ಬೆಂಗಳೂರು:- ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಚೈತ್ರಾಗೆ ಕೊನೆಗೂ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನೀಡಿದೆ. ವಂಚನೆ ಆರೋಪ ಪ್ರಕರಣ ಸಂಬಂಧ ಕಳೆದ ಸೆಪ್ಟೆಂಬರ್ನಲ್ಲಿ ಚೈತ್ರಾ ಬಂಧನವಾಗಿತ್ತು. ಬಳಿಕ ಚೈತ್ರಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ಉದ್ಯಮಿ ಗೋವಿಂದ್ ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಜೈಲು ಸೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಿಸಿಬಿಯು ಆರೋಪಿಗಳ ವಿರುದ್ಧ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ತನಿಖೆಯನ್ನು ಸಿಸಿಬಿ ಮುಕ್ತಾಯಗೊಳಿಸಿದೆ.
Author: AIN Author
ಚಿಯಾ ಬೀಜಗಳಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು ಎನ್ನುವ ವಿಚಾರ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಇಲ್ಲದಿದ್ದರೆ ಚಿಯಾ ಬೀಜಗಳನ್ನು ದಿನಕ್ಕೆ 3-4 ಬಾರಿ ಸೇವಿಸಲು ಆರಂಭಿಸಿದರೆ ಅದರಿಂದ ಆರೋಗ್ಯದ ಮೇಲೆ ಎಂತಹ ಅಡ್ಡ ಪರಿಣಾಮ ಉಂಟಾಗಬಹುದು ಎನ್ನುವುದನ್ನು ಈಗ ತಿಳಿಯೋಣ ಬನ್ನಿ. ಮಧುಮೇಹ ಉಳ್ಳವರು ಚಿಯಾ ಬೀಜಗಳನ್ನು ಕಡಿಮೆ ತಿನ್ನಬೇಕು: ಒಂದು ವೇಳೆ ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಲಿದ್ದರೆ ಚಿಯಾ ಬೀಜಗಳನ್ನು ಸ್ವಲ್ಪ ಕಡಿಮೆ ಸೇವಿಸಬೇಕು. ಚಿಯಾ ಬೀಜಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣವೇನೋ ಮಾಡುತ್ತವೆ, ಆದರೆ ನೀವು ಶುಗರ್ ಲೆವೆಲ್ ಅನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುವಾಗ, ಈ ಬೀಜಗಳು ಅತಿಯಾದ ಉತ್ತೇಜನವನ್ನು ನೀಡುತ್ತವೆ. ಚಿಯಾ ಬೀಜಗಳು ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತವೆ : ಇದರಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳ (fatty acid) ಕಾರಣದಿಂದಾಗಿ, ಇದು ರಕ್ತ ತೆಳುವಾಗುವುದನ್ನು ಕಡಿಮೆ ಮಾಡುತ್ತದೆ. ಆದ್ಧರಿಂದ ಇದು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯ ಪ್ರಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತವೆ.…
ನುಗ್ಗೇಕಾಯಿಯಯು ಅನೇಕ ರೋಗಗಲಿಗೆ ರಾಮಬಾಣವಾಗಿದೆ. ಆದರೆ ನುಗ್ಗೆ ಸೊಪ್ಪು ಉತ್ತಮ ಆಹಾರವಾಗಿದ್ದು ಹಲವು ತೊಂದರೆಗಳಿಗೆ ಸಮರ್ಥ ಔಷಧಿಯೂ ಆಗಿದೆ. ಇದು ರುಚಿಕರವೂ, ಹೆಚ್ಚಿನ ನಾರು ಹೊಂದಿರುವ ಸೊಪ್ಪೂ ಆಗಿರುವ ಕಾರಣ ದಕ್ಷಿಣ ಭಾರತದಲ್ಲಿ ಸಾಂಬಾರ್ ಅಥವಾ ಪಲ್ಯದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ನುಗ್ಗೆಕಾಯಿಯಂತೆ ನುಗ್ಗೆ ಸೊಪ್ಪಿನಲ್ಲಿಯೂ ಹಲವಾರು ಆಂಟಿ ಆಕ್ಸಿಡೆಂಟುಗಳೂ ಮತ್ತು ಇತರ ಅಗತ್ಯ ಪೋಷಕಾಂಶಗಳೂ ಲಭ್ಯವಿದ್ದು ಮುಖ್ಯವಾಗಿ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವಲ್ಲಿ ಹಾಗೂ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ. ಇವು ಮಧುಮೇಹಿಗಳ ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿರುವ ಸಕ್ಕರೆಗೆ ವಿರುದ್ಧವಾಗಿ ಕೆಲಸ ಮಾಡುತ್ತವೆ. ಪರಿಣಾಮವಾಗಿ ರಕ್ತ ಸಕ್ಕರೆಯನ್ನು ಸಹಿಸಿಕೊಳ್ಳುವ ಶಕ್ತಿ ಹೆಚ್ಚಿಸುತ್ತದೆ ಹಾಗೂ ರಕ್ತದಲ್ಲಿ ಥಟ್ಟನೇ ಅಧಿಕ ಪ್ರಮಾಣದ ರಕ್ತ ನುಗ್ಗದಿರುವಂತೆ ನೋಡಿಕೊಳ್ಳುತ್ತದೆ. ಅಲ್ಲದೇ ನೈಟ್ರಿಕ್ ಆಮ್ಲದ ಪ್ರಮಾಣದಲ್ಲಿ ಗಣನೀಯವಾದ ಇಳಿಕೆ ಮತ್ತು ರಕ್ತದ ನೀರಿನಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಗೊಳಿಸಿ ಇನ್ಸುಲಿನ್ ಮತ್ತು ಪ್ರೋಟೀನುಗಳನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಆರೋಗ್ಯಕರವಾಗಿರಲು ನೆರವಾಗುತ್ತದೆ. ನುಗ್ಗೆಸೊಪ್ಪಿನಲ್ಲಿರುವ ಪೋಷಕಾಂಶಗಳು ಈ ಸಂಗ್ರಹವನ್ನು…
ಬೆಂಗಳೂರು: ನಿರ್ಲಕ್ಷ್ಯ ಇರಬೇಕು ಅಂದ್ರೆ ಅಷ್ಟೋದಾ. ಜನರ ಜೀವನವನ್ನೇ ತೆಗೆಯೋ ಮಟ್ಟಿಗೆ ಅಂದ್ರೆ ಹೇಗೆ. ಹೌದು ಬೆಂಗಳೂರಿನಲ್ಲಿ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯ ಬೇಜವಾಬ್ದಾರಿ ಮಿತಿ ಮೀರಿದೆ. ಜನರ ಜೀವನವನ್ನ ರಕ್ಷಣಾ ಮಾಡಬೇಕಾದ ಅಧಿಕಾರಿಗಳು ಪ್ರಾಣವನ್ನ ತೆಗೆಯುತ್ತಿದ್ದಾರೆ. ಕಾಡುಗೋಡಿಯಲ್ಲಿ ವಿದ್ಯುತ್ ಅವವಢದಿಂದ ತಾಯಿ ಮಗು ದರಂತ ಸಾವನ್ನಪ್ಪಿದ್ರೂ ಅಧಿಕಾರಿಗಳು ಗಾಢ ನಿದ್ರೆಯಿಂದ ಇನ್ನೂ ಎದ್ದಿಲ್ಲ. ನಗರದ ಎಲ್ಲೆಂದ್ರೆ ವಿದ್ಯುತ್ ಸ್ಪಾಟ್ ಗಳು ಸಾವಿನ ತಾಣವಾಗಿ ಮಾರ್ಪಟ್ಟಿವೆ. ಬಿಬಿಎಂಪಿ ನಗರದ ವಾಹನ ಸವಾರರನ್ನ ಬಲಿಪಡೆಯುತ್ತಿದೆ. ಬೆಸ್ಕಾಂ ಪುಟ್ಪಾತ್ ಪಾದಾಚಾರಿಗಳನ್ನ ಬಲಿಪಡೆಯುತ್ತಿದೆ. ಜಲಮಂಡಳಿ, ಮೆಟ್ರೋ ಕಾಮಗಾರಿಗಳಿಂದ ಜನ ಸುಸ್ತು ಆಗಿಬಿಟ್ಟಿದ್ದಾರೆ. ಈ ಸರ್ಕಾರಿ ಇಲಾಖೆಗಳು ಮಾಡೋ ಬೇಜವಾಬ್ದಾರಿ ಕೆಲ್ಸ ಒಂದೆರಡು ಅಲ್ಲ ಬಿಡಿ. ಸಾಲು ಸಾಲು ಅವಾಂತರಗಳು ಮಾಡಿದ್ರೂ ಸರ್ಕಾರ ಮಾತ್ರ ತಲೆಕೆಡಿಸಿಕೊಂಡಿಲ್ಲ ಹೀಗಾಗಿ ಜನ ರೋಡ್ ರೋಡ್ ನಲ್ಲಿ ಬೀದಿ ಹೆಣವಾಗ್ತಿದ್ದಾರೆ. ಇತ್ತೀಚಿಗೆ ಅಂತೂ ಬೆಸ್ಕಾಂ ಮಾಡೋ ಹೊಣೆಗೇಡಿತನದಿಂದ ಜನ ಸಾವನ್ನಪ್ಪುತ್ತಿದ್ದಾರೆ.ಆದ್ರೂ ಬೆಸ್ಕಾಂ ಅಧಿಕಾರಿಗಳ ;ನಿರ್ಲಕ್ಷ್ಯ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ. ಹೌದು ಕಾಡುಗೋಡಿ ಗ ತಾಯಿಮಗು…
ಕಾಲಭೈರವ ಜಯಂತಿ ಸೂರ್ಯೋದಯ: 06.28 AM, ಸೂರ್ಯಾಸ್ತ : 05.52 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಪೂರ್ಣ ಅಷ್ಟಮಿ ನಕ್ಷತ್ರ: ಇವತ್ತು ಮಖ 12:35 AM ತನಕ ನಂತರ ಪುಬ್ಬಾ ಯೋಗ: ಇವತ್ತು ವಿಷ್ಕುಂಭ10:42 PM ತನಕ ನಂತರ ಪ್ರೀತಿ ಕರಣ: ಇವತ್ತು ಬಾಲವ 11:18 AM ತನಕ ನಂತರ ಕೌಲವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 08.25 PM to 10.13 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:44 ನಿಂದ ಮ.12:28 ವರೆಗೂ ಮೇಷ ರಾಶಿ: ಹಳೆ ವಹನ ಬದಲಾಯಿಸಿ ಹೊಸ ವಾಹನ ಖರೀದಿ,ರಾಶಿಯ ಕೌಟುಂಬಿಕ ಜೀವನ ತುಂಬಾ ಮಧುರ, ವ್ಯಾಪಾರ ಮಧ್ಯಮ,ಹಣದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ಕೆಲವೊಮ್ಮೆ ಅಪಾಯಕಾರಿ ಪರಿಸ್ಥಿತಿ ಎದುರಿಸುವಿರಿ. ಇವರ…
ಹುಬ್ಬಳ್ಳಿ ಡಿ 4: ಬಹುತ್ವವೇ ಭಾರತದ ಶಕ್ತಿ-ಸಂವಿಧಾನವೇ ಬಹುತ್ವದ ಶಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಹುಬ್ಬಳ್ಳಿಯ ಹಜರತ್ ಬಾದ್ ಶಾ ಪೀರಾನ್ ದರ್ಗಾದ ಆವರಣದಲ್ಲಿ ನಡೆದ ಬೃಹತ್ ಔಲಾದೇ ಗೌಸೆ ಅಜಮ್ (ಮೆಹಬೂಬೇ ಸುಭಾನೇ ಮಕ್ಕಳ ಸಮಾವೇಷ) ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ವೈವಿದ್ಯತೆ ಇದೆ. ಸಹಿಷ್ಣತೆ ಮತ್ತು ಸಹಬಾಳ್ವೆಯ ಸಂಸ್ಕಾರವನ್ನು ಪಾಲಿಸಿದರೆ ಸಮಾಜದಲ್ಲಿ ಅಶಾಂತಿ ಮತ್ತು ಅಪನಂಬಿಕೆಯ ವಾತಾವರಣ ಇಲ್ಲವಾಗುತ್ತದೆ ಎಂದರು. ಹುಟ್ಟುವಾಗ ವಿಶ್ವ ಮಾನವರಾಗಿರುವ ಎಲ್ಲರೂ ಕೊನೆಯವರೆಗೂ ವಿಶ್ವ ಮಾನವರಾಗಿಯೇ ಉಳಿಯಬೇಕು. ಸಯ್ಯದ್ ತಾಜುದ್ದೀನ್ ಖಾದ್ರಿ ಅವರು ತಮ್ಮ ತಂದೆಯಂತೆಯೇ, ಸೂಫಿ ಧರ್ಮದ ಆಶಯದಂತೆ ವಿಶ್ವ ಮಾನವರನ್ನು ಸೃಷ್ಟಿಸುವ ಮಹೋನ್ನತ ಕಾರ್ಯವನ್ನು ನಡೆಸುತ್ತಿದ್ದಾರೆ. ಪರಸ್ಪರ ಪ್ರೀತಿ , ವಿಶ್ವಾಸ ಮತ್ತು ಬಾಂದವ್ಯದ ವಾತಾವರಣ ಸೃಷ್ಟಿಸುತ್ತಿರುವ ಖಾದ್ರಿ ಮತ್ತು ಇಂತಹ ಸೂಫಿ ಸಂತರಿಗೆ ಕೋಟಿ, ಕೋಟಿ ನಮನ ಎಂದು ಮೆಚ್ಚುಗೆ ಸೂಚಿಸಿದರು. ವೈಚಾರಿಕತೆ ಮತ್ತು ಪ್ರತಿಯೊಬ್ಬರನ್ನೂ ಮಾನವೀಯಗೊಳಿಸುವ ಶಿಕ್ಷಣ ಇಂದಿನ ಅಗತ್ಯ. 850 ವರ್ಷಗಳ ಹಿಂದೆಯೇ ಬಸವಾದಿ…
ಬೆಂಗಳೂರು:- ನಗರದಲ್ಲಿ ಸುಲಿಗೆ ಮಾಡ್ತಿದ್ದ ನಾಲ್ವರು ಆರೋಪಿಗಳನ್ನು ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1ಲಕ್ಷದ 50ಸಾವಿರ ಮೌಲ್ಯದ ಮೊಬೈಲ್ ಗಳು ಜಪ್ತಿ ಮಾಡಿದ್ದಾರೆ. ಬೆಳ್ಳಿ ಚೈನ್, ನಗದು ಹಣ, ಬೈಕ್ ಮತ್ತು ಮಾರಕಾಸ್ತ್ರಗಳು ವಶಕ್ಕೆ ಪಡೆಯಲಾಗಿದೆ. ಉಸ್ಕಾನ್ ಪಾಷ, ಸೂರ್ಯ, ಇರ್ಫಾನ್, ಜೀವ ಬಂಧಿತ ಆರೋಪಿಗಳು.. ಆರೋಪಿಗಳು ಒಂಟಿಯಾಗಿ ಓಡಾಡೋರನ್ನ ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದರು. ಚಾಕು ತೋರಿಸಿ ಸಾರ್ವಜನಿಕರ ಬಳಿ ಹಣ, ಮೊಬೈಲ್, ಚಿನ್ನಾಭರಣ ದೋಚ್ತಿದ್ರು.. ಪುಲಕೇಶಿ ನಗರ, ಕಮರ್ಷಿಯಲ್ ಸ್ಟ್ರೀಟ್, ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ:- ಜಿಲ್ಲೆಯ ಕನಕಪುರ ತಾಲೂಕಿನ ನೇರಳೆ ಹಳ್ಳಿ ದೊಡ್ಡಿ ಎಂಬ ಗ್ರಾಮದಲ್ಲಿ ನಾಡ ಬಾಂಬ್ ಸ್ಫೋಟಗೊಂಡಿದ್ದು, ವ್ಯಕ್ತಿಯ ಕೈ ಚಿದ್ರ ಚಿತ್ರವಾಗಿದೆ. ಗ್ರಾಮದ ನಂಜೇಶ್ ಎಂಬುವವರ ಅಕ್ಕಿ ಗಿರಣಿಯ ಬಳಿ ಕಾಡು ಹಂದಿ ಬೇಟೆಗೆಂದು ಎರಡು ನಾಡ ಬಾಂಬುಗಳು ಇಡಲಾಗಿತ್ತು. ಯಾರೋ ಮಾಟ ಮಂತ್ರಕ್ಕೆ ಇಟ್ಟಿರುವ ತೆಂಗಿನ ಕಾಯಿ ಎಂದು ಭಾವಿಸಿ ನಾಡ ಬಾಂಬನ್ನು ಅದೇ ಗ್ರಾಮದ ನಿವಾಸಿ ನೌಸದ್ ಪಾಷಾ ಜಜ್ಜಿದ್ದರು. ನಾಡ ಬಾಂಬ್ ಸಿಡಿದ ರಭಸಕ್ಕೆ ನೌಶದ್ ಪಾಷಾರವರ ಬಲಗೈ ಸಂಪೂರ್ಣ ಚಿದ್ರ ಚಿದ್ರವಾಗಿದೆ. ಸ್ಪೋಟದ ಶಬ್ದವನ್ನು ಗ್ರಹಿಸಿ ಸ್ಥಳಕ್ಕೆ ಆಗಮಿಸಿ ನೌಷದ್ ಪಾಷಾ ರವರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಸ್ಥಳೀಯ ಗ್ರಾಮಸ್ಥರು ದಾಖಲಿಸಿದ್ದಾರೆ. ನಾಡ ಬಾಂಬ್ ಸ್ಪೋಟಕ್ಕೆ ನೇರಳೆಹಳ್ಳಿ ದೊಡ್ಡಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯ ಹಜರತ್ ಬಾದ್ ಶಾ ಪೀರಾನ್ ದರ್ಗಾದ ಆವರಣದಲ್ಲಿ ನಡೆದ ಬೃಹತ್ ಔಲಾದೇ ಗೌಸೆ ಅಜಮ್ (ಮೆಹಬೂಬೇ ಸುಭಾನೇ ಮಕ್ಕಳ ಸಮಾವೇಷ) ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು. ಅಲ್ಹಜ್ ಸಯ್ಯದ್ ತಾಜುದ್ದೀನ್ ಖಾದ್ರಿ ಅಲ್ ಜಿಲಾನಿ, ಗುಲ್ಬರ್ಗಾ ಷರೀಫ್ ನ ಹಜರತ್ ಕ್ವಾಜಾ ಬಂದನವಾಜ್ ದರ್ಗಾದ ಖುಸ್ರೂ ಹುಸೇನ್ ಸಾಬ್ ಖಿಲಾಬಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಮಾವೇಷದ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮದ್, ಶಾಸಕರಾದ ಪ್ರಸಾದ್ ಅಬ್ಬಯ್ಯ ಸೇರಿ ಹಲವಾರು ಶಾಸಕರು ಮತ್ತು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು:- ಬೆಂಗಳೂರು ಗಿರಿನಗರ ಬಾಬು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಟಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಬೀದಿ ಹೆಣವಾಗಿರುವುದು ತಿಳಿದು ಬಂದಿದೆ. ತಾವಾಯ್ತು, ತಮ್ಮ ಕುಟುಂಬವಾಯ್ತು ಎಂದು ನೆಮ್ಮದಿಯಿಂದ ಜೀವನ ಮಾಡಿಕೊಂಡಿದ್ದ ಸಿದ್ದರಾಜುವಿನ ಸುಂದರ ಪತ್ನಿಯ ಮೇಲೆ ಕಣ್ಣು ಹಾಕಿದ ಕಾಮುಕ ವೆಂಕಟೇಶ್ ಬಾಬುನನ್ನು ಅಟ್ಟಾಡಿಸಿ ಹೊಡೆದು ಕೊಲೆಗೈದು ಜೈಲು ಸೇರಿದ್ದಾನೆ. ನೆಮ್ಮದಿಯಾಗಿದ್ದ ಕುಟುಂಬದಲ್ಲಿ ಗಿರಿನಗರದ ವೆಂಕಟೇಶಬಾಬು ಎಂಟ್ರಿ ಕೊಟ್ಟು ಇಡೀ ಸಂಸಾರವನ್ನೇ ಛಿದ್ರ ಮಾಡಿದನಲ್ಲ ಎಂಬ ರೋಷ ಸಿದ್ದರಾಜುಗೆ ಉಕ್ಕುತ್ತಿತ್ತು. ಆದರೂ, ತನ್ನ ಹೆಂಡತಿಯೇ ಸರಿಯಾಗಿಲ್ಲ ಎಂದು ಕೈ ಕೈ ಹಿಸುಕಿಕೊಂಡು ಸುಮ್ಮನಾಗಿದ್ದನು. ಇನ್ನು ತನ್ನ ಗಂಡ ಬಿಟ್ಟು ಹೋಗಿರುವುದೇ ತನಗೆ ಲಾಭವಾಗಿದೆ ಎಂದು ವೆಂಕಟೇಶ್ ಬಾಬು ಜೊತೆಗೆ ಸಿದ್ದರಾಜು ಪತ್ನಿ ಮಾತನಾಡುತ್ತಾ ಸಲುಗೆಯಿಂದ ಇದ್ದಳು. ಆಗ ಅಲ್ಲಿಗೆ ಬಂದ ಸಿದ್ದರಾಜು ತನ್ನ ಪತ್ನಿ ವೆಂಕಟೇಶನ ಜೊತೆಗೆ ಮಾತನಾಡೊದನ್ನ ನೋಡಿ ಕೋಪಗೊಂಡಿದ್ದಾನೆ. ಈ ವೇಳೆ ರಸ್ತೆಯಲ್ಲಿಯೇ ವೆಂಕಟೇಶನೊಂದಿಗೆ ಜಗಳ ಮಾಡಿ ಆರಂಭಿಸಿದ್ದಾನೆ. ನಂತರ, ವೆಂಕಟೇಶನನ್ನು ಅಟ್ಟಾಡಿಸಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.…