ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ವಿನಯ್, ವರ್ತೂರ್ ಸಂತೋಷ್, ತನಿಷಾ, ಸ್ನೇಹಿತ್, ಸಂಗೀತಾ, ಪ್ರತಾಪ್, ನಮ್ರತಾ, ಮೈಕಲ್ ನಾಮಿನೇಟ್ ಆಗಿದ್ದಾರೆ. ಯಾರಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗುತ್ತದೆ ಎಂಬುದು ಕಿಚ್ಚನ ಪಂಚಾಯಿತಿಯಲ್ಲಿ ಗೊತ್ತಾಗಲಿದೆ. ಇದೀಗ ಪ್ರೇಕ್ಷಕರು ಯಾವೆಲ್ಲ ವಿಚಾರಗಳು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಯಾಗಬೇಕು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಪ್ರತಾಪ್ ಅತೀ ಬುದ್ಧಿವಂತಿಕೆಯಿಂದ ಸರಣಿ ಟಾಸ್ಕ್ ಸೋತಿದ್ದು ಕಾರ್ತಿಕ್ ಅವರನ್ನು ಪ್ರತಾಪ್ ಹೊರಗಿಟ್ಟು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು ವಿನಯ್ ಬೇಕು ಅಂತಲೇ ತುಕಾಲಿ ಅವರನ್ನು ತಳ್ಳಿದ್ದು ನಮ್ರತಾ ಚಮಚ ಗ್ಯಾಂಗ್ ಬಿಟ್ಟು ಉತ್ತಮ ಪ್ರದರ್ಶನ ನೀಡಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಅವರು ಹೊರಗಿನ ವಿಚಾರ ಚರ್ಚಿಸಿದ್ದು ಸಂಗೀತಾ ಹಾಗೂ ಕಾರ್ತಿಕ್ ಮತ್ತೆ ಒಂದಾಗಿದ್ದು ಮೈಕಲ್ ಕನ್ನಡವನ್ನು ಓದಿ ಕನ್ನಡಿಗರ ಹೃದಯ ಗೆದ್ದಿದ್ದು ಹಳ್ಳಿಕಾರ್, ಬೆಂಕಿ ಅವರ ಪ್ರೀತಿ, ಪ್ರೇಮ, ಪ್ರಣಯ ಪ್ರಸಂಗಗಳು ತುಕಾಲಿ ಅವರ ಟಾಸ್ಕ್‌ನಲ್ಲಿ ಬ್ರಹ್ಮಲಿಪಿ ಅರ್ಥವಾಗದೇ ಇದ್ದದ್ದು ತುಕಾಲಿ ಅವರ Biology, Physics, chemistry ಸ್ನೇಹಿತ್ ಟಾಸ್ಕ್‌ನಲ್ಲಿ…
Author: AIN Author
ಬೆಂಗಳೂರು:- ವೈಜ್ಞಾನಿಕವಾಗಿ ಜಾತಿ ಗಣತಿ ವರದಿ ಸಿದ್ಧಪಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂದರು. ವರದಿಯನ್ನು ಇನ್ನೂ ನಾವು ಸ್ವೀಕಾರ ಮಾಡಿಲ್ಲ. ವರದಿ ಸ್ವೀಕರಿಸಲೆಂದೇ ಆಯೋಗದ ಅವಧಿಯನ್ನು 2 ತಿಂಗಳು ಮುಂದುವರೆಸಲಾಗಿದೆ. ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಯಾರೂ ಏನೇ ಹೇಳಿದರೂ ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೇ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಸಮಾಜದಲ್ಲಿ ಅವಕಾಶ ವಂಚಿತ ಜನರಿಗೆ, ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವವರು, ಸಾಮಾಜಿಕ ನ್ಯಾಯದಿಂದ ಇಂದಿಗೂ ವಂಚಿತರಾದ ಜನರ ಪರವಾಗಿ ನಾವು ಇರುತ್ತೇವೆ. ನಿಮ್ಮೊಂದಿಗೂ ಇರುತ್ತೇವೆ ಎಂದರು. ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ…
ಬೆಂಗಳೂರು:- ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ, ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಮಂಜುಳಾ ಎಂಬಾಕೆಯನ್ನು ಬಂಧಿಸಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ಆಗಿರುವ ಡಾ.ಚಂದನ್ ಬಲ್ಲಾಳ್ ಒಡೆತನದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ, ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲಸ ತೊರೆದು ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ತಲೆಮರೆಸಿಕೊಂಡಿದ್ದ ಮಂಜುಳಾಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಸದ್ಯ ಆಕೆ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಿಂದಲೇ ವಶಕ್ಕೆ ಪಡೆದಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ಹತ್ತಕ್ಕೇರಿದಂತಾಗಿದೆ. ಹದಿನಾಲ್ಕರಿಂದ ಹದಿನೆಂಟು ವಾರಗಳ ಅವಧಿಯಲ್ಲಿ ಭ್ರೂಣ ಲಿಂಗ ಪತ್ತೆಯಾಗುತ್ತದೆ. ಪ್ರಾರಂಭದಲ್ಲಿ ಗರ್ಭಿಣಿಯ ಬ್ಲಡ್ ಚೆಕ್ ಮಾಡುತ್ತಿದ್ದ ಆರೋಪಿಗಳು ನಂತರ ಆಕೆಗೆ ಗರ್ಭಪಾತದ ಮಾತ್ರೆ ನೀಡುತ್ತಿದ್ದರು. ಬಳಿಕ ರಕ್ತಸ್ರಾವವಾಗಿ ಭ್ರೂಣ ಹೊರ ಬರುತ್ತಿತ್ತು. ಈ ವೇಳೆ ಚಂದನ್ ಮತ್ತು ಮಂಜುಳಾ ಡೆಲಿವರಿ ಮಾಡಿಸಿದ ರೀತಿಯಲ್ಲಿ ಭ್ರೂಣ ಹೊರ ತೆಗೆಯುತ್ತಿದ್ದರು. ಈ ಕೆಲಸದಲ್ಲಿ ರಿಜ್ಮಾ ಹಾಗೂ ಮಂಜುಳಾ,…
ಮಂಡ್ಯ :- ಜಿಲ್ಲೆಯ ರೈತರು ತೀವ್ರ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲೇ ರೈತರಿಂದ ಖರೀದಿಸುವ ಹಾಲಿನ ದರವನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ( ಮನ್ ಮುಲ್ )ಏಕಾಏಕಿ 1.50 ಪೈಸೆಯನ್ನು ಕಡಿತಗೊಳಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಡಿ.1 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್‌ಗೆ ಸರಿ ಸುಮಾರು 1.50 ಪೈಸೆಗಳನ್ನು ಕಡಿತಗೊಳಿಸಿದೆ. ಈ ಕುರಿತು ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಪ್ರಕಟಣೆ ನೀಡಿದ್ದು, ಒಕ್ಕೂಟದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ದರ ಪರಿಷ್ಕರಣೆ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಿದೆ. ಹಾಲಿನ ಗುಣಮಟ್ಟ ಶೇ.4.0 ಜಿಡ್ಡು ಮತ್ತು ಶೇ.8.5 ಜಿಡ್ಡೇತರ ಘನಾಂಶದ ಹೊಂದಿರುವ ಸಂಘದಿಂದ ಖರೀದಿಸುವ ಪ್ರತಿ ಲೀ. ಹಾಲಿಗೆ ₹ 34.40 ಬದಲು ₹ 32.90 ಹಾಗೂ ಉತ್ಪಾದಕರಿಗೆ ನೀಡುತ್ತಿದ್ದ ₹ 33.50ರ ಬದಲು ₹ 32 ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ…
ಬಳ್ಳಾರಿ:- ನಮ್ಮ ಶಾಸಕರ ರಕ್ಷಣೆಗೆ ನಾವು ಹೈದರಾಬಾದ್‌ಗೆ ಹೋಗುತ್ತಿದ್ದೇವೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತೆಲಂಗಾಣದ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಮತ್ತು ಬಿಆರ್‌ಎಸ್ ಪಕ್ಷದವರು ಸೇರಿ ಏನಾದರೂ ಮಾಡುತ್ತಾರೆ ಎನ್ನುವ ಭಯ ಇದೆ. ನಮ್ಮ ಶಾಸಕರಿಗೆ ವಿರೋಧ ಪಕ್ಷಗಳು ಬೆದರಿಕೆ ಒಡ್ಡುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಶಾಸಕರ ರಕ್ಷಣೆಗೆ ನಾವು ಹೈದರಾಬಾದ್‌ಗೆ ಹೋಗುತ್ತಿದ್ದೇವೆ ಎಂದರು. ತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿಆರ್‌ಎಸ್ ಪಕ್ಷದಿಂದ ಕಾಂಗ್ರೆಸ್‌ಗೆ ಭಯ ಇದೆ. ಹೀಗಾಗಿ ನಮಗೆಲ್ಲರಿಗೂ ತೆಲಂಗಾಣಕ್ಕೆ ಹೋಗುವಂತೆ ಎಐಸಿಸಿ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ. ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆ ಇದೆ. ಆದರೆ ಬಿಜೆಪಿ ದೇಶದಲ್ಲಿ ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ನಮ್ಮ ಶಾಸಕರಿಗೆ ಬಿಜೆಪಿ ಮತ್ತು ಬಿಆರ್‌ಎಸ್ ಪಕ್ಷದವರು ಸೇರಿ ಏನಾದರೂ ಮಾಡುತ್ತಾರೆ ಎನ್ನುವ ಭಯವಿದ್ದು, ಚುನಾಯಿತ ಶಾಸಕರ ರಕ್ಷಣೆಗೆ ನಾವು ತೆಲಂಗಾಣಕ್ಕೆ ಹೋಗುತ್ತಿದ್ದೇವೆ ಎಂದು ನಾಗೇಂದ್ರ ಮಾಹಿತಿ ನೀಡಿದ್ದಾರೆ. ಬಿಜೆಪಿ ಗೆದ್ದ ಅಭ್ಯರ್ಥಿಗಳಿಗೆ ಗಾಳ…
ಗದಗ:- ಗದಗ ಜಿಲ್ಲೆಯಲ್ಲಿ ಹಾಡಹಗಲೇ ಖತರ್ನಾಕ್ ಗ್ಯಾಂಗ್ವೊಂದು ದರೋಡೆಗೆ ಇಳಿದಿದೆ. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಸಿನಿಮೀಯ ರೀತಿಯಲ್ಲಿ ದರೋಡೆ ಗ್ಯಾಂಗ್ನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಕಾಡರಹಳ್ಳಿ ಗ್ರಾಮದ ಸಂಜೀವ ಸುಂಕಪ್ಪ, ರಾಜಪ್ಪ ಬಂಧಿತ ಆರೋಪಿಗಳು. ಇನ್ನೂ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಜನರನ್ನು ಟಾರ್ಗೆಟ್ ಮಾಡುತ್ತಿದ್ದ ಈ ದರೋಡೆ ಗ್ಯಾಂಗ್, ಸಂಭಾಪೂರ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದವರಿಗೆ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದರು. ಅದರಂತೆ ಇತ್ತೀಚಿಗೆ ನಜೀರ್ ಅಹ್ಮದ್ ಎಂಬಾತ ಬೈಕ್ ಮೇಲೆ ಹೋಗುತ್ತಿದ್ದಾಗ ಚಾಕು, ರಾಡ್ ತೋರಿಸಿ, ಹಣ, ಚಿನ್ನ ಹಾಗೂ ವಸ್ತುಗಳು ಕೊಡದಿದ್ರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿ ದರೋಡೆ ಮಾಡಿದ್ದರು. ಬಳಿಕ ಅವರಿಂದ ಬಚಾವ್ ಆಗಿ ಬಂದು ದೂರು ನೀಡಿದ್ದರು. ಇನ್ನು ನಜೀರ್ ಅಹ್ಮದ್ ದೂರು ನೀಡುತ್ತಿದ್ದಂತೆ ಅಲರ್ಟ್ ಆದ ಬಡಾವಣೆ ಪೊಲೀಸರು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಶುರು ಮಾಡಿದ್ದಾರೆ. ಅದರಂತೆ ಇದೀಗ ಇಬ್ಬರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಈ ದರೋಡೆಕೋರರ…
ಹುಬ್ಬಳ್ಳಿ: ಶಿಕ್ಷಣ ಇಲಾಖೆಯಲ್ಲಿ ನಿವೃತ್ತ ಪಿಂಚಿಣಿಗೆ ಸಂಬಂಧಿಸಿ ಲಂಚ ಪಡೆಯುವ ವೇಳೆ ಬಲೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಲೋಕಾಯುಕ್ತ ಬಲಿಗೆ ಬಿದ್ದ ಘಟನೆ ಶನಿವಾರ ನಡೆದಿದೆ. ಕುಂದಗೋಳ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರ ಆಗಿರುವ ವಿದ್ಯಾ ಕುಂದರಗಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದು, 8 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ನಿವೃತ್ತ ಶಿಕ್ಷಕರ ಪಿಂಚಿಣಿ, ಗಳಿಕೆಯ ರಜೆ ನಗದೀಕರಣ, ಗ್ರೂಪ್ ಇನ್ಶೂರೆನ್ಸ್ ಇತ್ಯರ್ಥಕ್ಕೆ 10 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಮೊದ ಮೊದಲು ಹಣ ಕೊಡಲು ನಿರಾಕರಿಸಿದ್ದ ನಿವೃತ್ತ ಶಿ್ಕ್ಷಕ ಇದರಿಂದಾಗಿ ಕಡತಕ್ಕೆ ಸಹಿ ಮಾಡದೆ ಸತಾಯಿಸಿದ್ದ ಆರೋಪ ಮಾಡಲಾಗಿದೆ. ಕೊನೆಗೆ ಲೋಕಾಯುಕ್ತ ಮೊರೆ ಹೋಗಿದ್ದ ನಿವೃತ್ತ ಶಿಕ್ಷಕ 8 ಸಾವಿರ ರೂಪಾಯಿ ಲಂಚ ಪಡೆಯುವಾಗ ದಾಳಿ ಮಾಡಲಾಗಿದೆ . ಲೋಕಾಯುಕ್ತ ಎಸ್.ಪಿ ಸತೀಶ್ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ದಾಳಿ, ಡಿವೈಎಸ್ಪಿ ಶಂಕರ ರಾಗಿ, ಪಿಐ ಬಸವರಾಜ ರಿಂದ ದಾಳಿ,…
ಚಿಕ್ಕಬಳ್ಳಾಪುರ:- ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ಸುಧಾಕರ್ ಭವಿಷ್ಯ ನುಡಿದಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮತದಾನದ ದಿನ ಸಂಗ್ರಹಿಸಿದ ಸಮೀಕ್ಷೆಗಳು ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನಗಳು ಬರುತ್ತೆ ಅಂತ ಹೇಳಿವೆ. ಆದರೆ ಕೆಲವು ರಾಜ್ಯಗಳಲ್ಲಿ ಸಮೀಕ್ಷೆಗೆ ತದ್ವಿರುದ್ದವಾಗಿ ಫಲಿತಾಂಶ ಹೊರಬೀಳಲಿದೆ ಎಂದರು. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದರು. ಆದರೆ ಅಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ. ಅಲ್ಲಿ ಸಮ್ಮಿಶ್ರ ಸರ್ಕಾರ ಬರಬಹುದು. ಮಧ್ಯಪ್ರದೇಶದಲ್ಲಂತೂ ಬಿಜೆಪಿ ಗೆಲುವು ಖಚಿತ ಹಾಗೆ ಹಿಮಾಚಲ ಪ್ರದೇಶ, ಚತ್ತೀಸ್‌ಘಡ, ರಾಜಾಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಪ್ರಾಬಲ್ಯ ಮೆರೆಯಲಿದೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಎಲಿಮಿನೇಶನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿದ್ದು, ಯಾರಾಗಬಹುದು ಔಟ್ ಎಂಬೆಲ್ಲಾ ಚರ್ಚೆ ಒಂದೆಡೆ ಜೋರಾಗಿಯೇ ಇದೆ. ಈ ವೀಕೆಂಡ್ ಎಲಿಮಿನೇಶನ್ ಯಾರಿರಬಹುದು ಎಂಬ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿ ನಡೆಯುತ್ತಿದೆ. ಹಲವರು ಸ್ನೇಹಿತ್ ಹೆಸರು ಹೇಳಿದರೆ ಕೆಲವರು ಸಿರಿ ಹೆಸರು ಹೇಳುತ್ತಿದ್ದಾರೆ. ನಮ್ರತಾ, ತನಿಷಾ ಹೆಸರುಗಳು ಕೂಡ ಕೇಳಿ ಬರುತ್ತಿದೆ. ಆದರೆ ನಿಜವಾಗಿ ಯಾರು ಎಂಬುದನ್ನು ಊಹಿಸಲು ಅಸಾಧ್ಯ. ಕಾರಣ, ನಾಳೆ ಎಲಿಮಿನೇಶನ್ ಇರಲಿದೆ, ಅದನ್ನು ಸಹಜವಾಗಿಯೇ ಸೀಕ್ರೆಟ್ ಆಗಿಯೇ ಇಟ್ಟಿರುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಸಹಜವಾಗಿಯೇ ಖುಷಿ, ಮನಸ್ತಾಪ, ಹೋರಾಟ, ಹಾರಾಟ ಎಲ್ಲವೂ ನಡೆಯುತ್ತಿವೆ. ಎಲ್ಲರೂ ಬಂದಿರುವುದು ಗೆಲ್ಲಲಿಕ್ಕಾಗಿ, ಅದೇ ಮಂತ್ರವನ್ನು ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳೂ ಜಪಿಸುತ್ತಾರೆ. ಆದರೆ ಟಾಸ್ಕ್, ಟೀಮ್ ಅಂತ ಬಂದಾಗ ಇರುವವರಲ್ಲೇ ಗ್ರೂಫ್ ಸೃಷ್ಟಿಯಾಗುತ್ತದೆ. ಬಿಗ್ ಬಾಸ್ ಸೀಸನ್ ಶುರುವಾದ ಹೊಸತರಲ್ಲಿ ವಿನಯ್ ಟೀಮ್ ಮತ್ತು ಕಾರ್ತಿಕ್ ಟೀಮ್ ಎಂದು ಎರಡು ಟೀಮ್ ಸೃಷ್ಟಿಯಾಗಿತ್ತು. ಆದರೆ, ಬರುಬರುತ್ತಾ…
ಬೆಂಗಳೂರು:- ರಾಜ್ಯಶಿಕ್ಷಣ ನೀತಿ ನಮ್ಮ ಆದ್ಯತೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯಕ್ಕೆ ಪ್ರತ್ಯೇಕವಾದ ಶಿಕ್ಷಣ ನೀತಿ ರೂಪಿಸುವುದಾಗಿ ಪ್ರಣಾಳಿಕೆಯಲ್ಲಿ ಬರೆದು ಜನರಿಗೆ ಭರವಸೆ ನೀಡಿ ಮತ ಹಾಕಿಸಿಕೊಂಡು ಅಧಿಕಾರದಲ್ಲಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಬಿಜೆಪಿಯವರು ಹೇಳಿದ್ದಾರೆ ಎಂಬ ಕಾರಣಕ್ಕೆ ಬದಲಾವಣೆ ಮಾಡಲಾಗುವುದಿಲ್ಲ ಎಂದರು. ರಾಜ್ಯ ಶಿಕ್ಷಣ ನೀತಿಯ ಬಗ್ಗೆ ಬಿಜೆಪಿಯವರು ವಿಧಾನಮಂಡಲದಲ್ಲಿ ಪ್ರಸ್ತಾಪ ಮಾಡುವುದಾದರೆ ಅದನ್ನು ಸ್ವಾಗತಿಸುತ್ತೇವೆ. ನಾವು ಚುನಾವಣೆಯ ಸಂದರ್ಭದಲ್ಲಿ ಸ್ಪಷ್ಟ ಭರವಸೆಯನ್ನು ನೀಡಿದ್ದೇವೆ. ಜನ ಅದಕ್ಕಾಗಿಯೇ ನಮಗೆ ಮತ ಹಾಕಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಭರವಸೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ ಎಂದು ಪುನರುಚ್ಚರಿಸಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಭವಿಷ್ಯದ ಪ್ರಜೆಗಳನ್ನು ರೂಪಿಸುವಲ್ಲಿ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಬಿಜೆಪಿ ಎನ್‍ಇಪಿ ಜಾರಿಯನ್ನು ರಾಜ್ಯದಲ್ಲಿ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದೆ. ಇದಕ್ಕೆ ತಿರುಗೇಟು ನೀಡಿದ ಮಧುಬಂಗಾರಪ್ಪ, ಭರವಸೆಗಳನ್ನು ಈಡೇರಿಸದೇ ಇದ್ದರೆ ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪಂಚಖಾತ್ರಿಗಳ ರೀತಿಯಲ್ಲೇ…