ಟೆಲ್ ಅವೀವ್: ಕೇವಲ ಗಾಜಾ ಪಟ್ಟಿಯಲ್ಲಿ (Gaza Strip) ಅಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್ (Hamas) ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್ (Israel) ಈಗ ಮುಂದಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಇಸ್ರೇಲಿನ ವಿದೇಶಿ ಗುಪ್ತಚರ ಸೇವೆ ನೀಡುವ ಮೊಸಾದ್‌ಗೆ (Mossad) ವಿಶ್ವದೆಲ್ಲೆಡೆ ಇರುವ ಹಮಾಸ್ ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುವಂತೆ ಆದೇಶ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಟರ್ಕಿ, ಲೆಬನಾನ್ ಮತ್ತು ಕತಾರ್‌ನಲ್ಲಿ ನೆಲೆಸಿರುವ ಹಮಾಸ್ ನಾಯಕರನ್ನು ಪತ್ತೆ ಹಚ್ಚುವ ಕೆಲಸವನ್ನು ಗುಪ್ತಚರ ಇಲಾಖೆ ಆರಂಭಿಸಿದೆ. ಕತಾರ್ ತನ್ನ ರಾಜಧಾನಿ ದೋಹಾದಲ್ಲಿ ಕಳೆದ ಒಂದು ದಶಕದಿಂದ ರಾಜಕೀಯ ಕಚೇರಿಯನ್ನು ನಡೆಸಲು ಹಮಾಸ್‌ಗೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ. ಸಾಮಾನ್ಯವಾಗಿ ಈ ರೀತಿಯ ಯೋಜನೆಗಳು ರಹಸ್ಯವಾಗಿರುತ್ತದೆ. ಆದರೆ ನೆತನ್ಯಾಹು ನ.22 ರಂದು ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಹಮಾಸ್ ನಾಯಕರ ವಿರುದ್ಧ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ ಎಂದು…
Author: AIN Author
ಕಲಬುರಗಿ:- ತಾಯಿಯನ್ನು ನಿಂದಿಸಿದನೆಂದು ಅಜ್ಜನನ್ನೇ ಮೊಮ್ಮಗ ಕೊಂದಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಘಟನೆ ತುಸು ತಡವಾಗಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಮೊಮ್ಮಗನನ್ನು ಆಕಾಶ್ (22) ಎಂದು ಗುರುತಿಸಲಾಗಿದೆ. ಘಟನೆ ಕಲಬುರಗಿ ತಾಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ಸಂಭವಿಸಿದೆ. ಮೃತ ಅಜ್ಜನನ್ನು ಸಿದ್ರಾಮಪ್ಪ (74) ಎಂದು ಗುರುತಿಸಲಾಗಿದೆ. ಆಕಾಶನ ತಾಯಿ ಸರೋಜಮ್ಮಳಿಗೆ ಅಜ್ಜ ಸಿದ್ರಾಮಪ್ಪ ನಿಂದಿಸಿರೋದೆ ಕೊಲೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ಸೋಮವಾರ ಸಿದ್ರಾಮಪ್ಪನ ಸಹೋದರಿ ಮೃತಪಟ್ಟ ಹಿನ್ನೆಲೆಯಲ್ಲಿ ಸಹೋದರರೆಲ್ಲರೂ ಸೇರಿ ಕುಮಸಿ ಗ್ರಾಮಕ್ಕೆ ತೆರಳಿದ್ದರು. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮರಳಿ ಊರಿಗೆ ಬರುವಾಗ ದಾರಿಯಲ್ಲಿ ಸರೋಜಮ್ಮ ಸಿದ್ರಾಮಪ್ಪನಿಗೆ ಕ್ರೂಸರ್ ವಾಹನದ ಟಾಪ್ ಮೇಲೆ ಕೂರುವಂತೆ ಸೂಚಿಸಿದ್ದರು. ತನಗೆ ವಯಸ್ಸಾಗಿದೆ. ಗಾಡಿ ಮೇಲೆ ಕೂರುವಂತೆ ಹೇಳುತ್ತಿಯಾ ಎಂದು ಸಿದ್ರಾಮಪ್ಪ ಸರೋಜಮ್ಮಳಿಗೆ ಅವಾಚ್ಯವಾಗಿ ನಿಂದಿಸಿದ್ದರು. ಈ ಸಂಗತಿ ಸರೋಜಮ್ಮ ತನ್ನ ಮಗನಿಗೆ ಹೇಳಿದ್ದರು. ಇದೇ ಕಾರಣದಿಂದ ರೊಚ್ಚಿಗೆದ್ದ ಮಗ ಆಕಾಶ್ ಅಜ್ಜನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತಂತೆ…
ಹುಬ್ಬಳ್ಳಿ, : ಹೊರಗಿನ ಕತ್ತಲೆ ಕಳೆಯಲು ದೀಪಬೇಕು. ಅಜ್ಞಾನವೆಂಬ ಕತ್ತಲೆ ಕಳೆಯಲು ಗುರುಬೇಕು. ಅರಿವು, ಆದರ್ಶಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆಂದು ಬಾಳೆಹೊನ್ನುರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಹುಬ್ಬಳ್ಳಿ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದಲ್ಲಿರುವ ಶ್ರೀ ಜಗದ್ಗುರು ರೇಣುಕ ಮಂದಿರದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಸಮಾರಂಭದ ಸಾನಿಧ್ಯವಹಿಸಿ, ಆಶಿರ್ವಚನ ನೀಡಿದರು. ಮನುಷ್ಯನಿಗೆ ಅರಿವು, ಆರೋಗ್ಯ ಮತ್ತು ಆಯುಷ್ಯ ಬಹು ಮುಖ್ಯ. ಭೌತಿಕ ಬದುಕು ಸಂಪತ್ತಿನಷ್ಟೆ ಉಜ್ವಲಗೊಳ್ಳುವುದು. ಸಂಪತ್ತಿನ ಜೊತೆ ಶಿವ ಜ್ಞಾನದ ಅರಿವು ಸಂಪಾದಿಸಿಕೊಂಡು ಬಾಳ ಬೇಕಾಗುತ್ತದೆ ಎಂದು ಅವರು ಹೇಳಿದರು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯ ಆಧಾರಿತ ಬದುಕಿಗೆ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ. ಅಹಿಂಸಾ, ಸತ್ಯ,ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ, ಜಪ, ಧ್ಯಾನ ಎಂಬ ಹತ್ತು ಸೂತ್ರಗಳು ಸಕಲರ ಬಾಳಿನ ಶ್ರೇಯಸ್ಸಿಗೆ ಕಾರಣವಾಗಿವೆ. ಮಾತು ಮತ್ತು ಕೃತಿ ಒಂದಾಗಿ ಬಾಳಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.…
ಮುಂಬೈ: 17ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಈ ನಡುವೆ ಟಾಟಾ ಮಹಿಳಾ ಪ್ರೀಮಿಯರ್ ಲೀಗ್ (WPL 2024 Auction) 2ನೇ ಆವೃತ್ತಿಗೆ ನಿಗದಿಯಾಗಿರುವ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ 9 ರಂದು ಮುಂಬೈನಲ್ಲಿ (Mumbai) ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೆ 165 ಪ್ಲೇಯರ್‌ಗಳನ್ನ ಪಟ್ಟಿ ಮಾಡಲಾಗಿದೆ. ಈ ಪೈಕಿ 104 ಭಾರತೀಯರು ಮತ್ತು 61 ವಿದೇಶಿಯರಿದ್ದಾರೆ. https://twitter.com/wplt20/status/1730808141301117028?ref_src=twsrc%5Etfw%7Ctwcamp%5Etweetembed%7Ctwterm%5E1730808141301117028%7Ctwgr%5Ee1e017741dd511adab4e5aff9a56af3cde4d3724%7Ctwcon%5Es1_&ref_url=https%3A%2F%2Ftv9bangla.com%2Fsports%2Fcricket-news%2Fwomens-premier-league-2024-player-auction-list-announced-960207.html ಐಸಿಸಿ ಪೂರ್ಣ ಸದಸ್ಯತ್ವ ಪಡೆಯದ ರಾಷ್ಟ್ರಗಳ 15 ಆಟಗಾರ್ತಿಯರು ಇದ್ದಾರೆ. ಒಟ್ಟು 56 ಕ್ಯಾಪ್ಡ್ ಪ್ಲೇಯರ್ಸ್ ಇದ್ದರೆ, ಅನ್ ಕ್ಯಾಪ್ಡ್ ಪ್ಲೇಯರ್ಸ್ 109 ಮಂದಿ ಇದ್ದಾರೆ. 2ನೇ ಆವೃತ್ತಿಗಾಗಿ ಒಟ್ಟು 5 ತಂಡಗಳಿಂದ 60 ಆಟಗಾರ್ತಿಯರನ್ನ ರಿಟೇನ್ ಮಾಡಿಕೊಳ್ಳಲಾಗಿದೆ. ಇದರಲ್ಲಿ 21 ವಿದೇಶಿಗರು ಇದ್ದಾರೆ. ಇನ್ನುಳಿದವರನ್ನ ಖರೀದಿಸಲು 5 ತಂಡಗಳ ಬಳಿ 17.65 ಕೋಟಿ ರೂ. ಮಾತ್ರ ಬಾಕಿ ಉಳಿದಿದ್ದು, 30 ಸ್ಲಾಟ್‌ಗಳು ಬಾಕಿಯಿದೆ. 9 ವಿದೇಶಿ ಆಟಗಾರ್ತಿಯರಿಗೆ ಅವಕಾಶವಿದೆ. ಯಾವ ತಂಡದ ಬಳಿ…
ಬೆಂಗಳೂರು:- ಹಂತಕರು ವ್ಯಕ್ತಿಯೋರ್ವನನ್ನು ಕೊಲೆಗೈದು ಶವವನ್ನ ಮೋರಿಗೆ ಬಿಸಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಜಾಲಹಳ್ಳಿಯ ಹೆಚ್ಎಂಟಿ ರೋಡ್ ನ ಮೋರಿಯಲ್ಲಿ ಶವ ಪತ್ತೆಯಾಗಿದೆ. ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಹತ್ಯೆ ಬಳಿಕ ಶವವನ್ನ ಮೋರಿಗೆ ಎಸೆದು ಹಂತಕರು ಎಸ್ಕೇಪ್ ಆಗಿದ್ದಾರೆ. ಮೃತನ ಹೆಸ್ರು ಇನ್ನೂ ಪತ್ತೆಯಾಗಿಲ್ಲ. ಜಾಲಹಳ್ಳಿ ಪೊಲೀಸ್ರಿಂದ ಕೊಲೆ ಪ್ರಕರಣ ದಾಖಲಾಗಿದೆ. ಮೃತನ ಮಾಹಿತಿ ಪತ್ತೆಹಚ್ಚಲು ಜಾಲಹಳ್ಳಿ ಪೊಲೀಸ್ರು ಮುಂದಾಗಿದ್ದಾರೆ.
ಶಿವಮೊಗ್ಗ: ಸ್ಥಳಿಯ ಶಾಸಕರನ್ನು ಬಿಟ್ಟು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಾಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ, ಶಾಸಕ ಬೇಳೂರು ಗೋಪಾಲಕೃಷ್ಣ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆ ನಡೆಸಿದ್ದಾರೆ. ಸ್ಥಳಿಯ ಸಮಸ್ಯೆ, ಸ್ಥಳೀಯ ಶಾಸಕರಿಲ್ಲದೇ ಬಗೆಹರಿಸಲು ಮುಂದಾಗಿರುವ ಸಚಿವ ಮಧು ಬಂಗಾರಪ್ಪ ನಡೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ. https://ainlivenews.com/witchcraft-in-the-prestigious-karnataka-university-professors-chamber/ ಸಭೆಗಳಿಗೆ ನನ್ನನ್ನು ಕರೆಯಲ್ಲ ಎಂದು ಹಲವು ಬಾರಿ ಮಧುಬಂಗಾರಪ್ಪ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಕೇವಲ ಟಿಪಿ ಬಂದಿದೆ. ನನ್ನ ಕ್ಷೇತ್ರದ ಸಭೆ ನಡೆಸುವ ಮುನ್ನ ನನ್ನ ಜೊತೆ ಚರ್ಚೆ ನಡೆಸಬೇಕಿತ್ತು. ಆದರೆ, ನನಗೆ ಮಾಹಿತಿ ನೀಡದೇ, ಚರ್ಚಿಸಿದೇ ಸಭೆ ನಡೆಸುತ್ತಿದ್ದಾರೆಂದು ಬೇಳೂರು ಆರೋಪಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಟ್ ಕಾವು ಜೊತೆಗೆ ಪ್ರತಾಪ್ ಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ʻʻತಾನು ಚೆನ್ನಾಗಿ ತಂತ್ರ ಮಾಡ್ತೀನಿ, ಟೀಂ ಲೀಡ್ ಮಾಡ್ತೀನಿ’ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಡ್ರೋನ್ ಪ್ರತಾಪ್ ಅವರು ಈ ಬಾರಿ ಕಳಪೆ ಪಟ್ಟ ಪಡೆದರು. ಈ ವಾರ ಕಾರ್ತಿಕ್ ಅವರನ್ನು ಹೊರಗಿಟ್ಟರು ಪ್ರತಾಪ್. ಮಾತ್ರವಲ್ಲ ಎದುರಾಳಿ ತಂಡದಿಂದ ಕರೆದುಕೊಂಡು ಬಂದಿದ್ದ ನಮ್ರತಾರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟರು.ಹಾಗಾಗಿ ತಂಡ ಹೀನಾಯ ಸೋಲು ಕಂಡಿತು. ಇದರ ಬಗ್ಗೆ ಕಿಚ್ಚ ಸಕತ್ ಕ್ಲಾಸ್ ಕೂಡ ತೆಗೆದುಕೊಂಡರು. ಹಾಗೇ ಸಂಗೀತಾ ಕೂಡ ಈ ಬಗ್ಗೆ ಮಾತನಾಡಿ ʻʻ’ಪ್ರತಾಪ್ ಯಾಕೆ ಈ ನಿರ್ಧಾರ ತಗೊಂಡ ಅಂತ ಅರ್ಥ ಆಗಲ್ಲ. ಪ್ರತಾಪ್ ಯಾರ ಮಾತನ್ನೂ ಕೇಳೋದಿಲ್ಲ. ಅವನು ವೈಯಕ್ತಿಕವಾಗಿ ಆಟ ಆಡಿದ್ದಾನೆ ಎಂದು ಅನಿಸಿತುʼʼಎಂದರು. ಇನ್ನು ಈ ಬಗ್ಗೆ ಕಾರ್ತಿಕ್ ಕೂಡ ʻʻನನ್ನನ್ನು ಯಾಕೆ ಆಟದಿಂದ ಹೊರಗೆ ಇಟ್ಟರು ಎಂದು ಗೊತ್ತಿಲ್ಲ. ಇದರ ಹಿಂದೆ ನಮ್ರತಾ, ವರ್ತೂರು ಸಂತೋಷ್ ಅವರನ್ನು ಆಟದಿಂದ ತೆಗೆದರುʼʼ…
ಶಿವಮೊಗ್ಗ: ಶೀಘ್ರದಲ್ಲಿಯೇ ಜಗದೀಶ್ ಶೆಟ್ಟರ್ ಬಿಜೆಪಿ ಸೇರುತ್ತಾರೆ. ಇತ್ತ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆ ನೋಡ್ತಾ ಇರಿ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ” ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು ಕಳ್ಳರ ಕೈಯಲ್ಲಿ ಬೀಗ ಕೊಟ್ಪಂತಾಗಿದೆ. ಸಚಿವ ಸಂಪುಟ ಡಿಕೆಶಿ ಮೇಲಿನ ಸಿಬಿಐ ಕೇಸ್ ವಾಪಸ್ ಪಡೆದಿದೆ. ಸಿಬಿಐ ತನಿಖೆ ಶೇಕಡಾ 90 ರಷ್ಟು ಮುಗಿದಿದೆ. ಲೋಕಸಭೆ ಚುನಾವಣೆ ಮೊದಲು ಅಥವಾ ನಂತರ ಡಿಕೆಶಿ ಜೈಲಿಗೆ ಹೋಗುವುದು ಗ್ಯಾರಂಟಿ ” ಎಂದರು. https://ainlivenews.com/witchcraft-in-the-prestigious-karnataka-university-professors-chamber/ ” ಜಗದೀಶ್ ಶೆಟ್ಟರ್ ಕುಟುಂಬ ಹಿಂದೂ ಸಮಾಜ ರಕ್ತಗತ ಮಾಡಿಕೊಂಡ ಕುಟುಂಬ. ಜಗದೀಶ್ ಶೆಟ್ಟರ್ ತಂದೆ ಹುಬ್ಬಳ್ಳಿ ಮೇಯರ್, ಶಾಸಕರಾಗಿದ್ದರು. ಜಗದೀಶ್ ಶೆಟ್ಟರ್ ಮೈಯಲ್ಲಿ ಹಿಂದು ರಕ್ತ ಹರಿಯುತ್ತಿದೆ. ಕಾಂಗ್ರೆಸ್ ಸಂಸ್ಕೃತಿ, ಜಮೀರ್ ಅವರ ಧೋರಣೆ ಅವರಿಗೆ ಹೊಂದಿಕೊಳ್ಳಲ್ಲ. ಹೀಗಾಗಿಯೇ ಶೆಟ್ಟರ್ ಹೊರಗೆ ಬರುತ್ತಾರೆ. ಖಂಡಿತ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ…
ಬೆಂಗಳೂರು:- ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ನಕಲಿ ನೋಟು ತಯಾರಿಸುವ ಆರೋಪದಡಿ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಮಹೇಂದರ್ ಬಂಧಿತ ಆರೋಪಿ. ನಕಲಿ ನೋಟು ತಯಾರಿಕೆಯ ಖಚಿತ ಮಾಹಿತಿಯನ್ನು ಆಧರಿಸಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಎನ್‍ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮಹೇಂದರ್ ಮನೆಯಲ್ಲೇ 500, 200, 100 ರೂ.ಮುಖಬೆಲೆಯ ನಕಲಿ ನೋಟು ತಯಾರಿಸುತ್ತಿದ್ದ ಎನ್ನಲಾಗಿದ್ದು, ನೋಟು ತಯಾರಿಸುವ ಪೇಪರ್, ಮುದ್ರಣ ಯಂತ್ರವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಇಂದು ಹಗುರ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಇವತ್ತು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಕೆಲವೆಡೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಮಿಚುಂಗ್ ಸೈಕ್ಲೋನ್ ತೀವ್ರಗೊಳ್ಳುವ ನಿರೀಕ್ಷೆ ಇದೆ. ಇದರ ಪರಿಣಾಮ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ಮಾಹಿತಿ ನೀಡಿದೆ.