ಐಪಿಎಲ್ 2024ರ ಮಿನಿ ಹರಾಜು (IPL 2024 Auction) ಪ್ರಕ್ರಿಯೆಗೆ ಅಧಿಕೃತ ದಿನಾಂಕ ಪ್ರಕಟಗೊಂಡಿದೆ. ಡಿ.19ರಂದು ದುಬೈನಲ್ಲಿ ಐಪಿಎಲ್ 2024ರ ಹರಾಜು ಪ್ರಕ್ರಿಯೆ ನಡೆಸುವುದರ ಕುರಿತು ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಮಾಹಿತಿ ನೀಡಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಮಿನಿ ಹರಾಜಿಗೆ 1166 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 830 ಭಾರತೀಯರಾಗಿದ್ದಾರೆ. ಉಳಿದ 336 ಆಟಗಾರರು ವಿದೇಶಿಗರಾಗಿದ್ದಾರೆ. 1166 ಆಟಗಾರರು ಐಪಿಎಲ್ ತಂಡ ಸೇರಿಕೊಳ್ಳುವ ಉತ್ಸಾಹ ತೋರಿದ್ದರೂ, 10 ತಂಡಗಳು ಭರ್ತಿ ಮಾಡಬೇಕಿರುವುದು ಕೇವಲ 77 ಸ್ಲಾಟ್ ಮಾತ್ರ. ಹೀಗಾಗಿ ಹರಾಜಿನಲ್ಲಿ ಪಾಲ್ಗೊಂಡಿರುವ 1000ಕ್ಕೂ ಅಧಿಕ ಆಟಗಾರರಿಗೆ ನಿರಾಸೆಯಾಗಲಿದೆ. ಅಲ್ಲದೇ, ಶಾರ್ಟ್‍ಲಿಸ್ಟ್ ಮಾಡಿದ ಆಟಗಾರರು ಮಾತ್ರ ಅಂತಿಮ ಪಟ್ಟಿಯಲ್ಲಿ ಇರಲಿದ್ದಾರೆ. ಶೀಘ್ರದಲ್ಲೇ ಹರಾಜಿಗೆ ಲಭ್ಯವಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ ಪ್ರಕಟಿಸಲಿದೆ. ಡಿ.12ರ ವರೆಗೆ ಟ್ರೇಡಿಂಗ್ ವಿಂಡೋ ತೆರೆದಿರಲಿದ್ದು, ಆಟಗಾರರ ಬದಲಾಗುವ ಸಾಧ್ಯತೆ ಕೂಡ ಇದೆ. ಈ ಬಾರಿಯ ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು…
Author: AIN Author
2019ರಲ್ಲಿ ಗೂಗಲ್ ತನ್ನ ಪಿಕ್ಸೆಲ್ ಫೋನ್‌ನಲ್ಲಿ ಕಾರ್ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಆದರೆ, ಇದು ಯುಎಸ್‌ಗೆ ಮಾತ್ರ ಸೀಮಿತವಾಗಿತ್ತು. ಬೇರೆ ಪ್ರದೇಶಗಳಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿರಲಿಲ್ಲ. ಆದರೆ, ಈಗ ಸಿಹಿ ಸುದ್ದಿಯೊಂದು ಬಂದಿದೆ. ಅದೇನೆಂದರೆ ಈ ಮಹತ್ವಪೂರ್ಣ, ಜೀವ ರಕ್ಷಕ ವೈಶಿಷ್ಟ್ಯವನ್ನು ಗೂಗಲ್ ಭಾರತ, ಆಸ್ಟ್ರಿಯಾ, ಬೆಲ್ಜಿಯಂ, ಪೋರ್ಚುಗಲ್ ಮತ್ತು ಸ್ವಿಟ್ಜರ್ಲೆಂಡ್‌ನ ಬಳಕೆದಾರರಿಗೂ ವಿಸ್ತರಿಸಿದೆ ಸಕ್ರಿಯಗೊಳಿಸುವುದು ಹೇಗೆ…? ನಿಮ್ಮ ಪಿಕ್ಸೆಲ್ ಫೋನ್‌ನಲ್ಲಿ `ಪರ್ಸನಲ್ ಸೇಫ್ಟಿ’ ಅನ್ನು ತೆರೆಯಿರಿ ಇದಾದ ಬಳಿಕ ಸೆಟ್ಟಿಂಗ್‌ಗೆ ತೆರಳಬೇಕಾಗುತ್ತದೆ. ಪರ್ಸನಲ್ ಸೇಫ್ಟಿ ಅಪ್ಲಿಕೇಶನ್‌ನಲ್ಲಿರುವಾಗ ಸ್ಕ್ರೀನ್ ಮೇಲಿನ ಎಡ ಮೂಲೆಯಲ್ಲಿರುವ ಕಾಗ್‌ವೀಲ್ ಐಕಾನ್‌ಗಾಗಿ ನೋಡಿ. ಸೆಟ್ಟಿಂಗ್‌ಗಳ ಸ್ಕ್ರೀನ್ ಆಕ್ಸೆಸ್ ಪಡೆಯಲು ಈ ಐಕಾನ್ ಮೇಲೆ ಟ್ಯಾಪ್ ಮಾಡಿ ಸೆಟ್ಟಿಂಗ್‌ಗಳಲ್ಲಿ `ಕಾರ್ ಕ್ರ್ಯಾಶ್ ಡಿಟೆಕ್ಷನ್’ ಆಯ್ಕೆಯನ್ನು ಕಂಡು ಹಿಡಿಯಿರಿ ಮತ್ತು ಅದರ ಉಪ-ಮೆನುವಿನಲ್ಲಿ ಕಾರ್ ಕ್ರ್ಯಾಶ್ ಡಿಟೆಕ್ಷನ್ ಅನ್ನು ಸಕ್ರಿಯಗೊಳಿಸಲು ಸ್ವಿಚ್ ಅನ್ನು ಟಾಗಲ್ ಮಾಡಿ ಒಮ್ಮೆ ಕಾರ್ ಕ್ರ್ಯಾಶ್ ಡಿಟೆಕ್ಷನ್ ಅನ್ನು ಸಕ್ರಿಯಗೊಳಿಸಿದರೆ, ನೀವು ಡೆಮೊವನ್ನು ಸಕ್ರಿಯಗೊಳಿಸುವ…
ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣೆಯ ಅಧಿಕೃತ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಸಿಎಂ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವನ್ನು ತಿಳಿಸಿದರು. ಗೆಲುವಿನಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಶ್ರಮದ ದೊಡ್ಡ ಪಾತ್ರ ಇದೆ ಎಂದು ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ. ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ. ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢಗಳಲ್ಲಿ ಹಿನ್ನಡೆ ಆಗಿದೆ.
ಚಿತ್ರದುರ್ಗ: ತೆಲಂಗಾಣ (Telangana) ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ನೆರೆದಿದ್ದ ಕಾರ್ಯಕರ್ತರು ಮಾಜಿ ಸಚಿವ ಹೆಚ್. ಆಂಜನೇಯ (H.Anjaneya) ನೇತೃತ್ವದಲ್ಲಿ ಸಿಹಿಹಂಚಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನೃತ್ಯ ಮಾಡಿ ಸಂಭ್ರಮಿಸಿದ ದೃಶ್ಯ ಎಲ್ಲರ ಕಣ್ಮನ ಸೆಳೆಯಿತು. ಬಳಿಕ ಮಾದ್ಯಮಗಳೊಂದಿಗೆ ಮಾಜಿ ಸಚಿವ ಆಂಜನೇಯ ಮಾತನಾಡಿದರು. ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ಬಂದ್ ಎಂದು ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದು ತೋರಿಸಿದೆ. ನಾವು ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಶ್ರಮಿಸಿದ ಹಿನ್ನೆಲೆಯಲ್ಲಿ ಈ ಬಾರಿ ನಮ್ ‘ಕೈ’ ಹಿಡಿದಿದ್ದಾರೆ. ಈ ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಯನ್ನು ಬಿಟ್ಟಿ ಕಾರ್ಯಕ್ರಮ ಎಂದಿದ್ದರು. ಆದರೆ ಮದ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಬಿಟ್ಟಿ ಕಾರ್ಯಕ್ರಮ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು. ಅಲ್ಲದೇ ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಅನುಸರಿಸಿದೆ. ನಾವು ಗ್ಯಾರಂಟಿ ಭಾಗ್ಯ ಘೋಷಿಸಿದಾಗ, ಉಚಿತ ಯೋಜನೆಯಿಂದ ರಾಜ್ಯ ದಿವಾಳಿ ಎಂದು…
ಹೈದರಾಬಾದ್: ತೆಲಂಗಾಣ (Telangana) ವಿಧಾನಸಭಾ ಚುನಾವಣೆಯ (Election) ಮತ ಎಣಿಕೆ ನಡೆಯುತ್ತಿದ್ದ ವೇಳೆ ತೆಲಂಗಾಣ ಕಾಂಗ್ರೆಸ್ (Congress) ಮುಖ್ಯಸ್ಥ ರೇವಂತ್ ರೆಡ್ಡಿ (Revanth Reddy) ಅವರನ್ನು ಭೇಟಿ ಮಾಡಿದ್ದಕ್ಕಾಗಿ ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ ಅಂಜನಿ ಕುಮಾರ್ ಅವನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಅಂಜನಿ ಕುಮಾರ್ ಮತ್ತು ಇತರ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ವಿವರಣೆಯನ್ನು ಸಲ್ಲಿಸುವಂತೆ ಕೇಳಲಾಗಿದೆ. ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಇಂದು (ಭಾನುವಾರ) ಮುಂಜಾನೆ ಹೈದರಾಬಾದ್‌ನಲ್ಲಿರುವ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದರು. ಕಾಂಗ್ರೆಸ್ ಮುಖ್ಯಸ್ಥರಿಗೆ ಉನ್ನತ ಪೊಲೀಸ್ ಪುಷ್ಪಗುಚ್ಛ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಡಿಜಿಪಿ ಅಭ್ಯರ್ಥಿಯೊಬ್ಬರನ್ನು ಭೇಟಿಯಾಗಿರುವುದು ಒಂದು ಪಕ್ಷಕ್ಕೆ ತೋರಿದ ಒಲವು ಎಂಬ ಸ್ಪಷ್ಟ ಸೂಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ: ಮೂರು ರಾಜ್ಯಗಳ ಜನಾದೇಶ (ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ) ಲೋಕಸಭೆಯ ಹ್ಯಾಟ್ರಿಕ್ ಗೆಲುವಿನ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆಶಯ ವ್ಯಕ್ತಪಡಿಸಿದ್ದಾರೆ. ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಸಾಧಿಸಿದೆ. ಬಿಜೆಪಿ ಗೆಲುವಿನ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಇದು ರೈತರು, ಆದಿವಾಸಿಗಳು, ಮಹಿಳೆಯರ ಗೆಲುವು. ಈ ಗೆಲುವಿನಲ್ಲಿ ಮಹಿಳೆಯರು, ಯುವಕರು ತಮ್ಮ ಗೆಲುವು ನೋಡುತ್ತಿದ್ದಾರೆ. 2047 ಭಾರತವನ್ನು ವಿಕ್ಸಿತ್ ದೇಶ ಮಾಡುವ ಗುರಿಗೆ ಶಕ್ತಿ ನೀಡಲಿದೆ. ಈ ಚುನಾವಣೆಯಲ್ಲಿ ನಾರಿ ಶಕ್ತಿ ದೊಡ್ಡದಾಗಿ ಹೊರಹೊಮ್ಮಿದೆ. ದೇಶದ ಮಹಿಳೆಯರು ಸುರಕ್ಷಾ ಕವಚವಾಗಿ ನಿಂತರೆ, ಯಾವುದೇ ಕಾರಣಕ್ಕೂ ಹಾನಿಯಾಗಲು ಬಿಡುವುದಿಲ್ಲ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗಿಯಾಗಿದ್ದಾರೆ. ನಮಗೆ ರಕ್ಷಾ ಕವಚವಾಗಿದ್ದಾರೆ ಎಂದು ಮಹಿಳೆಯರಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ನಾನು ಇಂದು ವಿನ್ರಮವಾಗಿ ದೇಶದ ಜನರಿಗೆ ಹೇಳುತ್ತಿದ್ದೇನೆ. ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದೇವೆ. ಇದು…
ಬೆಂಗಳೂರು : ನೆಲಮಂಗಲದಲ್ಲಿ ಕಾರ್ಯಕ್ರಮ ಇತ್ತು ಬಂದಿದ್ದೆ. ಹಾಗೆಯೇ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಬಂದೆ. ಅವರಿಗೆ ವಯಸ್ಸಾಗಿದೆ, ಬೆಡ್ ರಿಡಾನ್ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಬಳಿ ಮಾತನಾಡಿದ ಅವರು, ಲೀಲಾವತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೆ ಎಲ್ಲಾ ಖರ್ಚು ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಲೀಲಾವತಿ ಅವರು ಒಳ್ಳೆಯ ಕಲಾವಿದೆ. ಅವರಲ್ಲಿ ನೈಜ ಪ್ರತಿಭೆಯಿತ್ತು, ನೈಜ ಕಲಾವಿದೆ. ರಾಜ್ಯ ಸರ್ಕಾರದಿಂದ ಸಹಾಯ ಬೇಕಿದ್ರೆ ಕೊಡ್ತಿವಿ. ಸರ್ಕಾರ ಈ ಬಗ್ಗೆ ಸದಾ ಸಿದ್ದವಿದೆ. ಅಮ್ಮನನ್ನು ಕೊನೆವರೆಗೂ ಚೆನ್ನಾಗಿ ನೋಡಿಕೊಳ್ಳಿ. ಅರಣ್ಯ ಇಲಖೆಯವರು ತೊಂದ್ರೆ ಕೊಡ್ತಾರೆ ಎಂದು ಭಾಗದವ್ರು ಅಂತಿದ್ರು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು. ಪ್ರೀತಿಯಿಂದ ತಾಯಿಯ ಆರೋಗ್ಯ ವಿಚಾರಿಸಿದ್ರು ಸಿಎಂ ಸಿದ್ದರಾಮಯ್ಯನವರು ಪ್ರೀತಿಯಿಂದ ತಾಯಿಯ ಆರೋಗ್ಯ ವಿಚಾರಿಸಿದ್ದಾರೆ. ಈ ರೀತಿಯ ನೋವು ದೇವರು ಕೊಡಬಾರದು. ಒಂಟಿಯಾಗಿಬಿಟ್ಟೆ ಎಂದು ಕಣ್ಣೀರು ಹಾಕಿದ ವಿನೋದ್ ರಾಜ್, ಬಡವರನ್ನ ಕಣ್ಣೀರು ಹಾಕಿಸಬೇಡಿ ಎಂದು ತಾಯಿ…
ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ಕೊನೆಯ ಓವರ್ನಲ್ಲಿ ರೋಚಕ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯಂಗ್ ಇಂಡಿಯಾ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 161 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 154 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು 6 ರನ್ ಗಳಿಂದ ಗೆಲ್ಲುವ ಮೂಲಕ ಭಾರತ 4-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾ ಪರ ಬೆನ್ ಮೆಕ್‌ಡರ್ಮಾಟ್ ಅರ್ಧಶತಕ (54) ಸಿಡಿಸಿದರೂ ಪಂದ್ಯ ಗೆಲ್ಲಿಸಿಕೊಡುವಲ್ಲಿ ವಿಫಲರಾದರು. ಟ್ರಾವಿಸ್ ಹೆಡ್ 28, ನಾಯಕ ಮ್ಯಾಥ್ಯೂ ವೇಡ್ 22, ಟಿಮ್ ಡೇವಿಡ್ 17, ಮ್ಯಾಥ್ಯೂ ಶಾರ್ಟ್ 16 ರನ್ ಗಳಿಸಿದರು. ಭಾರತದ ಪರ ಮುಕೇಶ್ ಕುಮಾರ್ 3, ಅರ್ಶ್ದೀಪ್ ಸಿಂಗ್ ಹಾಗೂ ರವಿ ಬಿಷ್ಣೋಯಿ ತಲಾ 2, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು. ಭಾರತಕ್ಕೆ ಅಯ್ಯರ್, ಅಕ್ಷರ್ ಆಸರೆ…
ಗೂಗಲ್ (Google) ಕಂಪನಿ ತನ್ನ ಸುರಕ್ಷತಾ ನಿಯಮಗಳನ್ನು ಅಪ್‌ಡೇಟ್ ಮಾಡಿದ್ದು, ಜಿ-ಮೇಲ್ ಖಾತೆ ಹೊಂದಿದ್ದು, ಸಕ್ರಿಯರಾಗಿಲ್ಲದವರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. 2 ವರ್ಷ ಬಳಸದೇ ಇರುವ ಜಿ-ಮೇಲ್ ಖಾತೆಗಳನ್ನು (Gmail Accounts) ಡಿಸೆಂಬರ್‌ನಲ್ಲಿ ಬಂದ್ ಮಾಡಲಾಗುವುದು ಎಂದು ತಿಳಿಸಿದೆ. ಹೀಗಾಗಿ ಒಮ್ಮೆ ಲಾಗಿನ್ ಆಗಿ ಖಾತೆ ಉಳಿಸಿಕೊಳ್ಳಿ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಗೂಗಲ್ ಕಂಪನಿಯು ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಲ್ಲಿ ಅಪ್‌ಡೇಟ್ ಮಾಡಿತ್ತು. ಆಗಲೇ ಅದರ ಉಪಾಧ್ಯಕ್ಷೆ ರೂತ್ ಕ್ರಿಚೇಲ್, ಮುಂಬರುವ ಡಿಸೆಂಬರ್‌ನಲ್ಲಿ ಕಳೆದ 2 ವರ್ಷಗಳಿಂದ ಒಮ್ಮೆಯೂ ಲಾಗಿನ್ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸುತ್ತೇವೆ ಎಂದು ತಿಳಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ.ಮರೆತ, ಬಳಸದ ಖಾತೆಗಳು ಗೂಗಲ್ ಅಥವಾ ಖಾತೆದಾರರಿಗೆ ಅಪಾಯ ತರಬಹುದು ಎಂಬ ಕಾರಣಕ್ಕೆ ಡಿಲೀಟ್ ಮಾಡಲು ಗೂಗಲ್ ಮುಂದಾಗಿದೆ. ಜಿ-ಮೇಲ್ ಅಕೌಂಟ್‌ಗಳು ಡಿಲೀಟ್ ಆಗಬಾರದು…
ಸೌತೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ತಿಳಿದುಕೊಂಡಿರುತ್ತಾರೆ. ಕೆಲವರು ತಮ್ಮ ಡಯಟ್‍ಗೆಂದು ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ಒಳ್ಳೆಯದಾಗುತ್ತದೆ. ಸೌತೆಕಾಯಿ ಒಳ್ಳೆಯದು ಅಂತಾ ಹೆಚ್ಚಾಗಿ ಸೇವನೆ ಮಾಡಿದ್ರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲವು ಜನರು ಡಯಟ್ ಎಂದು ದಿನಕ್ಕೆ 8 ರಿಂದ 10 ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದಾಗುತ್ತೆ. ಆದರೆ ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆ ಮಾತಿನಂತೆ ಸೌತೆಕಾಯಿ ಕೂಡ ವಿಷ ಆಗುತ್ತದೆ. ರಾತ್ರಿ ಸಮಯದಲ್ಲಿ ಎಂದಿಗೂ ಸೌತೆಕಾಯಿ ತಿನ್ನಬೇಡಿ. ಬೆಳಗ್ಗೆ ಹೊತ್ತು ಸೌತೆಕಾಯಿ ತಿಂದರೆ ನಿಮ್ಮ ದೇಹಕ್ಕೆ ಅಧಿಕ ಲಾಭವಾಗುತ್ತದೆ. ಮಧ್ಯಾಹ್ನ ತಿಂದರೆ ಸಾಮಾನ್ಯವಾಗಿ ಒಳ್ಳೆಯದಾಗುತ್ತದೆ. ಆದರೆ ರಾತ್ರಿ ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ. ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರ್ಬಿಟೈನ್ ಎಂಬ ವಿಷಕಾರಿ ಅಂಶವಿರುತ್ತದೆ. ನೀವು ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ನಿಮ್ಮೆ ದೇಹದಲ್ಲಿ ಟಾಕ್ಸಿಕ್ ಅಂಶ ಸೇರುತ್ತದೆ. ಇದರಿಂದ ನಿಮ್ಮ…