ಹುಬ್ಬಳ್ಳಿ: ಶಿಕ್ಷಣ ಇಲಾಖೆಯಲ್ಲಿ ನಿವೃತ್ತ ಪಿಂಚಿಣಿಗೆ ಸಂಬಂಧಿಸಿ ಲಂಚ ಪಡೆಯುವ ವೇಳೆ ಬಲೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಲೋಕಾಯುಕ್ತ ಬಲಿಗೆ ಬಿದ್ದ ಘಟನೆ ಶನಿವಾರ ನಡೆದಿದೆ. ಕುಂದಗೋಳ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರ ಆಗಿರುವ ವಿದ್ಯಾ ಕುಂದರಗಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದು, 8 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ನಿವೃತ್ತ ಶಿಕ್ಷಕರ ಪಿಂಚಿಣಿ, ಗಳಿಕೆಯ ರಜೆ ನಗದೀಕರಣ, ಗ್ರೂಪ್ ಇನ್ಶೂರೆನ್ಸ್ ಇತ್ಯರ್ಥಕ್ಕೆ 10 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಮೊದ ಮೊದಲು ಹಣ ಕೊಡಲು ನಿರಾಕರಿಸಿದ್ದ ನಿವೃತ್ತ ಶಿ್ಕ್ಷಕ ಇದರಿಂದಾಗಿ ಕಡತಕ್ಕೆ ಸಹಿ ಮಾಡದೆ ಸತಾಯಿಸಿದ್ದ ಆರೋಪ ಮಾಡಲಾಗಿದೆ.
ಕೊನೆಗೆ ಲೋಕಾಯುಕ್ತ ಮೊರೆ ಹೋಗಿದ್ದ ನಿವೃತ್ತ ಶಿಕ್ಷಕ 8 ಸಾವಿರ ರೂಪಾಯಿ ಲಂಚ ಪಡೆಯುವಾಗ ದಾಳಿ ಮಾಡಲಾಗಿದೆ .
ಲೋಕಾಯುಕ್ತ ಎಸ್.ಪಿ ಸತೀಶ್ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ದಾಳಿ, ಡಿವೈಎಸ್ಪಿ ಶಂಕರ ರಾಗಿ, ಪಿಐ ಬಸವರಾಜ ರಿಂದ ದಾಳಿ, ಹಣದ ಸಮೇತ ಬಿಇಒ ವಶಕ್ಕೆ ಪಡೆದ ಲೋಕಾಯುಕ್ತ ಸಿಬ್ಬಂದಿ ಇದ್ದರು.
ಧಾರವಾಡ ಜಿಲ್ಲೆಯ ಹರ್ಲಾಪೂರ ಗ್ರಾಮದಲ್ಲಿ ಶಿಕ್ಷಕ ವೃತ್ತಿ ಮಾಡಿದ್ದ ಕುರುವಿನಶೆಟ್ಟಿ ಆಗಿದ್ದು ಈಗ ಧಾರವಾಡದ ವಿದ್ಯಾ ಕುಂದರಗಿ ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡುತ್ತಿರುವ ಲೋಕಾಯುಕ್ತ ಅಧಿಕಾರಿಗಳು ನಡೆಸಿದರು.
ಧಾರವಾಡ ನಗರದ ಹೊಯ್ಸಳ ನಗರದಲ್ಲಿ ಪರಿಶೀಲನೆ ಮಾಡಲಾಗಿದ್ದು ವಿದ್ಯಾ ಕುಂದರಗಿ ಅವರಿಗೆ ಸೇರಿದ ಬ್ಯಾಂಕ್ ದಾಖಲೆ, ಸೇವಾ ಪುಸ್ತಕ ಹಾಗೂ ಆಸ್ತಿ ಗಳಿಕೆಗೆ ಸಂಬಂಧಿಸಿದ ದಾಖಲೆ ಸಹ ವಶಪಡಿಸಿಕೊಳ್ಳಲಾಗಿದೆ.
ಲೋಕಾ ಎಸ್ಪಿ ಸತೀಶ್ ಚಿಟಗುಪ್ಪಿ ನೇತೃತ್ವದಲ್ಲಿ ನಡೆಯುತ್ತಿರುವ ಪರಿಶೀಲನೆ ನಡೆಸಲಾಯಿತು