2019ರಲ್ಲಿ ಗೂಗಲ್ ತನ್ನ ಪಿಕ್ಸೆಲ್ ಫೋನ್ನಲ್ಲಿ ಕಾರ್ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಆದರೆ, ಇದು ಯುಎಸ್ಗೆ ಮಾತ್ರ ಸೀಮಿತವಾಗಿತ್ತು. ಬೇರೆ ಪ್ರದೇಶಗಳಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿರಲಿಲ್ಲ. ಆದರೆ, ಈಗ ಸಿಹಿ ಸುದ್ದಿಯೊಂದು ಬಂದಿದೆ. ಅದೇನೆಂದರೆ ಈ ಮಹತ್ವಪೂರ್ಣ, ಜೀವ ರಕ್ಷಕ ವೈಶಿಷ್ಟ್ಯವನ್ನು ಗೂಗಲ್ ಭಾರತ, ಆಸ್ಟ್ರಿಯಾ, ಬೆಲ್ಜಿಯಂ, ಪೋರ್ಚುಗಲ್ ಮತ್ತು ಸ್ವಿಟ್ಜರ್ಲೆಂಡ್ನ ಬಳಕೆದಾರರಿಗೂ ವಿಸ್ತರಿಸಿದೆ
ಸಕ್ರಿಯಗೊಳಿಸುವುದು ಹೇಗೆ…?
- ನಿಮ್ಮ ಪಿಕ್ಸೆಲ್ ಫೋನ್ನಲ್ಲಿ `ಪರ್ಸನಲ್ ಸೇಫ್ಟಿ’ ಅನ್ನು ತೆರೆಯಿರಿ
- ಇದಾದ ಬಳಿಕ ಸೆಟ್ಟಿಂಗ್ಗೆ ತೆರಳಬೇಕಾಗುತ್ತದೆ. ಪರ್ಸನಲ್ ಸೇಫ್ಟಿ ಅಪ್ಲಿಕೇಶನ್ನಲ್ಲಿರುವಾಗ ಸ್ಕ್ರೀನ್ ಮೇಲಿನ ಎಡ ಮೂಲೆಯಲ್ಲಿರುವ ಕಾಗ್ವೀಲ್ ಐಕಾನ್ಗಾಗಿ ನೋಡಿ. ಸೆಟ್ಟಿಂಗ್ಗಳ ಸ್ಕ್ರೀನ್ ಆಕ್ಸೆಸ್ ಪಡೆಯಲು ಈ ಐಕಾನ್ ಮೇಲೆ ಟ್ಯಾಪ್ ಮಾಡಿ
- ಸೆಟ್ಟಿಂಗ್ಗಳಲ್ಲಿ `ಕಾರ್ ಕ್ರ್ಯಾಶ್ ಡಿಟೆಕ್ಷನ್’ ಆಯ್ಕೆಯನ್ನು ಕಂಡು ಹಿಡಿಯಿರಿ ಮತ್ತು ಅದರ ಉಪ-ಮೆನುವಿನಲ್ಲಿ ಕಾರ್ ಕ್ರ್ಯಾಶ್ ಡಿಟೆಕ್ಷನ್ ಅನ್ನು ಸಕ್ರಿಯಗೊಳಿಸಲು ಸ್ವಿಚ್ ಅನ್ನು ಟಾಗಲ್ ಮಾಡಿ
- ಒಮ್ಮೆ ಕಾರ್ ಕ್ರ್ಯಾಶ್ ಡಿಟೆಕ್ಷನ್ ಅನ್ನು ಸಕ್ರಿಯಗೊಳಿಸಿದರೆ, ನೀವು ಡೆಮೊವನ್ನು ಸಕ್ರಿಯಗೊಳಿಸುವ ಮೂಲಕ ಅಭ್ಯಾಸ ಮಾಡಬಹುದು
- ಡಿಕ್ಕಿ ಅಥವಾ ಅಪಘಾತ ಪತ್ತೆಯಾದರೆ ನಿಮ್ಮ ಪಿಕ್ಸೆಲ್ ಫೋನ್ ಸ್ವಯಂಚಾಲಿತವಾಗಿ ಸ್ಥಳೀಯ ತುರ್ತು ಸೇವೆ ಅಂದರೆ ಭಾರತದಲ್ಲಿ 112 ಸಂಖ್ಯೆಯಂತಹ ಸೇವೆಗಳಿಗೆ ಕರೆ ಮಾಡುತ್ತದೆ. ಇದು ಕರೆ ಮಾಡಿದ ನಂತರ `ಐ ಯಾಮ್ ಓಕೆ’ ಎಂಬುದನ್ನು ಪ್ರದರ್ಶಿಸುತ್ತದೆ. ಇದು ತಪ್ಪಾದ ಎಚ್ಚರಿಕೆಯಾದರೆ ಅದನ್ನು ಕ್ಯಾನ್ಸಲ್ ಮಾಡಲು 60 ಸೆಕೆಂಡುಗಳ ಸಮಯವೂ ಇದೆ. ನೀವು `ಐ ಯಾಮ್ ಓಕೆ’ ಅನ್ನು ಟ್ಯಾಪ್ ಮಾಡುವುದರಿಂದ `ನೋ ಕ್ರ್ಯಾಶ್’, `ಮೈನರ್ ಕ್ರ್ಯಾಶ್’ ಮತ್ತು `ಕಾಲ್ 112′ ನಂತಹ ಆಯ್ಕೆಗಳನ್ನು ಇದು ನೀಡುತ್ತದೆ. ನೀವು ತುರ್ತು ಕರೆಯೊಂದಿಗೆ ಮುಂದುವರಿದರೆ ನಿಮಗೆ ಯಾವ ರೀತಿಯ ಸಹಾಯ ಬೇಕು ಅಂದರೆ ವೈದ್ಯಕೀಯ, ಅಗ್ನಿಶಾಮಕ ಅಥವಾ ಪೊಲೀಸ್ನಂತಹ ಅಗತ್ಯವಿರುವ ಸಹಾಯದ ಪ್ರಕಾರವನ್ನು ಆಯ್ಕೆ ಮಾಡಬಹುದು
.