ನವದೆಹಲಿ: 9760 ಕೋಟಿ ರೂ. ಮುಖಬೆಲೆಯ 2000 ರೂ. ನೋಟುಗಳನ್ನು (2000 RS Notes) ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಂಡಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಹೇಳಿದೆ. ಈ ವರ್ಷ ಮೇ.19 ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿತ್ತು. ಈ ಸಮಯದಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಮೊತ್ತ 3.56 ಲಕ್ಷ ರೂ. ಕೋಟಿಗಳಷ್ಟಿತ್ತು.
ಅಲ್ಲದೇ ನವೆಂಬರ್ 30ರ ವೇಳೆಗೆ ಚಲಾವಣೆಯಲ್ಲಿದ್ದ ಮೌಲ್ಯ 9760 ಕೋಟಿ ರೂ. ಗಳಿಗೆ ಕುಸಿದಿದೆ. ಈ ಮೂಲಕ 97.26% ರಷ್ಟು 2000 ರೂ. ಮುಖಬೆಲೆಯ ನೋಟ್ಗಳು ಠೇವಣೆಯಾಗಿದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ದೇಶಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ 2000 ರೂ. ನೋಟುಗಳನ್ನು ಠೇವಣಿ ಇಡಲು ಅಥವಾ ಬದಲಾಯಿಸಲು ಆರ್ಬಿಐ ಜನಸಾಮಾನ್ಯರಿಗೆ ಅವಕಾಶ ನೀಡಿತ್ತು.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಇದರ ಆರಂಭಿಕ ಗಡುವು ಈ ವರ್ಷ ಸೆ.30 ಆಗಿತ್ತು, ನಂತರ ಅದನ್ನು ಅ.7ಕ್ಕೆ ವಿಸ್ತರಿಸಲಾಗಿತ್ತು. ಆರ್ಬಿಐನ 19 ಕಚೇರಿಗಳಲ್ಲಿ ನೋಟುಗಳನ್ನು ಬದಲಾಯಿಸುವ ಸೌಲಭ್ಯ ಈಗಲೂ ಇದೆ. ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು, 2000 ರೂ. ನೋಟ್ಗಳನ್ನು ದೇಶದ ಯಾವುದೇ ಅಂಚೆ ಕಚೇರಿಯಿಂದ (Post Office) ಆರ್ಬಿಐ ಕಚೇರಿಗೆ ಕಳಿಸಲು ಅವಕಾಶ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.