ಬೆಂಗಳೂರು:- ಸಂವಿಧಾನದ ಮೂಲಸ್ಪೂರ್ತಿಗೆ ವಿರುದ್ಧವಾಗದ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ X ನಲ್ಲಿ ಪೋಸ್ಟ್ ಮಾಡಿರುವ ಅವರು,ರಾಜ್ಯ ಸರ್ಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. https://ainlivenews.com/witchcraft-in-the-prestigious-karnataka-university-professors-chamber/ ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯುವ ಕೆಲಸವನ್ನು ಮಾಡುವುದಿಲ್ಲ. ನಾವು ಸಂವಿಧಾನದ ಮೂಲಸ್ಪೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ. ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕೆ ಒಂದೆರಡು ಅನಾವಶ್ಯಕವಾದ ಗೊಂದಲಗಳು ನಿರ್ಮಾಣವಾಗಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಗೊಂದಲಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ನಾನು ಪೊಲೀಸ್ ಮಹಾನಿರ್ದೇಶಕರಿಗೆ ಸೂಕ್ತ ಸೂಚನೆಗಳನ್ನು ನೀಡಿರುತ್ತೇನೆ” ಎಂದಿದ್ದಾರೆ. “ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ಸರ್ಕಾರವು ಸದಾ ನಿಲ್ಲುತ್ತದೆ ಎಂಬುದನ್ನು ತಿಳಿಯ ಸಬಯಸುತ್ತೇನೆ. ಆದ್ದರಿಂದ ಯಾವುದೇ ರೀತಿಯ ಗೊಂದಲಗಳನ್ನು ಸೃಷ್ಟಿಸಬಾರದು ಎಂದು, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕಿತ…
Author: AIN Author
ಹಿರಿಯ ನಟಿ ಲೀಲಾವತಿ (Leelavati) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಲವು ದಿನಗಳಿಂದ ಅವರಿಗೆ ಕೃತಕ ಉಸಿರಾಟ ನೀಡಲಾಗುತ್ತಿದೆ. ಹಾಗಾಗಿ ಚಿತ್ರೋದ್ಯಮದ ಅನೇಕ ಗಣ್ಯರು ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಮೊನ್ನೆಯಷ್ಟೇ ಶಿವರಾಜ್ ಕುಮಾರ್, ಅರ್ಜುನ್ ಸರ್ಜಾ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಈಗಾಗಲೇ ಮನೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ. ಇದೀಗ ಲಹರಿ ವೇಲು (Lahari Velu) ಕೂಡ ಭೇಟಿ ನೀಡಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಗೆ ಆಗಮಿಸಿದ್ದ ಲಹರಿ ವೇಲು, ಲೀಲಾವತಿ ಅವರ ಪುತ್ರ ವಿನೋದ್ ರಾಜ್ (Vinod Raj) ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ. ತಾಯಿ ಆರೋಗ್ಯದ ಬಗ್ಗೆ ವಿಚಾರಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವೇಲು, ಅವರನ್ನ ನೋಡಿದ್ರೆ ನನ್ನ ತಾಯಿ ನೆನಪಾಗುತ್ತಾರೆ. https://ainlivenews.com/witchcraft-in-the-prestigious-karnataka-university-professors-chamber/ ಅವರು ಎಲ್ಲರಿಗೂ ತಾಯಿ. ಬೇಗ ಗುಣಮುಖರಾಗುತ್ತಾರೆ. ಪ್ರಾಥಮಿಕ ಆರೋಗ್ಯ ಆಸ್ಪತ್ರೆ, ಪಶು ಆಸ್ಪತ್ರೆ ಹೀಗೆ ನಾಡಿಗೆ ಸಾಕಷ್ಟು ನೆರವಾಗಿದ್ದಾರೆ . ತಾಯಿಯ ಸೇವೆ ಅಪಾರವಾದದ್ದು ಎಂದರು. ಲೀಲಾವತಿ ಅವರ ಅನಾರೋಗ್ಯದ…
ಬೆಂಗಳೂರು: ಎರಡು ದಿನದ ಹಸುಗೂಸಿಗೆ ದೇಹ ಪೂರ್ತಿ ಜಿರಳೆಗಳು ಕಚ್ಚಿರುವ ಘಟನೆ ನಗರದ ವಾಣಿವಿಲಾಸ ಸರ್ಕಾರಿ ಆಸ್ಪತ್ರೆ ಯಲ್ಲಿ ನಡೆದಿದೆ. ಹೌದು ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆ ಯಲ್ಲಿ ಅವ್ಯವಸ್ಥೆ ಎದುರಾಗಿದ್ದು,ಆಸ್ಪತ್ರೆ ವೈದ್ಯರು, ಸಿಬ್ಬಂದಿ ಎಡವಟ್ಟಿನಿಂದ ಜಿರಳೆ ಕಾಟಕ್ಕೆ ಮಕ್ಕಳು, ಆಸ್ಪತ್ರೆಯಲ್ಲಿರುವ ಬಾಣಂತಿಯರು ಪರದಾಡಿದ್ದಾರೆ. 2 ದಿನದ ಹಿಂದೆ ಗಂಡು ಮಗುವಿಗೆ ಆಶಾರಾಣಿ ಜನ್ಮ ನೀಡಿದ್ದರು. ಬಾಣಂತಿ ವಾರ್ಡ್ನಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಸ್ವಚ್ಛತೆ ಮಾಡಿಲ್ಲ. ಹೆರಿಗೆ ವಾರ್ಡ್ನಲ್ಲೂ ಸ್ವಚ್ಛತೆ ಇಲ್ಲದ್ದರಿಂದ ಜಿರಳೆ ಕಾಟ ಹೆಚ್ಚಿದೆ.
ಬೆಂಗಳೂರು: ಡಿ.ಕೆ ಶಿವಕುಮಾರ್ ಜನರ ಹಿತ ಹಾಗೂ ಕಷ್ಟಗಳನ್ನು ಕಡೆಗಣಿಸಿ ತೆಲಂಗಾಣಕ್ಕೆ ಹೋಗಿದ್ದಾರೆ ಎಂದು ಡಿಕೆಶಿ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಇಲ್ಲಿನ ಜನರ ಕಷ್ಟಗಳ ಬಗ್ಗೆ ಮಾತಾಡುತ್ತಿದ್ದೇವೆ. ಆದರೆ ಡಿ.ಕೆ ಶಿವಕುಮಾರ್ ಜನರ ಹಿತ ಹಾಗೂ ಕಷ್ಟಗಳನ್ನು ಕಡೆಗಣಿಸಿ ತೆಲಂಗಾಣಕ್ಕೆ ಹೋಗಿದ್ದಾರೆ. ತೆಲಂಗಾಣ ಶಾಸಕರಿಗೆ ಯಾವ ಹೋಟೆಲ್‍ನಲ್ಲಿ ಇರಿಸಬೇಕು. https://ainlivenews.com/witchcraft-in-the-prestigious-karnataka-university-professors-chamber/ ಮಟನ್ ಬಿರಿಯಾನಿ ಇಲ್ಲವೇ ಚಿಕನ್ ಬಿರಿಯಾನಿ ಕೊಡಿಸಬೇಕಾ ಅಂತ ವಿಚಾರಿಸಲು ತೆರಳಿದ್ದಾರೆ ಎಂದು ಡಿಕೆಶಿ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿಗೆ ತೆಲಂಗಾಣದ ಶಾಸಕರ ಹಿತವೇ ಮುಖ್ಯವಾಗಿದೆ. ಸರ್ಕಾರ ಬಂದಾಗಿಂದ 60 ತಪ್ಪುಗಳಾಗಿವೆ. ಅಧಿಕಾರಕ್ಕೆ ಬಂದ ಕೂಡಲೇ ವರ್ಗಾವಣೆ ಅಂಗಡಿ ತೆರೆದಿದ್ದರು. ಅಲ್ಲದೇ ಐಟಿ ದಾಳಿಯಾಗಿ ಇವರ ಲೂಟಿ ಹಣ ಸಿಕ್ಕಿದೆ. ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಲಿದೆ. ನಿಲುವಳಿಗಳನ್ನೂ ಒಟ್ಟಾಗಿ ಮಂಡಿಸಿ ಚರ್ಚೆ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಶೂಟಿಂಗ್ ವೇಳೆ ಭಾರೀ ಅನಾಹುತ (Accident) ಸಂಭವಿಸಿ, ಪೆಟ್ಟು ಮಾಡಿಕೊಂಡಿದ್ದ ನಟ ಮಂಡ್ಯ ರಮೇಶ್ (Mandya Ramesh) ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದುಕೊಂಡು ಇದೀಗ ಮನೆಗೆ ವಾಪಸ್ಸಾಗಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು ಕೈಗೆ, ಹೊಟ್ಟೆಗೆ, ಕಾಲಿಗೆ, ತಲೆಗೆ ಏಟು ಬಿದ್ದಿದೆ. ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆಸೆ ಧಾರಾವಾಹಿ ಶೂಟಿಂಗ್ ವೇಳೆ ಅವಘಡ ನಡೆದಿದ್ದು, ಅವರಿಗೆ ತೀವ್ರ ಗಾಯವಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದರು. ಬಿದ್ದ ರಭಸಕ್ಕೆ ಅವರ ದೇಹದ ನಾನಾ ಭಾಗಗಳಿಗೆ ತೀವ್ರ ತೆರನಾದ ಪೆಟ್ಟಾಗಿತ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಸೀರಿಯಲ್ ನಲ್ಲಿ ಮಂಡ್ಯ ರಮೇಶ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. https://ainlivenews.com/witchcraft-in-the-prestigious-karnataka-university-professors-chamber/ ಈ ಧಾರಾವಾಹಿಯ ದೃಶ್ಯದ ಚಿತ್ರೀಕರಣದಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ. ನಾಲ್ಕೈದು ಅಡಿಯಿಂದ ಜಲ್ಲಿಕಲ್ಲ ಮೇಲೆ ರಮೇಶ್ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ರಮೇಶ್ ಅರವಿಂದ್ ನಿರ್ಮಾಣದಲ್ಲಿ ಈ ಧಾರಾವಾಹಿ…
ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಯುವ ಸಿನಿಮೋತ್ಸಾಹಿಗಳು ವಿಭಿನ್ನ ಬಗೆಯ ಕಥಾಹಂದರದ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಸಿನಿಮಾವೇ ಒನ್ ಅಂಡ್ ಆಫ್. ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಸ್ ಚಿಂಗಾ ಒನ್ ಅಂಡ್ ಆಫ್ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಶ್ರೇಯಸ್ ಅಭಿನಯಿಸ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋಸ್ ನಲ್ಲಿ ಸುಲಕ್ಷ್ಮೀ ಫಿಲಂಸ್ ನಿರ್ಮಾಣ ಸಂಸ್ಥೆ ಲೋಗೋ ಹಾಗೂ ಒನ್ ಅಂಡ್ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಲಾಯಿತು. ಈ ವೇಳೆ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಟ ಕಂ ನಿರ್ದೇಶಕ ಶ್ರೇಯಸ್ ಚಿಂಗಾ ಮಾತನಾಡಿ, ಕಂಪ್ಲೀಟ್ ಕಾಮಿಡಿ ಸಿನಿಮಾ. ಇವತ್ತಿನಿಂದ ಶೂಟಿಂಗ್ ಶುರುವಾಗಿದೆ. ಐಟಿ ಕಂಪನಿ ಅಂದ್ಮೇಲೆ ಸಾಕಷ್ಟು ಜನ ಹುಡುಗಿಯರು ಇರುತ್ತಾರೆ. ಮಾನ್ವಿತಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು, ಗೋವಾ ಭಾಗದಲ್ಲಿ ಶೂಟಿಂಗ್…
ಡಂಕಿ ಸಿನಿಮಾದ ಕ್ರೇಜ್ ಜೋರಾಗಿದೆ. ಟೀಸರ್ ಧೂಳ್ ಎಬ್ಬಿಸಿದೆ. ಡಂಕಿ ಡ್ರಾಪ್ 1 ಬಳಿಕ ಬಂದ ಡಂಕಿ ಡ್ರಾಪ್ 2 ಅಂದರೆ ಲುಟ್ ಪುಟ್ ಗಯಾ ಎಂಬ ಮೆಲೋಡಿ ಹಾಡು ಎಲ್ಲರ ಗಮನಸೆಳೆದಿದೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ನಡುವಿನ ಪ್ರೇಮಗೀತೆ ಹಿಟ್ ಲೀಸ್ಟ್ ಸೇರಿದೆ. ಇದೀಗ ಈ ಹಾಡಿನ ಒಂದು ಸೀನ್ ಎಲ್ಲೆಡೆ ವೈರಲ್ ಆಗ್ತಿದ್ದು, ಕಿಂಗ್ ಖಾನ್ ಫ್ಯಾನ್ಸ್ ಹುಬ್ಬೇರಿಸಿದ್ದಾರೆ. ಡಂಕಿ ಸಿನಿಮಾದ ಲುಟ್ ಪುಟ್ ಗಯಾ ಸಿಂಗಿಂಗ್ ನಂಬರ್ ನಲ್ಲಿ ಕುಸ್ತಿ ಅಖಾಡದಲ್ಲಿ ತಾಪ್ಸಿ ಶಾರುಖ್ ಎತ್ತಿ ಹಾಕುವ ದೃಶ್ಯವಿದೆ. ಅದೇ ರೀತಿ ಜವಾನ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಶಾರುಖ್ ರನ್ನು ಎತ್ತಿ ಕುಸ್ತಿ ಆಡುತ್ತಾರೆ. ಈ ಎರಡು ಸೀನ್ಸ್ ನೋಡಿ ಫ್ಯಾನ್ಸ್ ಕಿಂಗ್ ಖಾನ್ ಕುಸ್ತಿ ಹಿಂದೆ ಬಿದ್ದಿದ್ಯಾಕೆ ಎಂದು ಚರ್ಚೆ ನಡೆಸುತ್ತಿದ್ದಾರೆ. ‘ಡಂಕಿ’ ರಾಜ್‌ಕುಮಾರ್ ಹಿರಾನಿ ಬತ್ತಳಿಕೆಯಿಂದ ಬರುತ್ತಿರೋ ಮತ್ತೊಂದು ವಿಶಿಷ್ಠ ಸಿನಿಮಾ. ಭಾರತದ ಪಂಜಾಬ್ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ…
ಬೆಂಗಳೂರು:- ನಗರವನ್ನು ಮಾಲಿನ್ಯ ಮುಕ್ತವಾಗಿರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನೃಪತುಂಗ ರಸ್ತೆಯ ಯವನಿಕ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಸಮಾರೋಪ ಸಮಾರಂಭ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರವನ್ನು ಮಾಲಿನ್ಯ ಮುಕ್ತವನ್ನಾಗಿ ಮಾಡಿ ಮುಂದಿನ ಯುವ ಪೀಳಿಗೆಗೆ ಉತ್ತಮ ವಾತವರಣ ನಿರ್ಮಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಬೆಂಗಳೂರಿನಲ್ಲಿ ಜಲ ಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯವೂ ಹೆಚ್ಚುತ್ತಿದೆ. ನಗರೀಕರಣ, ಹೆಚ್ಚುತ್ತಿರುವ ವಾಹನಗಳು, ಜನಸಂಖ್ಯೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. https://ainlivenews.com/witchcraft-in-the-prestigious-karnataka-university-professors-chamber/ ನಾವು ಆದಷ್ಟು ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು. ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್, ರಸ್ತೆ ಸುರಕ್ಷತೆ ಕಾರ್ಯದರ್ಶಿ ಎ.ಎಂ.ಯೋಗೀಶ್, ಅಪರ ಸಾರಿಗೆ ಆಯುಕ್ತ ಬಿ.ಪಿ.ಉಮಾಶಂಕರ್, ಜೆ. ಜ್ಞಾನೇಂದ್ರ ಕುಮಾರ್, ಜೆ.ಪುರುಷೋತ್ತಮ್, ಸಿ.ಮಲ್ಲಿಕಾರ್ಜುನ್, ಜಂಟಿ ಸಾರಿಗೆ ಆಯುಕ್ತ ಎಂ.ಶೋಭ ಸೇರಿದಂತೆ ಉಪಸ್ಥಿತರಿದ್ದರು.
ನವದೆಹಲಿ: 9760 ಕೋಟಿ ರೂ. ಮುಖಬೆಲೆಯ 2000 ರೂ. ನೋಟುಗಳನ್ನು (2000 RS Notes) ಬ್ಯಾಂಕ್‍ಗಳಲ್ಲಿ ವಿನಿಮಯ ಮಾಡಿಕೊಂಡಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಹೇಳಿದೆ. ಈ ವರ್ಷ ಮೇ.19 ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿತ್ತು. ಈ ಸಮಯದಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಮೊತ್ತ 3.56 ಲಕ್ಷ ರೂ. ಕೋಟಿಗಳಷ್ಟಿತ್ತು. ಅಲ್ಲದೇ ನವೆಂಬರ್ 30ರ ವೇಳೆಗೆ ಚಲಾವಣೆಯಲ್ಲಿದ್ದ ಮೌಲ್ಯ 9760 ಕೋಟಿ ರೂ. ಗಳಿಗೆ ಕುಸಿದಿದೆ. ಈ ಮೂಲಕ 97.26% ರಷ್ಟು 2000 ರೂ. ಮುಖಬೆಲೆಯ ನೋಟ್‍ಗಳು ಠೇವಣೆಯಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ದೇಶಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ 2000 ರೂ. ನೋಟುಗಳನ್ನು ಠೇವಣಿ ಇಡಲು ಅಥವಾ ಬದಲಾಯಿಸಲು ಆರ್‌ಬಿಐ ಜನಸಾಮಾನ್ಯರಿಗೆ ಅವಕಾಶ ನೀಡಿತ್ತು. https://ainlivenews.com/witchcraft-in-the-prestigious-karnataka-university-professors-chamber/ ಇದರ ಆರಂಭಿಕ ಗಡುವು ಈ ವರ್ಷ ಸೆ.30 ಆಗಿತ್ತು, ನಂತರ ಅದನ್ನು ಅ.7ಕ್ಕೆ ವಿಸ್ತರಿಸಲಾಗಿತ್ತು. ಆರ್‌ಬಿಐನ 19 ಕಚೇರಿಗಳಲ್ಲಿ ನೋಟುಗಳನ್ನು…
ತಿರುವನಂತಪುರಂ: ಚಕ್ಕುಲಿ (Murukku) ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಪುಟ್ಟ ಕಂದಮ್ಮ ದುರ್ಮರಣಕ್ಕೀಡಾದ ಘಟನೆ ಕೇರಳದಲ್ಲಿ (Kerala) ನಡೆದಿದೆ. ಮೃತ ಬಾಲಕನನ್ನು ವೈಷ್ಣವ್ ಎಂದು ಗುರುತಿಸಲಾಗಿದೆ. ಮೃತ ವೈಷ್ಣವ್, ಮಂಕಂಕುಜಿ ಮಲಯಿಲ್ ಪಾಡೆತತ್ತಿಲ್ ಹೌಸ್‍ನ ವಿಜೀಶ್ ಮತ್ತು ದಿವ್ಯಾ ದಾಸ್ ಅವರ ಅವಳಿ ಮಕ್ಕಳಲ್ಲಿ ಒಬ್ಬರು. ಈ ಘಟನೆ 9.30ರ ಸುಮಾರಿಗೆ ನಡೆದಿದೆ. ಘಟನೆ ಸಂದರ್ಭದಲ್ಲಿ ಮಗು ಹಾಗೂ ಆತನ ತಾಯಿ ದಿವ್ಯಾ ಮಾತ್ರ ಮನೆಯಲ್ಲಿದ್ದರು. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, https://ainlivenews.com/witchcraft-in-the-prestigious-karnataka-university-professors-chamber/ ಪಾಲಕ್ಕಾಡ್‍ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಕ್ಕೆ ತೆರಳಿದ್ದರು. ಬಾಲಕ ಚಕ್ಕುಲಿಯನು ತಿಂದುಕೊಂಡು ತನ್ನ ಪಾಡಿಗೆ ಆಟವಾಡುತ್ತಿದ್ದನು. ಈ ವೇಳೆ ಏಕಾಏಕಿ ಚಕ್ಕುಲಿಯನ್ನು ನುಂಗಿಬಿಟ್ಟಿದ್ದಾನೆ. ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಆತನಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಆತನನ್ನು ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈಷ್ಣವ್‍ನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವಳಿ ಸಹೋದರಿ ವೈಗಾ ಹಾಗೂ ತಂದೆ, ತಾಯಿಯನ್ನು ವೈಷ್ಣವ್ ಅಗಲಿದ್ದಾನೆ.