. ಜನಸಂಖ್ಯೆಯು ತುಂಬಾ ಕಡಿಮೆ ಇರುವ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಹೊರಸೂಸುವಿಕೆ ತುಂಬಾ ಕಡಿಮೆಯಾಗಿದೆ. ಜಾಗತಿಕ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಇಂದು ಕರೆ ನೀಡಿದ್ದಾರೆ. https://ainlivenews.com/ms-dhoni-bought-a-car-worth-3-30-crores-full-viral-on-social-media/ NDC ಗುರಿಗಳನ್ನು ಸಾಧಿಸುವಲ್ಲಿ ನಾವು ವೇಗವಾಗಿ ಸಾಗುತ್ತಿದ್ದೇವೆ. ವಾಸ್ತವವಾಗಿ, ನಾವು ಗಡುವಿನ ಒಂಬತ್ತು ವರ್ಷಗಳ ಮೊದಲು ನಮ್ಮ ಪಳೆಯುಳಿಕೆಯಲ್ಲದ ಇಂಧನ ಗುರಿಗಳನ್ನು ತಲುಪಿದ್ದೇವೆ ಎಂದು ತಿಳಿಸಿದ್ದಾರೆ. ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆ ಸಿಒಪಿ 28ರ ಉನ್ನತ ಮಟ್ಟದ ವಿಭಾಗವಾಗಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ…

Read More

ತುಮಕೂರು:- ಭ್ರೂಣ ಲಿಂಗ ಹತ್ಯೆ ತಡೆಗಟ್ಟಲು ಇಲಾಖೆ ಗಮನ ಹರಿಸುತ್ತೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಗೃಹ ಸಚಿವರ ಜೊತೆಯೂ ಚರ್ಚಿಸಿದ್ದೇನೆ. ಪೊಲೀಸ್ ಇಲಾಖೆ ಈ ಜಾಲವನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುತ್ತಿದೆ. ಈ ಪ್ರಕರಣವನ್ನು ವಿಸ್ತೃತವಾಗಿ ತನಿಖೆ ಆಗಬೇಕು ಎಂದು ಹೇಳಿದ್ದೆವು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್​ ಚರ್ಚಿಸಿ ಸಿಐಡಿಗೆ ವಹಿಸಿದ್ದಾರೆ ಎಂದರು. ಲಿಂಗಾನುಪಾತ ನೋಡಿದಾಗ ಹೆಣ್ಣುಮಕ್ಕಳ ಸಂಖ್ಯೆಯೂ ಕಡಿಮೆ ಇದೆ. ಸಮಾಜದಲ್ಲಿ ಹೆಣ್ಣುಮಗು ಅಂದಾಕ್ಷಣ ಬೇಡ ಅನ್ನೋ ಪರಿಸ್ಥಿತಿ ಇದೆ. ಭ್ರೂಣ ಲಿಂಗ ಹತ್ಯೆ ತಡೆಗಟ್ಟಲು ಇಲಾಖೆ ಹೆಚ್ಚು ಗಮನ ಹರಿಸುತ್ತದೆ. ಪ್ರಕರಣ ಸಂಬಂಧ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

Read More

ಬೆಂಗಳೂರು:- ಮುಂದಿನ 5 ವರ್ಷದಲ್ಲಿ ಕರ್ನಾಟಕ ಏಡ್ಸ್‌ಮುಕ್ತ ಮಾಡುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾದ ವಿಶ್ವ ಏಡ್ಸ್‌ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ದೇಶ ಮತ್ತು ರಾಜ್ಯವನ್ನು ಏಡ್ಸ್ ಮುಕ್ತಗೊಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು. ಎಚ್‌ಐವಿ ಮಾರಕ ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. 1981ರಲ್ಲಿ ಮೊದಲು ಇದು ಕಾಣಿಸಿಕೊಂಡಿತ್ತು. 1986ರಲ್ಲಿ ಭಾರತದಲ್ಲಿ, 1996ರಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿತು. ಇತ್ತೀಚಿನ ದಿನಗಳಲ್ಲಿ ಎಚ್‌ಐವಿಪೀಡಿತರ ಸಂಖ್ಯೆ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು. ನಮ್ಮ ಸಮಾಜವನ್ನು ಎಚ್‌ಐವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು. 2015-2020ರವರೆಗೆ ಏಡ್ಸ್‌ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಕೇವಲ…

Read More